ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ತವರು ನೆಲ ಗುಜರಾತ್ನಿಂದ ಕಾಂಗ್ರೆಸ್ ಲೋಕಸಭಾ ಚುನಾವಣೆ ಅಭಿಯಾನ ಆರಂಭಿಸಿದೆ. ಇದೇ ಅಭಿಯಾನದಲ್ಲಿ ಪ್ರಿಯಾಂಕಾ ಗಾಂಧಿ ತಮ್ಮ ಚೊಚ್ಚಲ ಭಾಷಣ ಮಾಡಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೂ ಮುನ್ನ 2 ಕೋಟಿ ಉದ್ಯೋಗ ಸೃಷ್ಠಿ ಹಾಗೂ 15 ಲಕ್ಷ ರೂ ನೀಡುವುದಾಗಿ ಭರವಸೆ ನೀಡಿದ್ದರು. ಆ ಭರವಸೆ ಇದೀಗ ಎಲ್ಲಿ ಹೋಗಿದೆ. ಸದ್ಯ ದೇಶದಲ್ಲಿ ಏನೆಲ್ಲ ನಡೆಯುತ್ತಿದೇ ಎಂಬುದು ನಿಮಗೆ ಗೊತ್ತಿದೆ. ಮೋದಿ ಸರ್ಕಾರ ದ್ವೇಷ ಹುಟ್ಟು ಹಾಕಲಾಗುತ್ತಿದ್ದು, ಇಂದಿನ ದೇಶದ ಸ್ಥಿತಿ ನೋಡಿ ನನಗೆ ಕಣ್ಣೀರು ಬರುತ್ತಿದೆ.
Priyanka Gandhi Vadra, Congress in Gandhinagar: Our institutions are being destroyed. Wherever you see, hatred is being spread. Nothing matters more to us that you and I protect this nation, work for it and move forward together. pic.twitter.com/CvOGdsWtAK
— ANI (@ANI) March 12, 2019 " class="align-text-top noRightClick twitterSection" data="
">Priyanka Gandhi Vadra, Congress in Gandhinagar: Our institutions are being destroyed. Wherever you see, hatred is being spread. Nothing matters more to us that you and I protect this nation, work for it and move forward together. pic.twitter.com/CvOGdsWtAK
— ANI (@ANI) March 12, 2019Priyanka Gandhi Vadra, Congress in Gandhinagar: Our institutions are being destroyed. Wherever you see, hatred is being spread. Nothing matters more to us that you and I protect this nation, work for it and move forward together. pic.twitter.com/CvOGdsWtAK
— ANI (@ANI) March 12, 2019
ನೀವು ಜಾಗೃತರಾಗುವುದಕ್ಕಿಂತ ದೇಶ ಭಕ್ತಿ ಇನ್ನೊಂದಿಲ್ಲ. ನಿಮ್ಮ ಮತ ಒಂದು ಅಸ್ತ್ರವಾಗಿದ್ದು, ಯೋಚಿಸಿ ಮತ ಚಲಾವಣೆ ಮಾಡಿ. ಚುನಾವಣೆ ಮೂಲಕ ನಿಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಅವರು ಕರೆ ನೀಡಿದರು.
ಮುಂದಿನ ಹೋರಾಟ ಸ್ವಾತಂತ್ರ್ಯ ಹೋರಾಟಕ್ಕಿಂತಲೂ ಹೆಚ್ಚಿನದ್ದು, ಅದಕ್ಕಾಗಿ ಇಂದಿನಿಂದಲೇ ಧ್ವನಿ ಎತ್ತಬೇಕಾಗಿದೆ. ಕಾಂಗ್ರೆಸ್ ಪಕ್ಷ ಈ ಹೋರಾಟ ಮತ್ತೆ ಆರಂಭಿಸಿದೆ. ಅದಕ್ಕೆ ನಿಮ್ಮೆಲ್ಲರ ಬೆಂಬಲ ಬೇಕಿದೆ ಎಂದು ತಮ್ಮ ಚೊಚ್ಚಲ ಭಾಷಣದಲ್ಲಿ ಮೋದಿ ವಿರುದ್ಧ ಪ್ರಿಯಾಂಕ ನೇರ ವಾಗ್ದಾಳಿ ನಡೆಸಿದರು. ಈ ಮೂಲಕ ಲೇಡಿ 2ನೇ ಇಂದಿರಾ ಗಾಂಧಿ ಎಂದೇ ಕರೆಯಲಾಗುತ್ತಿರುವ ಪ್ರಿಯಾಂಕ ಮೋದಿ ವಿರುದ್ಧ ರಣಕಹಳೆ ಊದಿದ್ದಾರೆ.