ETV Bharat / bharat

'ನನ್ನ ಸಹಾಯ ನಿರಂತರವಾಗಿರಲಿದೆ'... 60-80 ಪಿಪಿಇ ಕಿಟ್ ನೀಡಿದ ರಾಬರ್ಟ್ ವಾದ್ರಾ - ರಾಬರ್ಟ್​ ವಾದ್ರಾ ಲೇಟೆಸ್ಟ್ ನ್ಯೂಸ್

ಕೋವಿಡ್-19 ರೋಗಿಗಳನ್ನು ನೋಡಿಕೊಳ್ಳುವ ವೈದ್ಯರಿಗೆ ಸಹಾಯ ಮಾಡಲು ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್​ ವಾದ್ರಾ ಪಿಪಿಇ ಕಿಟ್ ನೀಡಿದ್ದಾರೆ.

Robert Vadra donated 60-80 PPE kits
60-80 ಪಿಪಿಇ ಕಿಟ್ ನೀಡಿದ ರಾಬರ್ಟ್ ವಾದ್ರಾ
author img

By

Published : Apr 20, 2020, 4:10 PM IST

ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಯುದ್ಧದಲ್ಲಿ ಮುಂಚೂಣಿಯಲ್ಲಿ ಹೋರಾಡುತ್ತಿರುವ ವೈದ್ಯರು ಮತ್ತು ಪೊಲೀಸ್ ಸಿಬ್ಬಂದಿಗೆ ಸಹಾಯ ಮಾಡಲು ಹೆಚ್ಚಿನ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳು ಮತ್ತು ಮಾಸ್ಕ್​ಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಉದ್ಯಮಿ ರಾಬರ್ಟ್ ವಾದ್ರಾ ಹೇಳಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್​ ವಾದ್ರಾ ಭಾನುವಾರ ಸುಮಾರು 60 ರಿಂದ 80 ಪಿಪಿಇ ಕಿಟ್‌ಗಳನ್ನು ನೀಡಿದ್ದಾರೆ.

'ನಾನು ಮಾಸ್ಕ್​ಗಳು ಸ್ಯಾನಿಟೈಸರ್​, ಪಿಪಿಇ ಕಿಟ್​​ಗಳನ್ನು ಕಳುಹಿಸಿಕೊಡುವ ಮೂಲಕ ವೈದ್ಯರು ಮತ್ತು ಪೊಲೀಸ್ ಸಿಬ್ಬಂದಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇನೆ. ಇಲ್ಲಿಯವರೆಗೆ, ಸುಮಾರು 60 - 80 ಪಿಪಿಇ ಕಿಟ್​ಗಳನ್ನು ಕಳುಹಿಸಿಕೊಟ್ಟಿದ್ದೇನೆ. ಇನ್ನಷ್ಟು ಕಿಟ್​ಗಳನ್ನು ಸಂಗ್ರಹಿಸಿ ಕಳುಹಿಸಿಕೊಡುತ್ತೇನೆ' ಎಂದು ಟ್ವಿಟ್ಟರ್​​ನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

'ನನ್ನ ಸಹಾಯ ನಿರಂತರವಾಗಿರುತ್ತದೆ. ನಿರಂತರವಾಗಿ ಕೆಲಸ ಮಾಡುತ್ತಿರುವ ವೈದ್ಯರು ಮತ್ತು ಪೊಲೀಸರಿಗೆ ನಾನು ಸಹಾಯ ಮಾಡಲು ಬಯಸುತ್ತೇನೆ. ಅವರ ಪ್ರಯತ್ನಗಳಿಗೆ ನನ್ನ ಸಲ್ಯೂಟ್' ಎಂದು ವಿಡಿಯೋ ಜೊತೆಯಲ್ಲಿ ಬರೆದುಕೊಂಡಿದ್ದಾರೆ.

ಕೋವಿಡ್-19 ರೋಗಿಗಳನ್ನು ನೋಡಿಕೊಳ್ಳುವ ವೈದ್ಯರಿಗೆ ಸಹಾಯ ಮಾಡಲು ಗೋವಿಂದ್ ವಲ್ಲಭ್ ಪಂತ್ ಇನ್​ಸ್ಟಿಟ್ಯೂಟ್ ಆಫ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಪಿಪಿಇ ಕಿಟ್​​ಗಳನ್ನು ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.