ಬಿಜಾಪುರ(ಛತ್ತೀಸ್ಗಢ): ಒಂದೆಡೆ ಕೊರೊನಾ ಹಾವಳಿ. ಇದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂಬ ನಿಯಮ ಇದೆ. ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಛತ್ತೀಸ್ಗಢದಲ್ಲಿ 50 ಹಳ್ಳಿಗಳ ಜನ ಜಿಲ್ಲಾಡಳಿತದ ವಿರುದ್ಧ ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಬಿಜಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಲ್ಲಿನ ಡಿಸಿ ಆಫೀಸ್ಗೆ 50 ಹಳ್ಳಿಗಳ ಜನ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಬ್ಯಾರಿಕೇಡ್ಗಳನ್ನ ಮುರಿದು ಜಾನುವಾರುಗಳು ಕೊಟ್ಟಿಗೆಯಿಂದ ಓಡಿದ ರೀತಿಯಲ್ಲಿ ಸಮರೋಪಾದಿಯಲ್ಲಿ ಜನ ಡಿಸಿ ಕಚೇರಿಗೆ ಮುತ್ತಿಗೆ ಹಾಕುವ ದೃಶ್ಯ ಪ್ರತಿಭಟನೆಯ ಕಾವು ಯಾವ ರೀತಿ ಇದೆ ಎಂಬುದನ್ನು ತೋರಿಸುತ್ತಿದೆ.
25 ಕಿಮೀ ದೂರದ ಚೆರ್ಪಾಲ್ ಎಂಬ ಹಳ್ಳಿಯಿಂದ ಪ್ರತಿಭಟನೆಗಾಗಿ ಜನ ನಡೆದು ಕೊಂಡು ಬಂದು ಬೃಹತ್ ಪ್ರತಿಭಟನೆ ನಡೆಸಿ ತಮ್ಮ ವಿವಿಧ ಬೇಡಿಕೆಗಳನ್ನ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.