ಕೋಲ್ಕತ್ತಾ: ಈಡನ್ ಗಾರ್ಡನ್ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ-ಬಾಂಗ್ಲಾದೇಶ ತಂಡಗಳ ನಡುವೆ ಡೇ-ನೈಟ್ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಪಂದ್ಯ ವೀಕ್ಷಣೆ ಮಾಡಲು ಬಂದು ಬೆಟ್ಟಿಂಗ್ ನಡೆಸುತ್ತಿದ್ದ ಮೂವರು ಆರೋಪಿಗಳ ಬಂಧನ ಮಾಡಲಾಗಿದೆ.
ಲೈವ್ ಪಂದ್ಯ ವೀಕ್ಷಣೆ ಮಾಡುವುದರ ಜತೆಗೆ ಆನ್ಲೈನ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಇವರು ಮೈದಾನದ ಎಫ್1 ಹಾಗೂ G1 ಬ್ಲಾಕ್ಗಳಲ್ಲಿ ಕುಳಿತುಕೊಂಡು ಈ ಕೃತ್ಯವೆಸಗುತ್ತಿದ್ದರು ಎಂದು ತಿಳಿದು ಬಂದಿದ್ದು, ಇವರ ಬಂಧನ ಮಾಡಿದ ಬಳಿಕ ನೀಡಿದ ಮಾಹಿತಿ ಆಧಾರದ ಮೇಲೆ ಮತ್ತಿಬ್ಬರ ಬಂಧನ ಮಾಡಲಾಗಿದೆ.
ಬಂಧಿತರನ್ನ ಶಂಭು ದಯಾಲ್(40),ಮುಕೇಶ್ ಗಾರೆ(46),ಚೇತನ್ ಶರ್ಮಾ(31),ಅಭಿಷೇಕ್(35) ಹಾಗೂ ಆಯೂಬ್ ಅಲಿ(44) ಎಂದು ತಿಳಿದು ಬಂದಿದೆ. ಬಂಧಿತರಿಂದ ಆರು ಮೊಬೈಲ್ ಫೋನ್,ಲ್ಯಾಪ್ಟಾಪ್ ಹಾಗೂ 1.4ಲಕ್ಷ ರೂ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ.