ನವದೆಹಲಿ: ಇಂದಿರಾ ಗಾಂಧಿಯವರ ಕಾಲದಿಂದಲೂ ಕಾಂಗ್ರೆಸ್ನ ವಿಚಾರಗಳು ಬದಲಾಗಿಲ್ಲ. ಇದು ಅನಾದಿ ಕಾಲದಿಂದಲೂ ನಡೆಯುತ್ತಿದೆ. ಮೊದಲು ಅವರು ಕಡ್ಡಿಯನ್ನು ಗುಡ್ಡ ಮಾಡಿ ನಂತರ ಗಾಂಧಿ ಕುಟುಂಬವನ್ನು ಮೀರಿ ಕಾಂಗ್ರೆಸ್ಗೆ ಭವಿಷ್ಯವಿಲ್ಲ ಎಂದು ಗೊಂದಲ ಎಬ್ಬಿಸುತ್ತಾರೆ. ಗಾಂಧಿ ಕುಟುಂಬದ ಸದಸ್ಯರನ್ನು ದೇವರುಗಳೆಂದು ಹೊಗಳು ಭಟರ ಮೂಲಕ ಆರಾಧಿಸಲಾಗುತ್ತದೆ ಮತ್ತು ಇಡೀ ಕಾಂಗ್ರೆಸ್ ಪಕ್ಷವನ್ನು ಅವರ ಭಕ್ತರೆಂದು ಪ್ರತಿಬಿಂಬಿಸಲಾಗಿದೆ. ಪ್ರಸ್ತುತ ಕಾಂಗ್ರೆಸ್‌ನಲ್ಲಿ ಈಗ ನಡೆಯುತ್ತಿರುವ ವಿದ್ಯಮಾನ ಇತಿಹಾಸ ಪುನರಾವರ್ತನೆಗೊಂಡಂತಾಗಿದೆ.
ಕಾಂಗ್ರೆಸ್ ಗಾಂಧಿ ಕುಟುಂಬದ ಯಾರನ್ನಾದರೂ ಮಾತ್ರ ಕಾಂಗ್ರೆಸ್ ತನ್ನ ನಾಯಕನಾಗಿ ಸ್ವೀಕರಿಸಬಲ್ಲದು ಎಂಬುದು ಸಾಬೀತಾದ ಸತ್ಯ, ಮತ್ತು ಬೇರೆ ಯಾರೂ ಸ್ವೀಕಾರಾರ್ಹರಲ್ಲ. ಸೋನಿಯಾ ಗಾಂಧಿಯಲ್ಲದಿದ್ದರೆ, ರಾಹುಲ್ ಗಾಂಧಿ, ಇಲ್ಲದಿದ್ದರೆ ಪ್ರಿಯಾಂಕಾ ಗಾಂಧಿ. ಸದ್ಯ ಪ್ರಿಯಾಂಕಾಗಾಂದಿ ಮೀಸಲು ಪಟ್ಟಿಯಲ್ಲಿ ಇದ್ದಾರೆ.
ಶ್ರೀ ರಾಮ ಇಲ್ಲದೆ ಜಗತ್ತು ಚಲಿಸಲು ಸಾಧ್ಯವಿಲ್ಲ ಮತ್ತು ಹನುಮಾನ್ ಇಲ್ಲದೆ ಶ್ರೀ ರಾಮ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬ ಹಳೆಯ ನಾಣ್ನುಡಿ. ಸ್ವತಂತ್ರ ಭಾರತದಲ್ಲಿ ದೀರ್ಘಕಾಲ ಅಧಿಕಾರದಲ್ಲಿದ್ದ 135 ವರ್ಷಗಳ ಹಳೆಯ ಕಾಂಗ್ರೆಸ್ ಪಕ್ಷಕ್ಕೂ ಈ ಸತ್ಯ ಅನ್ವಯಿಸುತ್ತದೆ. ಗಾಂಧಿ ಕುಟುಂಬದ ಸದಸ್ಯರಿಲ್ಲದೆ ಕಾಂಗ್ರೆಸ್ ಪಕ್ಷವನ್ನು ಯೋಚಿಸಲೂ ಸಾಧ್ಯವಿಲ್ಲ ಮತ್ತು ಗಾಂಧಿ ಕುಟುಂಬವು ಅರ್ಧ ಡಜನ್ ವಿಶ್ವಾಸಾರ್ಹ ವ್ಯವಸ್ಥಾಪಕರ ಜಿ ಹುಜೂರ್ ಇಲ್ಲದೆ ಯಾವಕಾರ್ಯವನ್ನ ಮಾಡವ ಯೋಚನೆ ಬರುವಿದಿಲ್ಲ. ಅವರಿಗೆ ನೋವುಂಟು ಮಡುವವುದೂ ಗೊತ್ತು ಮತ್ತು ನಂತರ ಸೂಕ್ತ ಮದ್ದನ್ನು ನೋಡಲೂ ಗೊತ್ತು. ಮಾಧ್ಯಮದ ಭಾಷೆಯಲ್ಲಿ, ಹೇಳುವುದಾದರೆ ಅವರನ್ನು ಹೊಗಳು ಭಟರು. ಇವರು ನಾಯಕತ್ವಕ್ಕಾಗಿ ಗುಂಪನ್ನು ಒಗ್ಗೂಡಿಸುವ, ಘೋಷಣೆಗಳನ್ನು ಕೀಗುವ ಜನರನ್ನು ಒಟ್ಟಾಗಿಸುವ ಮೂಲಕ ಸಲಹೆಗಳನ್ನು ನೀಡುವ, ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ನಾಯಕತ್ವವನ್ನು ಒಂದಾಗೊಸುವ ನಿಜವಾದ ಹೈಕಮಾಂಡ್ ಅಗಿದ್ದಾರೆ.
ಇಂದಿರಾ ಗಾಂಧಿಯವರ ಕಾಲದಲ್ಲಿಯೂ ಈ ಸಂಸ್ಕೃತಿ ಕಾಂಗ್ರೆಸ್‌ನಲ್ಲಿ ಜೀವಂತವಾಗಿತ್ತು, ಆದರೆ ಒಂದೇ ವ್ಯತ್ಯಾಸವೆಂದರೆ ಅವರು ಇಡೀ ದೇಶದ ನೆಲದ ವಾಸ್ತವತೆಗಳ ಬಗ್ಗೆ ಸ್ವತಃ ತಿಳಿದಿದ್ದರು. ಪಕ್ಷದ ಎಲ್ಲರ ಪ್ರಾಮುಖ್ಯತೆ ಮತ್ತು ಉಪಯುಕ್ತತೆಯನ್ನು ಅವರಿಗೆ ಗೊತ್ತಿತ್ತು. ಅವರಿಗೆ ಆಯಾ ರಾಜ್ಯಗಳಲ್ಲಿ ಬಲವಾದ ಬೆಂಬಲವಿರುವಜ್ಯ ಬಲಿಷ್ಟ ರಾಜಕೀಯ ನಾಯಕರ ಬೆಂಬಲವೂ ಇತ್ತು. ಆ ನಾಯಕರನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಚಾಕಚಕ್ಯತೆಯೂ ಇಂದಿರಾ ಗಾಂಧಿಯವರಿಗೆ ತಿಳಿದಿತ್ತು. ಅವರು ಈ ವಿಷಯಗಳ ಬಗ್ಗೆ ಮಾತ್ರವಲ್ಲದೆ ಅವರ ಧನಾತ್ಮಕ ಹಾಗೂ ಋಣಾತ್ಮಕ ವಿಚಾರಗಳ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಹೊಂದಿದ್ದರು. ಅವರು ರಾಜಕೀಯದ ಒಳಸುಳಿವು ಮತ್ತು ಜನರ ನಾಡಿಮಿತವನ್ನು ಹತ್ತಿರದಿಂದ ಗಮನಿಸುತ್ತಿದ್ದರು. ಆದ್ದರಿಂದ, ಪಕ್ಷದೊಳಗಿನ ಎಲ್ಲಾ ಸವಾಲುಗಳನ್ನು ಎದುರಿಸುವಲ್ಲಿ ಅವರು ಪ್ರವೀಣರಾಗಿದ್ದರು ಮತ್ತು ರಾಜಕೀಯ ಕ್ಷೇತ್ರದಲ್ಲೂ ಹೇಗೆ ಸ್ಪರ್ಧಿಸಬೇಕೆಂದು ತಿಳಿದಿದ್ದರು.
ಇಂದಿರಾ ಗಾಂಧಿಯವರ ಪ್ರಬುದ್ಧತೆ ಮತ್ತು ರಾಜಕೀಯ ಚತುರತೆಯನ್ನು ನಾವು ಸೋನಿಯಾ ಗಾಂಧಿಯಿಂದ ನಿರೀಕ್ಷಿಸಲು ಸಾಧ್ಯವಿಲ್ಲ, ಅದಕ್ಕಾಗಿಯೇ ಆಕೆಗೆ ಸಹಾಯ ಮಾಡಲು ಹೊಗಳು ಭಟರ ಅಗತ್ಯವಿದೆ. ತನ್ನ ಎಲ್ಲಾ ನಿರ್ಧಾರಗಳಿಗಾಗಿ ಸೋನೊಯಾ ಗಾಂಧಿ ಅವರ ಮೇಲೆ ಅವಲಂಬಿತರಾಗಿದ್ದಾರೆ. ಇದೆಲ್ಲವೂ ಪಕ್ಷದಲ್ಲಿ ಅವರ ಪ್ರಭಾವವನ್ನು ಕಾಪಾಡಿಕೊಳ್ಳಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಆದರೆ ಇದು ಭಾರತದ ಹಳೆಯ ಪಕ್ಷವಾಗಿರುವ ಕಾಂಗ್ರೆಸ್ ಗೆ ದೊಡ್ಡ ಹಾನಿಯನ್ನುಂಟು ಮಾಡಿದೆ.
ಕಳೆದ ಎರಡು ದಶಕಗಳ ಭಾರತೀಯ ರಾಜಕಾರಣದಲ್ಲಿ ಕಾಂಗ್ರೆಸ್‌ನಲ್ಲಿನ ‘ಜಿ ಹುಜೂರ್' ಎನ್ನುವ ಗುಂಪಿಗೆ ಒಳ್ಳೆಯ ಕಾಲ ವಿತ್ತು. ಯುಪಿಎ ನೇತೃತ್ವದ ಕೇಂದ್ರ ಸರ್ಕಾರದ ಹತ್ತೂ ವರ್ಷಗಳು ಭ್ರಮಾ ಪ್ರಭಾವಳಿಯನ್ನು ಕಾಪಾಡಿಕೊಂಡು ಬಂದರು. ಹೊಣೆಗಾರಿಕೆಯನ್ನು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಮಾತ್ರ ಸಿಮಿತ ಗೊಳಿಸಲಾಗಿತ್ತು. ಆದರೆ ತೆರೆಮರೆಯಲ್ಲಿ ಕಾಂಗ್ರೆಸ್ ನ ಹೈಕಮಾಂಡ್ ನ ರಾಜಕೀಯ ಆಟ ಸಕ್ರಿಯವಾಗಿತ್ತು. ಕಾಂಗ್ರೆಸ್ ಎಂಬ ಈ ಹಡಗು ಈಗ ಏಕೆ ಮುಳುಗುತ್ತಿದೆ ಎಂಬುದನ್ನು ನೀವು ಸುಲಭವಾಗಿ ಅರ್ಥಮಾಡಿಕೊಳ್ಳಲು ಕಾಂಗ್ರೆಸ್ಸಿನ ಈ ಸಂಕ್ಷಿಪ್ತ ಇತಿಹಾಸವನ್ನು ಇಲ್ಲಿ ಪುನರಾವರ್ತಿಸಲಾಗಿದೆ. ರಾಜಕೀಯ ಸಮುದ್ರದ ಅಲೆಯ ವಿರುದ್ಧ ಈ ಹಡಗು ಏಕೆ ಮೇಲೆ ಕೆಳಗೆ ಹೋಗುತ್ತಿದೆ? ಕಾಂಗ್ರೆಸ್ ಎಂಬ ಈ ಹಡಗು ನರೇಂದ್ರ ಮೋದಿಯವರನ್ನು ಮತ್ತು ಅವರಿಂದ ಉಂಟಾದ ರಾಜಕೀಯ ಚಂಡಮಾರುತವನ್ನು ಎದುರಿಸಲು ಏಕೆ ಸಾಧ್ಯವಾಗುತ್ತಿಲ್ಲ? ತನ್ನ ಸುತ್ತಲೂ ಬಿಜೆಪಿಯ ಹೆಣೆದ 'ಪಪ್ಪು’ ಎಂಬ ಬಲೆಯಿಂದ ರಾಹುಲ್ ಗಾಂಧಿಗೆ ಏಕೆ ಹೊರಬರಲು ಸಾಧ್ಯವಾಗುತ್ತಿಲ್ಲ?
ಕಾಂಗ್ರೆಸ ಮಾಯಕರು ಗಂಭೀರವಾಗಿರುವಂತೆ ಏಕೆ ನಟಿಸುತ್ತಾರೆ ಆದರೆ ರಾಹುಲ್ ಗಾಂಧಿಯನ್ನು ಯಶಸ್ವಿಗೊಳಿಸಲು ಯಾವುದೇ ಸಾಮೂಹಿಕ ಪ್ರಯತ್ನಗಳನ್ನು ಮಾಡುವುದಿಲ್ಲ? ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಲ್ಲ ಹಾಗಾಗಿ ಅವರು ಯಶಸ್ಸನ್ನು ಕಾಣಲು ಸಾಧ್ಯವಾಗುತ್ತಿಲ್ಲ.ರಾಹುಲ್ ಅವರು ಪ್ರಬಲ ಸಾರ್ವಜನಿಕರನ್ನು ಪ್ರಭಾವಿಸುವ ನಾಯಕತ್ವ ಗುಣಗಳನ್ನು ಹೊಂದಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅವರು ಹುಗಳು ಭಟರ ಅವಶ್ಯಕತೆ, ಆಂತರಿಕ ವಿಚಾರಗಳು ಮತ್ತು ದೇಶಾದ್ಯಂತ ಪಕ್ಷ ಸಂಘಟನೆಯೊಳಗಿನ ತೊಡಕುಗಳ ಪಾತ್ರವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. 2014 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನಂತರ, ರಾಹುಲ್ ಹಲವು ದಿನಗಳವರೆಗೆ ವಿಮರ್ಶೆ ಸಭೆಗಳನ್ನು ನಡೆಸಿದರು. ಅವರು ರಾಜ್ಯಗಳ ನಾಯಕರ ಹಾಗೂ ಕಾರ್ಯಕರ್ತರ ಅಭಿಪ್ರಾಯಗಳು ಮತ್ತು ಕುಂದುಕೊರತೆಗಳನ್ನು ಆಲಿಸಿದರು. ಇದೆಲ್ಲವೂ ಅವರ ಮುಂದೆ ಪಕ್ಷದ ನೈಜ ಚಿತ್ರಣವನ್ನು ತಂದಿತು. ಪಕ್ಷವನ್ನು ಅದರ ನಾಯಕರರಿಂದ ಮುಕ್ತಗೊಳಿಸದೆ ಪಕ್ಷವನ್ನು ಪುನಶ್ಚೇತನಗೊಳಿಸಲು ಸಾಧ್ಯವಿಲ್ಲ ಎಂದು ಅವರು ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ ಮತ್ತು ಇಲ್ಲಿಂದ ಕಾಂಗ್ರೆಸ್‌ನಲ್ಲಿ ಒಳ ಜಗಳ ಪ್ರಾರಂಭವಾಯಿತು.
ಕಾಂಗ್ರೆಸ್ ಅನ್ನು ಬಲಪಡಿಸುವ ಪ್ರಯತ್ನದಲ್ಲಿ, ರಾಹುಲ್ ಅವರು ಸೋನಿಯಾ ಗಾಂಧಿಯವರ ತಂಡವನ್ನು ಬದಿಗಿಟ್ಟು ಹೊಸ ತಂಡವನ್ನು ಕಟ್ಟಲು ಪ್ರಾರಂಭಿಸಿದರು. ಬೇರೆ ರೀತಿಯಲ್ಲಿ ಹೇಳುವುದಾದರೆ, ರಾಹುಲ್ ಸೋನಿಯಾ ಗಾಂಧಿಯವರ ಪ್ರಬಲ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮತ್ತು ಅವರ ಹಿಂಬಾಲಕರನ್ನು ಪಕ್ಷದ ಯೋಜನಾ ಪ್ರಕ್ರಿಯೆಯಿಂದಬಹೊರಗಿಟ್ಟರು. ಇದು ರಾಹುಲ್ ಗಾಂಧಿಯವರ ಕಡೆಯಿಂದ ಸರಿಯಾದ ಉದ್ದೇಶಿತ ಕ್ರಮವಾಗಿತ್ತು, ಆದರೆ ಅನುಭವದ ಕೊರತೆಯಿಂದ ಮತ್ತು ತಿಳುವಳಿಕೆಯ ಕೊರತೆಯಿಂದ ಅವರು ಕೆಲವು ತಪ್ಪುಗಳನ್ನು ಮಾಡಲು ಪ್ರಾರಂಭಿಸಿದರು.ಆಕ್ಸ್‌ಫರ್ಡ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿದ ಯುವ ನಾಯಕರು ಅವರನ್ನು ಸುತ್ತುವರೆದರು, ಅವರು ಪಾಶ್ಚಿಮಾತ್ಯ ರಾಜಕೀಯ ವಿಧಾನಗಳಿಂದ ಪ್ರಭಾವಿತರಾಗಿದ್ದರು. ಈ ಯುವ ನಾಯಕರು ಭಾರತದ 135 ವರ್ಷಗಳ ಹಳೆಯ ಪಕ್ಷದ ಸಾಂಪ್ರದಾಯಿಕ ತತ್ವಗಳೊಂದಿಗೆ ಸಂವಾದಿಯಾಗಿರಲಿಲ್ಲ. ಪಕ್ಷವನ್ನು ನಡೆಸುವಲ್ಲಿ ಸಮೀಕ್ಷೆಗಳು, ಸಂದರ್ಶನಗಳು ಮತ್ತು ಇತರ ನಿಯತಾಂಕಗಳನ್ನು ಪಕ್ಷ ಲಟ್ಟುವ ಸೂತ್ರವನ್ನಾಗಿ ಬಳಸಲಾಗಿತ್ತು. ಪಕ್ಷದ ಯುವ ಮತ್ತು ವಿದ್ಯಾರ್ಥಿ ವಿಭಾಗಗಳಲ್ಲಿ ನಾಮನಿರ್ದೇಶನ ಸಂಸ್ಕೃತಿಯನ್ನು ನಿಲ್ಲಿಸಲಾಯಿತು. ಪದಾಧಿಕಾರಿಗಳನ್ನು ನೇಮಿಸಲು ಚುನಾವಣೆಗಳನ್ನು ಅಂಗೀಕರಿಸಲಾಯಿತು. ಕಾಂಗ್ರೆಸ್‌ನಲ್ಲಿನ ಹಳೆಯ ಸಂಪ್ರದಾಯಕ್ಕೆ ವಿರುದ್ದವಾಗಿತ್ತು.
ರಾಹುಲ್ ಇಲ್ಲಿಗೆ ನಿಲ್ಲಿಸಲಿಲ್ಲ. ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ತಮ್ಮ ಆಯ್ಕೆಯ ಯುವ ನಾಯಕರನ್ನು ನೇಮಕ ಮಾಡಲು ಪ್ರಾರಂಭಿಸಿದರು. ಪಕ್ಷದ ಸ್ಥಾಪಿತ ಹಳೆಯ ಹೊಗಳು ಭಟರ ರಾಹುಲ್ ಗಾಂಧಿಯವರ ಈ ಕಾರ್ಯವೈಖರಿ ತಮ್ಮ ಹಿತಾಸಕ್ತಿಗೆ ಅವಮಾನ ಮತ್ತು ಸವಾಲು ಎಂದು ಪರಿಗಣಿಸಿದರು. ಇದನ್ನು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳೋಣ.10 ವರ್ಷಗಳ ಕಾಲ ಹರಿಯಾಣದ ಮುಖ್ಯಮಂತ್ರಿಯಾಗಿದ್ದ ಭೂಪಿಂದರ್ ಸಿಂಗ್ ಹೂಡಾ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಡಾ.ಅಶೋಕ್ ತನ್ವಾರ್ ಅವರ ನೇಮಕಕ್ಕೆ ಎಂದಿಗೂ ಸಹಮತ ವ್ಯಕ್ತಬಪಡಿಸಿರಲ್ಲ. ಈ ವಿಚಾರವು ಡಾ.ತನ್ವಾರ್ ಮೇಲಿನ ದಾಳಿಯ ವಿವಾದದಲ್ಲಿ ಪರಾಕಾಷ್ಠೆಗೆ ತಲುಪಿತು. ಅಂತಿಮವಾಗಿ ಡಾ.ತನ್ವಾರ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆಯ ಬೇಕಾಯಿತು.
2014 ಮತ್ತು 2019 ರ ನಡುವೆ ರಾಹುಲ್ ಗಾಂಧಿ ಪಕ್ಷವನ್ನು ಮರುಸಂಘಟಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದರು. ಪರಿಣಾಮಕಾರಿ ಪ್ರತಿಪಕ್ಷ ನಾಯಕನಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವ ಸಮಯವೂ ಅದಾಗಿತ್ತು. ರಾಹುಲ್ ಉತ್ತಮ ವಾಗ್ಮಿ ಅಲ್ಲ. ಉತ್ತಮ ಪೂರ್ವಬತಾಯಾರಿ ಇಲ್ಲದೆ, ಅವರು ಅನೇಕ ಬಾರಿ ಸಂಸದೀಯ ವೇದಿಕೆಗಳಲ್ಲಿ ಮುಜುಗರಕ್ಕೀಡಾಗಿದ್ದಾರೆ.ಅವರು ಇಂದಿನ ರಾಜಕಾರಣಕ್ಕೆ ಅಗತ್ಯವಾದ ಕುಶಾಗ್ರಮತಿ ಆಗಿಲ್ಲ ಮತ್ತು ನೈಜ ಅನುಭವವನ್ನು ಹೊಂದಿಲ್ಲ ಎಂಬ ಅಂಶ ಇದಕ್ಕೆ ಕಾರಣವೆಂದು ಹೇಳಬಹುದು, ಈ ರೀತಿಯ ಅನುಭವ ತಳಮಟ್ಟದಿಂದ ರಾಜಕೀಯ ಹೋರಾಟದಿಂದ ಪಡೆಯುಬಹುದಾಗಿದೆ. ಆದ್ದರಿಂದ, ಅವರು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ತಬ್ಬಿಕೊಂಡಾಗ, ಮೆಚ್ಚುಗೆ ಪಡೆಯುವ ಬದಲು ಅವರು ಅಪಹಾಸ್ಯಕ್ಕೆ ಈಡಾಗಿದ್ದರು. ಮೋದಿಯವರು ಎಲ್ಲಾ ರಾಜಕೀಯ ಗುಣಲಕ್ಷಣಗಳ ಪ್ರವೀಣರಾಗಿದ್ದರೆ, ರಾಹುಲ್ ತಮ್ಮನ್ನು ತಾವು ‘ಪಪ್ಪು’ ಎಂದು ಸಾಬೀತುಪಡಿಸಿದ್ದಾರೆ. ಕಾಂಗ್ರೆಸ್ ನ ಹಿರಿಯ ನಾಯಕರು ಈ ವಿಚಾರವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡರು. ಕಾಂಗ್ರೆಸ್‌ನಲ್ಲಿ ರಾಹುಲ್ ಹಿರಿಯ ಕಾಂಗ್ರೆಸಿಗರನ್ನು ತಮ್ಮ ಮಾರ್ಗದರ್ಶಕರಾಗಿ ಸ್ವೀಕರಿಸಬೇಕು ಮತ್ತು ನಂತರ ಅವರು ರಾಹುಲ್ ಗೆ ಉತ್ತಮ ಸಲಹೆಗಳನ್ನು ನೀಡಬಹುದು ಎಂದು ಅವರು ಭಾವಿಸಿದರು.
ರಾಹುಲ್ ತಮ್ಮ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ವಿಪಾಸನಾ ಶಿಬಿರಕ್ಕೆ ಹೋ್ಉವ ಕುರಿತು ದೃಢತೆ ಹೊಂದಿದ್ದರು. ಇದರ ಬದಲು ವಿಲಕ್ಷಣ ಮತ್ತು ನಿರ್ದಯ ರಾಜಕಾರಣದಲ್ಲಿ ಸಿಕ್ಕಿಹಾಕಿಕೊಳ್ಳುವದು ರಾಹುಲ್ ಅವರಿಗೆ ಇಷ್ಟವಿರಲಿಲ್ಲ. ಅವರ ತಾಯಿ ಸೋನಿಯಾ ಗಾಂಧಿ ಅವರಿಗೆ ಎಲ್ಲವೂ ಚೆನ್ನಾಗಿ ತಿಳಿದಿತ್ತು. . ಅದಕ್ಕಾಗಿಯೇ ಈ ನಡುವೆ ಅವರು ತಮ್ಮ ನಿಷ್ಠಾವಂತರನ್ನು ಸ್ಕ್ರೀನಿಂಗ್ ಸಮಿತಿಗಳಲ್ಲಿ ಮತ್ತು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ರಚಿಸಲಾದ ಆಯ್ಕೆ ಸಮಿತಿಗಳಲ್ಲಿ ನೇಮಕ ಮಾಡಿಕೊಳ್ಳುತ್ತಿದ್ದರು, ಇದರಿಂದಾಗಿ ಈ ನಾಯಕರ ವ್ಯವಹಾರಕ್ಕೆ ಯಾವುದೇ ದಕ್ಕೆಯಾಗದೆ ಉಳಿದುಕೊಂಡಿತು.
2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅವಮಾನಕರ ಸೋಲನ್ನು ಅನುಭವಿಸಿತು. ರಾಹುಲ್ ಗಾಂಧಿ ಮಾಧ್ಯಮಗಳಿಂದ ಮಾತ್ರವಲ್ಲದೆ ಪಕ್ಷದಿಂದಲೂ ತೀವ್ರ ಟೀಕೆಗಳನ್ನು ಎದುರಿಸಬೇಕಾಯಿತು. ಸಂಸತ್ತಿನ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ನೈತಿಕ ಹೊಣೆಗಾರಿಕೆಯನ್ನು ಹೊಂದಿದ್ದ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದು ಕಾಂಗ್ರೆಸ್ ಪಕ್ಷಕ್ಕೆ ಅನಿರೀಕ್ಷಿತವಾಗಿದ್ದರೂ ಹೊಗಳು ಭಟರಿಗೆ ಸಂತೋಷದಾಯಕ ವಿಚಾರವಾಗಿತ್ತು. ಅಹ್ಮದ್ ಪಟೇಲ್, ಪಿ. ಚಿದಂಬರಂ, ಎ. ಕೆ. ಆಂಟನಿ, ಮೋತಿ ಲಾಲ್ ವೊಹ್ರಾ ಮತ್ತು ಇತರರು ಸೋನಿಯಾ ಗಾಂಧಿಯನ್ನು ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಯಶಸ್ವಿಯಾದರು.ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಈ ನಾಯಕರು ಪ್ರಿಯಾಂಕಾ ಗಾಂಧಿಯನ್ನು ಪಕ್ದ ಪ್ರಧಾನ ಕಾರ್ಯದರ್ಶಿಯನ್ನಾ್ಇ ಮಾಡಿ, ಪಕ್ಷದ ಹೈಕಮಾಂಡ್ ನ ಭಾಗವಾಗಿ ಮಾಡಿಲ್ಲದಿದ್ದರೆ, ರಾಹುಲ್ ಅವರು ಪಕ್ಷದ ಅಧ್ಯಕ್ಷರಾಗಿ ತಮ್ಮ ಆಯ್ಕೆಯ ನಾಯಕರನ್ನು ನೇಮಕ ಮಾಡುತ್ತಿದ್ದರು. ಈ ಮೂಲಕ ಅವರು ಪಕ್ಷದಲ್ಲಿ ಮೇಲುಗೈ ಸಾಧಿಸಬಹುದಿತ್ತು. ಇದನ್ನು ಹೊಗಳು ಭಟರು ಇಷ್ಟ ಪಡುತ್ತಿರಲಿಲ್ಲ. ನಾಯಕತ್ವವು ಗಾಂಧಿ ಕುಟುಂಬದೊಂದಿಗೆ ಉಳಿಯಲು ಪ್ರಿಯಾಂಕಾ ಗಾಂಧಿಯವರು ಪಕ್ಷದ ಹಂಗಾಮಿ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಲು ತಾಯಿಯನ್ನು ಮನವೊಲಿಸಿದರು.
ಈಗ, ಕಾಂಗ್ರೆಸ್ ನ ಇತ್ತೀಚಿನ ಬೆಳವಣಿಗೆಗಳಿಗೆ ಕುರಿತು ಗಮನ ಹರಿಸೋಣ. ಇತ್ತೀಚಿನ ಬೆಳವಣಿಗೆಗಳು ಅನೇಕರಿಗೆ ಆಶ್ಚರ್ಯಕರ ಸಂಗತಿಯಾಗಿದೆ. ಪಕ್ಷದ 23 ಹಿರಿಯ ಮುಖಂಡರು ಬರೆದಿರುವ ಪತ್ರವು ಪಕ್ಷದೊಳಗೆ ಅಸಮಾಧಾನವನ್ನು ಸೃಷ್ಟಿಸಿದೆ. ಇದು ಪಕ್ಷದ ‘ಸರ್ವೋಚ್ಚ ನಾಯಕ' ಅಹ್ಮದ್ ಪಟೇಲ್ ಅವರ ಲೆಕ್ಕಾಚಾರ ಮತ್ತು ಯೋಜಿತ ನಡೆ ಎಂದು ನಾನು ಹೇಳಿದರೆ, ಅನೇಕ ಜನರು ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.ಆದರೆ ಮೊದಲೇ ಹೇಳಿದಂತೆ, ಅಸ್ತಾನ ಪಂಡಿತರು ಮಗುವನ್ನೂ ಚಿವುಟಿ ತೊಟ್ಟಿಲನ್ನು ತಾವೆ ತೂಗುತ್ತಾರೆ. ಪಟೇಲ್ ಅವರು ಕಾಂಗ್ರೆಸ್ ನ ಪರಮೋಚ್ಚ ನಂಬಿಕಸ್ತ ನಾಯಕರಾಗಿದ್ದು, ಅವರನ್ನು ರಾಹುಲ್ ಬಹಳ ಸಮಯದಿಂದ ಕಡೆಗಣಿಸುತ್ತಿದ್ದಾರೆ. ಆದಾಗ್ಯೂ, ಪ್ರಿಯಾಂಕಾ ಮತ್ತು ಸೋನಿಯಾ ಇನ್ನೂ ಅವರ ಸಲಹೆಯನ್ನು ಸಂಪೂರ್ಣವಾಗಿ ಅನುಸರಿಸುತ್ತಾರೆ. ಗಾಂಧಿ ಕುಟುಂಬದ ಹೊರಗಿನ ಯಾರಿಗಾದರೂ ನಾಯಕತ್ವವನ್ನು ಹಸ್ತಾಂತರಿಸುವ ಕರಿತು ರಾಹುಲ್ ಇನ್ನೂ ಮನಸ್ಸನ್ನು ಹೊಂದಿದ್ದಾರೆ ಎಂಬ ಭಯ ಅಸ್ಥಾನ ಪಂಡಿತರಿಗಿತ್ತು. ರಾಹುಲ್ ಅವರ ಯೋಜನೆಯನ್ನು ತಡೆಯುವ ಸಲುವಾಗಿ, ಆಸ್ಥಾನ ಪಂಡಿತರು ಇಡೀ ಯೋಜನೆಯ ರೂಪುರೇಷೆಯನ್ನು ತಯಾರು ಮಾಡಿದರು.
ಇಂದಿರಾ ಗಾಂಧಿಯವರ ಕಾಲದಿಂದಲೂ ಗುಲಾಮ್ ನಬಿ ಆಜಾದ್ ಅವರು ಕಾಂಗ್ರೆಸ್ ನ ಪ್ರಮುಖ ನಾಯಕರಾಗಿದ್ದಾರೆ. ಅವರನ್ನು ಕಾಂಗ್ರೇಸ್ ಗೆ ಜೀವ ತುಂಬುವ ನಾಯಕರೆಂದು ಈಗಲೂ ಭಾವಿಸಲಾಗಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಯಲ್ಲಿ ನಿರಂತರವಾಗಿ ಸದಸ್ಯರಾಗಿರುವ ಏಕೈಕ ನಾಯಕ ಅವರು. ಅವರು ಬಹುತೇಕ ಎಲ್ಲ ರಾಜ್ಯಗಳ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅವರ ರಾಜ್ಯಸಭಾ ಅಧಿಕಾರಾವಧಿ ಇನ್ನೇನು ಮುಗಿಯುತ್ತಿದೆ. ಅಹಮದ್ ಪಟೇಲ್ ಅವರಂತೆ ಗುಲಾಮ್ ನಬಿ ಆಜಾದ್ ಅವರು ಸತತ ಐದನೇ ಬಾರಿಗೆ ರಾಜ್ಯ ಸಭೆ ಟಿಕೆಟ್ ಪಡೆಯಲು ಸಾಧ್ಯವಿಲ್ಲ. ಅವರು ಅನೇಕ ಶಾಸಕರ ಬೆಂಬಲವನ್ನು ಹೊಂದಿರುವ ದಿಗ್ವಿಜಯ ಸಿಂಗ್ ತರಹ ಕೂಡ ಅಲ್ಲ ಮತ್ತು ಅವರನ್ನು ಮೇಲ್ಮನೆಗೆ ಕಳುಹಿಸದಿರುವ ಅಪಾಯವನ್ನು ಪಕ್ಷ ತೆಗೆದುಕೊಳ್ಳುತ್ತದೆ. ಅವರು ಡಾ ಮನಮೋಹನ್ ಸಿಂಗ್ ರಂತೆ ಕೂಡ ಅಲ್ಲ.
ರಾಹುಲ್ ಗಾಂಧಿಯವರು ತಮ್ಮ ಪ್ರಭಾವವನ್ನು ಬಳಸಿಕೊಂಡು ಕೆ.ಸಿ.ವೇಣುಗೋಪಾಲ್ ಮತ್ತು ರಾಜೀವ್ ಸತವ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಈಗ ಉದ್ಭವಿಸಿರುವ ಸಮಸ್ಯೆಯಾಗಿದೆ. ಗುಲಾಮ್ ನಬಿ ಆಜಾದ್, ಕಪಿಲ್ ಸಿಬಲ್ ಮತ್ತು ಆನಂದ್ ಶರ್ಮಾ ಅವರಂತಹ ನಾಯಕರು ರಾಹುಲ್ ರ ಈ ನಿರ್ಧಾರ ತಪ್ಪು ಎಂದು ಭಾವಿಸಿದರು. ಮಲ್ಲಿಕಾರ್ಜುನ್ ಖರ್ಗೆ ರಾಹುಲ್ ಗಾಂಧಿಯನ್ನು ಇಷ್ಟಪಡುತ್ತಾರೆ. ಈ ಮೊದಲು ಖರ್ಗೆ ಅವರನ್ನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಾಯಿತು.ಈಗ ಅವರನ್ನು ರಾಜ್ಯಸಭೆಗೆ ಕಳುಹಿಸಲಾಗಿದೆ. ಗುಲಾಮ್ ನಬಿ ಆಜಾದ್ ನಿವೃತ್ತಿಯಾಗುವುದರೊಂದಿಗೆ, ರಾಹುಲ್ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವ ಸಾಧ್ಯತೆಯಿದೆ. ಇದು ಭಿನ್ನಮತೀಯರ ನವಾಗಿದೆ. ಲೋಕಸಭೆಯಲ್ಲಿ ರಾಹುಲ್ ಪಶ್ಚಿಮ ಬಂಗಾಳ ಮೂಲದ ಅಧೀರ್ ರಂಜನ್ ಚೌಧರಿಯನ್ನು ವಿರೋಧ ಪಕ್ಷದ ನಾಯಕ (ಎಲ್‌ಒಪಿ) ರನ್ನಾಗಿ ಮಾಡಿದರು. ತಮ್ಮನ್ನು ಲೋಕ ಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಮಾಡುತ್ತಾರೆ ಎಂದು ಮನೀಶ್ ತಿವಾರಿ ಬಯಕೆ ಹೊಂದಿದ್ದರು. ಆದರೆ ರಾಹುಲ್ ಅವರಿಗೆ ಮನೀಶ್ ತಿವಾರಿಯವರ ಮೇಲೆ ಕೋಪಗೊಂಡಿದ್ದರು. ಏಕೆಂದರೆ 2014 ರ ಲೋಕ ಸಭೆ ಚುನಾವಣೆಯ ಸಮಯದಲ್ಲಿ, ಮನೀಶ್ ಅನಾರೋಗ್ಯದ ನೆಪ ಒಡ್ಡಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದರು, ಆದರೆ ವಾಸ್ತವವಾಗಿ ಅವರು ಸೋಲುವ ಭಯದಲ್ಲಿದ್ದರು.
ಅದೇ ರೀತಿ ವಿವೇಕ್ ತಂಖಾ ತಾನೊಬ್ಬ ದೊಡ್ಡ ನಾಯಕ ಎಂಬ ಭ್ರಮೆ ಹೊಂದಿದ್ದು ತನ್ನನ್ನು ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಇವರೆಲ್ಲರೂ ತಮ್ಮ ಅಸಮಾಧಾನವನ್ನು ಖಾಸಗಿಯಾಗಿ ವ್ಯಕ್ತಪಡಿಸಿದರು. ಪಕ್ಷದ ಹಿರಿಯ ನಾಯಕರು ಈ ಎಲ್ಲದರಲ್ಲೂ ಒಂದು ಅವಕಾಶವನ್ನು ಹುಡುಕುತ್ತಿದ್ದರು. ಈ ಅವಕಾಶವನ್ನು ರಾಹುಲ್ ವಿರುದ್ಧದ ಅವರು ಬಳಸಿಕೊಂಡರು. ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿಯವರ ಅವಧಿ ಮುಗಿಯುತ್ತಿದ್ದಾಗ ಹಿರಿಯ ನಾಯಕರು ಸೇರಿ ತಮ್ಮ ದಾಳವನ್ನು ಉರುಳಿಸಿದರು. ಅವರ ಕಾರ್ಯತಂತ್ರವೇನೆಂದರೆ, ರಾಹುಲ್ ಗಾಂಧಿ ಅವರು ತಮ್ಮ ಆಯ್ಕೆಯ ನಾಯಕನನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲು ಬಯಸಿದರೆ, ಅವರ ನಾಯಕತ್ವ ಮತ್ತು ಕಾರ್ಯವೈಖರಿಯನ್ನು ಪ್ರಶ್ನಿಸಸುವುದಾಗಿತ್ತು. ಈಗ ಅವರು ಬಿಟ್ಟ ಬಾಣವು ಗುರಿಯನ್ನು ತಲುಪಿದಂತಿದೆ. ರಾಹುಲ್ ಅವರ ಇಚ್ಚೆಗೆ ವಿರುದ್ದವಾಗಿ, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ನಂತರ ಅಧ್ಯಕ್ಷರನ್ನು ಆಯ್ಕೆ ಮಾಡುವ ಪಕ್ಷದ ಸಮಗ್ರ ಅಧಿವೇಶನದವರೆಗೆ ಸೋನಿಯಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಮುಂದುವರಿಸಲಾಗಿದೆ. ಇದೊಂದು ಹೊಂದಾಣಿಕೆಯ ಯೋಜಿತ ಕ್ರಮವಾಗಿದೆ. ಗಾಂಧಿ ಕುಟುಂಬದ ವಿರುದ್ಧ ದಂಗೆ ಏಳಬಹುದು ಎಂಬ ಅಭಿಪ್ರಾಯವನ್ನು ಸೃಷ್ಟಿಸಲಾಗುತ್ತಿದೆ, ಇದರಿಂದಾಗಿ ಸೋನಿಯಾ ಒತ್ತಡಕ್ಕೆ ಒಳಗಾಗುತ್ತಾರೆ. ಪರಿಣಾಮವಾಗಿ, ಪಕ್ಷದ ಅನುಭವಿಗಳು ಮತ್ತು ರಾಹುಲ್ ಅವರ ಬೆಂಬಲಿಗರನ್ನು ಕೂಡ ಸಮಾಧಾನ ಪಡಿಸಿದಂತಾಗುತ್ತದೆ. ಈ ಸ್ಥಿತಿಯಲ್ಲಿ, ರಾಹುಲ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರೂ, ವೀಟೋ ಅಧಿಕಾರವು ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಲ್ಲೇ ಉಳಿಯುತ್ತದೆ.
ಹೀಗಾಗಿ, ಕಾಂಗ್ರೆಸ್ ಮುಂದೆ ಸೋನಿಯಾ, ಪ್ರಿಯಾಂಕಾ ಮತ್ತು ರಾಹುಲ್ ಎಂಬ ಕೇವಲ ಮೂರು ಆಯ್ಕೆಗಳನ್ನು ಮಾತ್ರ ಉಳಿದಿದೆ. ಗಾಂಧಿ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷದ ಮೇಲೆ ಇರುವ ತಮ್ಮ ಕಪಿ ಮುಷ್ಟಿಯನ್ನು ಸಡಿಲಗೊಳಿಸಲು ಸಾಧ್ಯವಿಲ್ಲ ಎಂಬುದು ಕೂಡ ಸತ್ಯ. ರಾಹುಲ್, ತಮ್ಮ ರಾಜಕೀಯ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಮಾಡಿದ ತ್ಯಾಗದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಪ್ರಿಯಾಂಕಾ ಗಾಂಧಿಯವರ ಮಹತ್ವಾಕಾಂಕ್ಷೆ ಸಾರ್ವಜನಿಕ ವಲಯಕ್ಕೆ ತಿಳಿದಿದೆ. 2024 ರವರೆಗೆ ಕಾಂಗ್ರೆಸ್ ತನ್ನದೇ ಪಕ್ಷದ ಆಂತರಿಕ ವಿಚಾರಗಳನ್ನು ಸರಿಪಡಿಸಿಕೊಳ್ಳುವಲ್ಲಿ ನಿರತವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರಕ್ಕೆ ಶಂಕುಸ್ಥಾಪನೆ ಮಾಡಿ ಇನ್ನೂ ಒಂದು ಅವಧಿಗೆ ಬಹು ಮತ ಬೇಡಲಿದ್ದಾರೆ. ಏನಾದರೂ, ಕಾಂಗ್ರೆಸ್ಸಿಗರು ಬರುವ ಚುನಾವಣೆಯಲ್ಲಿ ಅಧಿಕಾರ ಸಿಗುತ್ತದೆ ಎಂಬ ಆಶಾವಾದಹೋದಿರುತ್ತಾರೆ. ಈ ಆಶಾವಾದ ಕಾಂಗ್ರೆಸ್ ಹೊರತು ಪಡಿಸಿದರೆ ಬೇರೆಯವರಿಂದ ಸಾಧ್ಯವಿಲ್ಲ. ಜನಪರ ಹೋರಾಟವನ್ನು ರೂಪಿಸುವ ಬದಲು ಪಕ್ಷದೊಳಗಿನ ತಮ್ಮ ಪ್ರಾಬಲ್ಯಕ್ಕಾಗಿ ಅವರು ತಮ್ಮ ನಡುವೆ ಹೋರಾಡುತ್ತಾರೆ. ಮೋದಿ ಅಥವಾ ಬಿಜೆಪಿ ಯಾವಾಗ ತಪ್ಪು ಮಾಡುತ್ತಾರೊ ಆವಾಗ,ನಾವು ಮಾತ್ರ ಪರ್ಯಾಯ ಪಕ್ಷ, ಮತ್ತು ಮತ್ತೆ ಅಧಿಕಾರಕ್ಕೆ ಮರಳುತ್ತೇವೆ ಎಂದು ಹೇಳುವುದೇ ಅವರಿಗೆ ಖುಷಿಯ ವಿಚಾರವಾಗಿದೆ.
-ರಾಜೀವ್ ಆಚಾರ್ಯ, ಹಿರಿಯ ಪತ್ರಕರ್ತ