ETV Bharat / bharat

ರಾಜಸ್ಥಾನದಲ್ಲೊಂದು ಬಿಲ್ಲುಗಾರರ ಊರು: ಬುಡಕಟ್ಟು ಹಳ್ಳಿಯ ತುಂಬಾ ಬರೀ ಬಿಲ್ಲುಗಾರರೇ..!

ರಾಜಸ್ಥಾನದ ದುಂಗರಪುರ ಜಿಲ್ಲೆಯ ಬಿಲಾಡಿ ಎಂಬ ಗ್ರಾಮವು, ಬಿಲ್ಲುಗಾರಿಕೆಗೆ ಹೆಸರುವಾಸಿ. ಈ ಹಳ್ಳಿಯಲ್ಲಿ ಓರ್ವ ಅಂತಾರಾಷ್ಟ್ರೀಯ, 30 ರಾಷ್ಟ್ರೀಯ ಮತ್ತು 20 ಕ್ಕೂ ಹೆಚ್ಚು ರಾಜ್ಯಮಟ್ಟದ ಬಿಲ್ಲುಗಾರು ಇದ್ದಾರೆ.

Tribal village of Biladi of Dungarpur district is known for its archers
ಬಿಲ್ಲುಗಾರಿಕೆಗೆ ಹೆಸರುವಾಸಿಯಾದ ರಾಜಸ್ಥಾನದ ಬಿಲಾಡಿ
author img

By

Published : Oct 2, 2020, 6:06 AM IST

ರಾಜಸ್ಥಾನ: ಕೈಯಲ್ಲಿ ಬಿಲ್ಲು ಬಾಣ. ಗುರಿಯತ್ತ ಕಣ್ಣುಗಳು. ರಾಜಸ್ಥಾನದ ದುಂಗರಪುರ ಜಿಲ್ಲೆಯ ಬಿಲಾಡಿ ಗ್ರಾಮದಲ್ಲಿ ಈ ದೃಶ್ಯಗಳು ಕಂಡು ಬರುವುದು ಸಾಮಾನ್ಯ. ಯಾಕಂದರೆ, ಈ ಗ್ರಾಮ ಬಿಲ್ಲುಗಾರಿಕೆಗೆ ಹೆಸರುವಾಸಿ. ಇದು ಓರ್ವ ಅಂತಾರಾಷ್ಟ್ರೀಯ, 30 ರಾಷ್ಟ್ರೀಯ ಮತ್ತು 20 ಕ್ಕೂ ಹೆಚ್ಚು ರಾಜ್ಯಮಟ್ಟದ ಬಿಲ್ಲುಗಾರರನ್ನು ಹೊಂದಿರುವ ಹಳ್ಳಿ. ಇದರಲ್ಲಿ ಹುಡುಗರು ಮತ್ತು ಹುಡುಗಿಯರು ಸೇರಿದ್ದಾರೆ.

ಇಲ್ಲಿನ ಕೆಲವು ಕುಟುಂಬಗಳಲ್ಲಿ ಎಲ್ಲರೂ ಬಿಲ್ಲುಗಾರಿಕೆ ಅಭ್ಯಾಸ ಮಾಡುತ್ತಾರೆ. ಗ್ರಾಮದ ಮನೀಷಾ ನ್ಯಾನೋಮಾ ಎಂಬ ಹುಡುಗಿ ಹಾಗೂ ಅವರ ಸಹೋದರರಾದ ವಿನೋದ್ ಮತ್ತು ಪಂಕಜ್ ಇಬ್ಬರೂ ರಾಷ್ಟ್ರೀಯ ಬಿಲ್ಲುಗಾರರು. ಹಾಗೆಯೇ ಕಂಟ ಕಠಾರ ಎಂಬುವವರು 1997 ರಲ್ಲಿ ರಾಷ್ಟ್ರಮಟ್ಟದಲ್ಲಿ ಚಿನ್ನ ಗೆದ್ದಿದ್ದರು. ಹಾಗೂ ಅಭಿಷೇಕ್ ನ್ಯಾನೋಮಾ ಎಂಬುವವರು 4 ಚಿನ್ನ ಗೆದ್ದಿದ್ದಾರೆ. ಮನೀಷಾ ನ್ಯಾನೋಮಾ ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ತಲಾ 4 ಚಿನ್ನ ಗೆದ್ದಿದ್ದಾರೆ. ಅನೇಕ ಆಟಗಾರರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪದಕಗಳಿಗೆ ಮುತ್ತಿಕ್ಕಿದ್ದಾರೆ.

ಬಿಲ್ಲುಗಾರಿಕೆಗೆ ಹೆಸರುವಾಸಿಯಾದ ರಾಜಸ್ಥಾನದ ಬಿಲಾಡಿ

ಈ ಆಟಗಾರರು 5 ಕಿ.ಮೀ ದೂರದಲ್ಲಿರುವ ಕ್ರೀಡಾ ಮೈದಾನ ಹಾಗೂ ತಮ್ಮ ಹಳ್ಳಿಯ ಬಂಜರು ಭೂಮಿಯಲ್ಲಿ ಅಭ್ಯಾಸ ಮಾಡುತ್ತಾರೆ. ಕೆಲವು ಕುಟುಂಬಗಳು ತಮ್ಮ ಶ್ರಮದಿಂದ ಸಂಪಾದಿಸಿದ ಹಣದಿಂದ ಬಿಲ್ಲು ಖರೀದಿಸಿದ್ದಾರೆ. ಇನ್ನೂ ಕೆಲವರು ವಿದ್ಯಾರ್ಥಿ ವೇತನದಿಂದ ಬಿಲ್ಲು ಖರೀದಿಸಿದ್ದಾರೆ.

ಇದೇ ವರ್ಷ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಭಾರತದ ಮಾಜಿ ಬಿಲ್ಲುಗಾರಿಕೆ ತರಬೇತುದಾರ ಜಯಂತಿ ಲಾಲ್ ನ್ಯಾನೋಮಾ ಅವರೇ ಈ ಆಟಗಾರರಿಗೆ ತರಬೇತಿ ನೀಡಿದ್ದಾರೆ. ಜಯಂತಿ ಲಾಲ್ 1995 ರಲ್ಲಿ ಬಿಲ್ಲುಗಾರಿಕೆ ಪ್ರಾರಂಭಿಸಿದ್ದು, 2006 ರಲ್ಲಿ ಅವರು ದೇಶಕ್ಕಾಗಿ ಮೊದಲ ಪದಕ ಗೆದ್ದವರು. ಹಾಗೂ ಅವರು ಭಾರತೀಯ ಬಿಲ್ಲುಗಾರಿಕೆ ತಂಡದ ತರಬೇತುದಾರರಾಗಿ ಮತ್ತು ಕ್ರೀಡಾ ನಿರ್ವಾಹಕರಾಗಿ ಅಪಾರ ಕೊಡುಗೆ ನೀಡಿದ್ದಾರೆ.

ಜಯಂತಿಲಾಲ್ 2006 ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದರು. ಅವರು 4 ಏಷ್ಯನ್ ಗ್ರ್ಯಾಂಡ್ ಪಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅಂತಾರಾಷ್ಟ್ರೀಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ 40 ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ.

ಆಟಗಾರರು ಗೆದ್ದ ಪ್ರತಿಯೊಂದು ಪ್ರಶಸ್ತಿಯೂ ಅವರ ವಿಶ್ವಾಸವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. ಬಿಲ್ಲುಗಾರಿಕೆ ಆಟಕ್ಕೆ ಜಯಂತಿ ಲಾಲ್ ನ್ಯಾನೋಮಾ ಅವರ ಕೊಡುಗೆ ಅವರ ಸಾಧನೆಗಳಿಗಿಂತ ಹೆಚ್ಚು. ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆಲ್ಲುವುದು ಮತ್ತು ಮೂರು ಬಾರಿ ಭಾರತೀಯ ಬಿಲ್ಲುಗಾರಿಕೆ ತಂಡದ ತರಬೇತುದಾರರಾಗಿದ್ದು, ಅವರ ದೊಡ್ಡ ಸಾಧನೆ ಎಂದು ಹೇಳಬಹುದು.

ಆದರೆ, ಅವರ ಅಕಾಲಿಕ ಮರಣವು ಒಂದು ದೊಡ್ಡ ಅಂತರವನ್ನು ಸೃಷ್ಟಿಸಿದ್ದು, ಅವರ ಜಾಗವನ್ನು ಬೇರೆಯವರು ತುಂಬುವುದು ಕಷ್ಟ. ಜಯಂತಿ ಲಾಲ್ ಅವರ ಕನಸನ್ನು ಈಡೇರಿಸುವ ಜವಾಬ್ದಾರಿ ಆ ಪ್ರಬಲ ಭುಜಗಳ ಮೇಲೆ ನಿಂತಿದ್ದು, ಅದು ಈಡೇರಿದಾಗ ಅವರಿಗೆ ನಿಜವಾದ ಗೌರವ ಸಿಕ್ಕಂತಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.