ETV Bharat / bharat

ಮದುವೆಗೆ ತೆರಳುತ್ತಿದ್ದಾಗ ಅಪಘಾತ: ಮಕ್ಕಳು ಸೇರಿ ಕುಟುಂಬದ ಮೂವರ ಸಾವು

ವಿವಾಹ ಸಮಾರಂಭಕ್ಕೆ ಹೋಗುತ್ತಿದ್ದ ಟ್ರ್ಯಾಕ್ಟರ್​​ಗೆ ಟ್ರಕ್​ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.

Three of family killed in road accident in UP
ಅಪಘಾತ
author img

By

Published : Jun 13, 2020, 2:15 PM IST

ಹಾರ್ಡೊಯ್​ (ಉತ್ತರ ಪ್ರದೇಶ): ಸಂಬಂಧಿಕರ ಮದುವೆಗೆ ಹೋಗುತ್ತಿದ್ದಾಗ ಟ್ರ್ಯಾಕ್ಟರ್​​​ಗೆ ವೇಗವಾಗಿ ಬರುತ್ತಿದ್ದ ಟ್ರಕ್​​​ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಿಲ್​​ಗ್ರಾಮ್-ಕನೌಜ್​​​​ ಹೆದ್ದಾರಿಯ ಪಾರ್ಸೋಲಾ ಗ್ರಾಮದಲ್ಲಿ ಶುಕ್ರವಾರ ಈ ಅಪಘಾತ ಸಂಭವಿಸಿದೆ. ವೀರ್ ಸಿಂಗ್ ಮತ್ತು ನಾಲ್ವರು ಕುಟುಂಬ ಸದಸ್ಯರು ಸಂಬಂಧಿಕರ ವಿವಾಹದಲ್ಲಿ ಪಾಲ್ಗೊಳ್ಳಲು ಮಲೆರಾಕ್ಕೆ ತೆರಳುತ್ತಿದ್ದರು. ಅಲ್ಲದೇ, ರುಡಾಮೌ ಗ್ರಾಮದ ಇಬ್ಬರು ಪುರುಷರನ್ನು ಟ್ರ್ಯಾಕ್ಟರ್‌ನಲ್ಲಿ ಹತ್ತಿಸಿಕೊಳ್ಳಲಾಯಿತು. ಅದಾದ ಕೆಲವೇ ಕ್ಷಣಗಳಲ್ಲಿ ಅಪಘಾತ ಸಂಭವಿಸಿದೆ.

ಗಾಯಗೊಂಡ ಜನರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ರೂಬಿ ಸಿಂಗ್ (34), ಮತ್ತು ಅವರ ಪುತ್ರಿಯರು ಗೌತಮಿ (13) ಮತ್ತು ಅಂಜಲಿ (4) ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು. ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದರು.

ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.