ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ಒನ್ ನೇಷನ್,ಒನ್ ಎಲೆಕ್ಷನ್ಗೆ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ಎಸ್) ಜೈ ಎಂದಿದ್ದು, ಈ ಯೋಜನೆಗೆ ನಾವು ಸಾಥ್ ನೀಡಲಿದ್ದೇವೆ ಎಂದು ಕೆಟಿ ರಾಮ್ರಾವ್ ಸ್ಪಷ್ಟಪಡಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಇಂದಿನ ಸರ್ವಪಕ್ಷ ಸಭೆಯಲ್ಲಿ ಟಿಆರ್ಎಸ್ನ ಕಾರ್ಯಕಾರಿ ಅಧ್ಯಕ್ಷ ಕೆಟಿ ರಾಮ್ರಾವ್ ಭಾಗಿಯಾಗಿದ್ದರು. ಸಭೆ ಮುಗಿದ ಬಳಿಕ ಮಾತನಾಡಿರುವ ಅವರು, ಒಂದು ದೇಶ,ಒಂದು ಚುನಾವಣೆ ಬಿಜೆಪಿ ಅಜೆಂಡಾ ಅಲ್ಲ. 2024ರ ವೇಳೆಗೆ ಈ ಯೋಜನೆ ಯಾವ ರೀತಿಯಾಗಿ ಜಾರಿಗೆ ತರಬಹುದು ಎಂಬುದರ ಕುರಿತು ಚರ್ಚೆ ನಡೆಸಲು ಇಂದಿನ ಸಭೆ ಕರೆದಿದ್ದಾಗಿ ಮೋದಿ ತಿಳಿಸಿದರು. ಜತೆಗೆ ದೇಶದ ಅಭಿವೃದ್ಧಿ ದೃಷ್ಟಿಯಿಂದ ಇದು ಒಳ್ಳೆಯ ಯೋಜನೆಯಾಗಿದ್ದು, ಇದರಲ್ಲಿರುವ ನಕಾರಾತ್ಮಕ ಹಾಗೂ ಸಕಾರಾತ್ಮಕ ವಿಷಯಗಳನ್ನ ತಿಳಿಸುವಂತೆ ಮನವಿ ಮಾಡಿದ್ದಾರೆ ಎಂದರು.
ಇನ್ನು ಕೆಟಿ ರಾಮ್ರಾವ್ ಒನ್ ನೇಷನ್, ಒನ್ ಎಲೆಕ್ಷನ್ ಪ್ಲಾನ್ಗೆ ತಮ್ಮ ಸಹಮತವಿರುವುದಾಗಿ ತಿಳಿಸಿದ್ದಾರೆ. ಇದರ ಮಧ್ಯೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡ ಈ ಯೋಜನೆಗೆ ಜೈಕಾರ ಹಾಕಿದ್ದಾರೆ. ಇಂದಿನ ಸಭೆಯಲ್ಲಿ 40 ಪಕ್ಷಗಳ ಪೈಕಿ 24 ಪಕ್ಷದ ಮುಖಂಡರು ಭಾಗಿಯಾಗಿದ್ದರು. ಪ್ರಮುಖವಾಗಿ ಇಲ್ಲಿಯವರೆಗೆ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಕೆಲ ಮಹತ್ವದ ಪಕ್ಷಗಳು ತಮ್ಮ ಅಭಿಪ್ರಾಯ ತಿಳಿಸಿಲ್ಲ.