ETV Bharat / bharat

2 ಸಾವು, 114 ಜನರಲ್ಲಿ ಕೊರೊನಾ ಸೋಂಕು: ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ

author img

By

Published : Mar 16, 2020, 6:28 PM IST

ದೇಶದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದು, ಎಲ್ಲ ರಾಜ್ಯಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

confirmed COVID 2019 cases across India 114,ಎರಡು ಸಾವು ಸೇರಿದಂತೆ 114 ಜನರಲ್ಲಿ ಕೊರೊನಾ ಸೋಂಕು
ಎರಡು ಸಾವು ಸೇರಿದಂತೆ 114 ಜನರಲ್ಲಿ ಕೊರೊನಾ ಸೋಂಕು

ನವದೆಹಲಿ: ದೇಶದಲ್ಲಿ ಎರಡು ಸಾವು ಸೇರಿ ಈ ವರೆಗೆ 114 ಮಂದಿ ಕೊರೊನಾಕ್ಕೆ ಒಳಗಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.

confirmed COVID 2019 cases across India 114,ಎರಡು ಸಾವು ಸೇರಿದಂತೆ 114 ಜನರಲ್ಲಿ ಕೊರೊನಾ ಸೋಂಕು
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ

114 ಮಂದಿಯಲ್ಲಿ 97 ಭಾರತೀಯರು ಮತ್ತು 17 ಮಂದಿ ವಿದೇಶಿಗರಲ್ಲಿ ಸೋಂಕು ಪತ್ತೆಯಾಗಿದೆ. 13 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ವಿವರಣೆ ನೀಡಿದೆ. ಕರ್ನಾಟಕ, ಉತ್ತರಪ್ರದೇಶ ಹಾಗೂ ಹರಿಯಾಣ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳನ್ನು ಬಂದ್​ ಮಾಡಲಾಗಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ದೇಶದಲ್ಲಿ ತುಂಬಾ ವೇಗವಾಗಿ ಕೊರೊನಾ ಹಬ್ಬುತ್ತಿರುವ ಕಾರಣದಿಂದಾಗಿ ಕೇಂದ್ರ ಸರ್ಕಾರ ಈ ಸೋಂಕನ್ನು ''ಅಧಿಸೂಚಿತ ವಿಕೋಪ''ಗಳ ಪಟ್ಟಿಗೆ ಸೇರಿಸಿ ಶನಿವಾರ ನಿರ್ಧಾರ ತೆಗೆದುಕೊಂಡಿತ್ತು. ಹೀಗಾಗಿ ಎನ್​ಡಿಆರ್​ಎಫ್​ ಅನುದಾನ ಬಳಕೆ ಮಾಡುವಂತೆ ಕೂಡಾ ಸೂಚಿಸಿತ್ತು. ಪ್ರಪಂಚದಲ್ಲಿ ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕೊರೊನಾ ಮಹಾಮಾರಿ ಕಾಣಿಸಿಕೊಂಡಿದೆ. ಎಲ್ಲ ರಾಷ್ಟ್ರಗಳು ತಮ್ಮದೇ ಆದ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಮಹಾರಾಷ್ಟ್ರ ಮತ್ತು ಕೆರಳ ರಾಹಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ರಾಜ್ಯಗಳಲ್ಲಿ ಎಲ್ಲಾ ಶಂಕಿತರ ಮೇಲೂ ತೀವ್ರ ನಿಗಾ ಇಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.