ಗಿರಿದಿಹ್ (ಜಾರ್ಖಂಡ್) : ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಮೃತರನ್ನು ಬಾಗೋದರ್ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಧಿದಾಂಡ್‌ನ ರೈತ ತಿಲಕ್ ಶಾ ಮತ್ತು ಬುಖಾರಿದಿಹ್ನ 16 ವರ್ಷದ ಬಾಲಕ ಕುಂಜಲಾಲ್ ಕುಮಾರ್ ಹಾಗೂ ಸಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ರತ್ನದಿಹ್ ಗ್ರಾಮದ ನಿವಾಸಿ 50 ವರ್ಷದ ಕಿಶೋರ್ ಕುಶ್ವಾಹ ಎಂದು ಗುರುತಿಸಲಾಗಿದೆ.
ಇತ್ತೀಚೆಗಷ್ಟೇ ಬಿಹಾರದಲ್ಲಿ ಒಂದೇ ದಿನ 83 ಮಂದಿ ಸಿಡಿಲು - ಗುಡುಗಿಗೆ ಬಲಿಯಾಗಿದ್ದರು. ಇನ್ನು ಉತ್ತರಪ್ರದೇಶದಲ್ಲೂ ಕೇವಲ 24 ಗಂಟೆಯಲ್ಲಿ 24 ಮಂದಿ ಮೃತಪಟ್ಟಿದ್ದರು.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನೂರಾರು ಜನ ಸಿಡಿಲು ಗುಡುಗಿಗೆ ಬಲಿಯಾಗಿದ್ದರು. ವರ್ಷದಿಂದ ವರ್ಷಕ್ಕೆ ಈ ಸಿಡಿಲಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಳವಾಗುತ್ತಲೇ ಸಾಗಿದೆ.