ETV Bharat / bharat

ವಿಶೇಷ ಅಂಕಣ: ಲಾಕಪ್‌ ಡೆತ್​​ ಕರಾಳ ಮುಖ! - The ugly picture of custodial deaths

ಸಾರ್ವಜನಿಕ ಸುರಕ್ಷತೆಗೆ ಪೊಲೀಸ್ ಪಡೆ ಜವಾಬ್ದಾರರಾಗಿರಬೇಕು, ಕಾನೂನಿನ ನಿಯಮವನ್ನು ಜಾರಿಗೆ ತರಬೇಕು ಮತ್ತು ಸಮಾಜವನ್ನು ರಕ್ಷಿಸಬೇಕು ಎಂದು ರಾಷ್ಟ್ರೀಯ ಪೊಲೀಸ್ ಆಯೋಗವು ಹಲವು ಬಾರಿ ಆದೇಶ ಮಾಡುವ ಜೊತೆಗೆ ಅದನ್ನ ಕಡ್ಡಾಯ ಮಾಡಿದೆ. ಆದರೂ, ಪೊಲೀಸ್ ವ್ಯವಸ್ಥೆಯು ಸಂಘಟಿತ ಅಪರಾಧಿಗಳ ಗುಂಪಾಗಿ ಮಾರ್ಪಟ್ಟಿದೆ ಎಂದು ಅನೇಕ ಬಾರಿ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

The ugly picture of custodial deaths
ಲಾಕಪ್‌ ಡೆತ್‌ ಕರಾಳ ಮುಖ
author img

By

Published : Jul 9, 2020, 8:23 PM IST

ಹೈದರಾಬಾದ್: ಸುಮಾರು 20 ಲಕ್ಷದಷ್ಟು ಪೊಲೀಸ್‌ ಸಿಬ್ಬಂದಿ ಆಂತರಿಕ ರಕ್ಷಣೆಗೆ ದುಡಿಯುತ್ತಿರುವ ದೇಶ ಭಾರತ. ಬ್ರಿಟಿಷ್‌ ಆಡಳಿತಾವಧಿಯಲ್ಲಿ ಆಡಳಿತ ನಡೆಸುವವರನ್ನ ಕಾಯುವುದು ಮಾತ್ರ ಅವರ ಆದ್ಯ ಕರ್ತವ್ಯವಾಗಿತ್ತು. ಆದರೆ, ಸ್ವಾತಂತ್ರ್ಯ ಸಾಧಿಸಿದ ಬಳಿಕ ದೇಶದ ಜನರಿಗೆ ರಕ್ಷಣೆ ಒದಗಿಸುವುದು ಪೊಲೀಸ್‌ ವ್ಯವಸ್ಥೆಯ ಪ್ರಾಥಮಿಕ ಆದ್ಯತೆಯ ಕರ್ತವ್ಯವಾಗಿದೆ.

ಸಾರ್ವಜನಿಕ ಸುರಕ್ಷತೆಗೆ ಪೊಲೀಸ್ ಪಡೆ ಜವಾಬ್ದಾರರಾಗಿರಬೇಕು, ಕಾನೂನಿನ ನಿಯಮವನ್ನು ಜಾರಿಗೆ ತರಬೇಕು ಮತ್ತು ಸಮಾಜವನ್ನು ರಕ್ಷಿಸಬೇಕು ಎಂದು ರಾಷ್ಟ್ರೀಯ ಪೊಲೀಸ್ ಆಯೋಗವು ಹಲವು ಬಾರಿ ಆದೇಶ ಮಾಡುವ ಜೊತೆಗೆ ಅದನ್ನ ಕಡ್ಡಾಯ ಮಾಡಿದೆ. ಆದರೂ, ಪೊಲೀಸ್ ವ್ಯವಸ್ಥೆಯು ಸಂಘಟಿತ ಅಪರಾಧಿಗಳ ಗುಂಪಾಗಿ ಮಾರ್ಪಟ್ಟಿದೆ ಎಂದು ಅನೇಕ ಬಾರಿ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಹೊಸ ಹೊಸ ರೀತಿಯಾಗಿ ಹಿಂಸಿಸಿ ಅಮಾಯಕರ ಜೀವ ಬಲಿ ಪಡೆಯುವ ಅವರ ವರ್ತನೆ ಕೆಟ್ಟದ್ದರಿಂದ ಅತ್ಯಂತ ಹೀನ ಪರಿಸ್ಥಿತಿಗೆ ಬಂದಿದೆ. ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತವು ಒಂದು ಸ್ಪಷ್ಟ ಉದಾಹರಣೆಯಾಗಿದೆ.

ಇಬ್ಬರನ್ನ ಬಲಿ ಪಡೆದ ಪೊಲೀಸರ ಕ್ರೂರ ವರ್ತನೆ

ವಿರಾಟ್‌ ರೂಪದಲ್ಲಿ ಹಬ್ಬುತ್ತಿರುವ ಕೊರೊನಾ ವೈರಸ್‌ ಮಹಾಮಾರಿಯನ್ನ ತಡೆಯಲು ಮತ್ತು ರಾಜ್ಯದ ಜನರ ಜೀವ ಉಳಿಸಲು ಲಾಕ್‌ ಡೌನ್‌ ಹೇರುವುದು ಅಗತ್ಯ ಎಂಬ ನಿರ್ಧಾರಕ್ಕೆ ಸರ್ಕಾರಗಳು ಬಂದಿವೆ. ಕೋವಿಡ್ ಪ್ರಕರಣಗಳ ಏರಿಕೆ ದೃಷ್ಟಿಯಲ್ಲಿ ತಮಿಳುನಾಡು ರಾಜ್ಯವು ಮಹಾರಾಷ್ಟ್ರದೊಂದಿಗೆ ಅಕ್ಷರಶಃ ಸ್ಪರ್ಧೆಗೆ ಇಳಿದಂತೆ ತೋರುತ್ತಿದ್ದು, ತಮಿಳುನಾಡು ಸಹ ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಗೊಳಿಸುತ್ತಿದೆ.

ಈ ಮಧ್ಯೆ, 60 ರ ವರ್ಷದ ಜಯರಾಜ್ ಎಂಬ ವ್ಯಕ್ತಿಯು ಜೂನ್ 19 ರಂದು ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿ ತಮ್ಮ ಮೊಬೈಲ್ ಅಂಗಡಿಯನ್ನು ಸಂಜೆ 7: 30 ರ ನಂತರವೂ ತೆರೆದಿಟ್ಟಿದ್ದ ತಪ್ಪಿಗಾಗಿ ಪೊಲೀಸರು ಆತನ ಹಲ್ಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಅವರನ್ನಸತ್ತನುಕುಲಂ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಅಲ್ಲಿ ಅವರನ್ನು ಬಂಧಿಸಲಾಯಿತು. ಈ ಸಂದರ್ಭ, ಆ ವ್ಯಕ್ತಿಯ ಮಗ ಫೀನಿಕ್ಸ್ ಪೊಲೀಸ್‌ ಠಾಣೆಗೆ ತೆರಳಿ ತನ್ನ ತಂದೆಯನ್ನು ಬಿಡುಗಡೆ ಮಾಡುವಂತೆ ಕೋರಿದ್ದಾರೆ. ಈ ಸಂದರ್ಭ ಪೊಲೀಸರ ಜೊತೆಗೆ ವಾಗ್ವಾದ ನಡೆದು ಆತನನ್ನೂ ಬಂಧಿಸಲಾಗಿದೆ. ಈ ರಗಳೆಗಳ ಮಧ್ಯೆ, ಜೂನ್‌ 22 ರಂದು ಜಯರಾಜ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಬಳಿಕ ಅವರನ್ನು ಕೋವಿಲ್ಪತಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂದರ್ಭ ಕರೆ ತರುವಾಗಲೇ ಜಯರಾಜ್‌ ಸತ್ತಿದ್ದಾರೆಂದು ವೈದ್ಯರು ಘೋಷಿಸಿದರು.

ಮರುದಿನ ಮಗ ಕೂಡ ಅದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜಯರಾಜ್ ಮತ್ತು ಫೀನಿಕ್ಸ್ ಅವರ ಸಾವಿಗೆ ಕಾರಣವಾದ ಪೊಲೀಸರ ಮಿತಿ ಮೀರಿದ ಕ್ರೌರ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ ಭಗಿಲೆದಿದ್ದು, ಇದರಿಂದ ಪುರಸಭೆ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆ ಬೆಚ್ಚಿ ಬಿದ್ದಿದೆ. ಈ ಸಂದರ್ಭ ನಡೆದ, ನ್ಯಾಯಾಂಗ ಮ್ಯಾಜಿಸ್ಟ್ರೇಟ್ ತನಿಖೆಯಲ್ಲಿ [ಪೊಲೀಸರ ಅಪರಾಧ ಬಟಾ ಬಯಲಾಗಿದೆ. ಅಪರಾಧ ನ್ಯಾಯ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡ ಪೊಲೀಸ್ ಪಡೆಗಳ ಅಪರಾಧವನ್ನು ತನಿಖೆ ಬೆತ್ತಲೆ ಮಾಡಿದೆ. ಪೊಲೀಸರು ಅಧಿಕಾರ ದುರುಪಯೋಗ ಸ್ಪಷ್ಟವಾಗಿ ಸಾಬೀತಾಗಿದೆ.

ದೌರ್ಜನ್ಯ

ಕೋವಿಲ್ಪಟ್ಟಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಂ.ಎಸ್.ಭಾರತಿ ದಾಸನ್ ಅವರಿಗೆ ಸಲ್ಲಿಸಕೆ ಮಾಡಲಾಗಿರುವ ತನಿಖಾ ವರದಿಯ ಪ್ರಕಾರ - ಪೊಲೀಸ್ ಠಾಣೆಯಲ್ಲಿನ ಸಿಸಿಟಿವಿ ಕ್ಯಾಮೆರಾವನ್ನು ಪ್ರತಿ ದಿನದ ಕೊನೆಯಲ್ಲಿ ರೆಕಾರ್ಡಿಂಗ್ ಅನ್ನು 'ಆಟೋ-ಡಿಲೀಟ್' ಮೋಡ್‌ನಲ್ಲಿ ಇರಿಸುವ ಮೂಲಕ ಅದರಲ್ಲಿ ದಾಖಲಾಗುವ ದೃಶ್ಯಾವಳಿಯನ್ನ ಅಳಿಸುವ ಸಂಚು ನಡೆಸಲಾಗಿತ್ತು. ಆ ರೀತಿ ತಮ್ಮ ಅಪರಾಧಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯ ಸಿಗದಂತೆ ಮಾಡಲು ಪೊಲೀಸರು ಮಸಲತ್ತು ಮಾಡಿದ್ದರು. ಅಷ್ಟೇ ಅಲ್ಲ, ಕಾನ್‌ಸ್ಟೆಬಲ್‌ನಿಂದ ಹಿಡಿದು ಉನ್ನತ ಅಧಿಕಾರಿಯವರೆಗೆ ತಮ್ಮ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ನ್ಯಾಯಾಲಯ ನೇಮಿಸಿದ್ದ ತನಿಖಾ ಸಮಿತಿಯು ತಿಳಿಸಿದೆ.

'ನೀವು ಏನನ್ನೂ ಮಾಡಲು ಸಾಧ್ಯವಿಲ್ಲ' ಎಂದು ಸವಾಲು ಹಾಕುವ ಒಬ್ಬ ಕಾನ್‌ಸ್ಟೆಬಲ್ ಅವರು ಕಾನೂನಿನ ಎಷ್ಟು ಗೌರವವನ್ನು ತೋರಿಸುತ್ತಾರೆ ಎಂಬುದು ಅರ್ಥವಾಗುತ್ತದೆ. ಆ ರಾತ್ರಿ ತಂದೆ-ಮಗ ಇಬ್ಬರ ಮೇಲೆ ಪೊಲೀಸರು ಎಷ್ಟು ದೌರ್ಜನ್ಯ ಎಸಗಿದ್ದಾರೆಂದು ಸ್ಪಷ್ಟವಾಗಿ ವಿವರಿಸುವಾಗ ಮಹಿಳಾ ಕಾನ್‌ ಸ್ಟೆಬಲ್ ತೀವ್ರ ಭಯಭೀತರಾಗಿದ್ದರು, ಗಂಟೆಗಳ ಕಾಲ ಒಟ್ಟಿಗೆ, ಒಬ್ಬರ ನಂತರ ಮತ್ತೊಬ್ಬರು ಭಾರೀ ರಕ್ತಸ್ರಾವ ಆಗುವವರೆಗೂ ಅವರನ್ನು ಕರುಣಾಹೀನರಾಗಿ ಹೊಡೆದು ಕೆಡವಿದ್ದಾರೆ. ಪೀಠೋಪಕರಣಗಳು ಮತ್ತು ಇತರ ವಸ್ತುಗಳ ಮೇಲೂ ರಕ್ತದ ಕಲೆಗಳು ಇದ್ದವು. ಅಮಾಯಕರನ್ನು ಅಪರಾಧಿಗಳ ಕೈಯಿಂದ ರಕ್ಷಿಸಲು ಪೊಲೀಸರಿಗೆ ವಹಿಸಲಾಗಿರುವ ಅಧಿಕಾರವನ್ನು ನ ಅಸಹಾಯಕರನ್ನಾಗಿ ಮಾಡಿದೆ. ಪೊಲೀಸ್ ಠಾಣೆಗಳಲ್ಲಿ ಮೂಲಭೂತ ಹಕ್ಕುಗಳಿಗೆ ಯಾವುದೇ ಅರ್ಥವಿಲ್ಲ. ಸ್ವತಂತ್ರ ಪ್ರಜಾಪ್ರಭುತ್ವ ಭಾರತವಾಗಿ ಹೊರಹೊಮ್ಮಿದ ಎಪ್ಪತ್ತು ವರ್ಷಗಳ ನಂತರವೂ ಇಂತಹ ದೌರ್ಜನ್ಯಗಳು ನಡೆಯುತ್ತಿರುವುದು ದೇಶದ ಖ್ಯಾತಿಗೆ ಕಳಂಕವಾಗಿದೆ.

ಶೀಘ್ರ ಸುಧಾರಣೆ ಅಗತ್ಯ

ಅಮೆರಿಕದಲ್ಲಿ ಇತ್ತೀಚೆಗೆ ಆಫ್ರೋ-ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್‌ ಬಂಧಿಸುವ ಪ್ರಕ್ರಿಯೆಯಲ್ಲಿ, ಪೊಲೀಸರ ಅತಿಯಾದ ಬಲಪ್ರಯೋಗದಿಂದಾಗಿ, ಆತ ಪ್ರಾಣ ಕಳೆದುಕೊಂಡಿದ್ದಾನೆ. ಪೊಲೀಸರ ಈ ಕ್ರೌರ್ಯ ಖಂಡಿಸಿ ಅಮೆರಿಕ ದೇಶಾದ್ಯಂತ ಮತ್ತು ಅನೇಕ ದೇಶಗಳಲ್ಲಿ ಸಾಮೂಹಿಕ ಪ್ರತಿಭಟನೆ ನಡೆಸಲಾಯಿತು. ಈಗ ಅಲ್ಲಿನ ಸರ್ಕಾರವು ಪೊಲೀಸ್ ವ್ಯವಸ್ಥೆಯಲ್ಲಿ ಸೂಕ್ತ ಸುಧಾರಣೆ ಮಾಡಲು ಕಾರ್ಯನಿರ್ವಹಿಸುತ್ತಿದೆ. ಮಿನ್ನಿಯಾಪೋಲಿಸ್ ಆಡಳಿತ ಮಂಡಳಿಯು ನಗರದ ಪೊಲೀಸ್ ಇಲಾಖೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ. ಪ್ರಸ್ತುತ ಅಗತ್ಯಗಳಿಗೆ ತಕ್ಕಂತೆ ಉಕ್ರೇನ್ ಮತ್ತು ಜಾರ್ಜಿಯಾ ಹಳೆಯ ಪೊಲೀಸ್ ವ್ಯವಸ್ಥೆಗಳಲ್ಲಿ ಹೊಸ ಮೌಲ್ಯಯುತ ಬದಲಾವಣೆ ಮಾಡಿವೆ. ಆದರೆ, ಭಾರತದಲ್ಲಿ ಹಲವು ದಶಕಗಳಿಂದ ಪೊಲೀಸ್‌ ವ್ಯವಸ್ಥೆಯ ಸುಧಾರಣಾ ಪ್ರಸ್ತಾಪವು ಕಾಗದದಲ್ಲೇ ಉಳಿದಿದ್ದು ಸುಸಂಸ್ಕೃತ ಜೀವನ ಮಟ್ಟದ ಅಣಕವಾಗಿದೆ.

ಕಾನೂನಿನ ನಿಯಮವನ್ನು ಜಾರಿಗೆ ತಂದಿರುವ 126 ದೇಶಗಳ ಪಟ್ಟಿಯಲ್ಲಿ ಭಾರತ 68 ನೇ ಸ್ಥಾನದಲ್ಲಿದೆ. ಎಂಟು ಅಂಶಗಳ ಮಾನದಂಡದ ಆಧಾರದ ಮೇಲೆ, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯಲ್ಲಿ ಭಾರತ 111 ನೇ ಸ್ಥಾನದಲ್ಲಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ, ನಮ್ಮ ದೇಶದಲ್ಲಿ ಪ್ರತಿದಿನ ಸರಾಸರಿ 15 ಕಸ್ಟಡಿ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ ಮತ್ತು ಅವರಲ್ಲಿ ಒಂಬತ್ತು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸ್‌ ಕಸ್ಟಡಿಯಲ್ಲಿ ಆಗುವ ಹಲವು ಸಾವಿನ ಪ್ರಕರಣಗಳು ಬೆಳಕಿಕೆ ಬರುವುದೇ ಇಲ್ಲ. ಕೆಲವು ಪ್ರಕರಣಗಳು ಬೆಳಕಿಗೆ ಬಂದರೂ ಅವುಗಳ ತನಿಖೆ ಭಾರೆಈ ವಿಳಂಬವಾಗಿ ನಡೆಯುತ್ತವೆ ಎನ್ನುತ್ತದೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ.

ಕಾನೂನಿಗಿಂತ ಯಾರೂ ದೊಡ್ಡವರಲ್ಲ

ಸಂವಿಧಾನವು ಎಲ್ಲರಿಗಿಂತ ಶ್ರೇಷ್ಠವಾದದ್ದು ಎಂದು ಸುಪ್ರೀಂ ಕೋರ್ಟ್ ಪದೇ ಪದೇ ಸ್ಪಷ್ಟಪಡಿಸುತ್ತಲೇ ಇದೆ. ಬಲ್ಗೇರಿಯಾದ ಪ್ರಧಾನ ಮಂತ್ರಿ ಕಳೆದ ತಿಂಗಳು 23 ರಂದು ಚರ್ಚ್‌ಗೆ ಹೋದಾಗ ಫೇಸ್ ಮಾಸ್ಕ್ ಧರಿಸದಿದ್ದಕ್ಕಾಗಿ ದೇಶದ ಆರೋಗ್ಯ ಸಚಿವಾಲಯ 300 lews(ಬಲ್ಗೇರಿಯಾ ಕರೆನ್ಸಿ) (13,000 ರೂ) ದಂಡ ವಿಧಿಸಿದೆ. ಅಲ್ಲಿ ಈ ರೀತಿ ಕಾನೂನಿಗೆ ಗೌರವ ಕೊಡಲಾಗುತ್ತಿದೆ! ಆದರೆ, ಭಾರತದಲ್ಲಿ 2015 ರಿಂದ 2019ರ ಅವಧಿಯಲ್ಲಿ ಅಪರಾಧ ಪ್ರಮಾಣ ಶೇ. 28 ರಷ್ಟು ಹೆಚ್ಚಾಗಿದೆ. ಆದರೆ, ಅಪರಾಧಿಗಳ ವಿಚಾರಣೆ ಮತ್ತು ಶಿಕ್ಷೆ ವಿಧಿಸುವ ವಿಧಾನದಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲ. "ಇಲ್ಲಿ ಯಾವುದೇ ಕಾನೂನು ಸುವ್ಯವಸ್ಥೆ ನಿಯಮವಿಲ್ಲ ಎಂದು ಅರ್ಥವಲ್ಲ.ಆದರೆ ರಾಜಕೀಯ ಆಡಳಿತ ವರ್ಗದ ಕಾನೂನು ಕೂಡ ಜಾರಿಯಲ್ಲಿದೆ." ಎಂದು ಉತ್ತರ ಪ್ರದೇಸದ ಮಾಜಿ ಡಿಜಿಪಿ ಪ್ರಕಾಶ್ ಸಿಂಗ್‌ ಹೇಳಿದ್ದಾರೆ.

ಅಧಿಕಾರದಲ್ಲಿರುವ ಜನರನ್ನು ಮೆಚ್ಚಿಸಲು ಮತ್ತು ಅವರ ಮಾರ್ಗವನ್ನು ಸಂತೋಷದಿಂದ ಪಾಲಿಸಲು ಪೊಲೀಸ್ ಪಡೆ ಏನು ಬೇಕಾದರೂ ಮಾಡುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಹೀಗಾಗಿ, ನಾವು ಅವರಿಂದ ನೈತಿಕ ಸಮಗ್ರತೆ, ಸಾರ್ವಜನಿಕ ಸುರಕ್ಷತೆಯ ಪ್ರಜ್ಞೆಯನ್ನು ಹೇಗೆ ನಿರೀಕ್ಷಿಸಬಹುದು? ದಶಕಗಳಿಂದ ಪೊಲೀಸರ ಮೇಲೆ ಹೆಚ್ಚುತ್ತಿರುವ ಒತ್ತಡಗಳನ್ನ ನಾವು ನಿರ್ಲಕ್ಷಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯ ಅಲುಗಾಡುತ್ತದೆ ಎಂಬ ಎಚ್ಚರಿಕೆ ನಾವು ನಿರ್ಲಕ್ಷಿಸುತ್ತಿದ್ದೇವೆ.. ಕಿವುಡರಂತೆ ವರ್ತಿಸುತ್ತಿದ್ದೇವೆ! ಸಂವಿಧಾನಾತ್ಮಕ ಮೌಲ್ಯಗಳ ಅಪಹಾಸ್ಯವು ಅಶಿಸ್ತಿನ ಅಧಿಕಾರಶಾಹಿ ವ್ಯವಸ್ಥೆಯ ಕೈಯಲ್ಲಿ ಮುಂದುವರಿಯುತ್ತಿದೆ. ಪೊಲೀಸರು ಇಚ್ಛೆಯಿಂದಲೇ ಕಸ್ಟಡಿ ಅಪರಾಧಗಳನ್ನು ಮಾಡುವವರೆಗೆ, ಮುಗ್ಧರ ಸಾವಿನ ಕೂಗು ಕತ್ತಲ ಕೋಣೆಗಳಲ್ಲೇ ಉಳಿಯುತ್ತದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಉತ್ತಮ ವೃತ್ತಿಪರತೆ, ಸಮರ್ಪಣೆ, ಸವಾಲುಗಳನ್ನು ಎದುರಿಸುವ ಶಕ್ತಿ, ಸುಧಾರಿತ ತರಬೇತಿ ಇತ್ಯಾದಿಗಳೊಂದಿಗೆ ಹೊಸ ರೀತಿಯ ಪೊಲೀಸ್ ಪಡೆ ಹೊರಹೊಮ್ಮಬೇಕೆಂದು ಇಚ್ಛಿಸಿದ್ದರು, ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ಸಹ 'ಸ್ಮಾರ್ಟ್' ಪೊಲೀಸರ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಅಗತ್ಯವಾದ ವೃತ್ತಿಪರ ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆಯನ್ನು ಪೊಲೀಸ್ ವ್ಯವಸ್ಥೆಗೆ ಒದಗಿಸದೆ ಮೇಲ್ನೋಟದ ಸುಧಾರಣೆಗಳಿಂದ ನಾಗರಿಕ ಸ್ವಾತಂತ್ರ್ಯಗಳನ್ನು ರಕ್ಷಿಸಿಕೊಳ್ಳಬಹುದೇ? ಪೊಲೀಸ್‌ ವ್ಯವಸ್ಥೆಯು ಶಿಸ್ತಿನಿಂದ ಸಂವಿಧಾನವನ್ನು ಗೌರವಿಸಲು ಸಿದ್ಧರಾಗಿರಬೇಕು, ಕಾನೂನಿನ ಅನ್ವಯ ಕೆಲಸ ಮಾಡಬೇಕು, ಸಾರ್ವಜನಿಕ ಸುರಕ್ಷತೆಗೆ ಉನ್ನತ ಆದ್ಯತೆಯಾಗಿ ತಮ್ಮನ್ನು ತಾವು ಸ್ವ ಇಚ್ಛೆಯಿಂದ ತೊಡಗಿಸಿಕೊಳ್ಳಲು ಶಿಸ್ತಿನೊಂದಿಗೆ ಸಿದ್ಧರಾಗಬೇಕು, ಆಗ ಮಾತ್ರ, ದೇಶವು ಸುರಕ್ಷಿತ ಮತ್ತು ಸಂತೋಷದಿಂದ ಕೂಡಿರುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.