ನವದೆಹಲಿ: ಟಿಕ್ಟಾಕ್ ಸೇರಿದಂತೆ ಹಲವು ಚೀನೀ ಆ್ಯಪ್‌ಗಳನ್ನು ಭಾರತ ಸರಕಾರ ನಿಷೇಧಿಸಿದೆ. ಈ ನಿಷೇಧವನ್ನು ಜನರು ಬೆಂಬಲಿಸಿದ್ದಾರೆ.
ಜಹಾಂಗೀರ್‌ಪುರದ ಟಿಕ್ಟಾಕ್ ಖ್ಯಾತಿಯ ಹೃತಿಕ್ ಶರ್ಮಾ ಅವರು ಭಾರತೀಯ ಆ್ಯಪ್‌ಗಳನ್ನು ಬಳಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ಜನರು ಭಾರತದಲ್ಲಿ ತಯಾರಿಸಿದ ಆ್ಯಪ್‌ಗಳನ್ನು ಹೆಚ್ಚು - ಹೆಚ್ಚು ಬಳಸಬೇಕು, ವಿದೇಶಿ ಆ್ಯಪ್ಗಳಿಗೆ ಲಾಭ ನೀಡುವ ಬದಲು ಭಾರತಕ್ಕೆ ಲಾಭ ನೀಡಬೇಕು ಎಂದಿದ್ದಾರೆ.
ಟಿಕ್ಟಾಕ್ ನಿಷೇಧದ ಕುರಿತು ಪ್ರತಿಕ್ರಿಯೆ ನೀಡಿದ ಹೃತಿಕ್ ಶರ್ಮಾ, ದೇಶವನ್ನು ಉಳಿಸಲು ಏನನ್ನೂ ತ್ಯಜಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಟಿಕ್ಟಾಕ್ ರೀತಿಯ ಭಾರತದ ಸ್ವಂತ ಆ್ಯಪ್ ಕೂಡ ಬಂದಿದ್ದು, ಅದನ್ನು ಬಳಸುವಂತೆ ಹೃತಿಕ್ ಜನರಿಗೆ ಮನವಿ ಮಾಡಿದ್ದಾರೆ.