ಆಯ್ದ ಕೆಲವೇ ಗ್ರಾಹಕರಿಗೆ ವೇಗವಾಗಿ ಇಂಟರ್ನೆಟ್ ವೇಗವನ್ನು ನೀಡುವ ಏರ್‌ಟೆಲ್ , ವೊಡಾಫೋನ್ ಮತ್ತು ಐಡಿಯಾದ ವಿಶೇಷ ಯೋಜನೆಗಳು ಇತರ ಗ್ರಾಹಕರ ಸೇವೆಗಳ ಮೇಲೆ ಪರಿಣಾಮ ಬೀರಬಹುದು, ಯಾಕೆಂದರೆ ಪ್ರತಿ ಬಿಟಿಎಸ್‌ಗೆ ಬ್ಯಾಂಡ್‌ವಿಡ್ತ್ ನಿಗದಿಪಡಿಸಲಾಗಿದೆ ಎಂದು ಟೆಲಕಾಂ ರೇಗ್ಯುಲೇಟ್ ಆಥಾರಿಟಿ ಆಫ್ ಇಂಡಿಯಾ (TRAI) ಅಧ್ಯಕ್ಷ ಆರ್.ಎಸ್.ಶರ್ಮಾ ಈಟಿವಿ ಭಾರತ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ಆಮದು ಮಾಡಿದ ಟೆಲಿಕಾಂ ಉಪಕರಣಗಳ ಮೇಲೆ ಭಾರತದ ಅವಲಂಬನೆಯ ಬಗ್ಗೆ, ಈಟಿವಿ ಭಾರತ್ ದೆಹಲಿ ರಾಷ್ಟ್ರೀಯ ವರದಿಗಾರ ಗೌತಮ್ ಡೆಬ್ರಾಯ್ ಜೊತೆ ಮಾತನಾಡಿದ ಶರ್ಮಾ, ಕೆಲವು ದೇಶಗಳು ಆರಂಭದಲ್ಲಿ ತಮ್ಮ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಾಂ ಉಪಕರಣಗಳನ್ನು ದೇಶೀಯ ಉದ್ಯಮವನ್ನು ಕೊಲ್ಲಲು ತಂದು ತುಂಬಿದವು. ಇದರಿಂದಾಗಿ ನಂತರ ಅವರು ತಮ್ಮ ಉತ್ಪನ್ನಗಳ ಬೆಲೆಗಳನ್ನ ಹೆಚ್ಚಿಸುವ ಯೋಜನೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಸಂಪಾದಿಸಿದ ಆಯ್ದ ಭಾಗಗಳು :
ಪ್ರಶ್ನೆ: ಕೆಲವು ಆದ್ಯತೆಯ ಬಳಕೆದಾರರಿಗೆ ಮಾತ್ರ ವೇಗದ ಇಂಟರ್ನೆಟ್ ಸೇವೆ ಒದಗಿಸುವ ಭಾರ್ತಿ ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾದ ವಿಶೇಷ ಯೋಜನೆ ಇತರ ಚಂದಾದಾರರಿಗೆ ಸೇವೆಗಳ ಕ್ಷೀಣತೆಗೆ ಕಾರಣವಾಗಬಹುದು ಎಂದು ನೀವು ನಂಬುತ್ತೀರಾ?
ಉತ್ತರ: ಪ್ರಾಥಮಿಕವಾಗಿ, ಪ್ರತಿ ಬಿಟಿಎಸ್‌ಗೆ ಬ್ಯಾಂಡ್‌ವಿಡ್ತ್ ನಿಗದಿಪಡಿಸಿರುವ ಕಾರಣ, ಕೆಲವು ಗ್ರಾಹಕರಿಗೆ ಮಾತ್ರ ಆದ್ಯತೆಯ ಸೇವೆ ಒದಗಿಸಿದರೆ ಇತರ ಸಾಮಾನ್ಯ ಗ್ರಾಹಕರ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕೆಲವು ಆಯ್ದ ಗ್ರಾಹಕರಿಗೆ ಆದ್ಯತೆ ನೀಡುವ ಯೋಜನೆಗಳು ಸಾಮಾನ್ಯ ಗ್ರಾಹಕರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ತೋರುತ್ತದೆ. ಇದಲ್ಲದೆ, ಅಂತಹ ಯೋಜನೆಗಳು ಗ್ರಾಹಕರಿಗೆ ತಿಳಿವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುವಂತೆ ‘ಇಂಟರ್ನೆಟ್ ವೇಗ’ದ ಬಗ್ಗೆ ಸ್ಪಷ್ಟವಾಗಿ ಸೂಚಿಸಿಲ್ಲ. ಈ ವಿಷಯವನ್ನು ಟ್ರಾಯ್ ವಿವರವಾಗಿ ಪರಿಶೀಲಿಸುತ್ತಿದೆ ಮತ್ತು ನಮ್ಮ ಪರೀಕ್ಷೆಯ ಆಧಾರದ ಮೇಲೆ ನಾವು ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ.
ಪ್ರಶ್ನೆ: ಟೆಲಿಕಾಂ ಅತ್ಯಂತ ಸೂಕ್ಷ್ಮ ವಲಯವಾಗಿರುವುದರಿಂದ, ಟೆಲಿಕಾಂ ಉಪಕರಣಗಳ ದೇಶೀಯ ಉತ್ಪಾದನೆ ಮತ್ತು ಡಿಜಿಟಲ್ ಸಾರ್ವಭೌಮತ್ವವನ್ನು ಉತ್ತೇಜಿಸುವುದು ಅಗತ್ಯವೆಂದು ನೀವು ಭಾವಿಸುತ್ತೀರಾ?
ಉತ್ತರ : ನಮ್ಮ ದೇಶೀಯ ಉದ್ಯಮವನ್ನು ಕೊಲ್ಲಲು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಆರಂಭದಲ್ಲಿ ಡಂಪ್ ಮಾಡುವ ತಂತ್ರಗಳನ್ನು ಕೆಲವು ದೇಶಗಳು ಉದ್ದೇಶಪೂರ್ವಕವಾಗಿ ಅಳವಡಿಸಿಕೊಂಡಿವೆ ಮತ್ತು ನಂತರ ಅವುಗಳ ಬೆಲೆಗಳನ್ನು ಹೆಚ್ಚಿಸುತ್ತವೆ. ನಾವು ಈ ತಂತ್ರಗಳನ್ನು ಅರಿತುಕೊಳ್ಳಬೇಕು ಮತ್ತು ಆದ್ಯತೆಯ ಮಾರುಕಟ್ಟೆ ಪ್ರವೇಶ ನೀತಿಯನ್ನು ತಕ್ಷಣ ಕಾರ್ಯಗತಗೊಳಿಸಬೇಕು. ನಮ್ಮ ದೇಶೀಯ ಉತ್ಪಾದಕರಿಗೆ ನಾವು ಹೆಚ್ಚಿನ ಅವಕಾಶಗಳನ್ನು ಒದಗಿಸದಿದ್ದರೆ, ಸ್ಥಳೀಯ ಉತ್ಪಾದನೆಯಲ್ಲಿ ಭಾರತ ಯಶಸ್ವಿಯಾಗುವುದಿಲ್ಲ ಎಂದು ನಾನು ನಂಬುತ್ತೇನೆ.
ಆಗಸ್ಟ್ 3 2018 ರಂದು "ಸ್ಥಳೀಯ ಟೆಲಿಕಾಂ ಸಲಕರಣೆಗಳ ಉತ್ಪಾದನೆಯನ್ನು ಉತ್ತೇಜಿಸುವ" ಕುರಿತಾದ ತನ್ನ ಶಿಫಾರಸನ್ನು ಟ್ರಾಯ್ ಬಿಡುಗಡೆ ಮಾಡಿದೆ. 2022 ರ ವೇಳೆಗೆ 'ದೂರಸಂಪರ್ಕ ಸಾಧನಗಳ ನಿವ್ವಳ ಶೂನ್ಯ ಆಮದು' ಉದ್ದೇಶವನ್ನು ಸಾಧಿಸುವ ಗುರಿ ಭಾರತ ಹೊಂದಿರಬೇಕು ಎಂದು ಟ್ರಾಯ್ ಶಿಫಾರಸು ಮಾಡಿದೆ. ಈ ಉದ್ದೇಶಕ್ಕಾಗಿ, ಟೆಲಿಕಾಂ ಸಲಕರಣೆಗಳ ಉತ್ಪಾದನಾ ಮಂಡಳಿ (ಟಿಇಎಂಸಿ), ಆದ್ಯತೆಗಳ ನಿರ್ದಿಷ್ಟ ಕ್ಷೇತ್ರಗಳನ್ನು ಗುರುತಿಸಿ ಶಿಫಾರಸು ಮಾಡಬೇಕು. ದೇಶದಲ್ಲಿ ಸಂಶೋಧನೆ, ನಾವೀನ್ಯತೆ, ಪ್ರಮಾಣೀಕರಣ, ವಿನ್ಯಾಸ, ಪರೀಕ್ಷೆ, ಪ್ರಮಾಣೀಕರಣ ಮತ್ತು ಸ್ಥಳೀಯ ಟೆಲಿಕಾಂ ಉಪಕರಣಗಳ ಉತ್ಪಾದನೆಯನ್ನು ಉತ್ತೇಜಿಸಲು ವಿಶೇಷ 1 ಸಾವಿರ ಕೋಟಿ ರೂ. ಅನುದಾನ ಒದಗಿಸಬೇಕು. ಸರ್ಕಾರದ ನೀತಿಗಳು ಸಮೃದ್ಧ ಲಾಭಾಂಶವನ್ನು ಪಾವತಿಸಿವೆ ಎಂದು ನಾನು ನಂಬುತ್ತೇನೆ, ಆದರೆ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ.
ಪ್ರಶ್ನೆ: ಚೀನಾ ಉತ್ಪಾದಿಸಿದ ಉಪಕರಣಗಳನ್ನು ತನ್ನ ತಾಂತ್ರಿಕ ನವೀಕರಣದಲ್ಲಿ ಬಳಸದಿರಲು ಬಿಎಸ್‌ಎನ್‌ಎಲ್‌ನ ಮುಂದಡಿ ಇಡುತ್ತಿದೆ. ಚೀನೀ ಟೆಲಿಕಾಂ ಉಪಕರಣಗಳ ನಿಯೋಜನೆಯನ್ನು ನಿಷೇಧಿಸುವುದು ಕಾರ್ಯಸಾಧ್ಯವೆಂದು ನೀವು ಭಾವಿಸುತ್ತೀರಾ?
ಉತ್ತರ : ನಮ್ಮ ದೇಶದಲ್ಲಿ ನಮಗೆ ಅಗತ್ಯವಿರುವ ಎಲ್ಲಾ ಟೆಲಿಕಾಂ ಉಪಕರಣಗಳನ್ನು ನಾವು ತಯಾರಿಸಬಹುದು ಎಂದು ನಾನು ನಂಬುತ್ತೇನೆ. ಭಾರತದಲ್ಲಿ ಉಪಕರಣಗಳನ್ನು ತಯಾರಿಸಲು ಸರ್ಕಾರ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದೆ. ಭಾರತೀಯ ಕಂಪನಿಗಳು ಈ ಅವಕಾಶವನ್ನು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮತ್ತು ದೇಶದೊಳಗೆ ಉಪಕರಣಗಳನ್ನು ತಯಾರಿಸಲು ಬಳಸಿಕೊಳ್ಳಬೇಕು. ಚೀನಾದ ಉಪಕರಣಗಳ ನಿಯೋಜನೆಯನ್ನು ನಿಷೇಧಿಸುವುದು ಅಷ್ಟೇ ಅಲ್ಲ, ಹೆಚ್ಚಿನ ಪ್ರಾಮುಖ್ಯತೆ ಹೊಂದಿರುವ ಈ ನಿರ್ಣಾಯಕ ಪ್ರದೇಶದಲ್ಲಿ ಸ್ವಾವಲಂಬನೆ ಸಾಧಿಸುವುದು ಪ್ರಮುಖವಾಗಿದೆ.
ಪ್ರಶ್ನೆ: ಪ್ರಸಾರ ಉದ್ಯಮದಲ್ಲಿ ಹೊಸ ತೆರಿಗೆ ಆದೇಶದಿಂದ ನೀವು ಯಾವ ರೀತಿಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದೀರಿ?
ಉತ್ತರ: ಹೊಸ ನಿಯಂತ್ರಕ ಚೌಕಟ್ಟು ಪಾರದರ್ಶಕತೆ, ತಾರತಮ್ಯರಹಿತ, ಗ್ರಾಹಕರ ಹಿತಾಸಕ್ತಿ ಸಂರಕ್ಷಣೆ ಮತ್ತು ಕ್ಷೇತ್ರದ ಕ್ರಮಬದ್ಧ ಬೆಳವಣಿಗೆಯನ್ನು ಅದರ ಪ್ರಮುಖ ತತ್ವಗಳಾಗಿ ಆಧರಿಸಿದೆ. ಹೊಸ ಚೌಕಟ್ಟು ಗ್ರಾಹಕ ಕೇಂದ್ರಿತವಾಗಿದ್ದು, ಅವರ ಆಯ್ಕೆಯ ಪ್ರಕಾರ ಟಿವಿ ಚಾನೆಲ್‌ಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲು ಮತ್ತು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಆಯ್ಕೆಯ ಸ್ವಾತಂತ್ರ್ಯ ಎಂದರೆ ಟೆಲಿವಿಷನ್ ಸೇವೆಗಳಿಗಾಗಿ ಮಾಸಿಕ ಬಿಲ್ ನಲ್ಲಿ ಗ್ರಾಹಕರ ನೇರ ನಿಯಂತ್ರಣ. ಸೇವಾ ವಿತರಣಾ ಮೌಲ್ಯ ಸರಪಳಿಯಲ್ಲಿ ಅನೇಕ ಪಾಲುದಾರರು ಕಾರ್ಯನಿರ್ವಹಿಸುವ ಕ್ಷೇತ್ರದ ನಿಯಂತ್ರಣಕ್ಕೆ, ವಿಭಿನ್ನ ಹಿತಾಸಕ್ತಿಗಳ ಚತುರ ಸಮತೋಲನ ಅಗತ್ಯವಿರುತ್ತದೆ. ಹೊಸ ನಿಯಂತ್ರಕ ಚೌಕಟ್ಟು ಚಾನೆಲ್‌ಗಳನ್ನು ಎ-ಲಾ-ಕಾರ್ಟೆ (a-la-carte) ಆಧಾರದ ಮೇಲೆ ಅಥವಾ ಗುಚ್ಛ (bouquet) ವಾಗಿ ನೀಡಲು ಸಾಕಷ್ಟು ಪ್ಲೆಕ್ಸಿಬಿಲಿಟಿಯನ್ನು ಒದಗಿಸುತ್ತದೆ. ವಾಸ್ತವವಾಗಿ, ಹೊಸ ಚೌಕಟ್ಟು 2004 ರಿಂದ ಚಾನೆಲ್ ಬೆಲೆಗಳ ಮೇಲೆ ಜಾರಿಯಲ್ಲಿದ್ದ ಇತರ ಸೀಲಿಂಗ್ ಅನ್ನು ತೆಗೆದುಹಾಕಿದೆ. ಹೊಸ ನಿಯಂತ್ರಕ ಚೌಕಟ್ಟು ಟಿವಿ ಚಾನೆಲ್ ಬೆಲೆಗಳಲ್ಲಿ ಪಾರದರ್ಶಕತೆ ಮತ್ತು ವಲಯದಲ್ಲಿನ ವ್ಯವಹಾರ ಪ್ರಕ್ರಿಯೆಗಳನ್ನು ಸಮನ್ವಯಗೊಳಿಸಿದೆ ಎಂದು ವಿಶ್ಲೇಷಣೆ ತಿಳಿಸುತ್ತದೆ. ಪಾರದರ್ಶಕತೆಯನ್ನು ತರುವ ಸಲುವಾಗಿ, ಹೊಸ ಚೌಕಟ್ಟಿನಲ್ಲಿ ಚಾನೆಲ್‌ಗಳ ಬೆಲೆಗಳು ಮತ್ತು ನೆಟ್‌ವರ್ಕ್ ವೆಚ್ಚವನ್ನು ಬೇರ್ಪಡಿಸಲಾಗಿದೆ.
ಪ್ರಸಾರಕರು ತಮ್ಮ ಚಾನೆಲ್‌ಗಳ ಎಂಆರ್‌ಪಿಯನ್ನು ನಿರ್ಧರಿಸಲು ಫ್ಲೆಕ್ಸಿಬಿಲಿಟಿಯನ್ನು ಹೊಂದಿರುತ್ತಾರೆ. ನೆಟ್‌ವರ್ಕ್ ವೆಚ್ಚವನ್ನು ಮರುಪಡೆಯಲು ಎನ್‌ಸಿಎಫ್(NCF) ಅನ್ನು ಸೂಚಿಸಲಾಗಿದೆ. ಈ ತಿದ್ದುಪಡಿಗಳು ಗ್ರಾಹಕರಿಗೆ ಉತ್ತಮ ಕೊಡುಗೆಗಳು, ಹೆಚ್ಚು ಸುಲಭವಾಗಿ ಸುಂಕದ ಯೋಜನೆಗಳು ಮತ್ತು ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತವೆ. ಒಟ್ಟಾರೆಯಾಗಿ, ತಿದ್ದುಪಡಿಗಳು ಪ್ರಸಾರ ಮತ್ತು ಕೇಬಲ್ ಸೇವೆಗಳ ಕ್ಷೇತ್ರದ ಆರೋಗ್ಯಕರ ಮತ್ತು ರಚನಾತ್ಮಕ ಬೆಳವಣಿಗೆಗೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಪ್ರಶ್ನೆ: ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಟೆಲಿಕಾಂ ವಲಯವು ವಹಿಸಿರುವ ನಿರ್ಣಾಯಕ ಪಾತ್ರದ ಬಗ್ಗೆ ದಯವಿಟ್ಟು ಪ್ರತಿಕ್ರಿಯಿಸಬಹುದೇ?
ಉತ್ತರ: ನಾವು ಸಾಮಾಜಿಕ ದೂರ ಮತ್ತು ಸ್ವಯಂ-ಸಂಪರ್ಕ ತಡೆಯನ್ನು ಅಭ್ಯಾಸ ಮಾಡುತ್ತಿರುವಾಗ, ನಮ್ಮ ಈಗಿರುವ ಸಾಮಾನ್ಯತೆಯನ್ನು ಕಾಪಾಡಿಕೊಳ್ಳುವ ಇರುವ ಏಕೈಕ ಮಾರ್ಗವೆಂದರೆ ಾದು ದೂರದಿಂದಲೇ ಸಂಪರ್ಕ ಸಾಧಿಸುವುದು. ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಪರಿಣಾಮವಾಗಿ, ಮನೆಯಲ್ಲಿಯೇ ಇರುವುದು ಮತ್ತು ಮನೆಯಿಂದಲೆ ಕೆಲಸ (work from home) ಮಾಡುವುದರಿಂದ ಅನೇಕ ಮನೆಗಳನ್ನು ದೂರಸ್ಥ ಕಚೇರಿಗಳು, ವರ್ಚುವಲ್ ಕಾನ್ಫರೆನ್ಸ್ ಕೊಠಡಿಗಳು, ಮಕ್ಕಳಿಗಾಗಿ ಆನ್‌ಲೈನ್ ಶಾಲೆಗಳು ಮತ್ತು ಕೆಲವು ಸಂದರ್ಭಗಳಲ್ಲಿ ಕುಟುಂಬದ ಮನರಂಜನೆಗಾಗಿ ವೀಡಿಯೊ ಸ್ಟ್ರೀಮಿಂಗ್ ಹಬ್‌ಗಳಾಗಿ ಪರಿವರ್ತಿಸುವ ಅವಶ್ಯಕತೆಯಿದೆ. ಶುದ್ಧ ನೀರು ಮತ್ತು ವಿದ್ಯುತ್‌ನಂತೆ ಬ್ರಾಡ್‌ಬ್ಯಾಂಡ್ ಪ್ರವೇಶವು ಆಧುನಿಕ ದಿನದ ಅವಶ್ಯಕತೆಯಾಗಿದೆ. ಬ್ರಾಡ್‌ಬ್ಯಾಂಡ್ ಸಂಪರ್ಕವಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಮೂಲಭೂತವಾಗಿ, ಹೊಸ ಸಾಮಾನ್ಯ ಜೀವನವು ಟೆಲಿಕಾಂ ಸಂಪರ್ಕ ಮತ್ತು ಡಿಜಿಟಲ್ ಪರಿಕರಗಳೊಂದಿಗೆ ಬೆಂಬಲಿತ ಜೀವನವಾಗಿದೆ.
ಪ್ರಶ್ನೆ : ಸರ್ಕಾರವು ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ (ಎನ್‌ಡಿಸಿಪಿ) 2018 ಅನ್ನು ಜಾರಿಗೆ ತರಬೇಕಾದ ಸಮಯ ಎಂದು ನೀವು ಭಾವಿಸುತ್ತೀರಾ?
ಉತ್ತರ: ಈ ನೀತಿಯು ಕೇಂದ್ರೀಕೃತವಾಗಿರುವ ಮೂರು ಪ್ರಮುಖ ಕ್ಷೇತ್ರಗಳು: ಕನೆಕ್ಟ್ ಇಂಡಿಯಾ, ಪ್ರೊಪೆಲ್ ಇಂಡಿಯಾ ಮತ್ತು ಸುರಕ್ಷಿತ ಭಾರತ. ಕನೆಕ್ಟ್ ಇಂಡಿಯಾವು ಎಲ್ಲರಿಗೂ ಬ್ರಾಡ್‌ಬ್ಯಾಂಡ್ ಅನ್ನು ಕಲ್ಪಿಸುವ ಕುರಿತಂತೆ ಉತ್ತೇಜಿಸಲು ಒತ್ತು ನೀಡಿದರೆ, ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಗೆ 5 ಜಿ, ಎಐ, ಐಒಟಿ, ಕ್ಲೌಡ್ ಮತ್ತು ಬಿಗ್ ಡೇಟಾ ಸೇರಿದಂತೆ ಉದಯೋನ್ಮುಖ ಡಿಜಿಟಲ್ ತಂತ್ರಜ್ಞಾನಗಳ ಶಕ್ತಿಯನ್ನು ಬಳಸಿಕೊಳ್ಳುವ ಉದ್ದೇಶವನ್ನು ಪ್ರೊಪೆಲ್ ಇಂಡಿಯಾ ಹೊಂದಿದೆ. ಸುರಕ್ಷಿತ ಭಾರತ (Secure India) ವು ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡುವುದು ಮತ್ತು ವೈಯಕ್ತಿಕ ಸ್ವಾಯತ್ತತೆ ಮತ್ತು ಆಯ್ಕೆ, ದತ್ತಾಂಶ ಮಾಲೀಕತ್ವ, ಗೌಪ್ಯತೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವತ್ತ ಗಮನಹರಿಸುವ ಮೂಲಕ ಭಾರತದ ಡಿಜಿಟಲ್ ಸಾರ್ವಭೌಮತ್ವವನ್ನು ಕಾಪಾಡುವ ಉದ್ದೇಶವನ್ನು ಹೊಂದಿದೆ, ಆದರೆ ಡೇಟಾವನ್ನು ನಿರ್ಣಾಯಕ ಆರ್ಥಿಕ ಸಂಪನ್ಮೂಲವೆಂದು ಗುರುತಿಸುತ್ತದೆ.
ಪ್ರತಿ ನಾಗರಿಕರಿಗೆ ಯುನಿವರ್ಸಲ್ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು 50 ಎಮ್‌ಬಿಪಿಎಸ್, 2022 ರ ವೇಳೆಗೆ ಭಾರತದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ 10 ಜಿಬಿಪಿಎಸ್ ಸಂಪರ್ಕವನ್ನು ಒದಗಿಸುವುದು, ಎಲ್ಲಾ ಪ್ರಮುಖ ಅಭಿವೃದ್ಧಿ ಸಂಸ್ಥೆಗಳಿಗೆ ಬೇಡಿಕೆಯ ಮೇರೆಗೆ ಬ್ರಾಡ್‌ಬ್ಯಾಂಡ್ ಅನ್ನು ಸಕ್ರಿಯಗೊಳಿಸುವುದು ಮತ್ತು ಎಲ್ಲಾ ತೆರೆದ ಪ್ರದೇಶಗಳಿಗೆ ಸಂಪರ್ಕವನ್ನು ಖಚಿತಪಡಿಸುವ ಗುರಿ ಹೊಂದಿದೆ.
ಪ್ರಶ್ನೆ: ಗೂಗಲ್ ಸಿಇಒ ಸುಂದರ್ ಪಿಚೈ ಅವರೊಂದಿಗಿನ ಪಿಎಂ ಸಂವಾದದ ಕುರಿತು ನಿಮ್ಮಿಂದ ಯಾವುದೇ ಕಾಮೆಂಟ್ ಇದೆಯೇ ? ಭಾರತದ ರೈತರಿಗೆ ಮತ್ತು ಯುವಕರಿಗೆ ತಂತ್ರಜ್ಞಾನ ಹೇಗೆ ಸಹಾಯ ಮಾಡುತ್ತದೆ?
ಉತ್ತರ: ನಮ್ಮ ಪ್ರಧಾನಿ ಮತ್ತು ಗೂಗಲ್ ಸಿಇಒ ನಡುವಿನ ಸಂವಾದದ ಬಗ್ಗೆ ಪ್ರತಿಕ್ರಿಯಿಸಲು ನಾನು ಬಯಸುವುದಿಲ್ಲ. ಆದಾಗ್ಯೂ, ತಂತ್ರಜ್ಞಾನವು ಭಾರತದ ರೈತರ ಮತ್ತು ಯುವಕರ ಜೀವನವನ್ನು ಅನೇಕ ರೀತಿಯಲ್ಲಿ ಪರಿವರ್ತಿಸುತ್ತಿದೆ. ಪರಿಣಾಮಕಾರಿ ಯೋಜನೆ, ಉತ್ಪಾದಕತೆಯನ್ನು ಸುಧಾರಿಸಲು, ಸುರಕ್ಷಿತ ಸಂಗ್ರಹಣೆ ಮತ್ತು ವಿಘಟನೆಗೆ ಇದನ್ನು ಬಳಸಬಹುದು. ಇದು ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನಾಮ್), ಕೃಷಿಗೆ ಸಂಬಂಧಿಸಿದ ಸೇವೆಗಳ ಮುನ್ಸೂಚನೆಗಾಗಿ ಮೇಘದೂತ್ ಕ್ಲೌಡ್ ಅನ್ನು ಒಳಗೊಂಡಿದೆ.