ETV Bharat / bharat

ಈ ಪ್ರದೇಶದ​​ ಅರಣ್ಯದಲ್ಲಿ 4ನೇ ಬಲಿಪಡೆದ ಹುಲಿ - ಹುಲಿ ದಾಳಿಗೆ ಯುವಕ ಬಲಿ

ಉತ್ತರಪ್ರದೇಶದ ಪಿಲಿಬಿಟ್​ ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿ ತೀವ್ರಗೊಂಡಿದೆ. ಇಲ್ಲಿನ ಮಾಲಾ ಹುಲಿ ಮೀಸಲು ಅರಣ್ಯ ಭಾಗದಲ್ಲಿ 28 ವರ್ಷದ ವ್ಯಕ್ತಿ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಈ ವರ್ಷದಲ್ಲಿ ನಡೆದ 4ನೇ ಪ್ರಕರಣ ಇದಾಗಿದ್ದು, ಕಳೆದ ತಿಂಗಳ ಅಂತ್ಯದಲ್ಲಿ 50 ವರ್ಷದ ಮಹಿಳೆಯನ್ನು ಇದೇ ಹುಲಿ ದಾಳಿಗೆ ತುತ್ತಾಗಿ ಅಸುನೀಗಿದ್ದರು.

Tiger attack claims 4th victim in UP's Pilibhit reserve
ಉತ್ತರ ಪ್ರದೇಶದ ಪಿಲಿಬಿಟ್​​ ಅರಣ್ಯದಲ್ಲಿ 4ನೇ ಬಲಿಪಡೆದ ಹುಲಿ
author img

By

Published : Mar 31, 2020, 4:23 PM IST

ಪಿಲಿಬಿಟ್​ (ಉತ್ತರಪ್ರದೇಶ): ವರುಣ್​ ಗಾಂಧಿ ಪ್ರತಿನಿಧಿಸುವ ಪಿಲಿಬಿಟ್ ಕ್ಷೇತ್ರದ​​ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಯಿಂದ ಮತ್ತೊಬ್ಬ ಯುವಕ ಸಾವನಪ್ಪಿದ್ದಾನೆ. 28 ವರ್ಷದ ಮಾಲಾ ಕಾಲೋನಿಯ ನಿವಾಸಿ ಕೃಷ್ಣಾ ರೈ ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಗೆ ತುತ್ತಾಗಿದ್ದಾನೆ. ಇದು ಈ ವರ್ಷ ದಾಖಲಾದ 4ನೇ ಪ್ರಕರಣವಾಗಿದೆ. ಕಳೆದ ತಿಂಗಳು ಇದೇ ಗ್ರಾಮದ 50 ವರ್ಷದ ಮಹಿಳೆ ಸಹ ಹುಲಿ ದಾಳಿಯಿಂದ ಸಾವನಪ್ಪಿದ್ದರು.

ಘಟನೆ ಬಳಿಕ ಜನ ಲಾಕ್​​ಡೌನ್​ ಆದೇಶವನ್ನೂ ದಿಕ್ಕರಿಸಿ ಘಟನಾ ಸ್ಥಳಕ್ಕೆ ಬಂದು ಅರಣ್ಯ ಇಲಾಖೆಯ ಅಧಿಕಾರಿಗಳು ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಪಿಲಿಬಿಟ್​​​​ ಸದರ್ ತಹಶೀಲ್ದಾರ್ ವಿವೇಕ್ ಕುಮಾರ್ ಮಿಶ್ರಾ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.