ETV Bharat / bharat

ಪ್ರತಿಪಕ್ಷಗಳ ಜತೆ ಸಂಪರ್ಕದಲ್ಲಿ ಇರುವವರು ಟಿಎಂಸಿ ತೊರೆಯಬಹುದು: ಮಮತಾ ಖಡಕ್​ ವಾರ್ನಿಂಗ್​ - ಟಿಎಂಸಿ ಪಾರ್ಟಿ ಸಭೆ

ಪಕ್ಷ ವಿರೋಧಿ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಪ್ರತಿಪಕ್ಷಗಳ ಜೊತೆ ಸಂಪರ್ಕದಲ್ಲಿ ಇರುವವರು ಪಕ್ಷವನ್ನು ತೊರೆಯಲು ಮುಕ್ತರಾಗಿದ್ದಾರೆ. ತೃಣಮೂಲ ಕಾಂಗ್ರೆಸ್‌ನಲ್ಲಿ ಇರುವವರು ಪಕ್ಷದ ಸಿದ್ಧಾಂತ ಮತ್ತು ನಿಯಮಗಳನ್ನು ಪಾಲಿಸಬೇಕು. ಯಾರೂ ಪಕ್ಷಕ್ಕಿಂತ ಮೇಲಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ತೃಣಮೂಲ ನಾಯಕರಿಗೆ ವಾರ್ನಿಂಗ್​ ಕೊಟ್ಟಿದ್ದಾರೆ.

Mamata
ಮಮತಾ ಬ್ಯಾನರ್ಜಿ
author img

By

Published : Dec 4, 2020, 10:40 PM IST

ಕೋಲ್ಕತ್ತಾ: ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವವರಿಗೆ ಕಠಿಣ ಎಚ್ಚರಿಕೆ ನೀಡಿದ್ದು, 'ಪ್ರತಿಪಕ್ಷಗಳೊಂದಿಗೆ ಸಂಪರ್ಕದಲ್ಲಿ ಇರುವ ತೃಣಮೂಲ ಕಾಂಗ್ರೆಸ್ ನಾಯಕರು ರಾಜ್ಯದಲ್ಲಿನ ಆಡಳಿತ ಪಕ್ಷ ತೊರೆಯಲು ಮುಕ್ತರಾಗಿದ್ದಾರೆ' ಎಂದು ಹೇಳಿದರು.

ತಮ್ಮ ಪಕ್ಷದ ಮುಖ್ಯಸ್ಥರು ಯಾರ ಹೆಸರನ್ನೂ ಉಲ್ಲೇಖಿಸದೇ ಅತೃಪ್ತರ ಹೊರಹೋಗುವಂತೆ ಹಸಿರು ನಿಶಾನೆ ತೋರಿದ್ದಾರೆ. ಪಕ್ಷದಲ್ಲಿ ಮಮತಾ ಅವರ ನಡೆಯ ಬಗ್ಗೆ ಅಸಮಾಧಾನಗೊಂಡ ಸುವೇಂದು ಅಧಿಕಾರಿ ಇತ್ತೀಚೆಗೆ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಜೊತೆಗೆ ಪಕ್ಷದ ನಾಯಕರ ವಿರುದ್ಧ ಕೆಲವು ಶಾಸಕರು ಬಹಿರಂಗವಾಗಿ ಮಾತನಾಡಿದ್ದಾರೆ.

ಹೈದರಾಬಾದ್‌ ಪಾಲಿಕೆ ಫಲಿತಾಂಶ; 'ಭಾಗ್ಯ'ದ ಹೊಸ್ತಿಲಲ್ಲಿ 'ಕಮಲ'... ಅಧಿಕಾರದತ್ತ TRS-MIM

ಓರ್ವ ನಾಯಕ ಪಕ್ಷವನ್ನು ತೊರೆದರೆ, ಅಂತಹ ಲಕ್ಷ ನಾಯಕರನ್ನು ಸೃಷ್ಟಿಸಬಹುದು ಎಂದು ಸಿಎಂ ಬ್ಯಾನರ್ಜಿ ಅಸಮಾಧಾನ ಸಹ ಹೊರಹಾಕಿದ್ದಾರೆ.

ಹೊಸ ಕೃಷಿ ಕಾನೂನುಗಳ ವಿರುದ್ಧ ಉತ್ತರ ಭಾರತದ ರೈತರು ನಡೆಸುತ್ತಿರುವ ಆಂದೋಲನಕ್ಕೆ ಬ್ಯಾನರ್ಜಿ ತಮ್ಮ ಬೆಂಬಲವನ್ನು ನೀಡಿದ್ದು, ಡಿಸೆಂಬರ್‌ 8ರಂದು ಕೋಲ್ಕತ್ತಾದ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಮೂರು ದಿನಗಳ ಕಾಲ ಧರಣಿ ನಡೆಸುವಂತೆ ತೃಣಮೂಲ ಕಾಂಗ್ರೆಸ್ ರೈತರ ವಿಭಾಗಕ್ಕೆ ಸೂಚಿಸಿದರು.

ಪಕ್ಷ ವಿರೋಧಿ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಪ್ರತಿಪಕ್ಷಗಳ ಜೊತೆ ಸಂಪರ್ಕದಲ್ಲಿ ಇರುವವರು ಪಕ್ಷವನ್ನು ತೊರೆಯಲು ಮುಕ್ತರಾಗಿದ್ದಾರೆ. ತೃಣಮೂಲ ಕಾಂಗ್ರೆಸ್‌ನಲ್ಲಿ ಇರುವವರು ಪಕ್ಷದ ಸಿದ್ಧಾಂತ ಮತ್ತು ನಿಯಮಗಳನ್ನು ಪಾಲಿಸಬೇಕು. ಪಕ್ಷಕ್ಕಿಂತ ಯಾರೂ ಮೇಲಲ್ಲ ಎಂದು ಬ್ಯಾನರ್ಜಿ ತೃಣಮೂಲ ನಾಯಕರಿಗೆ ನೇರ ಎಚ್ಚರಿಕೆ ರವಾನೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.