ETV Bharat / bharat

ಸರ್ಕಾರಿ ಭದ್ರತೆಗಳಲ್ಲಿ ಯಾವುದೇ ಹೂಡಿಕೆ ಮಾಡಿಲ್ಲ: ಟಿಟಿಡಿ ಸ್ಪಷ್ಟನೆ - ಟಿಟಿಡಿ ಬ್ಯಾಂಕ್​​ಗಳಲ್ಲಿ ಸ್ಥಿರ ಠೇವಣಿ ಹೂಡಿಕೆ

ಸರ್ಕಾರಿ ಭದ್ರತೆಗಳಲ್ಲಿ ಟಿಟಿಡಿ ಯಾವುದೇ ಹೂಡಿಕೆ ಮಾಡಿಲ್ಲ ಎಂದು ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.

TTD
TTD
author img

By

Published : Oct 18, 2020, 9:56 AM IST

Updated : Oct 18, 2020, 10:04 AM IST

ತಿರುಪತಿ (ಆಂಧ್ರಪ್ರದೇಶ): ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಸರ್ಕಾರಿ ಭದ್ರತೆಗಳಲ್ಲಿ ಯಾವುದೇ ಹೂಡಿಕೆ ಮಾಡಿಲ್ಲ. ಆದರೆ, ಕೋವಿಡ್​​-19 ಸಾಂಕ್ರಾಮಿಕ ವೈರಾಣು ಹಿನ್ನೆಲೆಯಲ್ಲಿ ಬಡ್ಡಿದರ ಕುಸಿಯುತ್ತಿರುವ ಮಧ್ಯೆ ಇಂತಹ ಹೂಡಿಕೆ ಆಯ್ಕೆ ಪರಿಶೀಲನೆ ನಡೆಸಿದೆ ಎಂದಿದೆ.

ಸದ್ಯ ಅನ್​ಲಾಕ್​​ 5.0 ಮಾರ್ಗಸೂಚಿ ಹಿನ್ನೆಲೆಯಲ್ಲಿ ಆರ್ಥಿಕತೆ ಕುಸಿತ, ಬಡ್ಡಿದರಗಳು ಹೆಚ್ಚಾಗುತ್ತಿರುವುದರಿಂದ ಟಿಟಿಡಿ ಬ್ಯಾಂಕ್​​ಗಳಲ್ಲಿ ಸ್ಥಿರ ಠೇವಣಿ ಹೂಡಿಕೆ ಮಾಡುವುದನ್ನ ಮುಂದುವರಿಸಬಹುದು ಎಂದು ಹೇಳಿದೆ.

1987ರ ಎಂಡೋಮೆಂಟ್ಸ್​ ಆ್ಯಕ್ಟ್​ 30ರ ಸೆಕ್ಷನ್​​(111)3 ಮತ್ತು ಸರ್ಕಾರಿ ಆದೇಶ 311ರಲ್ಲಿ ಹೊರಡಿಸಲಾದ ಟಿಟಿಡಿ ನಿಯಮ 80ನೇ ನಿಯಮದ ಪ್ರಕಾರ, ಏಪ್ರಿಲ್​​ 09/1990ರ ಸರ್ಕಾರಿ ಮಾರ್ಗಸೂಚಿ ಅಂಗೀಕರಿಸಿದ ನಂತರ ಸೆಕ್ಯುರಿಟಿ ಹೂಡಿಕೆ ಮಾಡಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರಿ ಭದ್ರತೆಗಳಲ್ಲಿ ಹೂಡಿಕೆ ಮಾಡಲು ಯಾವುದೇ ಗುಪ್ತ ಕಾರ್ಯಸೂಚಿ ಇಲ್ಲ. ಟ್ರಸ್ಟ್​ ಬೋರ್ಡ್​ ಸಭೆಗಳಲ್ಲಿ ಪಾರದರ್ಶಕ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಂಡಳಿ ನಿರ್ಣಯದೊಂದಿಗೆ ಎಲ್ಲ ಮಾಹಿತಿ ಟಿಟಿಡಿ ವೆಬ್​​ಸೈಟ್​​ನಲ್ಲಿ ಅಪ್ಲೋಡ್​​​ ಮಾಡಲಾಗಿದೆ ಎಂದರು.

Last Updated : Oct 18, 2020, 10:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.