ಹೈದರಾಬಾದ್: ಕನ್ನಡದ ಅದರಲ್ಲೂ ಗಂಡು ಮೆಟ್ಟಿನ ನಾಡು ಹುಬ್ಬಳ್ಳಿ ಮೂಲದ ವೀರ ಅಧಿಕಾರಿ ರಿಯಲ್ ಸಿಂಗಂ ಸಜ್ಜನಾರ್ ಎನ್ಕೌಂಟರ್ ಸ್ಪೆಷಲಿಸ್ಟ್ ಎಂದೇ ಕರೆಯಲಾಗುತ್ತಿದೆ. ಹೌದು ಈ ಹೆಸರಿಗೆ ತಕ್ಕಂತೆ ಅಂದು ವರಂಗಲ್ ಆಸಿಡ್ ದಾಳಿಯ ಆರೋಪಿಯನ್ನ ಇದೇ ಅಧಿಕಾರಿ ಹೊಡೆದು ಹಾಕಿದ್ದರು.
ಆಗ ಆಂಧ್ರಪ್ರದೇಶದಾದ್ಯಂತ ಅಧಿಕಾರಿ ಕ್ರಮಕ್ಕೆ ವ್ಯಾಪಕ ಸ್ವಾಗತ ವ್ಯಕ್ತವಾಗಿತ್ತು. ಇದೀಗ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿರುವ ವಿಶ್ವನಾಥ್ ಸಜ್ಜನರ್, ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳನ್ನ ಎನ್ಕೌಂಟರ್ ಮಾಡಿ ಇಡೀ ದೇಶವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ವೈದ್ಯೆ ಹತ್ಯೆಯ ಮರುಸೃಷ್ಟಿ ಮಾಡಲು ಸೈಬರಾಬಾದ್ ಪೊಲೀಸರು ಘಟನಾ ಸ್ಥಳಕ್ಕೆ ಆರೋಪಿಗಳನ್ನ ಕರೆದೊಯ್ದಿದ್ದರು. ನಡುರಾತ್ರಿ 3ಗಂಟೆಯಿಂದ ಬೆಳಗಿನ 6 ಗಂಟೆ ವೇಳೆಗೆ ಇವರೆಲ್ಲ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತ್ಮರಕ್ಷಣೆಗೆ ಪೊಲೀಸರು ಈ ನಾಲ್ವರು ಆರೋಪಿಗಳನ್ನ ಎನ್ಕೌಂಟರ್ ಮಾಡಿದ್ದಾರೆ. ಈ ಎನ್ಕೌಂಟರ್ ಹಿಂದಿನ ಮಾಸ್ಟರ್ ಮೈಂಡ್ ಹಾಗೂ ಇಂತಹ ದಿಟ್ಟ ನಿರ್ಧಾರದ ಹಿಂದಿರುವ ವ್ಯಕ್ತಿ ಇದೇ ಒನ್ ಅಂಡ್ ಓನ್ಲಿ ವಿಶ್ವನಾಥ್ ಸಜ್ಜನರ್