ETV Bharat / bharat

ಪಿಎಂ ಮೋದಿ ವೆಬ್​​ಸೈಟ್​ನ​​ ಅಕೌಂಟ್​ ಹ್ಯಾಕ್:​ ಟ್ವಿಟರ್​ನಿಂದ ಹೊರಬಿತ್ತು ಸ್ಪಷ್ಟನೆ ​​ - pm narendra modi

ಪ್ರಧಾನಿ ನರೇಂದ್ರ ಮೋದಿ ಅವರ ಪರ್ಸನಲ್​​ ವೆಬ್​ಸೈಟ್​​ನ ಟ್ವಿಟರ್​​ ಅಕೌಂಟ್ (@narendramodi_in) ಅನ್ನು ಗುರುವಾರ ನಸುಕಿನ ಜಾವ​ 3 ಗಂಟೆಯ ಸುಮಾರಿಗೆ ಹ್ಯಾಕರ್​​ಗಳು ಹ್ಯಾಕ್​ ಮಾಡಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಹ್ಯಾಕ್​ ಮಾಡಿ ಪೋಸ್ಟ್​ ಮಾಡಿದ್ದ ಮೆಸೇಜ್​ಗಳನ್ನು ಡಿಲೀಟ್​ ಮಾಡಲಾಗಿತ್ತು. ಈಗ ಈ ಎಲ್ಲಾ ಬೆಳವಣಿಗೆಗಳ ಕುರಿತು ಟ್ವಿಟರ್​​ ಕಡೆಯಿಂದ ಹೇಳಿಕೆ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟರ್​ ಅಕೌಂಟ್​ ಹ್ಯಾಕ್​ ಆಗಿದ್ದು ನಿಜ ಎಂದು ಟ್ವಿಟರ್​​ ಒಪ್ಪಿಕೊಂಡಿದೆ.

Twitter admits that PM Modi web site account was hacked
ಪಿಎಂ ಮೋದಿ ವೆಬ್​​ಸೈಟ್​​ನ ಅಕೌಂಟ್​ ಹ್ಯಾಕ್​​ ಆಗಿದೆ ಎಂದು ಒಪ್ಪಿಕೊಂಡ ಟ್ವಿಟರ್​​
author img

By

Published : Sep 3, 2020, 10:38 AM IST

ನವದೆಹಲಿ: ಗುರುವಾರ ನಸುಕಿನಜಾವ ಪ್ರಧಾನಿ ನರೇಂದ್ರ ಮೋದಿಯವರ ಪರ್ಸನಲ್​ ವೆಬ್​ಸೈಟ್​​ನ ಟ್ವಿಟರ್​ ಅಕೌಂಟ್​​​ ಹ್ಯಾಕ್​ ಮಾಡಲಾಗಿದೆ. ಇದಾದ ನಂತರ ಬಿಟ್​​ ಕಾಯಿನ್​​ಗೆ ಹ್ಯಾಕರ್​​ಗಳು ಮನವಿ ಮಾಡಿದ್ದರು. ಆಮೇಲೆ ಈ ಅಕೌಂಟ್​​ ಹ್ಯಾಕರ್​​ಗಳಿಂದ ಮುಕ್ತಗೊಳಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿ ಅವರ ಪರ್ಸನಲ್​​ ವೆಬ್​ಸೈಟ್​​ನ ಟ್ವಿಟರ್​​ ಅಕೌಂಟ್ (@narendramodi_in) ಅನ್ನು ಗುರುವಾರ ನಸುಕಿನ ಜಾವ​ 3 ಗಂಟೆಯ ಸುಮಾರಿಗೆ ಹ್ಯಾಕರ್​​ಗಳು ಹ್ಯಾಕ್​ ಮಾಡಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಹ್ಯಾಕ್​ ಮಾಡಿ ಪೋಸ್ಟ್​ ಮಾಡಿದ್ದ ಮೆಸೇಜ್​ಗಳನ್ನು ಡಿಲೀಟ್​ ಮಾಡಲಾಗಿತ್ತು. ಈಗ ಈ ಎಲ್ಲಾ ಬೆಳವಣಿಗೆಗಳ ಕುರಿತು ಟ್ವಿಟರ್​​ ಕಡೆಯಿಂದ ಹೇಳಿಕೆ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟರ್​ ಅಕೌಂಟ್​ ಹ್ಯಾಕ್​ ಆಗಿದ್ದು ನಿಜವೆಂದು ಟ್ವಿಟರ್​​ ಒಪ್ಪಿಕೊಂಡಿದೆ. ಕೆಲ ದಿನಗಳ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ, ಏಲನ್​​ ಮಸ್ಕ್​, ಜೋ ಬಿಡೆನ್​​ ಮುಂತಾದ ದಿಗ್ಗಜರ ಅಕೌಂಟ್​ ಹ್ಯಾಕ್​ ಆಗಿತ್ತು. ಇದೇ ರೀತಿಯಲ್ಲೇ ಮೋದಿಯವರ ಅಕೌಂಟ್​ ಕೂಡ ಹ್ಯಾಕ್​ ಮಾಡಲಾಗಿದೆ. ಇಲ್ಲೂ ಹ್ಯಾಕರ್​ಗಳು ಬಿಟ್​​ ಕಾಯಿನ್​​ಗಳಿಗೆ ಬೇಡಿಕೆ ಇಟ್ಟಿದ್ದರು.

ಪ್ರಧಾನಿ ಮೋದಿ ಟ್ವಿಟರ್​​​ ಅಕೌಂಟ್​ ಹ್ಯಾಕ್​​​: ಬಿಟ್ ​ಕಾಯಿನ್​​ಗೆ ಬೇಡಿಕೆ ಇಟ್ಟ ಹ್ಯಾಕರ್​​​!

ಪಿಎಂ ನರೇಂದ್ರ ಮೋದಿ ಅವರ ಪರ್ಸನಲ್​​ ವೆಬ್​ಸೈಟ್​ narendramodi.inನ ಟ್ವಿಟ್ಟರ್​ ಅಕೌಂಟ್​​ಗೆ ಸಂಬಂಧಿಸಿದ ವೆಬ್​ಸೈಟ್​​ ಮತ್ತು NaMo Appಗೆ ಸಂಬಂಧಿಸಿದ ಅಪ್​ಡೇಟ್​​ಗಳನ್ನು ಸರಿಪಡಿಸುತ್ತಿದ್ದೇವೆ. ಹ್ಯಾಕ್​​ ಆಗಿರುವ ಬಗ್ಗೆ ನಮಗೆ ಮಾಹಿತಿ ಇದೆ ಮತ್ತು ನಾವು ಅದನ್ನು ಸರಿಪಡಿಸುತ್ತಿದ್ದೇವೆ ಎಂದು ಟ್ವಿಟರ್​ ತಿಳಿಸಿದೆ.

ಮೋದಿಯವರ ಟ್ವಿಟರ್​ ಅಕೌಂಟ್​ ಹ್ಯಾಕ್​ ಆಗಿರುವ ವಿಚಾರವಾಗಿ ತನಿಖೆ ನಡೆಯುತ್ತಿದೆ ಎಂದು ಟ್ವಿಟರ್​​ ವಕ್ತಾರರು ತಿಳಿಸಿದ್ದಾರೆ. ಈ ಅಕೌಂಟ್​ ಹೊರತುಪಡಿಸಿ ಬೇರೆ ಯಾವುದಾದರೂ ಅಕೌಂಟ್​​ ಹ್ಯಾಕ್​ ಆಗಿದೆಯೇ ಎಂಬುದು ಗೊತ್ತಾಗಿಲ್ಲ ಎಂದಿದ್ದಾರೆ.

ಗುರುವಾರ ನಸುಕಿನ ಜಾವ ಸುಮಾರು 3 ಗಂಟೆಗೆ @narendramodi_in ಅಕೌಂಟ್​​ನಿಂದ ಒಂದು ಟ್ವೀಟ್​ ಮಾಡಲಾಗಿತ್ತು. 'ಈ ಅಕೌಂಟ್​​ ಜಾನ್​​ ವಿಕ್​​ (hckindia@tutanota.com) ಮೂಲಕ ಹ್ಯಾಕ್​​ ಮಾಡಲಾಗಿದೆ. ನಾವು ಪೇಟಿಎಂ ಮಾಲ್​​ ಹ್ಯಾಕ್​​ ಮಾಡಿಲ್ಲ' ಇದನ್ನು ಹೊರತುಪಡಿಸಿ ಇನ್ನೊಂದು ಟ್ವೀಟ್​​ನಲ್ಲಿ ಕ್ರಿಸ್ಟೋಕರೆನ್ಸಿ ಮೂಲಕ ರಾಷ್ಟ್ರೀಯ ಪರಿಹಾರ ನಿಧಿಗೆ ಹಣ ಹಾಕಲು ಮನವಿ ಮಾಡಲಾಗಿತ್ತು. ಕೆಲವೇ ನಿಮಿಷಗಳಲ್ಲಿ ಈ ಟ್ವೀಟ್​​ ಅನ್ನು ಡಿಲೀಟ್​ ಮಾಡಲಾಗಿತ್ತು. ಅರ್ಧಗಂಟೆಯಲ್ಲೇ ಟ್ವಿಟರ್​ ಮೂಲಕ ಈ ಅಕೌಂಟ್​​ ಅನ್ನು ಸರಿ ಮಾಡಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿಯವರ ಪರ್ಸನಲ್​ ಅಕೌಂಟ್​​ (@narendramodi) ವಿಶ್ವದಲ್ಲಿ ಅತ್ಯಧಿಕ ಫಾಲೋವರ್ಸ್​ ಹೊಂದಿರುವ ನಾಯಕರ ಪೈಕಿ ಒಂದಾಗಿದೆ. ಇದನ್ನು ಹೊರತುಪಡಿಸಿ @PMOIndia ದಲ್ಲಿ ಪ್ರಧಾನಿ ಕಾರ್ಯಾಲಯಕ್ಕೆ ಸಂಬಂಧಿಸಿದ ಮಾಹಿತಿ ಸಿಗುತ್ತದೆ. @narendramodi_in ಅಕೌಂಟ್​, ಪ್ರಧಾನಿ ಮೋದಿಯವರ ಪರ್ಸನಲ್​​ ವೆಬ್​ಸೈಟ್​​ ಮತ್ತು ನಮೋ ಆ್ಯಪ್​​ಗೆ ಸಂಬಂಧಿಸಿದ ಅಪ್​ಡೇಟ್​​ ನೀಡುತ್ತಿದೆ. ಇವುಗಳಿಗೆ ಸುಮಾರು ಎರಡೂವರೆ ಮಿಲಿಯನ್​​ ಫಾಲೋವರ್ಸ್​ ಇದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.