ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ವ್ಯಾಪಾಕವಾಗಿ ಹಬ್ಬುತ್ತಿದ್ದು ಸೋಂಕಿತರ ಸಂಖ್ಯೆ 166ಕ್ಕೆ ಏರಿಕೆಯಾಗಿದೆ. ದಕ್ಷಿಣ ಭಾರತದಲ್ಲಿ ಹೆಚ್ಚು ಜನರು ಈ ಸೋಂಕಿಗೆ ತುತ್ತಾಗಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಒಟ್ಟು 141 ಭಾರತೀಯರು ಕೊರೊನಾ ಸೋಂಕಿಗೆ ತುತ್ತಾಗಿದ್ದರೆ, 25 ವಿದೇಶಿಗರಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ ದಕ್ಷಿಣದ ರಾಜ್ಯಗಳಲ್ಲೆ ಹೆಚ್ಚು ಕೊರೊನಾ ಸೋಂಕಿತರು ಕಂಡುಬಂದಿದ್ದಾರೆ.
ಮಹಾರಾಷ್ಟದ್ರದಲ್ಲಿ 42, ಕೇರಳದಲ್ಲಿ 25, ಕರ್ನಾಟಕ 14, ತೆಲಂಗಾಣ 4, ಆಂಧ್ರ ಪ್ರದೇಶ 1, ತಮಿಳುನಾಡಿನಲ್ಲಿ 2 ಪ್ರಕರಣಗಳು ಕಂಡುಬಂದಿವೆ. ಕೇಂದ್ರದ ಮಾಹಿತಿ ಪ್ರಕಾರ, ದಕ್ಷಿಣ 5 ರಾಜ್ಯಗಳ ಪೈಕಿ 88 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಇಲ್ಲಿಯವರೆಗೂ 15 ಜನರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ.