ETV Bharat / bharat

ಜೂ.1 ರಿಂದ ವಿಶೇಷ ರೈಲು: ಬೆಳಗ್ಗೆ 10 ಗಂಟೆಯಿಂದಲೇ ಟಿಕೆಟ್‌ ಬುಕ್ಕಿಂಗ್‌ ಆರಂಭ

author img

By

Published : May 21, 2020, 12:05 AM IST

Updated : May 21, 2020, 12:15 AM IST

ಜೂನ್‌ 1 ರಿಂದ 200 ವಿಶೇಷ ರೈಲುಗಳ ಸಂಚಾರ ಆರಂಭಿಸುತ್ತಿದ್ದು, ಬೆಳಗ್ಗೆ 10 ಗಂಟೆಯಿಂದಲೇ ಟಿಕೆಟ್‌ ಬುಕ್ಕಿಂಗ್‌ ಆರಂಭಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Trains to run from Jun 1 to have to have AC, non-AC coaches; booking from tomorrow 10 am: Rlys
ಜೂ.1 ರಿಂದ ವಿಶೇಷ ರೈಲು ಸೇವೆಗೆ ನಾಳೆ ಬೆಳಗ್ಗೆ 10 ಗಂಟೆಯಿಂದಲೇ ಟಿಕೆಟ್‌ ಬುಕ್ಕಿಂಗ್‌ ಆರಂಭ

ನವದೆಹಲಿ: ಜೂ.1 ರಿಂದ ವಿಶೇಷ ರೈಲು ಸೇವೆಗೆ ಬೆಳಗ್ಗೆ 10 ಗಂಟೆಯಿಂದಲೇ ಟಿಕೆಟ್‌ ಬುಕ್ಕಿಂಗ್‌ ಆರಂಭಿಸುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.

ತುರಂತ್​, ಸಂಪರ್ಕ ಕ್ರಾಂತಿ, ಜನ್‌ ಶತಾಬ್ದಿ ಮತ್ತು ಪೂರ್ವ ಎಕ್ಸ್​​​ಪ್ರೆಸ್‌ ರೈಲುಗಳ ವೇಳಾಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಈ ರೈಲುಗಳ ಟಿಕೆಟ್‌ ದರ ಸಾಮಾನ್ಯವಾಗಿರಲಿದೆ. ಆದ್ರೆ ಸಾಮಾನ್ಯ ಕೋಚ್‌ಗಳಲ್ಲಿನ 2ಎಸ್‌ ಸೀಟ್‌ಗಳನ್ನು ಕಾಯ್ದಿರಿಸಿದರೆ ಹೆಚ್ಚುವರಿ ದರವನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದೆ. ಎಲ್ಲ ಪ್ರಯಾಣಿಕರಿಗೂ ಸೀಟಿನ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದೆ.

ರೈಲುಗಳು ಸಂಪೂರ್ಣವಾಗಿ ಎಸಿ ರಹಿತವಾಗಿರಲಿವೆ ಎಂದು ಈ ಮೊದಲು ಹೇಳಲಾಗಿತ್ತು. ಆದ್ರೆ ಜೂನ್‌ 1 ರಿಂದ ಸಂಚರಿಸಲಿರುವ ರೈಲುಗಳನ್ನು ಎಸಿ ಮತ್ತು ಎಸಿ ರಹಿತ ಎಂದು ವಿಭಾಗಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಐಆರ್‌ಟಿಸಿ ವೆಬ್‌ಸೈಟ್‌ ಅಥವಾ ಮೊಬೈಲ್ ಆ್ಯಪ್‌ ಮೂಲಕ ಆನ್‌ಲೈನ್‌ನಲ್ಲಿ ಇ - ಟಿಕೆಟ್‌ ಬುಕ್ಕಿಂಗ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ದೇಶದ ಯಾವುದೇ ರೈಲ್ವೆ ನಿಲ್ದಾಣದ ಕೌಂಟರ್‌ಗಳಲ್ಲಿ ಬುಕ್ಕಿಂಗ್‌ ಅವಕಾಶ ಕಲ್ಪಿಸಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Last Updated : May 21, 2020, 12:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.