ಹೈದರಾಬಾದ್ : ತೆಲಂಗಾಣ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಟಿಮ್ಸ್) ಗೆ ಭಾನುವಾರ ಭೇಟಿ ನೀಡಿದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಕಮಿಟಿ (ಟಿಪಿಸಿಸಿ)ಯ ಕಾರ್ಯಕಾರಿ ಅಧ್ಯಕ್ಷ ಮತ್ತು ಸಂಸದ ರೇವಂತ್ ರೆಡ್ಡಿ ಆಸ್ಪತ್ರೆಯ ಸ್ಥಿತಿ ಡಂಪಿಂಗ್ ಯಾರ್ಡ್ ತರ ಇದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಟಿಮ್ಸ್ನ್ನು ಕೋವಿಡ್ ವಿಶೇಷ ಆಸ್ಪತ್ರೆ ಎಂದು ಘೋಷಿಸಿರುವ ರಾಜ್ಯ ಸರ್ಕಾರ ಆರ್ಥಿಕ ಸಹಾಯ ನೀಡಿ ಸಿಬ್ಬಂದಿಯನ್ನ ನೇಮಿಸಿತ್ತು. ಈ ಮೊದಲು ಗಾಂಧಿ ಆಸ್ಪತ್ರೆಯನ್ನು ಮಾತ್ರ ಕೋವಿಡ್ ರೋಗಿಗಳಿಗಾಗಿ ಮೀಸಲಿಡಲಾಗಿತ್ತು.
ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ರೇವಂತ್ ರೆಡ್ಡಿ, ನೀವೇ ನೋಡಬಹುದು, ಕೋವಿಡ್ ಬಗ್ಗೆ ಸರ್ಕಾರ ಎಷ್ಟೊಂದು ಗಂಭೀರವಾಗಿದೆ ಎಂದು. ರಾಜ್ಯ ಸರ್ಕಾರ ಸೋಂಕು ನಿಯಂತ್ರಿಸುವ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ, ಯಾವುದೇ ರೊಗಿಗೂ ಚಿಕಿತ್ಸೆ ನೀಡಲು ಪ್ರಯತ್ನಿಸುತ್ತಿಲ್ಲ. ಆದರೂ ಟಿಮ್ಸ್ 1,500 ಹಾಸಿಗೆ ಮತ್ತು 100 ವೈದ್ಯರೊಂದಿಗೆ ಮಾರ್ಚ್ 27 ರಿಂದಲೇ ಕೋವಿಡ್ ಆಸ್ಪತ್ರೆಯಾಗಿ ಕಾರ್ಯಾರಂಭ ಮಾಡಿದೆ ಎಂದು ಸರ್ಕಾರ ಹೇಳುತ್ತಿದೆ. ಮೂರು ತಿಂಗಳಾಯಿತು, ಆಸ್ಪತ್ರೆ ಡಂಪಿಂಗ್ ಯಾರ್ಡ್ನಂತಿದೆ. ನಾಲ್ಕು ಗಾರ್ಡ್ಗಳನ್ನು ಹೊರತುಪಡಿಸಿದರೆ ಇಲ್ಲಿ ಯಾವುದೇ ರೋಗಿಗಳೂ ಇಲ್ಲ ವೈದ್ಯರೂ ಇಲ್ಲ ಎಂದಿದ್ದಾರೆ.