ನವದೆಹಲಿ: ಕೊರೊನಾ ದಿಂದ ರಕ್ಷಣೆ ಹೊಂದಬೇಕಾದ್ರೆ ಪ್ರಸ್ತುತ ಮಾಸ್ಕ್ ಬೇಕೇ ಬೇಕು. ಆದ್ರೆ ಮಾಸ್ಕ್ ಧರಿಸಿ ಮಾತನಾಡಿದರೆ ನಮ್ಮ ಮುಂದೆ ಇರುವವರಿಗೆ ನಮ್ಮ ಲಿಪ್ ಸಿಂಕಿಂಗ್ ಗೊತ್ತಾಗುವುದಿಲ್ಲ. ನಾವು ಕಡಿಮೆ ಧ್ವನಿಯಲ್ಲಿ ಮಾತನಾಡಿದರೆ ಅಥವಾ ನಕ್ಕರೆ ಕೆಲವೊಮ್ಮೆ ಗೊತ್ತಾಗುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಓರ್ವ ಫ್ರೋಗ್ರಾಮರ್ ಆತ್ಯಾಧುನಿಕ ಮಾಸ್ಕ್‌ವೊಂದನ್ನು ತಯಾರಿಸಿದ್ದಾನೆ.
- — Tyler Glaiel (@TylerGlaiel) May 25, 2020 " class="align-text-top noRightClick twitterSection" data="
— Tyler Glaiel (@TylerGlaiel) May 25, 2020
">— Tyler Glaiel (@TylerGlaiel) May 25, 2020
ಈ ಮಾಸ್ಕ್‌ಅನ್ನು ಧರಿಸಿದಾಗ ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಟೆಕಿ ಟೈಲರ್ ಗ್ಲೇಯೆಲ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಾತನಾಡುವಾಗ, ನಕ್ಕಾಗ ನಮ್ಮ ಲಿಪ್ ಸಿಂಕಿಂಗ್ ಅನ್ನು ಅನುಕರಿಸಿ ಮಾಸ್ಕ್‌ನಲ್ಲಿ ಎಲ್‌ಇಡಿ ಲೈಟ್‌ಗಳು ಬೆಳಗುವಂತೆ ಮಾಡಿದ್ದಾರೆ. ಇದು ಮುಖದಲ್ಲಿನ ಭಾವಗಳನ್ನು ಪ್ರದರ್ಶಿಸುತ್ತದೆ. ಈ ಲೈಟ್‌ಗಳಿಗೆ ಬೇಕಾದ ವಿದ್ಯುತ್ ಪೂರೈಕೆಗಾಗಿ ಮಾಸ್ಕ್‌ನಲ್ಲೇ ಸಣ್ಣ ಬ್ಯಾಟರಿ ಅಳವಡಿಸಿದ್ದಾರೆ. ಇದನ್ನು ಯಾರು ಬೇಕಾದರೂ ತಯಾರಿಸಿಕೊಳ್ಳುವಂತಹ ಸುಲಭದ ವಿಧಾನವೂ ಆಗಿದೆ ಎನ್ನುತ್ತಾರೆ ಗ್ಲೇಯೆಲ್.