ETV Bharat / bharat

ದೀದಿ ಸರ್ಕಾರಕ್ಕೆ ಶಾಕ್​: ಸಚಿವ ಸ್ಥಾನ ತ್ಯಜಿಸಿದ ಕ್ರೀಡಾ ಮಂತ್ರಿ ಲಕ್ಷ್ಮೀ ರತನ್​ ಶುಕ್ಲಾ - ತೃಣಮೂಲ ಕಾಂಗ್ರೆಸ್ ಸಚಿವ ಲಕ್ಷ್ಮೀ ರತನ್ ಶುಕ್ಲಾ

ಪಶ್ಚಿಮ ಬಂಗಾಳದಲ್ಲಿ ದೀದಿ ಸರ್ಕಾರಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಕ್ರೀಡಾ ಸಚಿವ ದಿಢೀರ್​ ಆಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

minister Laxmi Ratan Shukla
minister Laxmi Ratan Shukla
author img

By

Published : Jan 5, 2021, 4:29 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇದೇ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದರ ಬೆನ್ನಲ್ಲೇ ಪಕ್ಷಾಂತರ ಪರ್ವ ಆರಂಭಗೊಂಡಿದೆ. ನಿನ್ನೆಯಷ್ಟೇ ತೃಣಮೂಲ ಕಾಂಗ್ರೆಸ್​ನ ಅನೇಕರು ಬಿಜೆಪಿ ಸೇರಿಕೊಂಡಿದ್ದ ಬೆನ್ನಲ್ಲೇ ಇಂದು ದೀದಿ ಸರ್ಕಾರದಲ್ಲಿನ ಕ್ರೀಡಾ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

39 ವರ್ಷದ ಲಕ್ಷ್ಮೀ ರತನ್​ ಶುಕ್ಲಾ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯಾವ ಕಾರಣಕ್ಕಾಗಿ ಅವರು ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ.

ದೀದಿ ಸ್ಪಷ್ಟನೆ ಇಂತಿದೆ: ಕ್ರೀಡಾ ಸಚಿವರ ರಾಜೀನಾಮೆ ಪತ್ರ ನನಗೆ ತಲುಪಿದೆ. ಶಾಸಕ ಲಕ್ಷ್ಮೀ ಒಳ್ಳೆಯ ವ್ಯಕ್ತಿಯಾಗಿದ್ದು, ಕ್ರೀಡೆಗೆ ಹಿಂತಿರುಗಬೇಕು ಎಂಬ ಉದ್ದೇಶದಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಗೊಂದಲ ಬೇಡ. ಅವರು ಶಾಸಕರಾಗಿ ಮುಂದುವರೆಯುಲಿದ್ದು, ಅವರ ರಾಜೀನಾಮೆ ಪತ್ರ ಸ್ವೀಕರಿಸುವಂತೆ ರಾಜ್ಯಪಾಲರಿಗೆ ತಿಳಿಸಿದ್ದೇನೆ ಎಂದಿದ್ದಾರೆ.

ಪಶ್ಚಿಮ ಬಂಗಾಳದ ರಣಜಿ ತಂಡದ ಮಾಜಿ ಕ್ಯಾಪ್ಟನ್​ ಆಗಿರುವ ಲಕ್ಷ್ಮೀ ಹೌರಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಇನ್ನು ತಾವು ರಾಜಕೀಯ ಕ್ಷೇತ್ರದಿಂದ ನಿವೃತ್ತಿ ಪಡೆದುಕೊಳ್ಳುವುದಾಗಿ ಈ ಹಿಂದೆ ಹೇಳಿದ್ದರು. 2016ರಲ್ಲಿ ಇವರು ತೃಣಮೂಲ ಕಾಂಗ್ರೆಸ್​ ಸೇರಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.