ETV Bharat / bharat

ಋಣಬಾಧ್ಯತೆ ಮತ್ತು ದಿವಾಳಿತನ ಸಂಹಿತೆಗೆ 3 ವರ್ಷ: ಬರಲಿವೆ ಪ್ರಮುಖ ಬದಲಾವಣೆಗಳು- ಡಾ. ಎಸ್.‌ ಅನಂತ್

author img

By

Published : Nov 9, 2019, 9:48 PM IST

ಒಂದು ಅಥವಾ ಹೆಚ್ಚಿನ ಸಾಲದಾತರು ತಮ್ಮ ಸಾಲಗಳ ಗರಿಷ್ಠ ಭಾಗವನ್ನು ತ್ವರಿತವಾಗಿ ಮರುಪಡೆಯಲು ಅನುವು ಮಾಡಿಕೊಡುವ ಕಾನೂನಿನ ಅವಶ್ಯಕತೆ ಇರುವುದರಿಂದ ಋಣಬಾಧ್ಯತೆ ಮತ್ತು ದಿವಾಳಿತನ ಸಂಹಿತೆ (ಐಬಿಸಿ)ಯನ್ನು ಪರಿಚಯಿಸಲಾಯಿತು.

Three Years of IBC

ಋಣಬಾಧ್ಯತೆ ಮತ್ತು ದಿವಾಳಿತನ ಸಂಹಿತೆಯು (ಐಬಿಸಿ) 28 ಮಾರ್ಚ್‌ 2006ರಲ್ಲಿ ರಾಷ್ಟ್ಪಪತಿಗಳ ಅಂಕಿತ ಪಡೆಯುವ ಮೂಲಕ ಕಾನೂನಾಗಿ ರೂಪಿಸಲಾಗಿದೆ. ಡಿಸೆಂಬರ್‌ 2006ರಿಂದ ಪೂರ್ಣಪ್ರಮಾಣದಲ್ಲಿ ಈ ಕಾಯ್ದೆ ಜಾರಿಗೆ ಬಂದಿದೆ.

ಭಾರತೀಯ ಋಣಬಾಧ್ಯತೆ ಮತ್ತು ದಿವಾಳಿತನ ಮಂಡಳಿಯನ್ನು (ಐಬಿಬಿಐ) 01 ಅಕ್ಟೋಬರ್‌ 2016ಕ್ಕೆ ಸ್ಥಾಪಿಸಲಾಯಿತು. ಒಂದಕ್ಕಿಂತ ಹೆಚ್ಚು ಸಾಲದಾತರು ತಾವು ನೀಡಿದ ಸಾಲದ ಗರಿಷ್ಠ ಪ್ರಮಾಣವನ್ನು ಇತರ ಎಲ್ಲಾ ಪಾಲುದಾರರಿಗೆ ಪಕ್ಷಪಾತ ಮಾಡದೇ ಕ್ಷಿಪ್ರವಾಗಿ ವಸೂಲು ಮಾಡುವುದನ್ನು ಸಾಧ್ಯವಾಗಿಸುವ ತೀವ್ರ ಅವಶ್ಯಕತೆ ಇದೆ ಎಂಬುದು ಮನವರಿಕೆಯಾದ ಹಿನ್ನೆಲೆಯಲ್ಲಿ ಐಬಿಸಿಯನ್ನು ಜಾರಿಗೆ ತರಲಾಯಿತು.

ಹಲವಾರು ವಿಷಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲು ಈ ಕಾಯ್ದೆ ಪ್ರಯತ್ನಿಸುತ್ತದೆ. ವ್ಯಾಪಾರದಲ್ಲಿ ಒಬ್ಬರಿಗಿಂತ ಹೆಚ್ಚು ಸಾಲದಾತರಿಂದ ಸಾಲ ಪಡೆಯುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಎಲ್ಲಾ ಸಾಲದಾತರು ಪ್ರತ್ಯೇಕವಾಗಿ ಸಾಲಗಾರರನನ್ನು ಸತಾಯಿಸಿ ವಸೂಲು ಮಾಡುವುದಕ್ಕಿಂತ ಎಲ್ಲರೂ ಒಟ್ಟಾಗಿ ಸಾಲ ವಸೂಲು ಮಾಡಲು ಅಥವಾ ಸಾಲ ಇತ್ಯರ್ಥ್ಯಕ್ಕೆ ಒಪ್ಪುವಂತೆ ಮಾಡುವುದಕ್ಕೆ ಇಲ್ಲಿ ಒತ್ತು ಕೊಡಲಾಗಿದೆ. ಕೆಟ್ಟ ಸಾಲದ ಬೆಟ್ಟ ನಿರಂತರವಾಗಿ ಬೆಳೆಯುತ್ತಿರುವ ಸಮಸ್ಯೆಯಿಂದಾಗಿ ಸ್ಥಾಪನೆಯಾದಾಗಿನಿಂದ ಉಸಿರಾಡಲು ಪುರುಸೊತ್ತಿಲ್ಲದಂತೆ ಅಥವಾ ಸಮಯ ಇಲ್ಲದಂತೆ ಕೆಲಸ ಮಾಡುತ್ತಿದೆ ಐಬಿಬಿಐ. ವೇಗವಾಗಿ ಕೆಲಸ ಮಾಡುತ್ತಿದ್ದರೂ ದೂರದಿಂದ ನೋಡಿದಾಗ ಐಬಿಬಿಐ ತನ್ನ ಸ್ಥಾನದಿಂದ ಅಲ್ಲಾಡಿಯೇ ಇಲ್ಲ ಎಂಬಂತೆ ಕಾಣುತ್ತದೆ.

ಐಬಿಸಿಯ ಒಂದು ಉತ್ತಮ ಅಂಶವೇನೆಂದರೆ, ಸಮಸ್ಯೆಯ ಪ್ರಮಾಣ ಅಗಾಧವಾಗಿದ್ದರೂ ಅತ್ಯಂತ ಕಡಿಮೆ ಅವಧಿಯಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುವಲ್ಲಿ ಅದು ಸಫಲವಾಗಿರುವುದು. ಐಬಿಸಿಯ ಗುರಿ ಮತ್ತು ಪ್ರಾಮುಖ್ಯತೆ ಏನೆಂದರೆ ಪ್ರಕರಣ ದಾಖಲಾದ 270 ದಿನಗಳ ಒಳಗೆ ಅದನ್ನು ಇತ್ಯರ್ಥಪಡಿಸಬೇಕು. ಅಂದರೆ ಐಬಿಸಿ ಅಡಿ ವಿಚಾರಣೆ ಮುಂದೂಡಿಕೆ ಅವಕಾಶಗಳು ಸೀಮಿತವಾಗಿವೆ. ಪ್ರಕರಣಗಳು ಇತ್ಯರ್ಥಗೊಳ್ಳಲು ವಿಳಂಬವಾಗಲು ಮುಂದೂಡುವಿಕೆಯೇ ಪ್ರಮುಖ ಕಾರಣವಾಗಿದೆ. ಆದರೆ, ಕುಂಟು ನೆಪಗಳ ಮೂಲಕ ವಿಚಾರಣೆ ಮುಂದೂಡಿಸಲು ಈಗ ಅರ್ಜಿದಾರರಿಗೆ ಯಾವುದೇ ಅವಕಾಶಗಳೇ ಇಲ್ಲ.

ಕಾರ್ಯಗಳು ಮತ್ತು ಸವಾಲುಗಳು:

ಯಾವುದೇ ಪ್ರಗತಿಶೀಲ ಆರ್ಥಿಕತೆಗೆ ಖಾಸಗಿ ಉದ್ಯಮಗಳ ಬೆಳವಣಿಗೆ ಅವಶ್ಯಕ. ವಹಿವಾಟು ಬೆಳೆಯುತ್ತ ಮತ್ತು ಹರಡುತ್ತ ಹೋದಂತೆ ಅದು ಉದ್ಯೋಗಗಳು, ಸರ್ಕಾರದ ಜಿಡಿಪಿ (ಒಟ್ಟು ಆಂತರಿಕ ಉತ್ಪಾದನೆ) ಮತ್ತು ಆದಾಯಗಳ ಹೆಚ್ಚಳ ತರುವುದರಿಂದ ಒಂದು ಬೃಹತ್‌ ಧನಾತ್ಮಕ ವೃತ್ತ ನಿರ್ಮಾಣವಾಗಲು ಕಾರಣವಾಗುತ್ತದೆ. ಯಾವುದೇ ವಹಿವಾಟು ಅಥವಾ ವ್ಯಾಪಾರ ಚಟುವಟಿಕೆಗಳಿಗೆ (ಅ) ಖರೀದಿ ಮತ್ತು ಮಾರಾಟ ಹಾಗೂ (ಬ) ವಹಿವಾಟಿನ ಪ್ರವೇಶ ಮತ್ತು ನಿರ್ಗಮನ ಎಂಬ ಎರಡು ಪ್ರಮುಖ ಲಕ್ಷಣಗಳ ಯಶಸ್ವಿ ಮತ್ತು ಪರಿಣಾಮಕಾರಿ ಸ್ಪರ್ಧೆ ಬೇಕಾಗುತ್ತದೆ. ಸಂಪೂರ್ಣ ವಿಶ್ವಾಸದೊಂದಿಗೆ ಇವೆರಡೂ ಸಂಪೂರ್ಣವಾಗಿ ಮುಗಿಯುವವರೆಗೂ ಖಾಸಗಿ ಆರ್ಥಿಕ ಚಟುವಟಿಕೆಯು ಯಶಸ್ವಿಯಾಗಲಾರದು. ಸುಲಭವಾಗಿ ವ್ಯಾಪಾರ ಮಾಡುವುದು ಎಂದು ಯಾವುದನ್ನು ನಾವೀಗ ಕರೆಯುತ್ತೇವೋ ಅದು ಸಾಧ್ಯವಾಗುವುದು ಉದ್ಯಮಿಯೊಬ್ಬ ಸಾಧ್ಯವಿರುವ ಅತಿ ಕಡಿಮೆ ಸಮಯದಲ್ಲಿ ತನ್ನ ವಹಿವಾಟನ್ನು ಪ್ರಾರಂಭಿಸುವುದು ಮತ್ತು ಮುಕ್ತಾಯಗೊಳಿಸುವಂತೆ ಆದಾಗ ಮಾತ್ರ. ಇವು ಲಾಭ ಮತ್ತು ನಷ್ಟದಷ್ಟೇ ಮಹತ್ವದವು. ಅದೇ ರೀತಿ ವ್ಯಾಪಾರದ ಪ್ರಮುಖ ಭಾಗವೆಂದರೆ ತಮ್ಮ ಅವಶ್ಯಕತೆಗಳಿಗಾಗಿ ಹಣವನ್ನು ಸಾಲವಾಗಿ ತರುವುದು. ವಾಪಸಾತಿಯ ಭರವಸೆ ಇದ್ದಾಗ ಹಾಗೂ ಒಂದು ವೇಳೆ ಸಾಲಗಾರ ಸಾಲ ಹಿಂದಿರುಗಿಸದೆ ಹೋದಾಗ ಅದನ್ನು ವಸೂಲು ಮಾಡಿಕೊಡುವ ಸಮರ್ಥ ವ್ಯವಸ್ಥೆ ಇದ್ದಾಗ ಮಾತ್ರ ಸಾಲ ನೀಡಲು ಯಾರು ಬೇಕಾದರೂ ಮನಸ್ಸು ಮಾಡಬಲ್ಲರು ಹಾಗೂ ಮುಂದಾಗಬಲ್ಲರು.

ಭಾರತೀಯ ಆರ್ಥಿಕತೆಯ ಬಂಡವಾಳ ಕೊರತೆಗೆ ಒಂದು ಪ್ರಮುಖ ಕಾರಣವೇನೆಂದರೆ, ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿರುವಂತೆ ಸಕ್ರಿಯ ಸಾಲದ ಬಾಂಡ್‌ಗಳ ಮಾರುಕಟ್ಟೆ ನಮ್ಮಲ್ಲಿ ಇಲ್ಲದಿರುವುದು. ಬಾಂಡ್‌ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ಹಲವಾರು ಪ್ರಯತ್ನಗಳು ಸೀಮಿತ ಯಶಸ್ಸು ಕಂಡಿವೆ. ಏಕೆಂದರೆ ಸಾಲದಾತ ತನ್ನ ಸಾಲವನ್ನು ನ್ಯಾಯಾಲಯದ ಮೂಲಕ ವಸೂಲು ಮಾಡಬೇಕೆಂದರೆ ಅದಕ್ಕೆ ಸಾಕಷ್ಟು ಸಮಯ ಹಿಡಿಯುತ್ತಿದೆ. ಇದು ಇನ್ನೊಂದು ದೊಡ್ಡ ಸಮಸ್ಯೆಯಾಗಲು ಕಾರಣವೇನೆಂದರೆ ನಮ್ಮ ನ್ಯಾಯಾಂಗ ವ್ಯವಸ್ಥೆ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದು, ವಿಲೇವಾರಿಗೆ ಕಾಯ್ದಿರುವ ಪ್ರಕರಣಗಳ ಸಂಖ್ಯೆ ಅಧಿಕವಾಗಿರುವುದು. (ಇತ್ತೀಚಿನ ಎಣಿಕೆಯ ಪ್ರಕಾರ ಸುಮಾರು 3.3 ಕೋಟಿಯಷ್ಟು).

ಐಬಿಸಿಯ ಕೊಡುಗೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಯಾವುದೇ ಕೊಡುಗೆಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಸಾಲದ ವ್ಯವಸ್ಥೆಯ ಲಕ್ಷಣಗಳನ್ನು ಗಮನಿಸಬೇಕು. ಆದರೆ, ಜನ ಇಲ್ಲಿ ನೇರವಾಗಿ ಐಬಿಸಿ ವಿರುದ್ಧ ತೀರ್ಮಾನಕ್ಕೆ ಜಿಗಿದುಬಿಡುತ್ತಿದ್ದಾರೆ. ಜಾರಿಗೆ ಬಂದಾಗಿನಿಂದ (ಡಿಸೆಂಬರ್‌ 2016 ರಿಂದ ಸೆಪ್ಟೆಂಬರ್‌ 2019ರವರೆಗೆ), 2542 ಕಾರ್ಪೊರೇಟ್‌ ಋಣಬಾಧ್ಯತೆ ಪ್ರಕರಣಗಳು ದಾಖಲಾಗಿದ್ದು, 186 ಪ್ರಕರಣಗಳನ್ನು ವಿನಂತಿ ಅಥವಾ ಪುನರ್‌ವಿಮರ್ಶೆ ಅಥವಾ ಇತ್ಯರ್ಥವಾದ ಹಿನ್ನೆಲೆಯಲ್ಲಿ ಮುಕ್ತಾಯಗೊಳಿಸಲಾಗಿದ್ದು,116 ಪ್ರಕರಣಗಳನ್ನು ಹಿಂಪಡೆಯಲಾಗಿದೆ. 587 ಪ್ರಕರಣಗಳಲ್ಲಿ ಸಮಾಪನೆಗೆ ಆದೇಶಿಸಲಾಗಿದ್ದರೆ,156 ಪ್ರಕರಣಗಳು ಸಂಕಲ್ಪ ಯೋಜನೆಗೆ ಹೋಗಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ 1045 ಪ್ರಕರಣಗಳು ಸಮಾಪ್ತಿಯಾಗಿವೆ.1497 ಪ್ರಕರಣಗಳು ವಿವಿಧ ಹಂತದಲ್ಲಿವೆ. ಸಮಾಪನೆಗೆ ಸಂಬಂಧಿಸಿದಂತೆ, 498 ಸ್ವಯಂಪ್ರೇರಿತ ಸಮಾಪನೆಗಳಾಗಿದ್ದು, ಈ ಪೈಕಿ 75% ಆರ್ಥಿಕವಾಗಿ ಸಾಧುವಲ್ಲದ ಅಥವಾ ಯಾವುದೇ ವಹಿವಾಟು ನಡೆಸದಂಥವು. ಹಣಕಾಸು ಸಾಲದಾತರಿಗೆ (ಕಾರ್ಯಶೀಲ ಸಾಲದಾತರು ಅಥವಾ ವಹಿವಾಟು ನಡೆಯುವ ಸಂದರ್ಭದಲ್ಲಿ ಸಾಲ ಒದಗಿಸುವವರಂಥವರನ್ನು ಹೊರತುಪಡಿಸಿ) ವಸೂಲಾಗಿದ್ದು ರೂ.3.32 ಲಕ್ಷ ಕೋಟಿ. ಈ ಪೈಕಿ ಆರ್‌ಬಿಐ ನಿರ್ದೇಶನದ ಮೇರೆಗೆ ಬ್ಯಾಂಕ್‌ಗಳು ಕ್ರಮ ಕೈಗೊಳ್ಳುವ ಒತ್ತಾಯಕ್ಕೆ ಸಿಲುಕಿದ 12 ಬೃಹತ್‌ ಖಾತೆಗಳನ್ನು (ರಾಜಕೀಯದೊಂದಿಗೆ ಚೆನ್ನಾಗಿ ಸಂಬಂಧ ಹೊಂದಿರುವ ಗುಂಪುಗಳೇ ಇದರಲ್ಲಿ ಹೆಚ್ಚು) ಹೊರತುಪಡಿಸಲಾಗಿದೆ. ಈ 12 ಬೃಹತ್‌ ಖಾತೆಗಳ ನಡುವೆ ಒಟ್ಟಾರೆ ರೂ.3.45 ಲಕ್ಷ ಕೋಟಿಗೂ ಅಧಿಕ ಬಾಕಿ ಉಳಿದುಕೊಂಡಿದೆ. ಈ ಖಾತೆಗಳ ಪೈಕಿ ಐಬಿಸಿ ವಿಚಾರಣೆಯಿಂದಾಗಿ 7 ಕಂಪನಿಗಳಿಂದ ರೂ.101,906 ಕೋಟಿ ಸಾಲವನ್ನು ವಸೂಲು ಮಾಡಲಾಗಿದೆ. ಬಾಕಿ ಕಂಪನಿಗಳ ಪ್ರಕರಣಗಳು ಸಂಕಲ್ಪ ಯೋಜನೆ ಅಥವಾ ಸಮಾಪನೆಗೊಳ್ಳುವ ವಿವಿಧ ಹಂತಗಳಲ್ಲಿವೆ. ಈ ಏಳರ ಪೈಕಿ ನಾಲ್ಕು ಕಂಪನಿಗಳ ಸಾಲ ಮರುಪಾವತಿ ಆಸ್ತಿ ಮೌಲ್ಯ 40%ಗೂ ಅಧಿಕವಾಗಿದ್ದರೆ ಇತರ ಮೂರು ಕಂಪನಿಗಳ ಪೈಕಿ ಈ ಪ್ರಮಾಣ 50%ಕ್ಕಿಂತ ಹೆಚ್ಚು.

ಟೀಕೆ ಮತ್ತು ಸಂಕೀರ್ಣತೆಗಳು:

ಐಬಿಸಿ ವಿರುದ್ಧ ಕೇಳಿ ಬರುತ್ತಿರುವ ಪ್ರಮುಖ ಟೀಕೆಗಳೆಂದರೆ, ಅದರ ಸಾಲ ವಸೂಲಾತಿ ಪ್ರಮಾಣ ತೀರಾ ಕಡಿಮೆ ಇರುವುದು ಹಾಗೂ ಕಾನೂನಿನಡಿ ನಿಗದಿಪಡಿಸಲಾಗಿರುವ 270 ದಿನಗಳ ಅವಧಿಯನ್ನು ಪಾಲಿಸಲು ಅದಕ್ಕೆ ಸಾಧ್ಯವಾಗದಿರುವುದು. ಪ್ರಕರಣವೊಂದರ ಸರಾಸರಿ ಇತ್ಯರ್ಥ ಅವಧಿ 300ರಿಂದ 374 ದಿನಗಳಾಗಿದ್ದು, ಕೆಲವೊಮ್ಮೆ ಇದಕ್ಕಿಂತ ಹೆಚ್ಚಿನ ಅವಧಿಯನ್ನು ತೆಗೆದುಕೊಳ್ಳುತ್ತಿದೆ. ಇನ್ನು ಐಬಿಸಿ ವಸೂಲು ಮಾಡಿದ ಮೊತ್ತದ ವಿಷಯವಂತೂ ಸದಾ ವಿವಾದದ ಮೂಲವಾಗಿದೆ. ಆದರೆ ಯಾವುದೇ ಕಂಪನಿ, ಅದರಲ್ಲಿಯೂ ದೊಡ್ಡಮೊತ್ತದ ಸಾಲ ಬಾಕಿ ಹೊಂದಿದ್ದರೆ, ಸುಸ್ತಿದಾರನಾಗಿದ್ದರೆ, ಅಂತಹ ಸಾಲವನ್ನು ವಸೂಲು ಮಾಡುವ ಸಾಧ್ಯತೆಯ ಪ್ರಮಾಣ ಆ ಕಂಪನಿಯು ಸುಸ್ತಿದಾರನಾಗುವುದಕ್ಕಿಂತ ಮುಂಚಿನ ಒಟ್ಟು ಸಾಲ ಪ್ರಮಾಣದ 10%ಕ್ಕಿಂತ ಕಡಿಮೆ ಎಂಬುದು ಜಗತ್ತಿನ ಇತಿಹಾಸದುದ್ದಕ್ಕೂ ವ್ಯಕ್ತವಾಗಿರುವ ಅನುಭವ. ಹೀಗಾಗಿ ಸುಸ್ತಿದಾರ ಪ್ರಕರಣದಲ್ಲಿ ಎಷ್ಟು ಪ್ರಮಾಣದ ಸಾಲವನ್ನು ಕೈಬಿಡಲು ಸಾಲದಾತರು ಸಿದ್ಧರಿದ್ದಾರೆ ಎಂಬುದೇ ಮುಖ್ಯ ಪ್ರಶ್ನೆ. ಈ ಕಾರಣಕ್ಕಾಗಿ ಸಾಲದಾತರು ಉದಾರಿಗಳಾಗಬೇಕಾಗುತ್ತದೆ. ಸಾಲ ನೀಡುವಾಗ ವಿವೇಚನೆಯಿಂದ ನೀಡಬೇಕಾಗುತ್ತದೆ. ಏಕೆಂದರೆ ನಂತರ ಪಶ್ಚಾತ್ತಾಪ ಪಡುವುದಕ್ಕಿಂತ ಮೊದಲು ಸುರಕ್ಷಿತವಾಗಿರುವುದೆ ಬ್ಯಾಂಕ್‌ ವಹಿವಾಟಿನ ಮೂಲಭೂತ ತರ್ಕ. ಐಬಿಸಿಗೆ ಸಂಬಂಧಿಸಿದಂತೆ ಹೇಳುವುದಾದರೆ ಸಾಲ ವಸೂಲಾತಿ ಪ್ರಮಾಣ ಒಟ್ಟು ಋಣಬಾಧ್ಯತೆಯ 10% ದಿಂದ 150% ವರೆಗೆ ಇದೆ.

ನಿಗದಿತ ಕಾಲಾವಧಿ ಮಿತಿಗೆ ಬದ್ಧವಾಗದಿರುವ ಅಸಮರ್ಥತೆ ಸಾಕಷ್ಟು ಜಟಿಲವಾಗಿಯೇ ಇದೆ. ಯಾವುದೇ ಹೊಸ ಕಾಯಿದೆಗಳಂತೆ ಐಬಿಸಿ ಕೂಡಾ ಇನ್ನೂ ಪ್ರಗತಿಯಲ್ಲಿರುವಂಥದು. ಹೀಗಾಗಿ ಇನ್ನೂ ನಿರ್ದಿಷ್ಟವಾಗಿ ವ್ಯಾಖ್ಯಾನಿಸಲಾಗದ ಅಥವಾ ನಿರ್ದಿಷ್ಟವಾಗಿ ಇವೆಯೇ ಎಂಬುದನ್ನು ಖಚಿತಪಡಿಸಲಾಗದ ಎಷ್ಟೋ ವಿಷಯಗಳು ಇರುತ್ತವೆ. ಯಾವುದೇ ಕಾನೂನು ಸ್ಥಿರೀಕರಣಗೊಂಡು ಕೆಲಸ ಮಾಡಬೇಕೆಂದರೆ 3 ರಿಂದ 5 ವರ್ಷಗಳು ಬೇಕು. ಸರ್ವಾಧಿಕಾರದ ದೇಶಗಳಿಗಿಂತ ಕಾನೂನು ಪಾಲಿಸುವ ದೇಶಗಳಲ್ಲಿ ನ್ಯಾಯಾಲಯಗಳ ಮೂಲಕ ಅಥವಾ ಶಾಸನ ಸಭೆಗಳ ಮೂಲಕ ವಿಷಯವೊಂದಕ್ಕೆ ಪರಿಹಾರ ಕಂಡುಕೊಳ್ಳಲು ಹೆಚ್ಚು ಕಾಲ ಬೇಕಾಗುವುದು ಸಾಮಾನ್ಯ. ಯಾವುದೇ ವಿಷಯವಿರಲಿ, ಅದು ಹೀಗೇ ಆಗಬೇಕೆಂದು ದೇಶದ ಕಾರ್ಯಾಂಗ ವ್ಯವಸ್ಥೆಯೊಂದಕ್ಕೆ ಸರಳವಾಗಿ ಹೇಳಿ ಬಿಡುವುದು ನಿಯಮಗಳ ಪ್ರಕಾರ ನಡೆಯುವ ದೇಶಕ್ಕೆ ಕಾನೂನಾತ್ಮಕವಲ್ಲದ ವಿಷಯ. ಸಾಂವಿಧಾನಿಕ ಪರಿಹಾರಗಳನ್ನು ಪಡೆಯುವ ಹಕ್ಕು ಮೂಲಭೂತ ಹಕ್ಕಾಗಿದ್ದು, ಕಾರ್ಯಾಂಗದ ಕ್ರಮವೊಂದರಿಂದಾಗಿ ಈ ಹಕ್ಕಿಗೆ ಚ್ಯುತಿ ಬಂದಿದೆ ಎಂದು ಯಾರೇ ಭಾವಿಸಿದರೂ, ಅದನ್ನು ಪ್ರಶ್ನಿಸುವ ಹಕ್ಕನ್ನೂ ಇದು ಒಳಗೊಂಡಿರುತ್ತದೆ. ಐಬಿಸಿಯಲ್ಲಿರುವ ಗೋಜಲು ಏನೆಂದರೆ ವಿಚಾರಣೆಯ ಹಂತದಲ್ಲಿರುವಾಗ ಅದರಲ್ಲಿಯೂ ಕಾನೂನು ಅಥವಾ ಪದ್ಧತಿಯೊಂದಕ್ಕೆ ಸಂಬಂಧಿಸಿದ ವಿಷಯವಾಗಿದ್ದರೆ ಯಾವುದೇ ಪಕ್ಷಗಾರನು ಉನ್ನತ ನ್ಯಾಯಾಲಯದ ಮೊರೆ ಹೋಗಬಹುದು. ಆಗ ಉನ್ನತ ನ್ಯಾಯಾಲಯದಿಂದ ಇತ್ಯರ್ಥವಾಗುವವರೆಗೆ ವಿಚಾರಣೆಯ ತಕ್ಷಣದ ಮುಂದೂಡಿಕೆಗೆ ಅದು ಕಾರಣವಾಗುತ್ತದೆ.

ಐಬಿಸಿ ಅಡಿ ಇರುವ ಬಹುತೇಕ ಎಲ್ಲಾ ಪ್ರಮುಖ ಪ್ರಕರಣಗಳಲ್ಲಿ ವಿಳಂಬ ಉಂಟಾಗುತ್ತಿರುವುದು ಈ ಕಾರಣಕ್ಕಾಗಿ (ಉದಾಹರಣೆಗೆ, ಭೂಷಣ್‌ ಸ್ಟೀಲ್‌ ಮತ್ತು ಎಸ್ಸಾರ್‌ ಸ್ಟೀಲ್‌ ಪ್ರಕರಣ). ಅದಾಗ್ಯೂ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಲೇಬೇಕು. ಏಕೆಂದರೆ ಇಂತಹ ಪ್ರಕರಣಗಳನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಅವಧಿಯಲ್ಲಿ ಇತ್ಯರ್ಥಪಡಿಸಲು ಅದು ಪ್ರಯತ್ನಿಸಿದೆ. ಐಬಿಸಿಯನ್ನು ಕಾಡುವ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ವ್ಯಾಜ್ಯದಲ್ಲಿ ಸರ್ಕಾರದ ಎರಡು ಅಂಗಗಳು ಪರಸ್ಪರ ಎದುರಾಳಿಗಳಾಗಿದ್ದು, ಸಾಲ ಮರುಪಾವತಿಯಲ್ಲಿ ತಮಗೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಹಕ್ಕೊತ್ತಾಯ ಮಂಡಿಸಿದಾಗ ಪ್ರಸ್ತುತ ಅಂಥದೊಂದು ಪ್ರಕರಣವಿದ್ದು, ಅಕ್ರಮ ಲೇವಾದೇವಿ ಆರೋಪವೊಂದರಲ್ಲಿ ಜಾರಿ ನಿರ್ದೇಶನಾಲಯವು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಐಬಿಸಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದರೆ ಪರಿಚ್ಛೇದ 53ರ ಅಡಿ ಬರುವ "ಸ್ವತ್ತು ವಿನಿಯೋಗ"ದಲ್ಲಿ ಸೂಚಿಸಲಾಗಿರುವ ಪ್ರಮಾಣವನ್ನು ಕಿಂಚಿತ್ತೂ ವಿಚಾರಿಸದೆ ಶುಭ ನಂಬಿಕೆಯಿಂದ ಒಪ್ಪಿಕೊಳ್ಳುವುದು ಹಾಗೂ ಅದೇ ರೀತಿ ಕಾಯಿದೆಗೆ ಅಗತ್ಯ ತಿದ್ದುಪಡಿ ತಂದು ಎಲ್ಲಾ ಹಕ್ಕುದಾರರನ್ನು "ಕಾರ್ಯಶೀಲ ಸಾಲದಾರರು" ಎಂದು ಪರಿಗಣಿಸಬೇಕೆ ವಿನಃ ಬಾಕಿ ವಸೂಲಿಗಾಗಿ ತಾನೇ ಮೊದಲ ಹಕ್ಕುದಾರನಾಗಿ ಹಕ್ಕು ಸಾಧಿಸಲು ಮುಂದಾಗದೆ ಇರುವುದು ಅವಶ್ಯವಾಗಿದೆ. ಅಲ್ಲದೇ ಇತ್ಯರ್ಥವಾಗಬೇಕಿರುವ ಕೆಲವು ಕಾನೂನು ಮತ್ತು ಪ್ರಕ್ರಿಯ ವಿಷಯಗಳಿವೆ. ಗುಂಪೊಂದರ ಹಲವಾರು ಋಣಬಾಧ್ಯತೆ ಪ್ರಕ್ರಿಯಾ ವಿಷಯಗಳನ್ನು ಇತ್ಯರ್ಥಪಡಿಸಲು ಯು.ಕೆ. ಸಿನ್ಹಾ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸುವ ವಿಷಯ ಶೀಘ್ರ ಅಂತಿಮವಾಗಲಿದೆ. ಇದು ಮತ್ತೊಂದು ಪ್ರಮುಖ ವಿಷಯವಾಗಿದ್ದು, ಇಂತಹ ಸುಮಾರು 47 ಕಂಪನಿಗಳು ಹತ್ತಿರ ಹತ್ತಿರ ರೂ.1 ಲಕ್ಷ ಕೋಟಿಗೂ ಹೆಚ್ಚು ಋಣಭಾರ ಹೊಂದಿವೆ.

ಹೆಚ್ಚುತ್ತಿರುವ ಪ್ರಕರಣಗಳನ್ನು ಸಾಕಷ್ಟು ಮೂಲಸೌಕರ್ಯಗಳಿಲ್ಲದೆ ಇತ್ಯರ್ಥಪಡಿಸಬೇಕಾದ ಒತ್ತಡದ ಸಮಸ್ಯೆಯಿಂದ ಐಬಿಸಿ ನರಳುತ್ತಿದೆ. ಸದ್ಯ ದೆಹಲಿಯಲ್ಲಿ, ಪ್ರಧಾನ ಪೀಠವಲ್ಲದೇ 13 ವಿಭಾಗೀಯ ಪೀಠಗಳಿವೆ. ಕೇಂದ್ರ ಹಾಗೂ ಮುಖ್ಯವಾಗಿ ರಾಜ್ಯಗಳ ಬದ್ಧತೆಯ ಕೊರತೆಯಿಂದಾಗಿ ಮೂಲಸೌಕರ್ಯದಲ್ಲಿ ಕೊರತೆ ಉಂಟಾಗಿದೆ. ಬಹುತೇಕ ಪ್ರಕರಣಗಳಲ್ಲಿ ಸಾಕಷ್ಟು ಭೌತಿಕ ಮತ್ತು ಮಾನವ ಮೂಲಸೌಕರ್ಯ ಸಂಪನ್ಮೂಲಗಳನ್ನು ಎನ್‌ಸಿಎಲ್‌ಟಿ ಹೊಂದಿಲ್ಲ. ಚಾಲ್ತಿಯಲ್ಲಿರುವ ಪ್ರಕರಣಗಳು ಹಾಗೂ ಪ್ರಮುಖವಾಗಿ ಹೊಸ ಪ್ರಕರಣಗಳು ನ್ಯಾಯಾಲಯಕ್ಕೆ ಬರುತ್ತಿರುವ ಗತಿಯನ್ನು ಗಮನಿಸಿದರೆ ಈ ಮೂಲಸೌಕರ್ಯಗಳು ಏನಕ್ಕೂ ಸಾಲವು ಎಂಬುದನ್ನು ಇತ್ತೀಚಿನ ಅಧ್ಯಯನ ವರದಿಗಳು ಬೆರಳೆತ್ತಿ ತೋರಿಸಿವೆ. ನ್ಯಾಯಾಲಯದಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಗತಿಯನ್ನು ಗಮನಿಸಿದರೆ ಹಾಗೂ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಿಕ್ಕೆ 69 ಪೀಠಗಳಾದರೂ ಬೇಕು. ಇದನ್ನು ನೋಡಿದರೆ ಕಾನೂನು ಪಾಲಿಸುವ ಮೂಲಕವೇ ಕರಾರಿನ ಪಾವಿತ್ರ್ಯತೆ ಮತ್ತು ವ್ಯಾಜ್ಯ ಇತ್ಯರ್ಥ ಬದ್ಧತೆ ಸಾಧ್ಯವಾಗುತ್ತದೆ. ಆ ಮೂಲಕ ಸರಳವಾಗಿ ವ್ಯಾಪಾರ ಮಾಡುವ ಪರಿಕಲ್ಪನೆ ಸಾಧ್ಯ ಎಂಬ ವಿಷಯವನ್ನು ನಮ್ಮ ರಾಜ್ಯಗಳು ಅರ್ಥ ಮಾಡಿಕೊಂಡೆ ಇಲ್ಲ ಎಂದು ಅನಿಸುತ್ತದೆ.ದುರದೃಷ್ಟವಶಾತ್‌ ರಾಜ್ಯಗಳ ಪಾಲಿನ ಬದ್ಧತೆಯ ಕೊರತೆ ಕೇವಲ ಐಬಿಸಿಗೆ ಮಾತ್ರವಲ್ಲ. ಬಹುತೇಕ ಎಲ್ಲಾ ವಾಣಿಜ್ಯ ಪ್ರಕರಣಗಳಿಗೂ ವಿಸ್ತರಿಸಿದೆ. 2015ರ ವಾಣಿಜ್ಯ ನ್ಯಾಯಾಲಯಗಳ ಕಾಯ್ದೆಯ ಜಾರಿ ಮತ್ತು ಕೇಂದ್ರ ಸರ್ಕಾರದ ಹಲವಾರು ಅಧಿಸೂಚನೆಗಳ ಹೊರತಾಗಿಯೂ ಬಹುತೇಕ ರಾಜ್ಯಗಳು ತಮ್ಮ ಜಿಲ್ಲೆಗಳಲ್ಲಿ ವಾಣಿಜ್ಯ ನ್ಯಾಯಾಲಯಗಳನ್ನು ಸ್ಥಾಪಿಸಿಯೆ ಇಲ್ಲ. ವಾಣಿಜ್ಯ ನ್ಯಾಯಾಲಗಳು ಸ್ಥಾಪನೆಯಾದ ಪ್ರಕರಣಗಳಲ್ಲಿ ಕಾರ್ಯಾಂಗದ ನಿರ್ಲಕ್ಷ್ಯದಿಂದ ಮೂಲಸೌಕರ್ಯದ ಕೊರತೆಯಾಗಿ ಅವುಗಳ ಕಾರ್ಯಶೀಲತೆಯ ಮೇಲೆ ಪರಿಣಾಮವಾಗಿದೆ.

ಸಾಲ ಪ್ರಕ್ರಿಯೆ ಮತ್ತು ವಸೂಲಾತಿಯ ನಾಲ್ಕು ದಾರಿಗಳು. ಇವು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ: ಮಾರುಕಟ್ಟೆ ಮೌಲ್ಯ, ಸ್ವತ್ತು ಮೌಲ್ಯ, ಸಮಾಪನಾ ಮೌಲ್ಯ ಮತ್ತು ಸ್ವತ್ತು ರಕ್ಷಣಾ ಮೌಲ್ಯ

01.ಮಾರುಕಟ್ಟೆ ಮೌಲ್ಯ: ಸ್ವತ್ತುಗಳಿಗೆ ಮುಕ್ತ ಮಾರುಕಟ್ಟೆಯಲ್ಲಿರುವ ದರ ಇದಾಗಿದ್ದು, ಸಾಮಾನ್ಯವಾಗಿ ಸ್ವತ್ತಿಗೆ ಸಿಗಬಹುದಾದ ಅತಿ ಹೆಚ್ಚಿನ ಮೌಲ್ಯವಾಗಿರುತ್ತದೆ.

02.ಸ್ವತ್ತು ಮೌಲ್ಯ: ಅಢಾವೆ ಪತ್ರಿಕೆಯಲ್ಲಿ (ಸಾಮಾನ್ಯವಾಗಿ ಸ್ವತ್ತುಗಳನ್ನು ಹೊಂದಿದಾಗಿನ ಅವುಗಳ ಮೌಲ್ಯ) ಘೋಷಣೆಯಾಗಿರುವ ಸ್ವತ್ತುಗಳ ಮೌಲ್ಯ. ಅದರಲ್ಲಿಯೂ ನಷ್ಟಪೀಡಿತ ಕಂಪನಿಗಳಲ್ಲಿ ಸಾಮಾನ್ಯವಾಗಿ ಇದು ಅಧಿಕೃತವಾಗಿ ಹೆಚ್ಚಿರುತ್ತದೆ ಹಾಗೂ ಮಾರುಕಟ್ಟೆ ಮೌಲ್ಯಕ್ಕಿಂತ ಜಾಸ್ತಿಯಾಗಿರುತ್ತದೆ.

03.ಸಮಾಪನಾ ಮೌಲ್ಯ: ವಹಿವಾಟು ಮುಚ್ಚಬೇಕಾಗಿದ್ದಾಗ ಮತ್ತು ಸ್ವತ್ತುಗಳನ್ನು ಮಾರಬೇಕಿದ್ದಾಗ ಭೌತಿಕ ಸ್ವತ್ತುಗಳ ಒಟ್ಟು ಮೌಲ್ಯ. ಇದು ಅವ್ಯಕ್ತ ಸ್ವತ್ತುಗಳನ್ನು ಒಳಗೊಂಡಿರುವುದಿಲ್ಲ.

04.ಸ್ವತ್ತು ರಕ್ಷಣಾ ಮೌಲ್ಯ: ಉಪಯುಕ್ತತೆ ಮೌಲ್ಯದ ನಂತರ ಉಳಿಯುವ ಸ್ವತ್ತಿನ ಮೌಲ್ಯ - ಸಾಮಾನ್ಯವಾಗಿ ಗುಜರಿ ಎಂದು ಮಾರಾಟವಾಗುವಂಥದು.

ಮೂರು ವರ್ಷಗಳ ಅವಧಿಯಲ್ಲಿ ಕಾನೂನಿನ ಪ್ರಮುಖ ಅಂಶಗಳ ಸಾರಾಂಶ:
ಹಿಂದಿನ ಪ್ರವರ್ತಕರು ಐಬಿಸಿ ಅಡಿ ಹರಾಜಿನಲ್ಲಿ ಸ್ವತ್ತುಗಳನ್ನು ಹೊಂದಲು ಮುಂದಾಗಬಲ್ಲರೆ?
ಕ್ರಿಯಾಶೀಲ ಸಾಲದಾತರು ವರ್ಸಸ್‌ ಸಾಲದಾತರ ಸಮಿತಿಗೆ ಸಂಬಂಧಿಸಿದ ಪ್ರಾರಂಭಿಕ ವಿಷಯಗಳು ಸರಕುಗಳು ಮತ್ತು ಸೇವೆಗಳನ್ನು ಪಡೆಯುವವರು ಕ್ರಿಯಾಶೀಲ ಸಾಲದಾತರು?
ಇತರ ವಿಭಾಗಗಳ ಸಾಲದಾತರರಿಗೆ ಅನ್ವಯವಾಗುವ ನೀತಿಯ ಜೊತೆಗೆ ಸಾಲದಾತರ ವಿಭಾಗ ಮತ್ತು ಸಮಾಪನೆಯಲ್ಲಿ ಅವರ ಪಾಲು ದಿವಾಳಿಯಾಗುವ ಯೋಜನೆಗಳಲ್ಲಿ ಸ್ಥಳೀಯ ಖರೀದಿದಾರರ ಸ್ಥಾನ (ಕೆಲವೇ ಜನರ ಬದಲು ಅವರ ಸಂಖ್ಯೆ ಸಾವಿರಾರು ಆಗಬಹುದು) ಲಾಭಾಂಶ ಅಥವಾ ಸಲ್ಲಬಹುದಾದ ಪಾಲಿಗೆ ಸಂಬಂಧಿಸಿದಂತೆ ಸಾಲದಾತರ ಸಮಿತಿಯ ಪಾತ್ರ ಐಬಿಸಿ ಮುಂದಿರುವ ಕಂಪನಿಯ ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯವು ಜಪ್ತು ಮಾಡಬಹುದೇ? ಎನ್ನುವಂಥದ್ದು.

Intro:Body:

ಇಂಗ್ಲೀಷ್​ ಸೈಟ್​ಗೆ ಹೋಗಿ IBC ಅಂತ search ಕೊಡಿ ಫೋಟೋ ಸಿಗುತ್ತೆ ಹಾಕಿ, ಸ್ಟೋರಿ ಸ್ಪೆಲ್ಲಿಂಗ್ ಚೆಕ್​ ಮಾಡಿ ಅಪ್​ಲೋಡ್ ಮಾಡಿ

ಐಬಿಸಿಗೆ ಮೂರು ವರ್ಷ: ತಪ್ಪಾಗಿ ಅರ್ಥೈಸಿಕೊಂಡಿದ್ದರೂ ಬರಲಿವೆ ಪ್ರಮುಖ ಬದಲಾವಣೆಗಳು

ಡಾ. ಎಸ್.‌ ಅನಂತ

ಋಣಬಾಧ್ಯತೆ ಮತ್ತು ದಿವಾಳಿತನ ಸಂಹಿತೆಯು (ಐಬಿಸಿ) ೨೮ ಮಾರ್ಚ್‌ ೨೦೧೬ರಲ್ಲಿ ಅಂಕಿತ ಪಡೆಯುವ ಮೂಲಕ ಕಾನೂನಾಗಿದ್ದು, ಡಿಸೆಂಬರ್‌ ೨೦೧೬ರಿಂದ ಪೂರ್ಣಪ್ರಮಾಣದಲ್ಲಿ ಜಾರಿಗೆ ಬಂದಿದೆ. ಭಾರತೀಯ ಋಣಬಾಧ್ಯತೆ ಮತ್ತು ದಿವಾಳಿತನ ಮಂಡಳಿಯನ್ನು (ಐಬಿಬಿಐ) ೧ ಅಕ್ಟೋಬರ್‌ ೨೦೧೬ಕ್ಕೆ ಸ್ಥಾಪಿಸಲಾಯಿತು. ಒಂದಕ್ಕಿಂತ ಹೆಚ್ಚು ಸಾಲದಾತರು, ತಾವು ನೀಡಿದ ಸಾಲದ ಗರಿಷ್ಠ ಪ್ರಮಾಣವನ್ನು, ಇತರ ಎಲ್ಲ ಪಾಲುದಾರರಿಗೆ, ಪಕ್ಷಪಾತ ಮಾಡದೇ ಕ್ಷಿಪ್ರವಾಗಿ ವಸೂಲು ಮಾಡುವುದನ್ನು ಸಾಧ್ಯವಾಗಿಸುವ ತೀವ್ರ ಅವಶ್ಯಕತೆ ಇದೆ ಎಂಬುದು ಮನವರಿಕೆಯಾದ ಹಿನ್ನೆಲೆಯಲ್ಲಿ, ಐಬಿಸಿಯನ್ನು ಜಾರಿಗೆ ತರಲಾಯಿತು. ಹಲವಾರು ವಿಷಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲು ಈ ಕಾಯ್ದೆ ಪ್ರಯತ್ನಿಸುತ್ತದೆ. ವ್ಯಾಪಾರದಲ್ಲಿ ಒಬ್ಬರಿಗಿಂತ ಹೆಚ್ಚು ಸಾಲದಾತರಿಂದ ಸಾಲ ಪಡೆಯುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ, ಎಲ್ಲಾ ಸಾಲದಾತರು ಪ್ರತ್ಯೇಕವಾಗಿ ಸಾಲಗಾರರನನ್ನು ಸತಾಯಿಸಿ ವಸೂಲು ಮಾಡುವುದಕ್ಕಿಂತ, ಎಲ್ಲರೂ ಒಟ್ಟಾಗಿ ಸಾಲ ವಸೂಲು ಮಾಡಲು ಅಥವಾ ಸಾಲ ಇತ್ಯರ್ಥ್ಯಕ್ಕೆ ಒಪ್ಪುವಂತೆ ಮಾಡುವುದಕ್ಕೆ ಇಲ್ಲಿ ಒತ್ತು ಕೊಡಲಾಗಿದೆ. ಕೆಟ್ಟ ಸಾಲದ ಬೆಟ್ಟ ನಿರಂತರವಾಗಿ ಬೆಳೆಯುತ್ತಿರುವ ಸಮಸ್ಯೆಯಿಂದಾಗಿ, ಸ್ಥಾಪನೆಯಾದಾಗಿನಿಂದ ಉಸಿರಾಡಲು ಪುರುಸೊತ್ತಿಲ್ಲದಂತೆ ಅಥವಾ ಸಮಯ ಇಲ್ಲದಂತೆ ಕೆಲಸ ಮಾಡುತ್ತಿದೆ ಐಬಿಬಿಐ. ವೇಗವಾಗಿ ಕೆಲಸ ಮಾಡುತ್ತಿದ್ದರೂ, ದೂರದಿಂದ ನೋಡಿದಾಗ, ಐಬಿಬಿಐ ತನ್ನ ಸ್ಥಾನದಿಂದ ಅಲ್ಲಾಡಿಯೇ ಇಲ್ಲ ಎಂಬಂತೆ ಕಾಣುತ್ತದೆ. ಐಬಿಸಿಯ ಒಂದು ಉತ್ತಮ ಅಂಶವೇನೆಂದರೆ, ಸಮಸ್ಯೆಯ ಪ್ರಮಾಣ ಅಗಾಧವಾಗಿದ್ದರೂ, ಅತ್ಯಂತ ಕಡಿಮೆ ಅವಧಿಯಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುವಲ್ಲಿ ಅದು ಸಫಲವಾಗಿರುವುದು. ಐಬಿಸಿಯ ಗುರಿ ಮತ್ತು ಪ್ರಾಮುಖ್ಯತೆ ಏನೆಂದರೆ, ಪ್ರಕರಣ ದಾಖಲಾದ ೨೭೦ ದಿನಗಳ ಒಳಗೆ ಅದನ್ನು ಇತ್ಯರ್ಥಪಡಿಸಬೇಕು. ಅಂದರೆ, ಐಬಿಸಿ ಅಡಿ ವಿಚಾರಣೆ ಮುಂದೂಡಿಕೆ ಅವಕಾಶಗಳು ಸೀಮಿತವಾಗಿವೆ. ಪ್ರಕರಣಗಳು ಇತ್ಯರ್ಥಗೊಳ್ಳಲು ವಿಳಂಬವಾಗಲು ಮುಂದೂಡುವಿಕೆಯೇ ಪ್ರಮುಖ ಕಾರಣವಾಗಿದೆ. ಆದರೆ, ಕುಂಟು ನೆಪಗಳ ಮೂಲಕ ವಿಚಾರಣೆ ಮುಂದೂಡಿಸಲು ಈಗ ಅರ್ಜಿದಾರರಿಗೆ ಯಾವುದೇ ಅವಕಾಶಗಳೇ ಇಲ್ಲ.

ಕಾರ್ಯಗಳು ಮತ್ತು ಸವಾಲುಗಳು

ಯಾವುದೇ ಪ್ರಗತಿಶೀಲ ಆರ್ಥಿಕತೆಗೆ ಖಾಸಗಿ ಉದ್ಯಮಗಳ ಬೆಳವಣಿಗೆ ಅವಶ್ಯಕ. ವಹಿವಾಟು ಬೆಳೆಯುತ್ತ ಮತ್ತು ಹರಡುತ್ತ ಹೋದಂತೆ ಅದು ಉದ್ಯೋಗಗಳು, ಸರ್ಕಾರದ ಜಿಡಿಪಿ (ಒಟ್ಟು ಆಂತರಿಕ ಉತ್ಪಾದನೆ) ಮತ್ತು ಆದಾಯಗಳ ಹೆಚ್ಚಳ ತರುವುದರಿಂದ ಒಂದು ಬೃಹತ್‌ ಧನಾತ್ಮಕ ವೃತ್ತ ನಿರ್ಮಾಣವಾಗಲು ಕಾರಣವಾಗುತ್ತದೆ. ಯಾವುದೇ ವಹಿವಾಟು ಅಥವಾ ವ್ಯಾಪಾರ ಚಟುವಟಿಕೆಗಳಿಗೆ (ಅ) ಖರೀದಿ ಮತ್ತು ಮಾರಾಟ ಹಾಗೂ (ಬ) ವಹಿವಾಟಿನ ಪ್ರವೇಶ ಮತ್ತು ನಿರ್ಗಮನ ಎಂಬ ಎರಡು ಪ್ರಮುಖ ಲಕ್ಷಣಗಳ  ಯಶಸ್ವಿ ಮತ್ತು ಪರಿಣಾಮಕಾರಿ ಸ್ಪರ್ಧೆ ಬೇಕಾಗುತ್ತದೆ. ಸಂಪೂರ್ಣ ವಿಶ್ವಾಸದೊಂದಿಗೆ ಇವೆರಡೂ ಸಂಪೂರ್ಣವಾಗಿ ಮುಗಿಯುವವರೆಗೂ ಖಾಸಗಿ ಆರ್ಥಿಕ ಚಟುವಟಿಕೆಯು ಯಶಸ್ವಿಯಾಗಲಾರದು. ಸುಲಭವಾಗಿ ವ್ಯಾಪಾರ ಮಾಡುವುದು ಎಂದು ಯಾವುದನ್ನು ನಾವೀಗ ಕರೆಯುತ್ತೇವೋ, ಅದು ಸಾಧ್ಯವಾಗುವುದು ಉದ್ಯಮಿಯೊಬ್ಬ ಸಾಧ್ಯವಿರುವ ಅತಿ ಕಡಿಮೆ ಸಮಯದಲ್ಲಿ ತನ್ನ ವಹಿವಾಟನ್ನು ಪ್ರಾರಂಭಿಸುವುದು ಮತ್ತು ಮುಕ್ತಾಯಗೊಳಿಸುವಂತೆ ಆದಾಗ ಮಾತ್ರ. ಇವು ಲಾಭ ಮತ್ತು ನಷ್ಟದಷ್ಟೇ ಮಹತ್ವದವು. ಅದೇ ರೀತಿ, ವ್ಯಾಪಾರದ ಪ್ರಮುಖ ಭಾಗವೆಂದರೆ, ತಮ್ಮ ಅವಶ್ಯಕತೆಗಳಿಗಾಗಿ ಹಣವನ್ನು ಸಾಲವಾಗಿ ತರುವುದು. ವಾಪಸಾತಿಯ ಭರವಸೆ ಇದ್ದಾಗ ಹಾಗೂ ಒಂದು ವೇಳೆ ಸಾಲಗಾರ ಸಾಲ ಹಿಂದಿರುಗಿಸದೇ ಹೋದಾಗ ಅದನ್ನು ವಸೂಲು ಮಾಡಿಕೊಡುವ ಸಮರ್ಥ ವ್ಯವಸ್ಥೆ ಇದ್ದಾಗ ಮಾತ್ರ ಸಾಲ ನೀಡಲು ಯಾರು ಬೇಕಾದರೂ ಮನಸ್ಸು ಮಾಡಬಲ್ಲರು ಹಾಗೂ ಮುಂದಾಗಬಲ್ಲರು. ಭಾರತೀಯ ಆರ್ಥಿಕತೆಯ ಬಂಡವಾಳ ಕೊರತೆಗೆ ಒಂದು ಪ್ರಮುಖ ಕಾರಣವೇನೆಂದರೆ, ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿರುವಂತೆ, ಸಕ್ರಿಯ ಸಾಲದ ಬಾಂಡ್‌ಗಳ ಮಾರುಕಟ್ಟೆ ನಮ್ಮಲ್ಲಿ ಇಲ್ಲದಿರುವುದು. ಬಾಂಡ್‌ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ಹಲವಾರು ಪ್ರಯತ್ನಗಳು ಸೀಮಿತ ಯಶಸ್ಸು ಕಂಡಿವೆ. ಏಕೆಂದರೆ, ಸಾಲದಾತ ತನ್ನ ಸಾಲವನ್ನು ನ್ಯಾಯಾಲಯದ ಮೂಲಕ ವಸೂಲು ಮಾಡಬೇಕೆಂದರೆ, ಅದಕ್ಕೆ ಸಾಕಷ್ಟು ಸಮಯ ಹಿಡಿಯುತ್ತಿದೆ. ಇದು ಇನ್ನೊಂದು ದೊಡ್ಡ ಸಮಸ್ಯೆಯಾಗಲು ಕಾರಣವೇನೆಂದರೆ, ನಮ್ಮ ನ್ಯಾಯಾಂಗ ವ್ಯವಸ್ಥೆ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದು, ವಿಲೇವಾರಿಗೆ ಕಾಯ್ದಿರುವ ಪ್ರಕರಣಗಳ ಸಂಖ್ಯೆ ಅಧಿಕವಾಗಿರುವುದು (ಇತ್ತೀಚಿನ ಎಣಿಕೆಯ ಪ್ರಕಾರ ಸುಮಾರು ೩.೩ ಕೋಟಿಯಷ್ಟು).

ಐಬಿಸಿಯ ಕೊಡುಗೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಯಾವುದೇ ಕೊಡುಗೆಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ, ಸಾಲದ ವ್ಯವಸ್ಥೆಯ ಲಕ್ಷಣಗಳನ್ನು ಗಮನಿಸಬೇಕು. ಆದರೆ, ಜನ ಇಲ್ಲಿ ನೇರವಾಗಿ ಐಬಿಸಿ ವಿರುದ್ಧ ತೀರ್ಮಾನಕ್ಕೆ ಜಿಗಿದುಬಿಡುತ್ತಿದ್ದಾರೆ. ಜಾರಿಗೆ ಬಂದಾಗಿನಿಂದ (ಡಿಸೆಂಬರ್‌ ೨೦೧೬ರಿಂದ ಸೆಪ್ಟೆಂಬರ್‌ ೨೦೧೯ರವರೆಗೆ), ೨೫೪೨ ಕಾರ್ಪೊರೇಟ್‌ ಋಣಬಾಧ್ಯತೆ ಪ್ರಕರಣಗಳು ದಾಖಲಾಗಿದ್ದು, ೧೮೬ ಪ್ರಕರಣಗಳನ್ನು ವಿನಂತಿ ಅಥವಾ ಪುನರ್‌ವಿಮರ್ಶೆ ಅಥವಾ ಇತ್ಯರ್ಥವಾದ ಹಿನ್ನೆಲೆಯಲ್ಲಿ ಮುಕ್ತಾಯಗೊಳಿಸಲಾಗಿದ್ದರೆ, ೧೧೬ ಪ್ರಕರಣಗಳನ್ನು ಹಿಂಪಡೆಯಲಾಗಿದೆ, ೫೮೭ ಪ್ರಕರಣಗಳಲ್ಲಿ ಸಮಾಪನೆಗೆ ಆದೇಶಿಸಲಾಗಿದ್ದರೆ ೧೫೬ ಪ್ರಕರಣಗಳು ಸಂಕಲ್ಪ ಯೋಜನೆಗೆ ಹೋಗಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ೧೦೪೫ ಪ್ರಕರಣಗಳು ಸಮಾಪ್ತಿಯಾಗಿದ್ದರೆ, ೧೪೯೭ ಪ್ರಕರಣಗಳು ವಿವಿಧ ಹಂತದಲ್ಲಿವೆ. ಸಮಾಪನೆಗೆ ಸಂಬಂಧಿಸಿದಂತೆ, ೪೯೮ ಸ್ವಯಂಪ್ರೇರಿತ ಸಮಾಪನೆಗಳಾಗಿದ್ದು- ಈ ಪೈಕಿ ೭೫% ಆರ್ಥಿಕವಾಗಿ ಸಾಧುವಲ್ಲದ ಅಥವಾ ಯಾವುದೇ ವಹಿವಾಟು ನಡೆಸದಂಥವು. ಹಣಕಾಸು ಸಾಲದಾತರಿಗೆ (ಕಾರ್ಯಶೀಲ ಸಾಲದಾತರು ಅಥವಾ ವಹಿವಾಟು ನಡೆಯುವ ಸಂದರ್ಭದಲ್ಲಿ ಸಾಲ ಒದಗಿಸುವವರಂಥವರನ್ನು ಹೊರತುಪಡಿಸಿ) ವಸೂಲಾಗಿದ್ದು ರೂ.೩.೩೨ ಲಕ್ಷ ಕೋಟಿ. ಈ ಪೈಕಿ. ಆರ್‌ಬಿಐ ನಿರ್ದೇಶನದ ಮೇರೆಗೆ ಬ್ಯಾಂಕ್‌ಗಳು ಕ್ರಮ ಕೈಗೊಳ್ಳುವ ಒತ್ತಾಯಕ್ಕೆ ಸಿಲುಕಿದ  ೧೨ ಬೃಹತ್‌ ಖಾತೆಗಳನ್ನು (ರಾಜಕೀಯದೊಂದಿಗೆ ಚೆನ್ನಾಗಿ ಸಂಬಂಧ ಹೊಂದಿರುವ ಗುಂಪುಗಳೇ ಇದರಲ್ಲಿ ಹೆಚ್ಚು) ಹೊರತುಪಡಿಸಲಾಗಿದೆ. ಈ ೧೨ ಬೃಹತ್‌ ಖಾತೆಗಳ ನಡುವೆ ಒಟ್ಟಾರೆ ರೂ.೩.೪೫ ಲಕ್ಷ ಕೋಟಿಗೂ ಅಧಿಕ ಬಾಕಿ ಉಳಿದುಕೊಂಡಿದೆ. ಈ ಖಾತೆಗಳ ಪೈಕಿ ಐಬಿಸಿ ವಿಚಾರಣೆಯಿಂದಾಗಿ ೭ ಕಂಪನಿಗಳಿಂದ ರೂ.೧೦೧,೯೦೬ ಕೋಟಿ ಸಾಲವನ್ನು ವಸೂಲು ಮಾಡಲಾಗಿದೆ. ಬಾಕಿ ಕಂಪನಿಗಳ ಪ್ರಕರಣಗಳು ಸಂಕಲ್ಪ ಯೋಜನೆ ಅಥವಾ ಸಮಾಪನೆಗೊಳ್ಳುವ ವಿವಿಧ ಹಂತಗಳಲ್ಲಿವೆ. ಈ ಏಳರ ಪೈಕಿ ನಾಲ್ಕು ಕಂಪನಿಗಳ ಸಾಲ ಮರುಪಾವತಿ ಆಸ್ತಿ ಮೌಲ್ಯ ೪೦%ಗೂ ಅಧಿಕವಾಗಿದ್ದರೆ, ಇತರ ಮೂರು ಕಂಪನಿಗಳ ಪೈಕಿ ಈ ಪ್ರಮಾಣ ೫೦%ಕ್ಕಿಂತ ಹೆಚ್ಚು.

ಟೀಕೆ ಮತ್ತು ಸಂಕೀರ್ಣತೆಗಳು

ಐಬಿಸಿ ವಿರುದ್ಧ ಕೇಳಿಬರುತ್ತಿರುವ ಪ್ರಮುಖ ಟೀಕೆಗಳೆಂದರೆ, ಅದರ ಸಾಲ ವಸೂಲಾತಿ ಪ್ರಮಾಣ ತೀರಾ ಕಡಿಮೆ ಇರುವುದು ಹಾಗೂ ಕಾನೂನಿನಡಿ ನಿಗದಿಪಡಿಸಲಾಗಿರುವ ೨೭೦ ದಿನಗಳ ಅವಧಿಯನ್ನು ಪಾಲಿಸಲು ಅದಕ್ಕೆ ಸಾಧ್ಯವಾಗದಿರುವುದು. ಪ್ರಕರಣವೊಂದರ ಸರಾಸರಿ ಇತ್ಯರ್ಥ ಅವಧಿ ೩೦೦ರಿಂದ ೩೭೪ ದಿನಗಳಾಗಿದ್ದು, ಕೆಲವೊಮ್ಮೆ ಇದಕ್ಕಿಂತ ಹೆಚ್ಚಿನ ಅವಧಿಯನ್ನು ತೆಗೆದುಕೊಳ್ಳುತ್ತಿದೆ. ಇನ್ನು, ಐಬಿಸಿ ವಸೂಲು ಮಾಡಿದ ಮೊತ್ತದ ವಿಷಯವಂತೂ ಸದಾ ವಿವಾದದ ಮೂಲವಾಗಿದೆ. ಆದರೆ, ಯಾವುದೇ ಕಂಪನಿ, ಅದರಲ್ಲಿಯೂ ದೊಡ್ಡಮೊತ್ತದ ಸಾಲ ಬಾಕಿ ಹೊಂದಿದ್ದರೆ, ಸುಸ್ತಿದಾರನಾಗಿದ್ದರೆ, ಅಂತಹ ಸಾಲವನ್ನು ವಸೂಲು ಮಾಡುವ ಸಾಧ್ಯತೆಯ ಪ್ರಮಾಣ ಆ ಕಂಪನಿಯು ಸುಸ್ತಿದಾರನಾಗುವುದಕ್ಕಿಂತ ಮುಂಚಿನ ಒಟ್ಟು ಸಾಲ ಪ್ರಮಾಣದ ೧೦%ಕ್ಕಿಂತ ಕಡಿಮೆ ಎಂಬುದು ಜಗತ್ತಿನ ಇತಿಹಾಸದುದ್ದಕ್ಕೂ ವ್ಯಕ್ತವಾಗಿರುವ ಅನುಭವ. ಹೀಗಾಗಿ, ಸುಸ್ತಿದಾರ ಪ್ರಕರಣದಲ್ಲಿ, ಎಷ್ಟು ಪ್ರಮಾಣದ ಸಾಲವನ್ನು ಕೈಬಿಡಲು ಸಾಲದಾತರು ಸಿದ್ಧರಿದ್ದಾರೆ ಎಂಬುದೇ ಮುಖ್ಯ ಪ್ರಶ್ನೆ. ಈ ಕಾರಣಕ್ಕಾಗಿ ಸಾಲದಾತರು ಉದಾರಿಗಳಾಗಬೇಕಾಗುತ್ತದೆ ಮತ್ತು ಸಾಲ ನೀಡುವಾಗ ವಿವೇಚನೆಯಿಂದ ನೀಡಬೇಕಾಗುತ್ತದೆ. ಏಕೆಂದರೆ, ನಂತರ ಪಶ್ಚಾತ್ತಾಪ ಪಡುವುದಕ್ಕಿಂತ ಮೊದಲು ಸುರಕ್ಷಿತವಾಗಿರುವುದೇ ಬ್ಯಾಂಕ್‌ ವಹಿವಾಟಿನ ಮೂಲಭೂತ ತರ್ಕ. ಐಬಿಸಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಸಾಲ ವಸೂಲಾತಿ ಪ್ರಮಾಣ ಒಟ್ಟು ಋಣಬಾಧ್ಯತೆಯ ೧೦% ದಿಂದ ೧೫೦% ವರೆಗೆ ಇದೆ.

ನಿಗದಿತ ಕಾಲಾವಧಿ ಮಿತಿಗೆ ಬದ್ಧವಾಗದಿರುವ ಅಸಮರ್ಥತೆ ಸಾಕಷ್ಟು ಜಟಿಲವಾಗಿಯೇ ಇದೆ. ಯಾವುದೇ ಹೊಸ ಕಾಯಿದೆಗಳಂತೆ ಐಬಿಸಿ ಕೂಡಾ ಇನ್ನೂ ಪ್ರಗತಿಯಲ್ಲಿರುವಂಥದು. ಹೀಗಾಗಿ, ಇನ್ನೂ ನಿರ್ದಿಷ್ಟವಾಗಿ ವ್ಯಾಖ್ಯಾನಿಸಲಾಗದ ಅಥವಾ ನಿರ್ದಿಷ್ಟವಾಗಿ ಇವೆಯೇ ಎಂಬುದನ್ನು ಖಚಿತಪಡಿಸಲಾಗದ ಎಷ್ಟೋ ವಿಷಯಗಳು ಇರುತ್ತವೆ. ಯಾವುದೇ ಕಾನೂನು ಸ್ಥಿರೀಕರಣಗೊಂಡು ಕೆಲಸ ಮಾಡಬೇಕೆಂದರೆ ೩ ರಿಂದ ೫ ವರ್ಷಗಳು ಬೇಕು. ಸರ್ವಾಧಿಕಾರದ ದೇಶಗಳಿಗಿಂತ ಕಾನೂನು ಪಾಲಿಸುವ ದೇಶಗಳಲ್ಲಿ, ನ್ಯಾಯಾಲಯಗಳ ಮೂಲಕ ಅಥವಾ ಶಾಸನ ಸಭೆಗಳ ಮೂಲಕ ವಿಷಯವೊಂದಕ್ಕೆ ಪರಿಹಾರ ಕಂಡುಕೊಳ್ಳಲು ಹೆಚ್ಚು ಕಾಲ ಬೇಕಾಗುವುದು ಸಾಮಾನ್ಯ. ಯಾವುದೇ ವಿಷಯವಿರಲಿ, ಅದು ಹೀಗೇ ಆಗಬೇಕೆಂದು ದೇಶದ ಕಾರ್ಯಾಂಗ ವ್ಯವಸ್ಥೆಯೊಂದಕ್ಕೆ ಸರಳವಾಗಿ ಹೇಳಿಬಿಡುವುದು ನಿಯಮಗಳ ಪ್ರಕಾರ ನಡೆಯುವ ದೇಶಕ್ಕೆ ಕಾನೂನಾತ್ಮಕವಲ್ಲದ ವಿಷಯ. ಸಾಂವಿಧಾನಿಕ ಪರಿಹಾರಗಳನ್ನು ಪಡೆಯುವ ಹಕ್ಕು ಮೂಲಭೂತ ಹಕ್ಕಾಗಿದ್ದು, ಕಾರ್ಯಾಂಗದ ಕ್ರಮವೊಂದರಿಂದಾಗಿ ಈ ಹಕ್ಕಿಗೆ ಚ್ಯುತಿ ಬಂದಿದೆ ಎಂದು ಯಾರೇ ಭಾವಿಸಿದರೂ, ಅದನ್ನು ಪ್ರಶ್ನಿಸುವ ಹಕ್ಕನ್ನೂ ಇದು ಒಳಗೊಂಡಿರುತ್ತದೆ. ಐಬಿಸಿಯಲ್ಲಿರುವ ಗೋಜಲು ಏನೆಂದರೆ, ವಿಚಾರಣೆಯ ಹಂತದಲ್ಲಿರುವಾಗ, ಅದರಲ್ಲಿಯೂ ಕಾನೂನು ಅಥವಾ ಪದ್ಧತಿಯೊಂದಕ್ಕೆ ಸಂಬಂಧಿಸಿದ ವಿಷಯವಾಗಿದ್ದರೆ, ಯಾವುದೇ ಪಕ್ಷಗಾರನು ಉನ್ನತ ನ್ಯಾಯಾಲಯದ ಮೊರೆ ಹೋಗಬಹುದು. ಆಗ, ಉನ್ನತ ನ್ಯಾಯಾಲಯದಿಂದ ಇತ್ಯರ್ಥವಾಗುವವರೆಗೆ, ವಿಚಾರಣೆಯ ತಕ್ಷಣದ ಮುಂದೂಡಿಕೆಗೆ ಅದು ಕಾರಣವಾಗುತ್ತದೆ. ಐಬಿಸಿ ಅಡಿ ಇರುವ ಬಹುತೇಕ ಎಲ್ಲಾ ಪ್ರಮುಖ ಪ್ರಕರಣಗಳಲ್ಲಿ ವಿಳಂಬ ಉಂಟಾಗುತ್ತಿರುವುದು ಈ ಕಾರಣಕ್ಕಾಗಿ (ಉದಾಹರಣೆಗೆ, ಭೂಷಣ್‌ ಸ್ಟೀಲ್‌ ಮತ್ತು ಎಸ್ಸಾರ್‌ ಸ್ಟೀಲ್‌ ಪ್ರಕರಣ). ಅದಾಗ್ಯೂ, ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಲೇಬೇಕು. ಏಕೆಂದರೆ, ಇಂತಹ ಪ್ರಕರಣಗಳನ್ನು, ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಅವಧಿಯಲ್ಲಿ ಇತ್ಯರ್ಥಪಡಿಸಲು ಅದು ಪ್ರಯತ್ನಿಸಿದೆ. ಐಬಿಸಿಯನ್ನು ಕಾಡುವ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ, ವ್ಯಾಜ್ಯದಲ್ಲಿ ಸರ್ಕಾರದ ಎರಡು ಅಂಗಗಳು ಪರಸ್ಪರ ಎದುರಾಳಿಗಳಾಗಿದ್ದು, ಸಾಲ ಮರುಪಾವತಿಯಲ್ಲಿ ತಮಗೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಹಕ್ಕೊತ್ತಾಯ ಮಂಡಿಸಿದಾಗ. ಪ್ರಸ್ತುತ ಅಂಥದೊಂದು ಪ್ರಕರಣವಿದ್ದು, ಅಕ್ರಮ ಲೇವಾದೇವಿ ಆರೋಪವೊಂದರಲ್ಲಿ ಜಾರಿ ನಿರ್ದೇಶನಾಲಯವು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಐಬಿಸಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದರೆ, ಪರಿಚ್ಛೇದ ೫೩ರಡಿ ಬರುವ "ಸ್ವತ್ತು ವಿನಿಯೋಗ"ದಲ್ಲಿ ಸೂಚಿಸಲಾಗಿರುವ ಪ್ರಮಾಣವನ್ನು ಕಿಂಚಿತ್ತೂ ವಿಚಾರಿಸದೇ, ಶುಭ ನಂಬಿಕೆಯಿಂದ ಒಪ್ಪಿಕೊಳ್ಳುವುದು ಹಾಗೂ ಅದೇ ರೀತಿ ಕಾಯಿದೆಗೆ ಅಗತ್ಯ ತಿದ್ದುಪಡಿ ತಂದು ಎಲ್ಲಾ ಹಕ್ಕುದಾರರನ್ನು "ಕಾರ್ಯಶೀಲ ಸಾಲದಾರರು" ಎಂದು ಪರಿಗಣಿಸಬೇಕೇ ವಿನಾ ಬಾಕಿ ವಸೂಲಿಗಾಗಿ ತಾನೇ ಮೊದಲ ಹಕ್ಕುದಾರನಾಗಿ ಹಕ್ಕು ಸಾಧಿಸಲು ಮುಂದಾಗದೇ ಇರುವುದು ಅವಶ್ಯವಾಗಿದೆ. ಅಲ್ಲದೇ, ಇತ್ಯರ್ಥವಾಗಬೇಕಿರುವ ಕೆಲವು ಕಾನೂನು ಮತ್ತು ಪ್ರಕ್ರಿಯಾ ವಿಷಯಗಳಿವೆ. ಗುಂಪೊಂದರ ಹಲವಾರು ಋಣಬಾಧ್ಯತೆ ಪ್ರಕ್ರಿಯಾ ವಿಷಯಗಳನ್ನು ಇತ್ಯರ್ಥಪಡಿಸಲು ಯು.ಕೆ. ಸಿನ್ಹಾ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸುವ ವಿಷಯ ಶೀಘ್ರ ಅಂತಿಮವಾಗಲಿದೆ. ಇದು ಮತ್ತೊಂದು ಪ್ರಮುಖ ವಿಷಯವಾಗಿದ್ದು, ಇಂತಹ ಸುಮಾರು ೪೭ ಕಂಪನಿಗಳು ಹತ್ತಿರ ಹತ್ತಿರ ರೂ.೧ ಲಕ್ಷ ಕೋಟಿಗೂ ಹೆಚ್ಚು ಋಣಭಾರ ಹೊಂದಿವೆ.

ಹೆಚ್ಚುತ್ತಿರುವ ಪ್ರಕರಣಗಳನ್ನು ಸಾಕಷ್ಟು ಮೂಲಸೌಕರ್ಯಗಳಿಲ್ಲದೇ ಇತ್ಯರ್ಥಪಡಿಸಬೇಕಾದ ಒತ್ತಡದ ಸಮಸ್ಯೆಯಿಂದ ಐಬಿಸಿ ನರಳುತ್ತಿದೆ. ಸದ್ಯ ದೆಹಲಿಯಲ್ಲಿ, ಪ್ರಧಾನ ಪೀಠವಲ್ಲದೇ ೧೩ ವಿಭಾಗೀಯ ಪೀಠಗಳಿವೆ. ಕೇಂದ್ರ ಹಾಗೂ ಮುಖ್ಯವಾಗಿ ರಾಜ್ಯಗಳ ಬದ್ಧತೆಯ ಕೊರತೆಯಿಂದಾಗಿ ಮೂಲಸೌಕರ್ಯದಲ್ಲಿ ಕೊರತೆ ಉಂಟಾಗಿದೆ. ಬಹುತೇಕ ಪ್ರಕರಣಗಳಲ್ಲಿ, ಸಾಕಷ್ಟು ಭೌತಿಕ ಮತ್ತು ಮಾನವ ಮೂಲಸೌಕರ್ಯ ಸಂಪನ್ಮೂಲಗಳನ್ನು ಎನ್‌ಸಿಎಲ್‌ಟಿ ಹೊಂದಿಲ್ಲ. ಚಾಲ್ತಿಯಲ್ಲಿರುವ ಪ್ರಕರಣಗಳು ಹಾಗೂ ಪ್ರಮುಖವಾಗಿ, ಹೊಸ ಪ್ರಕರಣಗಳು ನ್ಯಾಯಾಲಯಕ್ಕೆ ಬರುತ್ತಿರುವ ಗತಿಯನ್ನು ಗಮನಿಸಿದರೆ, ಈ ಮೂಲಸೌಕರ್ಯಗಳು ಏನಕ್ಕೂ ಸಾಲವು ಎಂಬುದನ್ನು ಇತ್ತೀಚಿನ ಅಧ್ಯಯನ ವರದಿಗಳು ಬೆರಳೆತ್ತಿ ತೋರಿಸಿವೆ. ನ್ಯಾಯಾಲಯದಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಗತಿಯನ್ನು ಗಮನಿಸಿದರೆ ಹಾಗೂ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಿಕ್ಕೆ ೬೯ ಪೀಠಗಳಾದರೂ ಬೇಕು. ಇದನ್ನು ನೋಡಿದರೆ, ಕಾನೂನು ಪಾಲಿಸುವ ಮೂಲಕವೇ ಕರಾರಿನ ಪಾವಿತ್ರ್ಯತೆ ಮತ್ತು ವ್ಯಾಜ್ಯ ಇತ್ಯರ್ಥ ಬದ್ಧತೆ ಸಾಧ್ಯವಾಗುತ್ತದೆ ಹಾಗೂ ಆ ಮೂಲಕ ಸರಳವಾಗಿ ವ್ಯಾಪಾರ ಮಾಡುವ ಪರಿಕಲ್ಪನೆ ಸಾಧ್ಯ ಎಂಬ ವಿಷಯವನ್ನು ನಮ್ಮ ರಾಜ್ಯಗಳು ಅರ್ಥ ಮಾಡಿಕೊಂಡೇ ಇಲ್ಲ ಎಂದು ಅನಿಸುತ್ತದೆ. ದುರದೃಷ್ಟವಶಾತ್‌, ರಾಜ್ಯಗಳ ಪಾಲಿನ ಬದ್ಧತೆಯ ಕೊರತೆ ಕೇವಲ ಐಬಿಸಿಗೆ ಮಾತ್ರವಲ್ಲ, ಬಹುತೇಕ ಎಲ್ಲಾ ವಾಣಿಜ್ಯ ಪ್ರಕರಣಗಳಿಗೂ ವಿಸ್ತರಿಸಿದೆ. ೨೦೧೫ರ ವಾಣಿಜ್ಯ ನ್ಯಾಯಾಲಯಗಳ ಕಾಯ್ದೆಯ ಜಾರಿ ಮತ್ತು ಕೇಂದ್ರ ಸರ್ಕಾರದ ಹಲವಾರು ಅಧಿಸೂಚನೆಗಳ ಹೊರತಾಗಿಯೂ, ಬಹುತೇಕ ರಾಜ್ಯಗಳು ತಮ್ಮ ಜಿಲ್ಲೆಗಳಲ್ಲಿ ವಾಣಿಜ್ಯ ನ್ಯಾಯಾಲಯಗಳನ್ನು ಸ್ಥಾಪಿಸಿಯೇ ಇಲ್ಲ. ವಾಣಿಜ್ಯ ನ್ಯಾಯಾಲಗಳು ಸ್ಥಾಪನೆಯಾದ ಪ್ರಕರಣಗಳಲ್ಲಿ, ಕಾರ್ಯಾಂಗದ ನಿರ್ಲಕ್ಷ್ಯದಿಂದ ಮೂಲಸೌಕರ್ಯದ ಕೊರತೆಯಾಗಿ ಅವುಗಳ ಕಾರ್ಯಶೀಲತೆಯ ಮೇಲೆ ಪರಿಣಾಮವಾಗಿದೆ.

--------

ಈ ಕೆಳಗಿನವುಗಳನ್ನು ಬಾಕ್ಸ್‌ ಐಟಂ ಎಂದು ಪರಿಗಣಿಸಿ

(ಬಾಕ್ಸ್)‌

ಸಾಲ ಪ್ರಕ್ರಿಯೆ ಮತ್ತು ವಸೂಲಾತಿಯ ನಾಲ್ಕು ದಾರಿಗಳು

ಇವು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ: ಮಾರುಕಟ್ಟೆ ಮೌಲ್ಯ, ಸ್ವತ್ತು ಮೌಲ್ಯ, ಸಮಾಪನಾ ಮೌಲ್ಯ ಮತ್ತು ಸ್ವತ್ತು ರಕ್ಷಣಾ ಮೌಲ್ಯ

ಮಾರುಕಟ್ಟೆ ಮೌಲ್ಯ: ಸ್ವತ್ತುಗಳಿಗೆ ಮುಕ್ತ ಮಾರುಕಟ್ಟೆಯಲ್ಲಿರುವ ದರ ಇದಾಗಿದ್ದು, ಸಾಮಾನ್ಯವಾಗಿ ಸ್ವತ್ತಿಗೆ ಸಿಗಬಹುದಾದ ಅತಿ ಹೆಚ್ಚಿನ ಮೌಲ್ಯವಾಗಿರುತ್ತದೆ.

ಸ್ವತ್ತು ಮೌಲ್ಯ: ಅಢಾವೆ ಪತ್ರಿಕೆಯಲ್ಲಿ (ಸಾಮಾನ್ಯವಾಗಿ ಸ್ವತ್ತುಗಳನ್ನು ಹೊಂದಿದಾಗಿನ ಅವುಗಳ ಮೌಲ್ಯ) ಘೋಷಣೆಯಾಗಿರುವ ಸ್ವತ್ತುಗಳ ಮೌಲ್ಯ. ಅದರಲ್ಲಿಯೂ ನಷ್ಟಪೀಡಿತ ಕಂಪನಿಗಳಲ್ಲಿ ಸಾಮಾನ್ಯವಾಗಿ ಇದು ಅಧಿಕೃತವಾಗಿ ಹೆಚ್ಚಿರುತ್ತದೆ ಹಾಗೂ ಮಾರುಕಟ್ಟೆ ಮೌಲ್ಯಕ್ಕಿಂತ ಜಾಸ್ತಿಯಾಗಿರುತ್ತದೆ.

ಸಮಾಪನಾ ಮೌಲ್ಯ: ವಹಿವಾಟು ಮುಚ್ಚಬೇಕಾಗಿದ್ದಾಗ ಮತ್ತು ಸ್ವತ್ತುಗಳನ್ನು ಮಾರಬೇಕಿದ್ದಾಗ ಭೌತಿಕ ಸ್ವತ್ತುಗಳ ಒಟ್ಟು ಮೌಲ್ಯ. ಇದು ಅವ್ಯಕ್ತ ಸ್ವತ್ತುಗಳನ್ನು ಒಳಗೊಂಡಿರುವುದಿಲ್ಲ.

ಸ್ವತ್ತು ರಕ್ಷಣಾ ಮೌಲ್ಯ: ಉಪಯುಕ್ತತೆ ಮೌಲ್ಯದ ನಂತರ ಉಳಿಯುವ ಸ್ವತ್ತಿನ ಮೌಲ್ಯ - ಸಾಮಾನ್ಯವಾಗಿ ಗುಜರಿ ಎಂದು ಮಾರಾಟವಾಗುವಂಥದು.

--------

(ಬಾಕ್ಸ್)‌

ಮೂರು ವರ್ಷಗಳ ಅವಧಿಯಲ್ಲಿ ಕಾನೂನಿನ ಪ್ರಮುಖ ಅಂಶಗಳ ಸಾರಾಂಶ

ಹಿಂದಿನ ಪ್ರವರ್ತಕರು ಐಬಿಸಿ ಅಡಿ ಹರಾಜಿನಲ್ಲಿ ಸ್ವತ್ತುಗಳನ್ನು ಹೊಂದಲು ಮುಂದಾಗಬಲ್ಲರೆ?

ಕ್ರಿಯಾಶೀಲ ಸಾಲದಾತರು ವರ್ಸಸ್‌ ಸಾಲದಾತರ ಸಮಿತಿಗೆ ಸಂಬಂಧಿಸಿದ ಪ್ರಾರಂಭಿಕ ವಿಷಯಗಳು

ಸರಕುಗಳು ಮತ್ತು ಸೇವೆಗಳನ್ನು ಪಡೆಯುವವರು, ಕ್ರಿಯಾಶೀಲ ಸಾಲದಾತರು?

ಇತರ ವಿಭಾಗಗಳ ಸಾಲದಾತರರಿಗೆ ಅನ್ವಯವಾಗುವ ನೀತಿಯ ಜೊತೆಗೆ ಸಾಲದಾತರ ವಿಭಾಗ ಮತ್ತು ಸಮಾಪನೆಯಲ್ಲಿ ಅವರ ಪಾಲು

ದಿವಾಳಿಯಾಗುವ ಯೋಜನೆಗಳಲ್ಲಿ ಸ್ಥಳೀಯ ಖರೀದಿದಾರರ ಸ್ಥಾನ (ಕೆಲವೇ ಜನರ ಬದಲು ಅವರ ಸಂಖ್ಯೆ ಸಾವಿರಾರು ಆಗಬಹುದು)

ಲಾಭಾಂಶ ಅಥವಾ ಸಲ್ಲಬಹುದಾದ ಪಾಲಿಗೆ ಸಂಬಂಧಿಸಿದಂತೆ ಸಾಲದಾತರ ಸಮಿತಿಯ ಪಾತ್ರ

ಐಬಿಸಿ ಮುಂದಿರುವ ಕಂಪನಿಯ ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯವು ಜಪ್ತು ಮಾಡಬಹುದೆ?

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.