ETV Bharat / bharat

ಭಾರತದಲ್ಲಿ 4 ಸಾವು, 258 ಸೋಂಕಿತರು: ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ - ಭಾರತದಲ್ಲಿ ಕೊರೊನಾ ವೈರಸ್

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 250ರ ಗಡಿ ದಾಟಿದ್ದು, ಈವರೆಗಿನ ಮಾಹಿತಿ ಪ್ರಕಾರ ಒಟ್ಟು 258 ಸೋಂಕಿತರು ಪತ್ತೆಯಾಗಿದ್ದಾರೆ.

COVID19 in India now stands at 258,ಭಾರತದಲ್ಲಿ 4 ಸಾವು, 258 ಸೋಂಕಿತರು
ಭಾರತದಲ್ಲಿ 4 ಸಾವು, 258 ಸೋಂಕಿತರು
author img

By

Published : Mar 21, 2020, 10:41 AM IST

ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್​​ ವ್ಯಾಪಕವಾಗಿ ಹಬ್ಬುತ್ತಿದೆ. ಇದರಿಂದಾಗಿ ಸೋಂಕಿತರ ಪ್ರಮಾಣ ಭಾರತದಲ್ಲಿ 250ರ ಗಡಿ ದಾಟಿದೆ. ಈವರೆಗಿನ ಮಾಹಿತಿ ಪ್ರಕಾರ, ಒಟ್ಟು 258 ಜನ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

  • The total number of positive cases of #COVID19 in India now stands at 258 (including 39 foreigners), 4 deaths (1 each) in Delhi, Karnataka, Punjab and Maharashtra: Ministry of Health and Family Welfare pic.twitter.com/oJhLdpl5oA

    — ANI (@ANI) March 21, 2020 " class="align-text-top noRightClick twitterSection" data=" ">

ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಮತ್ತು ಪಂಜಾಬ್​ನಲ್ಲಿ ತಲಾ ಒಂದೊಂದು ಸಾವು ಸಂಭವಿಸಿದೆ. ಇಲ್ಲಿಯವರೆಗೆ ದೇಶದಲ್ಲಿ 23 ಮಂದಿ ಚಿಕಿತ್ಸೆ ಬಳಿಕ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ.

258 ಜನರ ಪೈಕಿ 39 ಜನ ವಿದೇಶಿಗರು ಕೂಡ ಭಾರತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದಂತೆ, ಮಹಾರಾಷ್ಟ್ರದಲ್ಲಿ 49 ಪ್ರಕರಣಗಳು ಕಂಡು ಬಂದಿದ್ದು ಕೇರಳದಲ್ಲಿ 33, ನವದೆಹಲಿಯಲ್ಲಿ 25 ಮತ್ತು ಉತ್ತರ ಪ್ರದೇಶದಲ್ಲಿ 23 ಜನರಲ್ಲಿ ಸೋಂಕು ಪತ್ತೆಯಾಗಿದೆ. ವಿದೇಶಿಗರನ್ನು ಹೊರತುಪಡಿಸಿ 219 ಭಾರತೀಯರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.