ಚಿತ್ತೂರು (ಆಂಧ್ರಪ್ರದೇಶ): ತಿರುಪತಿ ನಗರ ಪೊಲೀಸ್ ವರಿಷ್ಠಾಧಿಕಾರಿ ಅವುಲಾ ರಮೇಶ್ ರೆಡ್ಡಿ ಅವರು ಗಸ್ತು ತಿರುಗುತ್ತಿದ್ದ ವೇಳೆ ಕೃಷಿ ಮಾಡುತ್ತಿದ್ದ ರೈತರನ್ನ ನೋಡಿ ತಾವೂ ಕೂಡ ಭಾಗಿಯಾಗಿದ್ದಾರೆ.
ಜನರು ಲಾಕ್ ಡೌನ್ ಕ್ರಮ ಅನುಸರಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಗಸ್ತು ಬಂದಿದ್ದರು. ಬಿಎಸ್ಸಿ ಪದವೀಧರರಾದ ರೆಡ್ಡಿ , ವೆಂಕಟಗಿರಿ ರಸ್ತೆ ಬಳಿಯ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನು ನೋಡಿ ತಾವೂ ಕೂಡ ಕೆಲಕಾಲ ರೈತರಾಗಿ ಕೆಲಸ ಮಾಡಿದ್ದಾರೆ.
ಈ ವೇಳೆ ಕೊರೊನಾ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಟ್ಟ ಅವರು, ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಬೇಕು ಎಂದು ರೈತರಿಗೆ ಸಲಹೆಯನ್ನೂ ನೀಡಿದರು.