ETV Bharat / bharat

ತೆಲಂಗಾಣದ ಟಿಆರ್​ಎಸ್​​ ಶಾಸಕ ನೋಮುಲಾ ನರಸಿಂಹಯ್ಯ ನಿಧನ - ಟಿಆರ್​ಎಸ್​​ ಶಾಸಕ ನೋಮುಲಾ ನರಸಿಂಹಯ್ಯ ನಿಧನ

ತೆಲಂಗಾಣ ರಾಜ್ಯದ ಟಿಆರ್​ಎಸ್​​ ಶಾಸಕ ನೋಮುಲಾ ನರಸಿಂಹಯ್ಯ ಇಂದು ಮುಂಜಾನೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹೃದಯಸ್ತಂಭನದಿಂದ ಅವರು ಕೊನೆಯುಸಿರೆಳೆದಿದ್ದಾರೆ.

TRS MLA Nomula Narsimhaiah passess away
ತೆಲಂಗಾಣ ರಾಜ್ಯದ ಟಿಆರ್​ಎಸ್​​ ಶಾಸಕ ನೋಮುಲಾ ನರಸಿಂಹಯ್ಯ ನಿಧನ
author img

By

Published : Dec 1, 2020, 8:49 AM IST

Updated : Dec 1, 2020, 11:44 AM IST

ಹೈದರಾಬಾದ್​: ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್​ಎಸ್​) ನಾಗಾರ್ಜುನ ಸಾಗರ್ ಕ್ಷೇತ್ರದ ಶಾಸಕ ನೋಮುಲಾ ನರಸಿಂಹಯ್ಯ (64) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.

ಹೃದಯಸ್ತಂಭನ ಉಂಟಾಗಿದ್ದರಿಂದ ಅವರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕತ್ಸೆ ಫಲಕಾರಿಯಾಗಿದೆ ಇಂದು ಮುಂಜಾನೆ ಅವರು ಸಾವನ್ನಪ್ಪಿರುವುದಾಗಿ ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ನೋಮುಲಾ ನರಸಿಂಹಯ್ಯ 1956 ರ ಜನವರಿ 9 ರಂದು ನಲ್ಗೊಂಡ ಜಿಲ್ಲೆಯ ಪಾಲೆಮ್ ಗ್ರಾಮದಲ್ಲಿ ಜನಿಸಿದರು. ಅವರು 1999 ಮತ್ತು 2004 ರಲ್ಲಿ ಸಿಪಿಎಂ ಪಕ್ಷದಿಂದ ನಾಗಾರ್ಜುನ ಸಾಗರ್​ದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

2013 ಅವರು ಟಿಆರ್​ಎಸ್​​ ಪಕ್ಷ ಸೇರಿದ್ದ ನೋಮುಲಾ, 2018 ರ ಚುನಾವಣೆಯಲ್ಲಿ ನಾಗಾರ್ಜುನ ಸಾಗರ್ ಕ್ಷೇತ್ರದಿಂದ ಟಿಆರ್​ಎಸ್​​​ ಪಕ್ಷದಿಂದ ಮತ್ತೊಮ್ಮೆ ಶಾಸಕರಾಗಿದ್ದರು.

ಓದಿ:ಬಿಜೆಪಿ ತೆಲಂಗಾಣ ಘಟಕ ಅಧ್ಯಕ್ಷ ಬಂಡಿ ಸಂಜಯ್ ಕೊಲೆ ಯತ್ನ ಸುಳ್ಳು ಸುದ್ದಿ: ಹೈದರಾಬಾದ್ ಪೊಲೀಸರ ಸ್ಪಷ್ಟನೆ

Last Updated : Dec 1, 2020, 11:44 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.