ETV Bharat / bharat

ಸಂಕ್ರಾಂತಿ ದಿನವೇ ಪ್ರಾಣಕ್ಕೆ ಕುತ್ತು: ಕೈಟ್​ ಹಾರಿಸುವಾಗ ಕಟ್ಟಡದ ಮೇಲಿಂದ ಬಿದ್ದು ಟಿಆರ್​ಎಸ್ ಮುಖಂಡ ಸಾವು!

author img

By

Published : Jan 16, 2021, 12:17 PM IST

ಗಾಳಿಪಟ ಹಾರಿಸುತ್ತಿದ್ದ ವೇಳೆ ಟಿಆರ್​ಎಸ್​ ಕಾರ್ಯಕರ್ತರೊಬ್ಬರು ಮೂರಂತಸ್ತಿನ ಕಟ್ಟಡದ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

trs worker died, trs worker died while flying kite, trs worker died while flying kite in hyderabad, hyderabad crime news, Sankranti news, ಟಿಆರ್​ಎಸ್​ ಕಾರ್ಯಕರ್ತ ಸಾವು, ಗಾಳಿಪಟ ಹಾರಿಸುತ್ತಿದ್ದ ವೇಳೆ ಟಿಆರ್​ಎಸ್​ ಕಾರ್ಯಕರ್ತ ಸಾವು, ಹೈದರಾಬಾದ್​ನಲ್ಲಿ ಗಾಳಿಪಟ ಹಾರಿಸುತ್ತಿದ್ದ ವೇಳೆ ಟಿಆರ್​ಎಸ್​ ಕಾರ್ಯಕರ್ತ ಸಾವು, ಹೈದರಾಬಾದ್​ ಕ್ರೈಂ ಸುದ್ದಿ, ಸಂಕ್ರಾಂತಿ ಸುದ್ದಿ,
ಸಾವು

ಹೈದರಾಬಾದ್​: ಸಂಕ್ರಾಂತಿ ಹಬ್ಬದ ದಿನ ಗಾಳಿಪಟ ಹಾರಿಸುವ ವೇಳೆ ಮೇಲಿಂದ ಕೆಳಗೆ ಬಿದ್ದು ಟಿಆರ್​ಎಸ್​ ಮುಖಂಡನೋರ್ವ ಪ್ರಾಣ ಕಳೆದುಕೊಂಡಿರುವ ಘಟನೆ ಇಲ್ಲಿನ ರಾಮ್​ನಗರದಲ್ಲಿ ನಡೆದಿದೆ.

ಚಿಕ್ಕಡಪಲ್ಲಿಯಲ್ಲಿ ನಿವಾಸಿ ಟಿಆರ್​ಎಸ್​ ಹಿರಿಯ ನಾಯಕ ಬಂಗಾರು ಕೃಷ್ಣ (44) ಗುರುವಾರ ಸಂಜೆ ಹಬ್ಬದ ನಿಮಿತ್ತ ಗಾಳಿಪಟ ಹಾರಿಸಲು ಮೂರು ಅಂತಸ್ತಿನ ಕಟ್ಟಡದ ಮೇಲೆ ತೆರಳಿದ್ದಾರೆ. ಈ ವೇಳೆ ಕೃಷ್ಣ ಆಕಸ್ಮಿಕವಾಗಿ ಮೇಲಿಂದ ಕಬ್ಬಿಣದ ಚೂಪಾದ ಸರಳುಗಳ ಕಾಂಪೌಂಡ್​ ಮೇಲೆ ಬಿದ್ದಿದ್ದಾರೆ. ಸರಳುಗಳು ಪಕ್ಕೆ ಎಲುಬಿಗೆ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದರು.

ಈ ಸುದ್ದಿಯನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆ್ಯಂಬುಲೆನ್ಸ್​ಗೆ ಫೋನ್​ ಮಾಡಿದ್ದಾರೆ. ಒಂದು ಗಂಟೆ ಕಳೆದರೂ ಸ್ಥಳಕ್ಕೆ ಆ್ಯಂಬುಲೆನ್ಸ್​ ಬರಲೇ ಇಲ್ಲ. ಈ ವೇಳೆ ಪೊಲೀಸರು ಟ್ರಾಲಿ ಆಟೋದ ಮೂಲಕ ಆಸ್ಪತ್ರೆಗೆ ದಾಖಲಿಸಲು ತೆರಳಿದರು. ಆದ್ರೆ ತೀವ್ರ ರಕ್ತಸಾವ್ರ ಆಗಿರುವುದರಿಂದ ಮಾರ್ಗ ಮಧ್ಯೆದಲ್ಲೇ ಕೃಷ್ಣ ಸಾವನ್ನಪ್ಪಿದ್ದಾರೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.