ಬನ್ಸ್ವಾರ(ರಾಜಸ್ಥಾನ): ತ್ರಿವಳಿ ಕೊಲೆ ಪ್ರಕರಣ ಆರೋಪಿಯನ್ನು ಭಾನುವಾರ ಅಪರಿಚಿತ ಹಲ್ಲೆಕೋರರು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.
ಇಂದಿರಾ ಕಾಲೋನಿ ನಿವಾಸಿ ಪನ್ನಾಲಾಲ್ ಸರ್ಗಾರ್(50) ಭಾನುವಾರ ರಾತ್ರಿ ರಕ್ತಸಿಕ್ತವಾದ ಸ್ಥಿತಿಯಲ್ಲಿ ಬಿದ್ದಿರೋದು ಕಂಡು ಬಂದಿದೆ. ಪೊಲೀಸರ ಪ್ರಕಾರ, ಆತನ ಎದೆಗೆ ಹಲ್ಲೆಕೋರರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ರಾಜ್ ತಲಾಬ್ ಪ್ರದೇಶದ ಶ್ರೀರಾಮ್ ಕಾಲೋನಿಯಿಂದ ಆರೋಪಿಯ ಶವವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಈ ವಿಷಯದಲ್ಲಿ ಕೆಲವು ಸಾಕ್ಷ್ಯಗಳನ್ನು ಈಗಾಗಲೇ ವಶಪಡಿಸಿಕೊಂಡಿದ್ದು, ಸಿಸಿಟಿವಿ ದೃಶ್ಯ ಆಧಾರದ ಮೇಲೆ ಪನ್ನಾ ಲಾಲ್ ಸಹೋದರ ನಯನ್ ಮತ್ತು ಸೋದರ ಸಂಬಂಧಿಗಳಾದ ನರೇಶ್ ಮತ್ತು ದೂಂಗರ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇಂದಿರಾ ಕಾಲೋನಿ ನಿವಾಸಿಗಳಾದ ಶಬ್ಬೀರ್ ಮತ್ತು ಅವರ ಪುತ್ರರಾದ ಸೈಯದ್ ಮತ್ತು ಶರೀಫ್ ಅವರ 2018ರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸರ್ಗಾರ್ ಪನ್ನಾ ಲಾಲ್ ಜಾಮೀನಿನಲ್ಲಿದ್ದ ಎಂದು ತಿಳಿದು ಬಂದಿದೆ.