ETV Bharat / bharat

ಫೋಟೋಗ್ರಫಿ ಮೂಲಕ ಪ್ರಕೃತಿ ಬಗ್ಗೆ ಸಂದೇಶ ಸಾರುತ್ತಿರುವ ಯುವತಿ - ತಿರುಪತಿ ಮೂಲದ ಸುಶ್ಮಿತಾ ರೆಡ್ಡಿ

ತಿರುಪತಿ ಮೂಲದ ಸುಶ್ಮಿತಾ ರೆಡ್ಡಿ ಪ್ರಕೃತಿಯ ಫೋಟೋಗ್ರಫಿ ಮಾಡುತ್ತ ಸಮಾಜಕ್ಕೆ ಸಂದೇಶ ಸಾರುವ ಕೆಲಸ ಮಾಡುತ್ತಿದ್ದಾರೆ..

SUSHMITHA REDDY SPECIALIST IN WILDLIFE PHOTOGRAPHY
ಫೋಟೋಗ್ರಫಿ ಮೂಲಕ ಪ್ರಕೃತಿ ಬಗ್ಗೆ ಸಂದೇಶ ಸಾರುತ್ತಿದ್ದಾರೆ ಸುಶ್ಮಿತಾ
author img

By

Published : Sep 12, 2020, 12:09 AM IST

ತಿರುಪತಿ(ಆಂಧ್ರಪ್ರದೇಶ): ಇತ್ತೀಚೆಗೆ ಪ್ರಪಂಚದಲ್ಲಿ ಪ್ರಕೃತಿಯ ವಿಕೋಪ ಹೆಚ್ಚಾಗುತ್ತಿದೆ. ಅಮೆರಿಕಾದಲ್ಲಿ ಕಾಡ್ಗಿಚ್ಚುಗಳು ಜಾಸ್ತಿ ಆಗುತ್ಲೇ ಇವೆ. ಅಲ್ಲದೆ ಪಶ್ಚಿಮ ಬಂಗಾಳದ ಸಂದರ್​ ಬನ ಕಾಡುಗಳಲ್ಲಿ ಪ್ರವಾಹ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿಯೇ ತಿರುಪತಿ ಮೂಲದ ಸುಶ್ಮಿತಾ ರೆಡ್ಡಿ ಪ್ರಕೃತಿಯ ಫೋಟೋಗ್ರಫಿ ಮಾಡುತ್ತ ಸಮಾಜಕ್ಕೆ ಸಂದೇಶ ಸಾರುವ ಕೆಲಸ ಮಾಡುತ್ತಿದ್ದಾರೆ.

ಸುಶ್ಮಿತಾ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಫೋಟೋಗ್ರಫಿಯಲ್ಲಿ ತುಂಬಾ ಆಸಕ್ತಿ ಇದ್ದು, ಪೋಷಕರ ಒತ್ತಾಸೆ ಹಿನ್ನೆಲೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇವರು ಕೇವಲ ಫೋಟೋಗ್ರಾಫರ್​ ಅಷ್ಟೇ ಅಲ್ಲದೆ ಪ್ರಕೃತಿಯ ಬಗ್ಗೆ ಅಧ್ಯಯನ ಮಾಡಿಕೊಂಡಿದ್ದಾರೆ. ಅಲ್ಲದೆ ದಕ್ಷಿಣ ಆಫ್ರಿಕಾಕ್ಕೂ ಪ್ರವಾಸ ಕೈಗೊಂಡಿದ್ದಾರೆ. ಇವರು ಕೀನ್ಯ ಮತ್ತು ಇಥಿಯೋಫಿಯಾಕ್ಕೂ ಭೇಟಿ ಕೊಟ್ಟು ಆನೆ, ಸಿಂಹ ಸೇರಿದಂತೆ ಅಪರೂಪಕ ಚಿತ್ರಗಳನ್ನು ಸೆರೆಹಿಡಿದಿದ್ದಾರೆ.

ಫೋಟೋಗ್ರಫಿ ಮೂಲಕ ಪ್ರಕೃತಿ ಬಗ್ಗೆ ಸಂದೇಶ ಸಾರುತ್ತಿದ್ದಾರೆ ಸುಶ್ಮಿತಾ

ಸುಶ್ಮಿತಾ ತಮ್ಮದೇ ಒಂದು ವೆಬ್​ ಸೈಟ್​​ ಹೊಂದಿದ್ದು, ತಾವು ತೆಗೆದ ಫೋಟೋಗಳು ಮತ್ತು ಪ್ರಕೃತಿಗೆ ಸಂಬಂಧಿಸಿದ ಉಪಯುಕ್ತ ಮಾಹಿತಿಯನ್ನು ಶೇರ್​​​ ಮಾಡುತ್ತಾರೆ. ಅಲ್ಲದೆ ಸುಶ್ಮಿತಾ ತೆಗೆದಿರುವ ಫೋಟೋಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.