ETV Bharat / bharat

ಮನೆಯ ವೆಂಟಿಲೇಟರ್​ನಲ್ಲಿ ನುಗ್ಗಿ ಪದ್ಮಶ್ರೀ ಪ್ರಶಸ್ತಿ ದೋಚಿದ ಕಳ್ಳರು..! - ಮೌಂಟ್​ ಎವರೆಸ್ಟ್​

ಪದ್ಮಶ್ರಿ ಪುರಸ್ಕೃತ ಪರ್ವತಾರೋಹಿಯೊಬ್ಬರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಪದ್ಮಶ್ರಿ ಪ್ರಶಸ್ತಿಯನ್ನೇ ದೋಚಿ ಪರಾರಿಯಾಗಿಯಾಗಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

mountaineer Premlata Agarwal
ಪರ್ವತಾರೋಹಿ ಪ್ರೇಮಲತಾ ಅಗರ್ವಾಲ್
author img

By

Published : Jun 16, 2020, 7:23 AM IST

ಜೆಮ್​ಶೆಡ್​ಪುರ (ಜಾರ್ಖಂಡ್​​​​​​): ದುಷ್ಕರ್ಮಿಗಳು ಪರ್ವತಾರೋಹಿಯೊಬ್ಬರು ಗಳಿಸಿದ್ದ ಪದ್ಮಶ್ರೀ ಪ್ರಶಸ್ತಿ ಜೊತೆಗೆ ಹಲವಾರು ವಸ್ತುಗಳನ್ನು ಕದ್ದು ಪರಾರಿಯಾಗಿರುವ ಘಟನೆ ಜಾರ್ಖಂಡ್​ನ ಜೆಮ್​ಶೆಡ್​ಪುರದಲ್ಲಿ ನಡೆದಿದೆ

ಪರ್ವತಾರೋಹಿಯಾಗಿರುವ ಪ್ರೇಮಲತಾ ಅಗರ್ವಾಲ್​ ಅವರ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ವೆಂಟಿಲೇಟರ್​​ ಹಾಗೂ ಕಿಟಕಿ ಮುರಿದು ಒಳನುಗ್ಗಿ, ಪದ್ಮಶ್ರೀ ಪದಕದ ಜೊತೆಗೆ ಬೆಳ್ಳಿ ನಾಣ್ಯಗಳು, ಕಂಪ್ಯೂಟರ್​ನ ಬಿಡಿಭಾಗಗಗಳು ಹಾಗೂ 20 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ.

ದುಷ್ಕರ್ಮಿಗಳು ಬಾಗಿಲು ತೆರಯಲು ಪ್ರಯತ್ನಿಸಿದ್ದು, ಸಾಧ್ಯವಾಗದೇ ಇದ್ದಾಗ ವೆಂಟಿಲೇಟರ್​ ತೆರೆದು ಅದರ​ ಮೂಲಕ ಒಳನುಗ್ಗಿದ್ದಾರೆ ಎಂದು ಪ್ರೇಮಲತಾ ಅಗರ್ವಾಲ್​ ಪತಿ ವಿಮಲ್​ ಅಗರ್ವಾಲ್​ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ನಗರ ಎಸ್​ಪಿ ಸುಭಾಷ್​ ಚಂದ್ರ ಜಾಟ್,​ ಮನೆಯವರು ನೀಡಿದ ದೂರು ದಾಖಲಿಸಿಕೊಳ್ಳಲಾಗಿದೆ. ಕದ್ಮಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರೇಮಲತಾ ಅಗರ್ವಾಲ್​ 2011 ಮೇ ತಿಂಗಳಲ್ಲಿ ತಮ್ಮ 48 ವರ್ಷದಲ್ಲಿ ಮೌಂಟ್​ ಎವರೆಸ್ಟ್​ ಪರ್ವತವನ್ನು ಏರಿದ ಅತಿ ಹಿರಿಯ ಮಹಿಳೆ ಎಂಬ ದಾಖಲೆ ಸೃಷ್ಟಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.