ETV Bharat / bharat

ಆರೋಗ್ಯ ಕಾರ್ಯಕರ್ತರ ಸಹಾಯಕ್ಕೆ ರೊಬೊಟ್​​ ಅಭಿವೃದ್ಧಿಪಡಿಸಿದ ಸಹಾಯಕ ಪ್ರಾಧ್ಯಾಪಕ - ಕೋವಿಡ್-19 ರೋಗಿ

ತ್ರಿಪುರ ವಿಶ್ವವಿದ್ಯಾಲಯದ ರಾಸಾಯನಿಕ ಮತ್ತು ಪಾಲಿಮರ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಹರ್ಜೀತ್ ನಾಥ್, ಕೋವಿಡ್-19 ರೋಗಿಗಳಿಗೆ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ವೃತ್ತಿಪರರಿಗೆ ಸಹಾಯ ಮಾಡುವ ಸಲುವಾಗಿ, 'ಕೋವಿಡ್-19 ವಾರ್​ಬೋಟ್' ಎಂಬ ರೊಬೊಟ್ ಅಭಿವೃದ್ಧಿಪಡಿಸಿದ್ದಾರೆ.

robot
robot
author img

By

Published : Jun 11, 2020, 1:21 PM IST

ಅಗರ್ತಲಾ (ತ್ರಿಪುರ): ಕೋವಿಡ್-19 ರೋಗಿಗಳಿಗೆ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ವೃತ್ತಿಪರರಿಗೆ ಸಹಾಯ ಮಾಡುವ ಸಲುವಾಗಿ, ಸಹಾಯಕ ಪ್ರಾಧ್ಯಾಪಕರೊಬ್ಬರು 'ಕೋವಿಡ್-19 ವಾರ್​ಬೋಟ್' ಎಂಬ ರೊಬೊಟ್​​ ಅಭಿವೃದ್ಧಿಪಡಿಸಿದ್ದಾರೆ.

ಇದು ಮಾನವನ ಹಸ್ತಕ್ಷೇಪವಿಲ್ಲದೇ ರೋಗಿಗಳಿಗೆ ಆಹಾರ, ಔಷಧಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ.

ತ್ರಿಪುರಾ ವಿಶ್ವವಿದ್ಯಾಲಯ ರಾಸಾಯನಿಕ ಮತ್ತು ಪಾಲಿಮರ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಹರ್ಜೀತ್ ನಾಥ್ ಈ ರೊಬೊಟ್​​​ ಅಭಿವೃದ್ಧಿಪಡಿಸಿದ್ದಾರೆ.

"ಇದು ನಾಲ್ಕು ಚಕ್ರಗಳ ರೊಬೊಟ್ ಆಗಿದ್ದು, ಇದನ್ನು ನಾನು ನನ್ನ ಮನೆಯಲ್ಲಿಯೇ ಅಭಿವೃದ್ಧಿಪಡಿಸಿದ್ದೇನೆ. ಈ ರೊಬೊಟ್​​ ತಯಾರಿಸುವ ಹಿಂದಿನ ಮುಖ್ಯ ಪ್ರೇರಣೆ ಕೋವಿಡ್-19 ಸಂಬಂಧಿತ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ನಮ್ಮ ಆರೋಗ್ಯ ಕಾರ್ಯಕರ್ತರಾದ ವೈದ್ಯರು ಮತ್ತು ದಾದಿಯರ ಆರೋಗ್ಯ ರಕ್ಷಿಸುವುದಾಗಿದೆ" ಎಂದು ಹರ್ಜೀತ್ ನಾಥ್ ಹೇಳಿದ್ದಾರೆ.

"ಕೆಲವು ದೇಶಗಳು ಈಗಾಗಲೇ ರೊಬೊಟ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಇವು ಆರೋಗ್ಯ ಕಾರ್ಯಕರ್ತರಿಗೆ ಸಾಕಷ್ಟು ಸಹಾಯ ಮಾಡುತ್ತಿದೆ. ಈ ರೊಬೊಟ್ ಅಗತ್ಯವಿದ್ದಾಗ ಔಷಧಗಳು, ನೀರಿನ ಬಾಟಲಿಗಳು ಮತ್ತು ಆಹಾರ ಪ್ಯಾಕೆಟ್‌ಗಳನ್ನು ತಲುಪಿಸಬಲ್ಲದು. ರೋಗಿಯು ವೈದ್ಯರೊಂದಿಗೆ ಸಂವಹನ ನಡೆಸಲು ಬಯಸಿದರೆ ಇದರಲ್ಲಿ ಕ್ಯಾಮೆರಾ ಸಹ ಇದೆ" ಎಂದು ಅವರು ಹೇಳಿದರು.

ಸುಮಾರು 25 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಈ ರೊಬೊಟ್ ತಯಾರಿಸಲಾಗಿದೆ. ಇದು ಸುಮಾರು ಒಂದು ಗಂಟೆ ನಿರಂತರವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ರೊಬೊಟ್ ಅನ್ನು ಕೋವಿಡ್-19 ಆಸ್ಪತ್ರೆಗಳಲ್ಲಿ ಬಳಸಲು ಸಾಧ್ಯವಾಗುವಂತೆ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸುವ ಉದ್ದೇಶವಿದೆ ಎಂದು ಹರ್ಜೀತ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.