ETV Bharat / bharat

ಫುಟ್ಬಾಲ್​ ದಂತಕಥೆ ಮರಡೋನಾರ ಲೈಫ್​ ಜರ್ನಿ ಹೀಗಿತ್ತು! - ಅರ್ಜೆಂಟೀನಾ

60ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಅರ್ಜೆಂಟೀನಾದ ಫುಟ್ಬಾಲ್​​ ಆಟಗಾರ ಡಿಯಾಗೋ ಮರಡೋನಾರ ಏಳು-ಬೀಳಿನ ಜೀವನ ಪಯಣದ ಟೈಮ್​ಲೈನ್​​ ಇಲ್ಲಿದೆ ನೋಡಿ.

Football legend Diego Armando Maradona
ಫುಟ್‌ಬಾಲ್ ದಂತಕಥೆ ಮರಡೋನಾ
author img

By

Published : Nov 26, 2020, 11:42 AM IST

ಹೈದರಾಬಾದ್: ತಮ್ಮ 26ನೇ ವಯಸ್ಸಿಗೆ ಅರ್ಜೆಂಟೀನಾಗೆ ಫಿಫಾ ವಿಶ್ವಕಪ್ ತಂದುಕೊಟ್ಟಿದ್ದ ಫುಟ್‌ಬಾಲ್ ದಂತಕಥೆ ಡಿಯಾಗೋ ಅರ್ಮಾಂಡೋ ಮರಡೋನಾ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಮರಡೋನಾ ಅವರ ಜೀವನ ಪಯಣ ಹೀಗಿದೆ..

  • 1960: ಅರ್ಜೆಂಟೀನಾದ ಲಾನಸ್‌ನಲ್ಲಿ ಅಕ್ಟೋಬರ್ 30 ರಂದು ಜನನ
  • 1970: ಲಾಸ್ ಸೆಬೊಲಿಟಾಸ್​​ನ ಫುಟ್ಬಾಲ್​ ಯುವ ತಂಡಕ್ಕೆ ಸೇರ್ಪಡೆ
  • 1971: 11ನೇ ವಯಸ್ಸಿಗೆ ಅರ್ಜೆಂಟಿನೋಸ್ ಜೂನಿಯರ್ಸ್‌ ತಂಡಕ್ಕೆ ಆಯ್ಕೆ
  • 1976: ಅರ್ಜೆಂಟಿನೋಸ್ ಜೂನಿಯರ್ಸ್‌ ತಂಡದಿಂದ ಮೊದಲ ಪಂದ್ಯ ಆಡಿ ಫುಟ್ಬಾಲ್​ ವೃತ್ತಿಜೀವನ ಆರಂಭ
  • 1977: 16ನೇ ವರ್ಷಕ್ಕೆ ಮೊದಲ ಅಂತಾರಾಷ್ಟ್ರೀಯ ಪಂದ್ಯ
  • 1978: ಅರ್ಜೆಂಟೀನಾದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮರಡೋನಾ
  • 1979: ಮೊದಲ ಅಂತಾರಾಷ್ಟ್ರೀಯ ಗೋಲ್​ ಗಳಿಕೆ, ಜೂನಿಯರ್​ ​ವರ್ಲ್ಡ್ ಕಪ್​ ಗೆದ್ದ ಡಿಯಾಗೋ
  • 1980: ಸ್ಪ್ಯಾನಿಷ್ ಲೀಗ್​ಗೆ ಸಹಿ
  • 1982: ಅರ್ಜೆಂಟೀನಾ ಪರ ಮೊದಲ ವಿಶ್ವಕಪ್ ಆಟ
  • 1983: ಸ್ಪ್ಯಾನಿಷ್ ಕಪ್ ಗೆಲ್ಲಲು ಸಹಾಯ
  • 1986: ನಾಯಕನಾಗಿ ಅರ್ಜೆಂಟೀನಾ ಪರ ವಿಶ್ವಕಪ್ ಗೆದ್ದ ಮರಡೋನಾ ( 'ಹ್ಯಾಂಡ್ ಆಫ್ ಗಾಡ್' ಗೋಲು ಸೇರಿ ಇಂಗ್ಲೆಂಡ್ ವಿರುದ್ಧ ಎರಡು ಗೋಲುಗಳನ್ನು ಗಳಿಸಿ ದಾಖಲೆ. ಇದನ್ನು 2002 ರಲ್ಲಿ ನಡೆದ ಫಿಫಾ ಸಮೀಕ್ಷೆಯಲ್ಲಿ 'ಗೋಲ್ ಆಫ್ ದಿ ಸೆಂಚುರಿ' ಎಂದು ಆಯ್ಕೆ ಮಾಡಲಾಗಿತ್ತು)
  • 1989: ಕ್ಲೌಡಿಯಾ ವಿಲ್ಲಾಫೇನ್​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮರಡೋನಾ
  • 1990: ವಿಶ್ವಕಪ್ ಫೈನಲ್‌ನಲ್ಲಿ ಜರ್ಮನಿ ವಿರುದ್ಧ ಸೋಲು
  • 1991: ಪಂದ್ಯವೊಂದರ ವೇಳೆ ಡ್ರಗ್ (ಕೊಕೇನ್‌)​ ಸೇವನೆ ಸಾಬೀತು - 15 ತಿಂಗಳ ಕಾಲ ಅಮಾನತು

ಇದನ್ನೂ ನೋಡಿ: ಜೀವನದ ಆಟ ನಿಲ್ಲಿಸಿದ 'ಮರಡೋನಾ' : ಇಲ್ಲಿವೆ ಅಪರೂಪದ ಚಿತ್ರಗಳು

  • 1992: ಅಮಾನತು ಅವಧಿ ಮುಗಿಸಿ ಸ್ಪ್ಯಾನಿಷ್ ಲೀಗ್‌ನಿಂದ ಪುನರಾಗಮನ
  • 1994: ಮತ್ತೆ ಡ್ರಗ್ ಸೇವನೆ ಸಾಬೀತು - ಅಮೆರಿಕದಲ್ಲಿ ನಡೆಯುತ್ತಿದ್ದ ವಿಶ್ವಕಪ್​ನಿಂದ ಹೊರಗೆ
  • 1995: ಬೊಕಾ ಜೂನಿಯರ್ಸ್​ ತಂಡಕ್ಕಾಗಿ ಕೊನೆಯ ಆಟ
  • 1997: ಮತ್ತೊಮ್ಮೆ ಮಾದಕ ವಸ್ತು ಸೇವನೆ - 37ನೇ ವಯಸ್ಸಿಗೆ ಫುಟ್ಬಾಲ್​​ಗೆ ನಿವೃತ್ತಿ ಘೋಷಣೆ
  • 2000: ಹೆಚ್ಚು ಮಾರಾಟವಾದ ಮರಡೋನಾರ ಆತ್ಮಚರಿತ್ರೆ 'ಯೋ ಸೋಯ್​ ಏಲ್ ಡಿಯಾಗೋ'
  • 2002: ಮಾದಕ ವ್ಯಸನ ಸಮಸ್ಯೆಯ ವಿರುದ್ಧ ಹೋರಾಡಲು ಕ್ಯೂಬಾಗೆ ಶಿಫ್ಟ್ ಆದ ಡಿಯಾಗೋ
  • 2004: ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲು
  • 2005: ಪೀಲೆ ಅವರ ಟಾಕ್ ಶೋನಲ್ಲಿ ಮೊದಲ ಅತಿಥಿಯಾಗಿ ಸಂದರ್ಶನ
  • 2008: ಅರ್ಜೆಂಟೀನಾ ರಾಷ್ಟ್ರೀಯ ತಂಡದ ಮುಖ್ಯ​ ತರಬೇತುದಾರನಾಗಿ ನೇಮಕ ( 2010ರ ವಿಶ್ವಕಪ್ ವರೆಗೆ 18 ತಿಂಗಳು ಸೇವೆ). ಭಾರತಕ್ಕೆ ಭೇಟಿ ನೀಡಿ ಕೋಲ್ಕತ್ತಾದಲ್ಲಿ ಭಾರತೀಯ ಫುಟ್ಬಾಲ್​​​ ಶಾಲೆ ತೆರೆದ ಮರಡೋನಾ
  • 2013: ಆಧ್ಯಾತ್ಮಿಕ ತರಬೇತುದಾರ'ನಾಗಿ ಅರ್ಜೆಂಟೀನಾದ ಪ್ರೈಮೆರಾ ಡಿ ಕ್ಲಬ್ ಡಿಪೋರ್ಟಿವೊ ರಿಯೆಸ್ಟ್ರಾಗೆ ಸೇರ್ಪಡೆ
  • 2017: ಮತ್ತೆ ಭಾರತಕ್ಕೆ ಭೇಟಿ ನೀಡಿ, ಕೋಲ್ಕತ್ತಾದಲ್ಲಿ ಆಟ
  • 2019: ಅರ್ಜೆಂಟೀನಾದ ಗಿಮ್ನಾಶಿಯಾ ಡೆ ಲಾ ಪ್ಲಾಟಾ ಕ್ಲಬ್​ಗೆ ಕೋಚ್​ ಆಗಿ ಆಯ್ಕೆ
  • 2020: ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಶಸ್ತ್ರಚಿಕಿತ್ಸೆ - ನವೆಂಬರ್ 25 ರಂದು ಹೃದಯಾಘಾತದಿಂದ ನಿಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.