ಗುಜರಾತ್: ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭ ಗುಜರಾತ್ನ ಸಬರಮತಿಗೆ ಭೇಟಿ ನೀಡಲಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಬುಧವಾರ ಚುನಾವಣಾ ಸಮಾವೇಶದಲ್ಲಿ ಹೇಳಿದ್ದಾರೆ.
ಟ್ರಂಪ್ರನ್ನು ಭೇಟಿಯಾದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದರು. ಟ್ರಂಪ್ರ ಭೇಟಿ ಕುರಿತು ಎರಡೂ ರಾಷ್ಟ್ರಗಳೂ ಸಂಪರ್ಕದಲ್ಲಿದ್ದು, ಖಚಿತ ಮಾಹಿತಿ ಸಿಕ್ಕ ಮೇಲೆ ಮಾಧ್ಯಮಗಳೊಂದಿಗೆ ವಿಷಯ ಹಂಚಿಕೊಳ್ಳಲಿದ್ದೇವೆ ಎಂದು ಜ. 16ರಂದು ವಿದೇಶಾಂಗ ವಕ್ತಾರ ರವೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
ಹ್ಯೂಸ್ಟನ್ನಲ್ಲಿ ನಡೆದ ಹೌಡಿ-ಮೋದಿ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಅವರ ಕುಟುಂಬವನ್ನು ಪ್ರಧಾನಿ ಮೋದಿ ಭಾರತಕ್ಕೆ ಆಹ್ವಾನಿಸಿದ್ದರು. ಫೆಬ್ರವರಿಯಲ್ಲಿ ಟ್ರಂಪ್ 2020ರ ಭಾರತದ ಮೊದಲ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದ್ದು, ಹೌಡಿ-ಮೋದಿಯಂತೆಯೇ ಗುಜರಾತ್ನಲ್ಲಿ ಟ್ರಂಪ್ಗಾಗಿ ಬಹುದೊಡ್ಡ ಕಾರ್ಯಕ್ರಮ ಆಯೋಜಿಸಲಾಗುತ್ತೆ ಎಂದು ಹೇಳಲಾಗುತ್ತಿದೆ. ಇದೀಗ ಬುಧವಾರ ನಡೆದ ಚುನಾವಣಾ ಸಮಾವೆಶದಲ್ಲಿ ಗುಜರಾತ್ನ ಸಬರಮತಿಗೆ ಅಮೆರಿಕ ಅಧ್ಯಕ್ಷ ಭೇಟಿ ನೀಡಲಿದ್ದಾರೆ ಎಂದು ಸಿಎಂ ವಿಜಯ್ ರೂಪಾನಿ ಹೇಳಿದ್ದಾರೆ.