ETV Bharat / bharat

Editorial: ಆಗ… ಈಗ… ಮತ್ತು ಯಾವಾಗಲೂ  ನಮ್ಮ ಸಂವಿಧಾನವೇ ನಿರಂತರ - ಡಾ.ಬಿ.ಆರ್.ಅಂಬೇಡ್ಕರ್

ಸ್ವತಂತ್ರ ಭಾರತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಮೇಲೆ ಅಳಿಸಲಾಗದ ಛಾಪು ಉಳಿಸಿ ಹೋಗಿದ್ದು, ಸಂವಿಧಾನ ರಚನೆಯಲ್ಲಿ ಅವರ ಮಾದರಿ ಪ್ರಯತ್ನ ಎಂದಿಗೂ ಅಜರಾಮರವಾಗಿದೆ.

Then,now and always the Constitution is continuous
ಆಗ… ಈಗ… ಮತ್ತು ಯಾವಾಗಲೂ ಸಂವಿಧಾನವೇ ನಿರಂತರ
author img

By

Published : Nov 28, 2019, 11:22 AM IST

Updated : Nov 28, 2019, 11:29 AM IST

ಸ್ವತಂತ್ರ ಭಾರತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಮೇಲೆ ಅಳಿಸಲಾಗದ ಛಾಪು ಉಳಿಸಿ ಹೋಗಿದ್ದು, ಸಂವಿಧಾನ ರಚನೆಯಲ್ಲಿ ಅವರ ಮಾದರಿ ಪ್ರಯತ್ನ ಎಂದಿಗೂ ಅಜರಾಮರವಾಗಿದೆ.

ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾದರಿ ಪ್ರಯತ್ನ

ಸ್ವತಂತ್ರ ಭಾರತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶದ ಮೇಲೆ ಅಳಿಸಲಾಗದ ಛಾಪನ್ನು ಉಳಿಸಿ ಹೋಗಿದ್ದಾರೆ. ಅವರು ಅತ್ಯುನ್ನತ ಶಿಕ್ಷಣ ಪಡೆದವರು, ಪ್ರಾಜ್ಞ ರಾಜಕಾರಣಿ, ನ್ಯಾಯಶಾಸ್ತ್ರದಲ್ಲಿ ಪರಿಣಿತ ಹಾಗೂ ಉನ್ನತ ಅರ್ಥಶಾಸ್ತ್ರಜ್ಞರಾಗಿದ್ದರು. ಅವರು ಕೋಟ್ಯಂತರ ದಮನಿತ ಹಾಗೂ ಶೋಷಿತ ವರ್ಗಗಳ ಜನರ ಸಬಲೀಕರಣಕ್ಕಾಗಿ ಹೋರಾಡಿದವರು. ದೇಶದ ಸಾರ್ವಭೌಮತ್ವ, ಸಮಗ್ರತೆ ಹಾಗೂ ಎಲ್ಲರಿಗೂ ಸಮಾನ ಅವಕಾಶಗಳ ಸೃಷ್ಟಿಗಾಗಿ ಸದಾ ಹಂಬಲಿಸಿದವರು. ಕಿರೀಟಪ್ರಾಯವಾದ ಸಂವಿಧಾನವು ಅವರ ನಾಯಕತ್ವದಲ್ಲಿ ರಚನೆಯಾಗಿದ್ದು, ಕಳೆದ ಏಳು ದಶಕಗಳಿಂದ ನಮಗೆ ಮಾರ್ಗದರ್ಶನ ನೀಡುತ್ತ ಬಂದಿದೆ. ಅಸ್ಪ್ರಶ್ಯತೆಯ ವಿರುದ್ಧದ ಮಹಾನ್ ಹೋರಾಟಗಾರರಾಗಿದ್ದ ಅವರು ಈಗ ಒಂದು ಕೈಯಲ್ಲಿ ಪುಸ್ತಕ ಹಿಡಿದು, ತೋರುಬೆರಳನ್ನು ಮುಂದಕ್ಕೆ ಚಾಚಿದ ಪ್ರತಿಮೆಯಾಗಿ ದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲಿಯೂ ನಿಂತುಕೊಂಡು ಪ್ರತಿಯೊಬ್ಬರಿಗೂ ಮುಂದೀವಿಗೆಯಾಗಿದ್ದಾರೆ.

ಶ್ರೇಷ್ಠ ಚಿಂತಕ ವಾಗ್ಮಿ ಮತ್ತು ಸಂಧಾನಕಾರ

ಭಾರತದ ಸಂವಿಧಾನ ರಚನೆಗಾಗಿ ಆಯ್ಕೆಯಾಗಿದ್ದ ಸಂವಿಧಾನ ರಚನಾ ಸಮಿತಿಯು, ಹಲವಾರು ವಿಷಯಗಳನ್ನು ಪರಿಶೀಲಿಸಲೆಂದು 22 ಸಮಿತಿಗಳನ್ನು ಮತ್ತು 7 ಉಪಸಮಿತಿಗಳನ್ನು ಹೊಂದಿತ್ತು. ಈ ಪೈಕಿ ಅತ್ಯಂತ ಮಹತ್ವದ ಕರಡು ರಚನಾ ಸಮಿತಿಯು, ಡಾ. ಬಿ.ಆರ್.‌ ಅಂಬೇಡ್ಕರ್‌ ಅಧ್ಯಕ್ಷತೆ ಹಾಗೂ ಆರು ಸದಸ್ಯರೊದಿಗೆ ಆಗಸ್ಟ್‌ 29, 1947ರಲ್ಲಿ ಸಂಸ್ಥಾಪನೆಯಾಯಿತು. ವೈವಿಧ್ಯಮಯ ಭೌಗೋಳಿಕ ಸ್ಥಿತಿಗಳು, ಜನಾಂಗಗಳು ಹಾಗೂ ಧರ್ಮಗಳನ್ನು ಹೊಂದಿರುವ ಭಾರತ ಯಾವ ದಿಕ್ಕಿನತ್ತ ಹೋಗುವುದು ಉತ್ತಮ ಎಂಬದರ ಕುರಿತು ಅಂಬೇಡ್ಕರ್‌ ಅವರಿಗೆ ಸ್ಪಷ್ಟ ಕಲ್ಪನೆ ಇದೆ ಎಂದು ಸ್ವತಃ ಗಾಂಧೀಜಿ ಅವರೇ ನಂಬಿದ್ದರು. ಸಂವಿಧಾನ ಸಭೆಯಲ್ಲಿ ಕಾಂಗ್ರೆಸ್‌ ಬಹುಮತ ಹೊಂದಿದ್ದರೂ, ಅದಾಗಲೇ ಕಾನೂನು ಸಚಿವರಾಗಿದ್ದ ಅವರ ಹೆಸರನ್ನು ಎಲ್ಲ ಸದಸ್ಯರು ಸರ್ವಾನುಮತದಿಂದ ಪ್ರಸ್ತಾಪಿಸಿದ್ದರು.

ಸಂವಿಧಾನ ಸಭೆಯು 11 ಸಲ ಸಭೆ ಸೇರಿತ್ತು. ಎಲ್ಲಾ ಸದಸ್ಯರು ಮತ್ತು ಸಮಿತಿಗಳು ಲಿಖಿತವಾಗಿ ಮತ್ತು ಮೌಖಿಕವಾಗಿ ನೀಡುತ್ತಿದ್ದ ಸಲಹೆಗಳನ್ನು ಕರಡು ರಚನಾ ಸಮಿತಿಯು ದಾಖಲಿಸಿಕೊಳ್ಳುತ್ತಿತ್ತು. ಅವೆಲ್ಲವನ್ನೂ ಕ್ರೋಡೀಕರಿಸಿಕೊಂಡ ನಂತರ, ಸಂವಿಧಾನ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗುತ್ತಿತ್ತು. ಸಂವಿಧಾನಿಕ ಪರಿಷತ್ತು ಈ ಯಾವುದೇ ವಿಷಯಗಳನ್ನು ಮತಕ್ಕೆ ಹಾಕಲಿಲ್ಲ. ಪ್ರತಿಯೊಂದು ಪ್ರಸ್ತಾವನೆಗೂ, ಸುದೀರ್ಘ ಚರ್ಚೆ, ಹೊಂದಾಣಿ, ಸಮನ್ವಯ ಮತ್ತು ಏಕಾಭಿಪ್ರಾಯದ ನಂತರವೇ ಒಪ್ಪಿಗೆ ನೀಡಲಾಗುತ್ತಿತ್ತು.

ಈ ಪ್ರಕ್ರಿಯೆ ಕರಡು ಸಮಿತಿಯ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿತು. ಪ್ರತಿಯೊಂದು ಕರಡಿನ ಸಿದ್ಧತೆಯ ಭಾಗವಾಗಿ, ಅಂಬೇಡ್ಕರ್‌ ಅವರು 60ಕ್ಕೂ ಹೆಚ್ಚು ದೇಶಗಳ ಸಂವಿಧಾನಗಳನ್ನು ಸ್ವತಃ ಓದಿದರು. ಈ ರೀತಿ ಬೌದ್ಧಿಕವಾಗಿ ಬಳಲಿಸುವ 2 ವರ್ಷ 11 ತಿಂಗಳು ಮತ್ತು 18 ದಿನಗಳ ಸುದೀರ್ಘ ಕಾಲದ ನಂತರ, ಕರಡು ಸಮಿತಿಯು ಎರಡು ಪ್ರತಿಗಳನ್ನು, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ, ಸಿದ್ಧಪಡಿಸಿತು. ಇದರ ಹಿಂದೆ ಅಂಬೇಡ್ಕರ್‌ ಅವರ ದಣಿವರಿಯದ ದುಡಿಮೆಯಿದೆ. 115 ದಿನಗಳ ಚರ್ಚೆ ಹಾಗೂ 2,473 ತಿದ್ದುಪಡಿಗಳ ನಂತರ, ಸಂವಿಧಾನಿಕ ಸಭೆಯಲ್ಲಿ ನವೆಂಬರ್‌ 26, 1949ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು.

ದೇಶದಿಂದ ಪಾಕಿಸ್ತಾನ ಪ್ರತ್ಯೇಕವಾದ ಕಹಿ ಅನುಭವದ ಹಿನ್ನೆಲೆಯಲ್ಲಿ, ರಾಜ್ಯಗಳು ಮತ್ತಷ್ಟು ವಿಭಜನೆಯಾಗುವುದನ್ನು ಅಂಬೇಡ್ಕರ್‌ ಬಯಸಲಿಲ್ಲ. ದೇಶಕ್ಕೆ ಸಾರ್ವಭೌಮತ್ವ ತರುವಲ್ಲಿ ಅವರ ಪ್ರಯತ್ನ ಮರೆಯಲಾರದಂಥದು. ಏಕ ನಾಗರಿಕತೆ ಮತ್ತು ಯಾವುದೇ ವಿಶೇಷ ವಿನಾಯಿತಿಗಳಿಲ್ಲದೇ ಎಲ್ಲರಿಗೂ ಸಮಾನ ನ್ಯಾಯ ಒದಗಿಸುವ ನ್ಯಾಯಾಂಗ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಸೋವಿಯತ್‌ ಮಾದರಿಯ ಆಡಳಿತಕ್ಕಿಂತ ಕೈಗಾರಿಕಾ-ಕೃಷಿ ಆಧರಿತ ನೀತಿ ಉತ್ತಮ ಎಂದು ಅಂಬೇಡ್ಕರ್‌ ಅವರು ಸಂವಿಧಾನ ಸಭೆಯ ಸದಸ್ಯರ ಮನವೊಲಿಸಿದರು. ಸಂವಿಧಾನದ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ಒತ್ತಿ ಹೇಳಿದ ಅವರು, ʼಒಬ್ಬ ವ್ಯಕ್ತಿ ಒಂದು ಮತʼ ನೀತಿಯನ್ನು ಪ್ರತಿಪಾದಿಸಿದರು. ದಮನಕ್ಕೆ ಒಳಗಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯುದಯ ಸಾಧಿಸಲು ಹಾಗೂ ಅವರಿಗೆ ಸಮಾನ ಅವಕಾಶಗಳನ್ನು ಒದಗಿಸಲು, ಶಾಸನಸಭೆಗಳಲ್ಲಿ ಕ್ಷೇತ್ರ ಮೀಸಲಾತಿ ಜಾರಿಗೊಳಿಸಲು ಅವರು ಹೋರಾಡಿದರು.

ಅಸ್ಪ್ರಶ್ಯತೆಗೆ ನಿಷೇಧ

ಉದ್ಯೋಗ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಹಾಗೂ ಇತರ ಹಿಂದುಳಿದ ವರ್ಗಗಳಿಗೆ 10 ವರ್ಷಗಳ ಅವಧಿಗೆ ಮೀಸಲಾತಿ ನೀಡಬೇಕೆಂದು ಪ್ರಸ್ತಾಪಿಸಿದ ಅವರು, ಈ ವರ್ಗಗಳು ಮುಂದುವರಿದ ಜಾತಿಗಳ ಮಟ್ಟಕ್ಕೆ ತಲುಪುವಂತೆ ಸರಕಾರ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು. ಸಂವಿಧಾನದಲ್ಲಿ ಅನುಚ್ಛೇದ 32ನ್ನು ಅಳವಡಿಸಿದ ಅವರು, ಎಲ್ಲರಿಗೂ ಮೂಲಭೂತ ಹಕ್ಕುಗಳನ್ನು ನೀಡಿದ್ದಲ್ಲದೇ, ಸಾಮಾನ್ಯ ವ್ಯಕ್ತಿ ಕೂಡಾ ನ್ಯಾಯಾಲಯಗಳ ಮೂಲಕ ತನ್ನ ಹಕ್ಕುಗಳನ್ನು ಹೊಂದಲು ಶಕ್ತನಾಗುವಂತೆ ಮಾಡಿದರು. ಇದು ಸಂವಿಧಾನದ ಆತ್ಮ ಎಂದು ಅವರು ಬಣ್ಣಿಸಿದ್ದಾರೆ. ಎಲ್ಲರ ಕಲ್ಯಾಣಕ್ಕಾಗಿ ಸಮಾನ ಸೌಲಭ್ಯಗಳನ್ನು ಸೃಷ್ಟಿಸಲು ಸರಕಾರಗಳಿಗೆ ನಿರ್ದೇಶನಗಳನ್ನು ನೀಡುವಂತೆ ಗಾಂಧೀಜಿಯವರು ನೀಡಿದ್ದ ಸಲಹೆಗಳನ್ನೂ ಅವರು ಸೇರಿಸಿದರು.

ಹದಗೆಟ್ಟ ಆರೋಗ್ಯ

ಸಂವಿಧಾನ ರಚನೆಗಾಗಿ ಹಗಲು ರಾತ್ರಿ ನಿದ್ದೆಗೆಟ್ಟು ಕಷ್ಟಪಟ್ಟು ಕೆಲಸ ಮಾಡಿದ ಪರಿಣಾಮವಾಗಿ ಅಂಬೇಡ್ಕರ್‌ ಅವರ ಆರೋಗ್ಯ ಬಿಗಡಾಯಿಸಿತು. ನಿರಂತರ ಓದಿನಿಂದಾಗಿ ಅವರ ಕಣ್ಣಿನ ದೃಷ್ಟಿ ಮಂದವಾಯಿತು. ಅದೇ ರೀತಿ, ನಿರಂತರವಾಗಿ ಕೂಡುತ್ತಿದ್ದುದರಿಂದ, ಬೆನ್ನುನೋವು ಮತ್ತು ಮಂಡಿ ನೋವು ಕಾಣಿಸಿಕೊಂಡಿತು. ಅನಿಯಮಿತ ಆಹಾರ ಸೇವನೆಯ ಸ್ವಭಾವ ಮತ್ತು ನಿದ್ದೆಯ ಕೊರತೆಯಿಂದ ಮಧುಮೇಹವೂ ಶುರುವಾಯಿತು. ಇವೆಲ್ಲ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಲೇ ಅವರು ಡಿಸೆಂಬರ್‌ 6ರ 1956 ರಂದು ಕೊನೆಯುಸಿರೆಳೆದರು. ಆ ಸಮಯದಲ್ಲಿ ಅವರು ಪೂರ್ತಿಯಾಗಿ ಅಂಧರಾಗಿಬಿಟ್ಟಿದ್ದರು ಎಂಬುದು ಇಲ್ಲಿ ಗಮನಾರ್ಹ.

---------- Forwarded message ---------
From: Chamaraj Savadi <chamarajs@gmail.com>
Date: Thu, Nov 28, 2019, 10:16
Subject: ThenNow&Always - Kannada
To: Ravi S <ravi.s@etvbharat.com>, <englishdesk@etvbharat.com>

ಆಗ ಈಗ ಮತ್ತು ಯಾವಾಗಲೂ

ಸಂವಿಧಾನ ರಚನೆಯಲ್ಲಿ ಡಾ. ಅಂಬೇಡ್ಕರ್ ಅವರ ಮಾದರಿ ಪ್ರಯತ್ನ

ಸ್ವತಂತ್ರ ಭಾರತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶದ ಮೇಲೆ ಅಳಿಸಲಾಗದ ಛಾಪನ್ನು ಉಳಿಸಿ ಹೋಗಿದ್ದಾರೆ. ಅವರು ಅತ್ಯುನ್ನತ ಶಿಕ್ಷಣ ಪಡೆದವರು, ಪ್ರಾಜ್ಞ ರಾಜಕಾರಣಿ, ನ್ಯಾಯಶಾಸ್ತ್ರದಲ್ಲಿ ಪರಿಣಿತ ಹಾಗೂ ಉನ್ನತ ಅರ್ಥಶಾಸ್ತ್ರಜ್ಞರಾಗಿದ್ದರು. ಅವರು ಕೋಟ್ಯಂತರ ದಮನಿತ ಹಾಗೂ ಶೋಷಿತ ವರ್ಗಗಳ ಜನರ ಸಬಲೀಕರಣಕ್ಕಾಗಿ ಹೋರಾಡಿದವರು. ದೇಶದ ಸಾರ್ವಭೌಮತ್ವ, ಸಮಗ್ರತೆ ಹಾಗೂ ಎಲ್ಲರಿಗೂ ಸಮಾನ ಅವಕಾಶಗಳ ಸೃಷ್ಟಿಗಾಗಿ ಸದಾ ಹಂಬಲಿಸಿದವರು. ಕಿರೀಟಪ್ರಾಯವಾದ ಸಂವಿಧಾನವು ಅವರ ನಾಯಕತ್ವದಲ್ಲಿ ರಚನೆಯಾಗಿದ್ದು, ಕಳೆದ ಏಳು ದಶಕಗಳಿಂದ ನಮಗೆ ಮಾರ್ಗದರ್ಶನ ನೀಡುತ್ತ ಬಂದಿದೆ. ಅಸ್ಪ್ರಶ್ಯತೆಯ ವಿರುದ್ಧದ ಮಹಾನ್ ಹೋರಾಟಗಾರರಾಗಿದ್ದ ಅವರು ಈಗ ಒಂದು ಕೈಯಲ್ಲಿ ಪುಸ್ತಕ ಹಿಡಿದು, ತೋರುಬೆರಳನ್ನು ಮುಂದಕ್ಕೆ ಚಾಚಿದ ಪ್ರತಿಮೆಯಾಗಿ ದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲಿಯೂ ನಿಂತುಕೊಂಡು ಪ್ರತಿಯೊಬ್ಬರಿಗೂ ಮುಂದೀವಿಗೆಯಾಗಿದ್ದಾರೆ.

ಶ್ರೇಷ್ಠ ಚಿಂತಕ ವಾಗ್ಮಿ ಮತ್ತು ಸಂಧಾನಕಾರ

ಭಾರತದ ಸಂವಿಧಾನ ರಚನೆಗಾಗಿ ಆಯ್ಕೆಯಾಗಿದ್ದ ಸಂವಿಧಾನ ರಚನಾ ಸಮಿತಿಯು, ಹಲವಾರು ವಿಷಯಗಳನ್ನು ಪರಿಶೀಲಿಸಲೆಂದು ೨೨ ಸಮಿತಿಗಳನ್ನು ಮತ್ತು ೭ ಉಪಸಮಿತಿಗಳನ್ನು ಹೊಂದಿತ್ತು. ಈ ಪೈಕಿ ಅತ್ಯಂತ ಮಹತ್ವದ ಕರಡು ರಚನಾ ಸಮಿತಿಯು, ಡಾ. ಬಿ.ಆರ್.‌ ಅಂಬೇಡ್ಕರ್‌ ಅಧ್ಯಕ್ಷತೆ ಹಾಗೂ ಆರು ಸದಸ್ಯರೊದಿಗೆ ಆಗಸ್ಟ್‌ ೨೯, ೧೯೪೭ರಲ್ಲಿ ಸಂಸ್ಥಾಪನೆಯಾಯಿತು. ವೈವಿಧ್ಯಮಯ ಭೌಗೋಳಿಕ ಸ್ಥಿತಿಗಳು, ಜನಾಂಗಗಳು ಹಾಗೂ ಧರ್ಮಗಳನ್ನು ಹೊಂದಿರುವ ಭಾರತ ಯಾವ ದಿಕ್ಕಿನತ್ತ ಹೋಗುವುದು ಉತ್ತಮ ಎಂಬದರ ಕುರಿತು ಅಂಬೇಡ್ಕರ್‌ ಅವರಿಗೆ ಸ್ಪಷ್ಟ ಕಲ್ಪನೆ ಇದೆ ಎಂದು ಸ್ವತಃ ಗಾಂಧೀಜಿ ಅವರೇ ನಂಬಿದ್ದರು. ಸಂವಿಧಾನ ಸಭೆಯಲ್ಲಿ ಕಾಂಗ್ರೆಸ್‌ ಬಹುಮತ ಹೊಂದಿದ್ದರೂ, ಅದಾಗಲೇ ಕಾನೂನು ಸಚಿವರಾಗಿದ್ದ ಅವರ ಹೆಸರನ್ನು ಎಲ್ಲಾ ಸದಸ್ಯರು ಸರ್ವಾನುಮತದಿಂದ ಪ್ರಸ್ತಾಪಿಸಿದ್ದರು.

ಸಂವಿಧಾನ ಸಭೆಯು ೧೧ ಸಲ ಸಭೆ ಸೇರಿತ್ತು. ಎಲ್ಲಾ ಸದಸ್ಯರು ಮತ್ತು ಸಮಿತಿಗಳು ಲಿಖಿತವಾಗಿ ಮತ್ತು ಮೌಖಿಕವಾಗಿ ನೀಡುತ್ತಿದ್ದ ಸಲಹೆಗಳನ್ನು ಕರಡು ರಚನಾ ಸಮಿತಿಯು ದಾಖಲಿಸಿಕೊಳ್ಳುತ್ತಿತ್ತು. ಅವೆಲ್ಲವನ್ನೂ ಕ್ರೋಡೀಕರಿಸಿಕೊಂಡ ನಂತರ, ಸಂವಿಧಾನ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗುತ್ತಿತ್ತು. ಸಂವಿಧಾನಿಕ ಪರಿಷತ್ತು ಈ ಯಾವುದೇ ವಿಷಯಗಳನ್ನು ಮತಕ್ಕೆ ಹಾಕಲಿಲ್ಲ. ಪ್ರತಿಯೊಂದು ಪ್ರಸ್ತಾವನೆಗೂ, ಸುದೀರ್ಘ ಚರ್ಚೆ, ಹೊಂದಾಣಿ, ಸಮನ್ವಯ ಮತ್ತು ಏಕಾಭಿಪ್ರಾಯದ ನಂತರವೇ ಒಪ್ಪಿಗೆ ನೀಡಲಾಗುತ್ತಿತ್ತು.

ಈ ಪ್ರಕ್ರಿಯೆ ಕರಡು ಸಮಿತಿಯ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿತು. ಪ್ರತಿಯೊಂದು ಕರಡಿನ ಸಿದ್ಧತೆಯ ಭಾಗವಾಗಿ, ಅಂಬೇಡ್ಕರ್‌ ಅವರು ೬೦ಕ್ಕೂ ಹೆಚ್ಚು ದೇಶಗಳ ಸಂವಿಧಾನಗಳನ್ನು ಸ್ವತಃ ಓದಿದರು. ಈ ರೀತಿ ಬೌದ್ಧಿಕವಾಗಿ ಬಳಲಿಸುವ ೨ ವರ್ಷ ೧೧ ತಿಂಗಳು ಮತ್ತು ೧೮ ದಿನಗಳ ಸುದೀರ್ಘ ಕಾಲದ ನಂತರ, ಕರಡು ಸಮಿತಿಯು ಎರಡು ಪ್ರತಿಗಳನ್ನು, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ, ಸಿದ್ಧಪಡಿಸಿತು. ಇದರ ಹಿಂದೆ ಅಂಬೇಡ್ಕರ್‌ ಅವರ ದಣಿವರಿಯದ ದುಡಿಮೆಯಿದೆ. ೧೧೫ ದಿನಗಳ ಚರ್ಚೆ ಹಾಗೂ ೨೪೭೩ ತಿದ್ದುಪಡಿಗಳ ನಂತರ, ಸಂವಿಧಾನಿಕ ಸಭೆಯಲ್ಲಿ ನವೆಂಬರ್‌ ೨೬, ೧೯೪೯ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು.

ದೇಶದಿಂದ ಪಾಕಿಸ್ತಾನ ಪ್ರತ್ಯೇಕವಾದ ಕಹಿ ಅನುಭವದ ಹಿನ್ನೆಲೆಯಲ್ಲಿ, ರಾಜ್ಯಗಳು ಮತ್ತಷ್ಟು ವಿಭಜನೆಯಾಗುವುದನ್ನು ಅಂಬೇಡ್ಕರ್‌ ಬಯಸಲಿಲ್ಲ. ದೇಶಕ್ಕೆ ಸಾರ್ವಭೌಮತ್ವ ತರುವಲ್ಲಿ ಅವರ ಪ್ರಯತ್ನ ಮರೆಯಲಾರದಂಥದು. ಏಕ ನಾಗರಿಕತೆ ಮತ್ತು ಯಾವುದೇ ವಿಶೇಷ ವಿನಾಯಿತಿಗಳಿಲ್ಲದೇ ಎಲ್ಲರಿಗೂ ಸಮಾನ ನ್ಯಾಯ ಒದಗಿಸುವ ನ್ಯಾಯಾಂಗ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಸೋವಿಯತ್‌ ಮಾದರಿಯ ಆಡಳಿತಕ್ಕಿಂತ ಕೈಗಾರಿಕಾ-ಕೃಷಿ ಆಧರಿತ ನೀತಿ ಉತ್ತಮ ಎಂದು ಅಂಬೇಡ್ಕರ್‌ ಅವರು ಸಂವಿಧಾನ ಸಭೆಯ ಸದಸ್ಯರ ಮನವೊಲಿಸಿದರು. ಸಂವಿಧಾನದ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ಒತ್ತಿ ಹೇಳಿದ ಅವರು, ʼಒಬ್ಬ ವ್ಯಕ್ತಿ ಒಂದು ಮತʼ ನೀತಿಯನ್ನು ಪ್ರತಿಪಾದಿಸಿದರು. ದಮನಕ್ಕೆ ಒಳಗಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯುದಯ ಸಾಧಿಸಲು ಹಾಗೂ ಅವರಿಗೆ ಸಮಾನ ಅವಕಾಶಗಳನ್ನು ಒದಗಿಸಲು, ಶಾಸನಸಭೆಗಳಲ್ಲಿ ಕ್ಷೇತ್ರ ಮೀಸಲಾತಿ ಜಾರಿಗೊಳಿಸಲು ಅವರು ಹೋರಾಡಿದರು.

ಅಸ್ಪ್ರಶ್ಯತೆಗೆ ನಿಷೇಧ

ಉದ್ಯೋಗ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಹಾಗೂ ಇತರ ಹಿಂದುಳಿದ ವರ್ಗಗಳಿಗೆ ೧೦ ವರ್ಷಗಳ ಅವಧಿಗೆ ಮೀಸಲಾತಿ ನೀಡಬೇಕೆಂದು ಪ್ರಸ್ತಾಪಿಸಿದ ಅವರು, ಈ ವರ್ಗಗಳು ಮುಂದುವರಿದ ಜಾತಿಗಳ ಮಟ್ಟಕ್ಕೆ ತಲುಪುವಂತೆ ಸರಕಾರ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು. ಸಂವಿಧಾನದಲ್ಲಿ ಅನುಚ್ಛೇದ ೩೨ನ್ನು ಅಳವಡಿಸಿದ ಅವರು, ಎಲ್ಲರಿಗೂ ಮೂಲಭೂತ ಹಕ್ಕುಗಳನ್ನು ನೀಡಿದ್ದಲ್ಲದೇ, ಸಾಮಾನ್ಯ ವ್ಯಕ್ತಿ ಕೂಡಾ ನ್ಯಾಯಾಲಯಗಳ ಮೂಲಕ ತನ್ನ ಹಕ್ಕುಗಳನ್ನು ಹೊಂದಲು ಶಕ್ತನಾಗುವಂತೆ ಮಾಡಿದರು. ಇದು ಸಂವಿಧಾನದ ಆತ್ಮ ಎಂದು ಅವರು ಬಣ್ಣಿಸಿದ್ದಾರೆ. ಎಲ್ಲರ ಕಲ್ಯಾಣಕ್ಕಾಗಿ ಸಮಾನ ಸೌಲಭ್ಯಗಳನ್ನು ಸೃಷ್ಟಿಸಲು ಸರಕಾರಗಳಿಗೆ ನಿರ್ದೇಶನಗಳನ್ನು ನೀಡುವಂತೆ ಗಾಂಧೀಜಿಯವರು ನೀಡಿದ್ದ ಸಲಹೆಗಳನ್ನೂ ಅವರು ಸೇರಿಸಿದರು.

ಹದಗೆಟ್ಟ ಆರೋಗ್ಯ

ಸಂವಿಧಾನ ರಚನೆಗಾಗಿ ಹಗಲು ರಾತ್ರಿ ನಿದ್ದೆಗೆಟ್ಟು ಕಷ್ಟಪಟ್ಟು ಕೆಲಸ ಮಾಡಿದ ಪರಿಣಾಮವಾಗಿ ಅಂಬೇಡ್ಕರ್‌ ಅವರ ಆರೋಗ್ಯ ಬಿಗಡಾಯಿಸಿತು. ನಿರಂತರ ಓದಿನಿಂದಾಗಿ ಅವರ ಕಣ್ಣಿನ ದೃಷ್ಟಿ ಮಂದವಾಯಿತು. ಅದೇ ರೀತಿ, ನಿರಂತರವಾಗಿ ಕೂಡುತ್ತಿದ್ದುದರಿಂದ, ಬೆನ್ನುನೋವು ಮತ್ತು ಮಂಡಿ ನೋವು ಕಾಣಿಸಿಕೊಂಡಿತು. ಅನಿಯಮಿತ ಆಹಾರ ಸೇವನೆಯ ಸ್ವಭಾವ ಮತ್ತು ನಿದ್ದೆಯ ಕೊರತೆಯಿಂದ ಮಧುಮೇಹವೂ ಶುರುವಾಯಿತು. ಇವೆಲ್ಲ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಲೇ ಅವರು ಡಿಸೆಂಬರ್‌ ೬, ೧೯೫೬ರಂದು ಕೊನೆಯುಸಿರೆಳೆದರು. ಆ ಸಮಯದಲ್ಲಿ ಅವರು ಪೂರ್ತಿಯಾಗಿ ಅಂಧರಾಗಿಬಿಟ್ಟಿದ್ದರು ಎಂಬುದು ಇಲ್ಲಿ ಗಮನಾರ್ಹ.

---------- 

- Chamaraj Savadi

Freelance Journalist / Translator / Content Writer
Last Updated : Nov 28, 2019, 11:29 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.