ETV Bharat / bharat

ರಾಮಮಂದಿರ ನಿರ್ಮಾಣಕ್ಕಾಗಿ 15 ಸದಸ್ಯರ ಟ್ರಸ್ಟ್​​​​... ಮಸೀದಿಗಾಗಿ 5 ಎಕರೆ ಭೂಮಿ ಮಂಜೂರು! - ಲೋಕಸಭೆಯಲ್ಲಿ ಮೋದಿ ಅಯೋಧ್ಯೆ ಮಾತು

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ 15 ಸದಸ್ಯರ ಟ್ರಸ್ಟ್​ ನಿರ್ಮಾಣಗೊಳ್ಳಲಿದ್ದು, ಸ್ವತಂತ್ರವಾಗಿ ಅದು ಕಾರ್ಯನಿರ್ವಹಿಸಲಿದೆ ಎಂದು ಪ್ರಧಾನಿ ಸಂಸತ್​ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ.

Ram Temple in Ayodhya
ಪ್ರಧಾನಿ ನರೇಂದ್ರ ಮೋದಿ
author img

By

Published : Feb 5, 2020, 1:14 PM IST

ನವದೆಹಲಿ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಈಗಾಗಲೇ ಸುಪ್ರೀಂಕೋರ್ಟ್​​​ ಆದೇಶ ನೀಡಿದ್ದು, ಅದರ ಪ್ರಕಾರವೇ ಇದೀಗ ಕೇಂದ್ರ ಸರ್ಕಾರ 15 ಸದಸ್ಯರನ್ನೊಳಗೊಂಡ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​ ರಚನೆಯಾಗಿದೆ.

ರಾಮಮಂದಿರ ನಿರ್ಮಾಣಕ್ಕಾಗಿ 15 ಸದಸ್ಯರ ಟ್ರಸ್ಟ್

ಇದೇ ವಿಷಯವಾಗಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದು, ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆ ಟ್ರಸ್ಟ್​ ರಚಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಒಮ್ಮತದಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸುಪ್ರೀಂಕೋರ್ಟ್​ ನೀಡಿರುವ ಆದೇಶದಂತೆ ನಾವು ಟ್ರಸ್ಟ್​ ರಚಿಸಲಿದ್ದು, ಅದಕ್ಕಾಗಿ 'ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್' ಎಂದು ಹೆಸರಿಟ್ಟಿದ್ದೇವೆ ಎಂದು ತಿಳಿಸಿದರು.

  • श्री राम जन्मभूमि तीर्थ क्षेत्र ट्रस्ट में 15 ट्रस्टी होंगे जिसमें से एक ट्रस्टी हमेशा दलित समाज से रहेगा। सामाजिक सौहार्द को मजबूत करने वाले ऐसे अभूतपूर्व निर्णय के लिए मैं प्रधानमंत्री श्री @narendramodi जी को अनेक अनेक बधाई देता हूँ।

    — Amit Shah (@AmitShah) February 5, 2020 " class="align-text-top noRightClick twitterSection" data=" ">

ಅಯೋಧ್ಯೆಯ ಬಾಬರಿ ಮಸೀದಿ- ರಾಮಜನ್ಮಭೂಮಿ ವಿವಾದಿತ ಭೂಮಿಯನ್ನ ರಾಮ್​ಲಲ್ಲಾಗೆ ನೀಡಿ ಕಳೆದ ವರ್ಷ ಸುಪ್ರೀಂಕೋರ್ಟ್​ ತೀರ್ಪು ನೀಡಿತ್ತು. ಇದೇ ವೇಳೆ, ಸುನ್ನಿ ವಕ್ಫ್​ ಬೋರ್ಡ್​ಗೆ ಉತ್ತರ ಪ್ರದೇಶದ ಪ್ರಮುಖ ಜಾಗದಲ್ಲಿ 5 ಎಕರೆ ಜಾಗವನ್ನು ಮಂಜೂರು ಮಾಡಲು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಅದರಂತೆ ಇದೀಗ ಸುನ್ನಿ ವಕ್ಪ್​ ಮಂಡಳಿಗೆ ಉತ್ತರಪ್ರದೇಶ ಸರ್ಕಾರ ಐದು ಎಕರೆ ಜಮೀನು ನೀಡಿ ಆದೇಶ ಹೊರಹೊರಡಿಸಿದೆ.

ಪ್ರಧಾನಿ ಅಭಿನಂದಿಸಿದ ಶಾ: ಈ ನಡುವೆ, ಗೃಹ ಸಚಿವ ಅಮಿತ್​ ಶಾ ಟ್ವೀಟ್​ ಮಾಡಿದ್ದು, ರಾಮ ಮಂದಿರ ನಿರ್ಮಾಣಕ್ಕೆ ರಚನೆ ಮಾಡಲಾಗಿರುವ 15 ಸದಸ್ಯರ ಸಮಿತಿಯಲ್ಲಿ ದಲಿತ ಸಮುದಾಯಕ್ಕೂ ಪ್ರಾತಿನಿಧ್ಯ ನೀಡುವುದಾಗಿ ಅವರು ಹೇಳಿದ್ದಾರೆ. ಸಾಮಾಜಿಕ ಸೌಹಾರ್ದತೆ ಕಾಪಾಡಲು ಪ್ರಧಾನಿ ಇಂತಹದೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ನಾನು ಪಿಎಂ ಅವರನ್ನ ಅಭಿನಂದಿಸುತ್ತೇನೆ ಎಂದು ಅವರು ಟ್ವೀಟ್​ ಮಾಡಿದ್ದಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.