ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರು ತಮ್ಮ ವಿರುದ್ಧ "ಮಾನಹಾನಿಕರ ಹೇಳಿಕೆ" ನೀಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುವೇಂದು ಅಧಿಕಾರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
36 ಗಂಟೆಗಳಲ್ಲಿ ಕ್ಷಮೆಯಾಚಿಸದಿದ್ದರೆ, ಕಾನೂನು ಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಅಭಿಷೇಕ್ ಬ್ಯಾನರ್ಜಿ ಪರವಾಗಿ ಕೋಲ್ಕತಾ ಮೂಲದ ವಕೀಲ ಸಂಜಯ್ ಬಸು ಕಳುಹಿಸಿದ ನೋಟಿಸ್‌ನಲ್ಲಿ 2021 ರ ಜನವರಿ 19 ರಂದು ಪಶ್ಚಿಮ ಬಂಗಾಳದ ಖೇಜೂರಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಮುಖಂಡ ಅಭಿಷೇಕ್ ಬ್ಯಾನರ್ಜಿಯನ್ನು 'ಟೋಲಾ ಬಾಜ್' ಎಂದು ಕರೆದಿದ್ದಾರೆ. ಅದೇ ದಿನ ಪ್ರಸಾರವಾದ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನದಲ್ಲಿ, ಅಧಿಕಾರಿಯು "ನನ್ನ ಕ್ಲೈಂಟ್ ವಿರುದ್ಧ ಕೆಟ್ಟ, ಅಸಹ್ಯ, ಅಶ್ಲೀಲ, ಸುಳ್ಳು, ದುರುದ್ದೇಶಪೂರಿತ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾನೆ" ಎಂದು ಅಭಿಷೇಕ್ ಬ್ಯಾನರ್ಜಿ ಅಪಾದಿಸಿದ್ದಾರೆ .
ಓದಿ : ಪಾರ್ಕಿಂಗ್ ಪ್ರದೇಶದಲ್ಲಿನ ವಾಹನಗಳಲ್ಲಿ ಬೆಂಕಿ.. 2 ಬಸ್, 1 ಕಾರು ಬೆಂಕಿಗಾಹುತಿ; ತಪ್ಪಿದ ಪ್ರಾಣಾಪಾಯ!
ಅಧಿಕಾರಿಯು "ಅಭಿಷೇಕ್ ಬ್ಯಾನರ್ಜಿಯನ್ನು 'ಟೋಲಾ ಬಾಜ್' ಮತ್ತು ಪಶ್ಚಿಮ ಬಂಗಾಳದ ಜನರ ದುಡ್ಡಿದಲ್ಲಿ ಅಕ್ರಮ ಲಾಭಗಳನ್ನು ಗಳಿಸುವ ಮತ್ತು ಸುಲಿಗೆ ಮಾಡುವವನು ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಅಧಿಕಾರಿಯು ತೃಣಮೂಲ ಕಾಂಗ್ರೆಸ್ ತೊರೆದು ಕಳೆದ ತಿಂಗಳು ಬಿಜೆಪಿಗೆ ಸೇರಿದ್ದರು.