ಭರೂಚ್(ಗುಜರಾತ್): ಮೃತಪಟ್ಟ ತಾಯಿಯನ್ನ ಮೂರು ವರ್ಷದ ಮಗಳು ನಿರಂತರವಾಗಿ ಎದ್ದೇಳಿಸಲು ಪಯತ್ನಿಸುತ್ತಿದ್ದ ಹೃದಯ ಕದಡುವ ದೃಶ್ಯಕ್ಕೆ ಗುಜರಾತ್ನ ಭರೂಚ್ನಲ್ಲಿರುವ ಸರ್ಕಾರಿ ಆಸ್ಪತ್ರೆ ಸಾಕ್ಷಿಯಾಗಿತ್ತು.
ತಾಯಿಯ ಅನಾರೋಗ್ಯದ ಬಗ್ಗೆ ತಿಳಿಯದ ಮಗು, ಆಕೆ ಕೊನೆಯುಸಿರೆಳೆದ ನಂತರವೂ ಅವಳ ಪಕ್ಕದಲ್ಲಿ ಹರ್ಷಚಿತ್ತದಿಂದ ಆಡುತ್ತಿದ್ದಳು. ತಾಯಿ ಮೃತಪಟ್ಟಿರೋದಾಗಿ ವೈದ್ಯರು ಘೋಷಿಸಿದ್ದಾರೆಂದು ತಿಳಿಯದೆ ಆಕೆಯನ್ನು ಎಚ್ಚರಗೊಳಿಸುವ ಪ್ರಯತ್ನ ಮುಂದುವರೆಸಿದೆ.
ಮೂಲಗಳ ಪ್ರಕಾರ, ಮಗು ತನ್ನ ತಾಯಿಯನ್ನು ಶಾಶ್ವತ ನಿದ್ರೆಯಿಂದ ಎಚ್ಚರಗೊಳಿಸಲು ಪ್ರಯತ್ನ ಮಾಡುವಾಗ ಆಸ್ಪತ್ರೆಯ ಸಿಬ್ಬಂದಿ, ರೋಗಿಗಳು ಮತ್ತು ಇತರ ಸಂಬಂಧಿಕರು ಸಹ ಹಾಜರಿದ್ದರು.
ಈ ಹಿಂದೆ ತನ್ನ ತಂದೆಯನ್ನ ಕಳೆದುಕೊಂಡಿದ್ದ ಮಗು ಇದೀಗ ಆಕೆಯ ತಾಯಿನ್ನೂ ಕಳೆದುಕೊಂಡಿದ್ದಾಳೆ. ದುರಂತ ಎಂದರೆ ಇವರ ಸಂಬಂಧಿಕರು ಕೂಡ ಈ ಮಗು ಮತ್ತು ತಾಯಿಯ ಸಹಾಯಕ್ಕೆ ಬಂದಿಲ್ಲ. ಮಗುವನ್ನ ಅನಾಥಾಶ್ರಮಕ್ಕೆ ಕಳುಹಿಸಬೇಕೆಂದು ಸಮಾಜ ಸೇವಕರೊಬ್ಬರು ಹೇಳಿದ್ದಾರೆ.