ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370 ವಿಧಿ ರದ್ದತಿ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದು, ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಮಹತ್ವದ ಗೆಲುವು ಲಭ್ಯವಾಗಿದೆ.
ಇಂದು ಲೋಕಸಭೆಯಲ್ಲಿ ಬಿಲ್ ಪಾಸ್ ಆಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸರಣಿ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ನಾವೆಲ್ಲರೂ ಒಟ್ಟಾಗಿದ್ದು, ಒಟ್ಟಿಗೆ ನಾವು ಮುನ್ನುಗಲಿದ್ದು, ಒಟ್ಟಾಗಿ 130 ಕೋಟಿ ಭಾರತೀಯರ ಕನಸು ಈಡೇರಿಸುತ್ತೇವೆ. ನಮ್ಮ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇದು ಮಹತ್ವದ ಸಂದರ್ಭವಾಗಿದ್ದು, ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಬಿಲ್ವೊಂದು ಅಗಾದ ಬೆಂಬಲದೊಂದಿಗೆ ಅಂಗೀಕಾರಗೊಂಡಿದೆ ಎಂದಿದ್ದಾರೆ.
-
Together we are, together we shall rise and together we will fulfil the dreams of 130 crore Indians!
— Narendra Modi (@narendramodi) August 6, 2019 " class="align-text-top noRightClick twitterSection" data="
A momentous occasion in our Parliamentary democracy, where landmark bills pertaining to Jammu and Kashmir have been passed with overwhelming support!
">Together we are, together we shall rise and together we will fulfil the dreams of 130 crore Indians!
— Narendra Modi (@narendramodi) August 6, 2019
A momentous occasion in our Parliamentary democracy, where landmark bills pertaining to Jammu and Kashmir have been passed with overwhelming support!Together we are, together we shall rise and together we will fulfil the dreams of 130 crore Indians!
— Narendra Modi (@narendramodi) August 6, 2019
A momentous occasion in our Parliamentary democracy, where landmark bills pertaining to Jammu and Kashmir have been passed with overwhelming support!
ಇದೇ ವೇಳೆ ಲಡಾಕ್ ಜನತೆಗೆ ವಿಶೇಷ ಅಭಿನಂದನೆ ಸಲ್ಲಿಕೆ ಮಾಡಿರುವ ಮೋದಿ, ಅನೇಕ ವರ್ಷಗಳಿಂದ ನೀವು ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ. ಲಡಾಕ್ ಅಭಿವೃದ್ಧಿಗೆ ಎಲ್ಲ ರೀತಿಯ ಯೋಜನೆ ಹಾಕಿಕೊಳ್ಳುವುದಾಗಿ ತಿಳಿಸಿದ್ದಾರೆ.
-
Special congratulations to the people of Ladakh! It is a matter of great joy that their long-standing demand of being declared a Union Territory has been fulfilled. This decision will give impetus to the overall prosperity of the region and ensure better developmental facilities.
— Narendra Modi (@narendramodi) August 6, 2019 " class="align-text-top noRightClick twitterSection" data="
">Special congratulations to the people of Ladakh! It is a matter of great joy that their long-standing demand of being declared a Union Territory has been fulfilled. This decision will give impetus to the overall prosperity of the region and ensure better developmental facilities.
— Narendra Modi (@narendramodi) August 6, 2019Special congratulations to the people of Ladakh! It is a matter of great joy that their long-standing demand of being declared a Union Territory has been fulfilled. This decision will give impetus to the overall prosperity of the region and ensure better developmental facilities.
— Narendra Modi (@narendramodi) August 6, 2019
ಇದೇ ವೇಳೆ ಜಮ್ಮು-ಕಾಶ್ಮೀರದ ಸಹೋದರ-ಸಹೋದರಿಯರಿಗೆ ಸೆಲ್ಯೂಟ್ ಎಂದಿರುವ ನಮೋ, ಅನೇಕ ವರ್ಷಗಳಿಂದ ನಿಮ್ಮನ್ನು ಭಾವನಾತ್ಮಕವಾಗಿ ಬ್ಲಾಕ್ಮೇಲ್ ಮಾಡಲಾಗಿದ್ದು, ಇನ್ಮುಂದೆ ಅದಕ್ಕೆ ಆಸ್ಪದ ಇರುವುದಿಲ್ಲ. ಬರುವ ದಿನಗಳಲ್ಲಿ ಅಭಿವೃದ್ದಿ ಪರ್ವ ಆರಂಭಗೊಳ್ಳಲಿದ್ದು, ಉತ್ತಮ ನಾಳೆಗಾಗಿ ಕಾಯಿರಿ ಎಂದು ಟ್ವೀಟ್ ಮಾಡಿದ್ದಾರೆ.
-
I salute my sisters and brothers of Jammu, Kashmir and Ladakh for their courage and resilience. For years, vested interest groups who believed in emotional blackmail never cared for people’s empowerment. J&K is now free from their shackles. A new dawn, better tomorrow awaits!
— Narendra Modi (@narendramodi) August 6, 2019 " class="align-text-top noRightClick twitterSection" data="
">I salute my sisters and brothers of Jammu, Kashmir and Ladakh for their courage and resilience. For years, vested interest groups who believed in emotional blackmail never cared for people’s empowerment. J&K is now free from their shackles. A new dawn, better tomorrow awaits!
— Narendra Modi (@narendramodi) August 6, 2019I salute my sisters and brothers of Jammu, Kashmir and Ladakh for their courage and resilience. For years, vested interest groups who believed in emotional blackmail never cared for people’s empowerment. J&K is now free from their shackles. A new dawn, better tomorrow awaits!
— Narendra Modi (@narendramodi) August 6, 2019
ನಿನ್ನೆ ರಾಜ್ಯಸಭೆಯಲ್ಲಿ ವೋಟ್ ಮೂಲಕ ಅಂಗೀಕಾರಗೊಂಡಿದ್ದ ಜಮ್ಮು-ಕಾಶ್ಮೀರ ಪುನಾರಚನೆ ಬಿಲ್, ಇಂದು ಲೋಕಸಭೆಯಲ್ಲೂ ಪಾಸ್ ಆಗಿದ್ದು, ಇಷ್ಟು ದಿನ ರಾಜ್ಯವಾಗಿದ್ದ ಜಮ್ಮು-ಕಾಶ್ಮೀರ ಇನ್ಮುಂದೆ ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಿರಲಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಅಂದಿನ ಪ್ರಧಾನ ಮಂತ್ರಿಯಾದ ಜವಾಹರಲಾಲ್ ನೆಹರೂ ಅವರು ಆರ್ಟಿಕಲ್ 370, 35(ಎ) ವಿಧಿಯನ್ನು ಜಾರಿ ಮಾಡಿ ಭಾರತದಲ್ಲಿ ಕಾಶ್ಮೀರವನ್ನು ಒಂದು ಪ್ರತ್ಯೇಕ ರಾಜ್ಯವನ್ನಾಗಿ ಮಾಡಿದ್ದರು. ಅದಿನಿಂದಲೂ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ಲ.