ETV Bharat / bharat

ಕೋವಿಡ್​​ಗೆ ಆಯುರ್ವೇದ ಔಷಧ ಇಲ್ಲ ಎಂದ ಗೋವಾ ವೈದ್ಯ: ಹಾಗಿದ್ರೆ ಪ್ರಿನ್ಸ್​ ಚಾರ್ಲ್ಸ್​ ಗುಣಮುಖರಾಗಿದ್ದು ಹೇಗೆ?

author img

By

Published : Apr 10, 2020, 1:02 PM IST

ಆಯುರ್ವೇದ ಚಿಕಿತ್ಸೆಯು ಕೋವಿಡ್ -19 ವಿರೋದ್ಧ ಹೋರಾಡಲು ದೇಹದಲ್ಲಿ ಪ್ರಚೋದಕ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಕೋವಿಡ್ -19 ರೋಗಿಗಳಿಗೆ ಮತ್ತು ಕ್ವಾರಂಟೈನ್​ ನಲ್ಲಿರುವವರಿಗೆ ಸಮಗ್ರ ಚಿಕಿತ್ಸಾ ಕ್ರಮವನ್ನು ಅನುಸರಿಸಲು ಪರಿಚಯಿಸಿದ ದೇಶದ ಮೊದಲ ರಾಜ್ಯ ಗೋವಾ ಎಂದು ಪತ್ರಿಕಾಗೋಷ್ಠಿಯಲ್ಲಿ ಪರ್ಯಾಯ ಔಷಧದ ವೈದ್ಯರಾಗಿರುವ ಸಾವಂತ್ ಹೇಳಿದ್ದಾರೆ

There is no Ayurvedic cure for coronavirus: Sawant clarifies
ಕೊರೊನ ವೈರಸ್​ ಗೆ ಯಾವುದೇ ಆಯುರ್ವೇದ ಚಿಕಿತ್ಸೆ ಇಲ್ಲ: ಸಾವಂತ್​ ಸ್ಪಷ್ಟನೆ

ಪಣಜಿ (ಗೋವಾ): ಆಯುರ್ವೇದ ಚಿಕಿತ್ಸೆ ಸೇರಿದಂತೆ ಪರ್ಯಾಯ ಔಷಧಿಗಳ ಸಹಾಯದಿಂದ ಬ್ರಿಟನ್​ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ಅವರನ್ನು ಕೋವಿಡ್ -19 ನಿಂದ ಗುಣಪಡಿಸಲಾಗಿದೆ ಎಂದು ಆಯುಷ್ ರಾಜ್ಯ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರು ವಿಶ್ವಾಸದ ಹೇಳಿಕೆ ನೀಡಿದ್ದರು. ಈ ಸಂಬಂಧ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೊರೊನ ವೈರಸ್​ ಗೆ ಯಾವುದೇ ಆಯುರ್ವೇದ ಚಿಕಿತ್ಸೆ ಇಲ್ಲ ಎಂದು ಗುರುವಾರ ಹೇಳಿಕೆ ನೀಡಿದ್ದಾರೆ.

ಪರ್ಯಾಯ ಔಷಧದ ವೈದ್ಯರಾಗಿರುವ ಸಾವಂತ್ ಮುಂದುವರೆದು ಮಾತನಾಡಿ, ಆಯುರ್ವೇದ ಚಿಕಿತ್ಸೆಯು ಕೋವಿಡ್ -19 ವಿರುದ್ಧ ಹೋರಾಡಲು ದೇಹದಲ್ಲಿ ಪ್ರಚೋದಕ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಕೋವಿಡ್ -19 ರೋಗಿಗಳಿಗೆ ಮತ್ತು ಕ್ವಾರಂಟೈನ್​ ನಲ್ಲಿರುವವರಿಗೆ ಸಮಗ್ರ ಚಿಕಿತ್ಸಾ ಕ್ರಮವನ್ನು ಅನುಸರಿಸಲು ಪರಿಚಯಿಸಿದ ದೇಶದ ಮೊದಲ ರಾಜ್ಯ ಗೋವಾ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ವಾರದ ಆರಂಭದಲ್ಲಿ, ಬ್ರಿಟಿಷ್ ರಾಜಕುಮಾರರ ಅಧಿಕೃತ ವಕ್ತಾರರ ನಿರಾಕರಣೆಯ ಮಧ್ಯೆಯೂ ಗೋವಾದ ಲೋಕಸಭಾ ಸಂಸದ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರು ಆಯುರ್ವೇದ ಮತ್ತು ಹೋಮಿಯೋಪತಿ ಔಷಧಿಗಳನ್ನು ಬಳಸಿ ಪ್ರಿನ್ಸ್ ಚಾರ್ಲ್ಸ್ ರಿಗಿದ್ದ ಕೋವಿಡ್ -19 ಅನ್ನು "101 ಶೇಕಡಾ" ಗುಣಪಡಿಸಲಾಗಿದೆ ಎಂಬ ಹೇಳಿಕೆ ನೀಡಿದ್ದರು.

ಪ್ರಸ್ತುತ ರಾಜ್ಯ ಸರ್ಕಾರದ ಸೌಲಭ್ಯಗಳಲ್ಲಿ ಕ್ವಾರಂಟೈನ್​ ಆಗಿರುವ ಆರು ಕೋವಿಡ್ -19 ಪಾಸಿಟಿವ್​ ರೋಗಿಗಳಿಗೆ ಆಯುರ್ವೇದ ಮತ್ತು ಅಲೋಪತಿಯನ್ನು ಔಷದಿಯನ್ನು ಸಂಯೋಜಿಸಿ ಚಿಕಿತ್ಸೆ ನೀಡುತ್ತಿರುವ ದೇಶದ ಮೊದಲ ರಾಜ್ಯ ಗೋವಾ ಎಂದು ಅವರು ಹೇಳಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.