ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕಳೆದು ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಇಬ್ಬರು ಬಲಿಯಾಗಿದ್ದಾರೆ.
ಭಾರೀ ಪ್ರಮಾಣದ ನೀರು ಹರಿಯುತ್ತಿರುವ ಕಾರಣ ರಸ್ತೆಗಳಲ್ಲಿ ಹಳ್ಳಗಳು ನಿರ್ಮಾಣವಾಗಿವೆ. ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ಬಲವಾದ ಗಾಳಿ ಬೀಸಿದ್ದು, ಅನೇಕ ಮನೆಗಳಿಗೆ ಹಾನಿಯಾಗಿದೆ.
ಬೆಳಗ್ಗೆ 7 ಗಂಟೆ ಸುಮಾರಿಗೆ ಬಿಸಿದ ಭಾರೀ ಗಾಳಿಯಿಂದ ಕಾಸರಗೋಡು ಬಳಿಯ ಬಯಾಲ್ ಬೀಚ್‌ನ ಸತ್ಯನಾರಾಯಣ ಮಠದ ಬಳಿ 12 ಮನೆಗಳು ಹೆಂಚುಗಳು ಹಾರಿ ಹೋಗಿವೆ. ಇಂದು ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದು, ಮಧುವಾಹಿನಿ ಮತ್ತು ತೇಜಸ್ವಿನಿ ನದಿಗಳಲ್ಲಿನ ನೀರಿನ ಮಟ್ಟ ಕಡಿಮೆಯಾಗುತ್ತಿದೆ.