ETV Bharat / bharat

ಅವಲೋಕನ : ರಾಷ್ಟ್ರೀಯ ಯುವ ದಿನ–ಭಾರತೀಯ ಆರ್ಥಿಕತೆಯಲ್ಲಿ ಯುವಶಕ್ತಿ ಪಾತ್ರ.. - Rapid change in social and technology sectors

ಭಾರತದ ಜನಸಂಖ್ಯೆಯ ಅರ್ಧಕ್ಕೂ ಹೆಚ್ಚು ಜನತೆ ಅಂದರೆ ಅಂದಾಜು 60 ಕೋಟಿ ಜನ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಈ 60 ಕೋಟಿ ಜನ ಜಗತ್ತನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.

National youth day
ರಾಷ್ಟ್ರೀಯ ಯುವ ದಿನ
author img

By

Published : Jan 22, 2020, 6:12 PM IST

ಯುವ ಜನತೆಯೇ ದೇಶದ ಭವಿಷ್ಯದ ಪರಿವರ್ತನಾಕಾರರು, ಸೃಷ್ಟಿಕರ್ತರು, ನಿರ್ಮಾತೃಗಳು ಹಾಗೂ ನಾಯಕರು. ಆದರೆ, ಸೂಕ್ತ ಶಿಕ್ಷಣ,ಕೌಶಲಗಳು ಮತ್ತು ಉತ್ತಮ ಆರೋಗ್ಯ ದಕ್ಕಿದಾಗ ಮಾತ್ರ ಅವರು ದೇಶದ ಭವಿಷ್ಯ ಬದಲಿಸಬಲ್ಲರು. ಭಾರತದ ಜನಸಂಖ್ಯೆಯ ಅರ್ಧಕ್ಕೂ ಹೆಚ್ಚು ಜನತೆ ಅಂದರೆ ಅಂದಾಜು 60 ಕೋಟಿ ಜನ 25ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಈ 60 ಕೋಟಿ ಜನ ಜಗತ್ತನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.

ಜಗತ್ತಿನಾದ್ಯಂತ ಈಗ 10ರಿಂದ 24ವರ್ಷದೊಳಗಿನ 180 ಕೋಟಿ ಯುವಕರಿದ್ದಾರೆ. ಇದೇ ವಯೋಮಾನದ 35.60 ಕೋಟಿ ಯುವಕರು ಭಾರತದಲ್ಲಿದ್ದು, ಇದು ಇಡೀ ಜಗತ್ತಿನಲ್ಲಿಯೇ ಅತ್ಯಧಿಕ. 26.90 ಕೋಟಿ ಜನಸಂಖ್ಯೆಯೊಂದಿಗೆ ಚೀನಾ 2ನೇ ಸ್ಥಾನದಲ್ಲಿದೆ. ಇಂಡೋನೇಷ್ಯ (6.7 ಕೋಟಿ), ಅಮೆರಿಕ (6.5 ಕೋಟಿ),ಪಾಕಿಸ್ತಾನ (5.9 ಕೋಟಿ), ನೈಜೀರಿಯಾ (5.7ಕೋಟಿ), ಬ್ರೆಜಿಲ್‌ (5.1 ಕೋಟಿ) ಹಾಗೂ ಬಾಂಗ್ಲಾದೇಶ (4.8 ಕೋಟಿ) ನಂತರದ ಸ್ಥಾನದಲ್ಲಿವೆ ಎನ್ನುತ್ತದೆ ವಿಶ್ವಸಂಸ್ಥೆ ಜನಸಂಖ್ಯಾ ನಿಧಿ (ಯುನೈಟೆಡ್‌ ನೇಷನ್ಸ್‌ ಪಾಪುಲೇಶನ್‌ ಫಂಡ್‌-ಯುಎನ್‌ಎಫ್‌ಪಿಎ) ವರದಿ.

ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ದೇಶ ಎಂದು ಹೆಸರಾಗಿರುವ ಭಾರತವು ಜಗತ್ತಿನ ಶೇ.19ರಷ್ಟು ಯುವಕರನ್ನು ಹೊಂದಿದೆ. ಭಾರತದ ಈ ಯುವಜನತೆ ಅತ್ಯಂತ ಬೆಲೆ ಬಾಳುವ ಆಸ್ತಿಯಷ್ಟೇ ಅಲ್ಲ. ಅತ್ಯಂತ ಭರವಸೆದಾಯಕ ಭಾಗವೂ ಹೌದು. ಇದು ದೇಶಕ್ಕೆ ವಿಶಿಷ್ಟ ಜನಸಂಖ್ಯಾ ಅನುಕೂಲತೆ ಒದಗಿಸಿದೆ. ಆದರೆ, ಮಾನವ ಸಂಪನ್ಮೂಲದ ಅಭಿವೃದ್ಧಿಯಲ್ಲಿ ಸೂಕ್ತ ಹೂಡಿಕೆಯನ್ನು ಮಾಡದಿದ್ದರೆ ಈ ಅವಕಾಶ ಕಳೆದುಹೋಗುತ್ತದೆ.

ಆರ್ಥಿಕ, ಜನಸಂಖ್ಯಾತ್ಮಕ, ಸಾಮಾಜಿಕ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಕ್ಷಿಪ್ರ ಬದಲಾವಣೆ ಎದುರಿಸುತ್ತಿರುವ ಭಾರತವು, ತನ್ನ ಬೆಳವಣಿಗೆಯ ಲಾಭ ಸಮಾಜದ ಎಲ್ಲಾ ವರ್ಗದ ಜನರಿಗೂ ತಲುಪುವಂತೆ ನೋಡಿಕೊಳ್ಳಬೇಕಿದೆ. ಯುವಜನತೆ ಆರ್ಥಿಕ ಬೆಳವಣಿಗೆಯ ಪ್ರಗತಿಯಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಳ್ಳುವಂತೆ ನೋಡಿಕೊಂಡಾಗ ಮಾತ್ರ ಭಾರತ ಈ ಗುರಿ ಸಾಧಿಸಲು ಸಾಧ್ಯ. ಆದರೆ, ದುರದೃಷ್ಟವಶಾತ್‌, ಭಾರತದ ಕೆಲಸಗಾರರ ಪೈಕಿ ಕೇವಲ ಶೇಕಡಾ 2.3ರಷ್ಟು ಮಾತ್ರ (ದಕ್ಷಿಣ ಕೊರಿಯಾದ ಶೇಕಡಾ 96 ಪ್ರಮಾಣಕ್ಕೆ ಹೋಲಿಸಿದರೆ) ಕೌಶಲಗಳನ್ನು ಅಥವಾ ಶಿಕ್ಷಣದ ನಂತರದ ಔಪಚಾರಿಕ ತರಬೇತಿ ಹೊಂದಿದ್ದಾರೆ. ದೇಶದ ಶೇಕಡಾ 20ರಷ್ಟು ಪದವೀಧರರು ಮಾತ್ರ ಕಂಪನಿಗಳಿಂದ ತಕ್ಷಣದ ನೇಮಕಾತಿಗೆ ಒಳಗಾಗುತ್ತಿದ್ದಾರೆ. ಉಳಿದ ಶೇ.80ರಷ್ಟು ಜನ ಉದ್ಯೋಗ ಕ್ಷೇತ್ರದಲ್ಲಿ ಆಯ್ಕೆಗೆ ಒಳಗಾಗುತ್ತಿಲ್ಲ.

ದೇಶ

ಜಾಗತಿಕ ಜಿಡಿಪಿ ಶ್ರೇಯಾಂಕ-2019

ಯುವಕರ ಸಂಖ್ಯೆ (10-24ವರ್ಷ) ದಶಲಕ್ಷಗಳಲ್ಲಿ

ಜಿಡಿಪಿ ಲಕ್ಷ ಕೋಟಿಯಲ್ಲಿ

ಜಾಗತಿಕ ಯುವಜನತೆ ಶೇಕಡವಾರು

ಜಗತ್ತಿನ ಜಿಡಿಪಿ ಶೇಕಡವಾರು

ಅಮೆರಿಕ

1

65

21

3%

25 %

ಚೀನಾ

2

269

14

15%

16%

ಭಾರತ

6

356

2.9

19%

3%

ಜಾಗತಿಕ

1800

86.5

2019ರ ಜಾಗತಿಕ ಒಟ್ಟು ಆಂತರಿಕ ಉತ್ಪಾದನೆಯ ಅಂಕಿ-ಅಂಶಗಳ ಪ್ರಕಾರ ಜಿಡಿಪಿಗೆ ಯುವ ಜನಸಂಖ್ಯೆ ಕೊಡುಗೆ ಶೇ.19. ಈ ಅಂಕಿ ಅಂಶಗಳ ಪ್ರಕಾರ ಜಿಡಿಪಿ ಉತ್ಪಾದನೆಯಲ್ಲಿ 6ನೇ ಸ್ಥಾನದಲ್ಲಿರುವ ಭಾರತದ ಯುವಕರು ಜಗತ್ತಿನ ಜಿಡಿಪಿಗೆ ನೀಡುತ್ತಿರುವ ಪಾಲು ಕೇವಲ ಶೇ.3. ಆದರೆ, ಕೇವಲ ಶೇ.3 ಜಾಗತಿಕ ಯುವಜನತೆಯ ಪ್ರಮಾಣ ಹೊಂದಿರುವ ಅಮೆರಿಕದಲ್ಲಿ ಜಿಡಿಪಿಯ ಶೇ.25ರಷ್ಟು ಪಾಲನ್ನು ಅಲ್ಲಿಯ ಶೇ.3ರಷ್ಟು ಯುವಜನತೆ ನೀಡುವ ಮೂಲಕ ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿದ್ದಾರೆ. ಯುವಜನತೆಯ ಪ್ರಮಾಣದ ಜಾಗತಿಕ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿರುವ ಚೀನಾ ದೇಶವು ಶೇ.15ರಷ್ಟು ಯುವಜನತೆಯಿಂದ ಶೇ.16ರಷ್ಟು ಜಾಗತಿಕ ಒಟ್ಟು ಆಂತರಿಕ ಉತ್ಪಾದನೆ ಮಾಡುತ್ತಿದೆ. ಭಾರತದ ಯುವಜನತೆಯ ಮುಂದಿರುವ ಸಾಧ್ಯತೆಗಳು ಮತ್ತು ಜಿಡಿಪಿಯಲ್ಲಿ ಅವರ ಕೊಡುಗೆಯ ನಡುವೆ ಇರುವ ಅಂತರವನ್ನು ಈ ಅಂಕಿ-ಅಂಶಗಳು ಸ್ಪಷ್ಟವಾಗಿ ತೋರಿಸುತ್ತವೆ.

ಪ್ರಸಕ್ತ ಪರಿಸ್ಥಿತಿ

ಭಾರತವು ಕೌಶಲದ ಅತಿ ಹೆಚ್ಚು ಕೊರತೆ ಎದುರಿಸುತ್ತಿದ್ದು, ಜಗತ್ತಿನ ಇತರ ದೇಶಗಳ ತುಲನೆಯಲ್ಲಿ ಶೇ.64ರಷ್ಟು ಕೊರತೆ ಮೂಲಕ ಶ್ರೇಯಾಂಕ ಪಟ್ಟಿಯಲ್ಲಿ ಮೇಲಿನಿಂದ 2ನೇ ಸ್ಥಾನದಲ್ಲಿದೆ. ಶೇ.24ರಷ್ಟು ಕೊರತೆ ಮೂಲಕ ಚೀನಾ ಕೆಳಗಿನ ಸ್ಥಾನಕ್ಕೆ ಹತ್ತಿರದಲ್ಲಿದೆ ಎನ್ನುತ್ತದೆ ಒಇಸಿಡಿಯ 2014ನೇ ಸಾಲಿನ ವರದಿ.

2020ರಲ್ಲಿ ಭಾರತದಲ್ಲಿ ಉದ್ಭವಿಸಬಹುದಾದ ಉದ್ಯೋಗಗಳ ಕುರಿತು ವರದಿ ನೀಡಿರುವ ವೃತ್ತಿಪರರ ತಾಣ ಲಿಂಕ್ಡ್‌ ಇನ್‌, ಪ್ರಸಕ್ತ ಮಾರುಕಟ್ಟೆಯಲ್ಲಿ ಉದ್ಭವವಾಗಿರುವ ಹೊಸ ಉದ್ಯೋಗಗಳ ಕುರಿತ ಮಹತ್ವದ ಅಂಶಗಳನ್ನು ಪಟ್ಟಿ ಮಾಡಿದೆ. ಬ್ಲಾಕ್‌ ಚೈನ್‌ ಡೆವಲಪರ್ಸ್‌, ಕೃತಕ ಬುದ್ಧಿಮತ್ತೆ ತಜ್ಞರು, ಜಾವಾ ಸ್ಕ್ರಿಪ್ಟ್‌ ಡೆವಲಪರ್‌, ರೊಬೊಟಿಕ್‌ ಪ್ರೊಸೆಸ್‌ ಆಟೊಮೇಶನ್‌ ಕನ್ಸಲ್ಟಂಟ್‌, ಬ್ಯಾಕ್‌ ಎಂಡ್‌ ಡೆವಲಪರ್‌, ಗ್ರೌಥ್‌ ಮ್ಯಾನೇಜರ್‌, ಸೈಟ್‌ ರಿಲೈಯೆಬಿಲಿಟಿ ಎಂಜಿನಿಯರ್‌, ಕಸ್ಟಮರ್‌ ಸಕ್ಸೆಸ್‌ ಸ್ಪೆಷಲಿಸ್ಟ್‌, ರೊಬೊಟಿಕ್ಸ್‌ ಎಂಜಿನಿಯರ್‌, ಸೈಬರ್‌ ಸೆಕ್ಯುರಿಟಿ ಸ್ಪೆಶಲಿಸ್ಟ್‌, ಪೈಥಾನ್‌ ಡೆವಲಪರ್‌, ಡಿಜಿಟಲ್‌ ಮಾರ್ಕೆಟಿಂಗ್‌ ಸ್ಪೆಷಲಿಸ್ಟ್‌, ಫ್ರಂಟ್‌ ಎಂಡ್‌ ಎಂಜಿನಿಯರ್ಸ್‌ ಮುಂತಾದ ಕ್ಷೇತ್ರಗಳು ಕ್ಷಿಪ್ರವಾಗಿ ವಿಕಾಸವಾಗುತ್ತಿವೆ ಎಂದಿದೆ.

ಇನ್ನು ಹೈಪರ್‌ ಲೆಡ್ಜರ್‌, ಸಾಲಿಡಿಟಿ, ನೋಟ್ಜೆಸ್.‌, ಸ್ಮಾರ್ಟ್‌ ಕಾಂಟ್ಯಾಕ್ಟ್‌, ಮಷೀನ್‌ ಲರ್ನಿಂಗ್‌, ಡೀಪ್‌ ಲರ್ನಿಂಗ್‌, ಟೆನ್ಸರ್‌ಫ್ಲೊ, ಪೈಥಾನ್‌ ಪ್ರೋಗ್ರಾಮಿಂಗ್‌ ಲಾಂಗ್ವೇಜ್‌, ನ್ಯಾಚುರಲ್‌ ಲಾಂಗ್ವೇಜ್‌ ಪ್ರೊಸೆಸಿಂಗ್‌ (ಎನ್‌ಎಲ್‌ಪಿ) ಮುಂತಾದವು ಬಹುರಾಷ್ಟ್ರೀಯ ಕಂಪನಿಗಳು ಪ್ರಸ್ತುತ ಎದುರು ನೋಡುತ್ತಿರುವ ಹೊಸ ಕೌಶಲಗಳು. ಇನ್ಫೋಸಿಸ್‌ ಕಂಪನಿ 2019ರಲ್ಲಿ ಹೊರತಂದಿರುವ "ಪ್ರತಿಭಾ ರೇಡಾರ್‌ ವರದಿ"ಯು (ಟ್ಯಾಲೆಂಟ್‌ ರೇಡಾರ್‌ ರಿಪೋರ್ಟ್‌) ಅತಿ ಹೆಚ್ಚು ಬೇಡಿಕೆಯಲ್ಲಿರುವ ಐದು ತಾಂತ್ರಿಕ ಕೌಶಲಗಳನ್ನು ಪಟ್ಟಿ ಮಾಡಿದೆ. ಅವು ಬಳಕೆದಾರರ ಅನುಭವ (ಶೇ.67ರಷ್ಟು ಡಿಜಿಟಲ್‌ ತೊಡಗುವಿಕೆ), ವಿಶ್ಲೇಷಣೆ (ಅನಲೈಟಿಕ್ಸ್‌ ಶೇ.67), ಆಟೊಮೇಶನ್‌ (ಶೇ.61), ಐಟಿ ಆರ್ಕಿಟೆಕ್ಚರ್‌ (ಕ್ಲೌಡ್‌ ಸಹಿತ) (ಶೇಕಡಾ 59) ಹಾಗೂ ಕೃತಕ ಬುದ್ಧಿಮತ್ತೆ (ಶೇಕಡಾ 58).

ನೇರವಾಗಿ ಹೇಳುವುದಾದರೆ, ಈ ಹೊಸ ಕೌಶಲಗಳನ್ನು ದೇಶದ ಯಾವ ವಿಶ್ವವಿದ್ಯಾಲಯ ಅಥವಾ ತಾಂತ್ರಿಕ ಎಂಜಿನಿಯರಿಂಗ್‌ ಸಂಸ್ಥೆಗಳಲ್ಲಿಯೂ ಕಲಿಸುತ್ತಿಲ್ಲ. ಈ ಸಂಸ್ಥೆಗಳಲ್ಲಿರುವ ತಾಂತ್ರಿಕ ಸಿಬ್ಬಂದಿ ಇವುಗಳ ಹೆಸರುಗಳನ್ನೂ ಸಹ ಕೇಳಿಲ್ಲ. ಜಗತ್ತಿನಾದ್ಯಂತ ಸದ್ಯ ಇರುವ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯ ತಾಂತ್ರಿಕ ಉದ್ಯೋಗಗಳಿಗೆ ಯುವಜನತೆಯನ್ನು ಸಮರ್ಥರನ್ನಾಗಿಸುವಲ್ಲಿ ಇರುವ ಪ್ರಮುಖ ಸಮಸ್ಯೆ ಇದು. ತರಗತಿಯ ತಿಳಿವಳಿಕೆ, ಯುವಜನತೆಯಲ್ಲಿರುವ ಕೌಶಲಗಳು ಹಾಗೂ ಜಾಗತೀಕರಣಗೊಂಡಿರುವ ಪ್ರಸಕ್ತ ಕೈಗಾರಿಕೆ ಅವಶ್ಯಕತೆಗಳ ನಡುವಿನ ಈ ಅಂತರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸೂಕ್ತ ಬೋಧಕ ಹಾಗೂ ಸೌಲಭ್ಯಗಳ ಮೂಲಕ ಈ ಹೊಸ ತಾಂತ್ರಿಕ ಕೌಶಲಗಳ ಕುರಿತು ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲಿಯೇ ತರಬೇತಿ ನೀಡುವಂತಾದಾಗ ಮಾತ್ರ ಈ ಅಂತರವನ್ನು ತುಂಬಲು ಸಾಧ್ಯವಾಗಬಹುದು.

ವ್ಯಾಪಾರದ ಡಿಜಿಟಲೀಕರಣವು ಹೊಸ ತಾಂತ್ರಿಕ ಕೌಶಲಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತಿದ್ದು, ಇದನ್ನು ತುಂಬಿಕೊಳ್ಳಲು ಕೈಗಾರಿಕಾ ಕ್ಷೇತ್ರದಾದ್ಯಂತ ಕಂಪನಿಗಳು ಕಷ್ಟಪಡುತ್ತಿವೆ. ಆಟೊಮೇಶನ್‌ ಮತ್ತು ಕೃತಕ ಬುದ್ಧಿಮತ್ತೆಯಿಂದಾಗಿ 2025ರ ಹೊತ್ತಿಗೆ 750 ಲಕ್ಷ ಉದ್ಯೋಗಗಳು ಇಲ್ಲವಾಗುತ್ತವೆ ಎಂದು 'ವಿಶ್ವ ಆರ್ಥಿಕ ವೇದಿಕೆ' (ವರ್ಲ್ಡ್‌ ಎಕನಾಮಿಕ್‌ ಫೋರಮ್)‌ ಮುನ್ಸೂಚನೆ ನೀಡಿದೆಯಾದರೂ, ಹೊಸದಾಗಿ 1330 ಲಕ್ಷ ಉದ್ಯೋಗಗಳು ಇವುಗಳಿಂದ ಸೃಷ್ಟಿಯಾಗಲಿವೆ. ಆದ್ದರಿಂದ, ಈ ಹೊಸ ತಾಂತ್ರಿಕ ಕೌಶಲಗಳನ್ನು ಕಲಿಯಲು ಯುವಜನತೆಯನ್ನು ಸಿದ್ಧಗೊಳಿಸುವ ಮೂಲಕ ಹೊಸ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ದೇಶದ ಯಶಸ್ಸು ಅಡಗಿದೆ.

ತಂತ್ರ ಕುಶಲತೆಯ ಚೌಕಟ್ಟು – ಕ್ರಿಯಾ ಯೋಜನೆ

ಭಾರತೀಯ ಶೈಕ್ಷಣಿಕ ವ್ಯವಸ್ಥೆಯು ಹಲವಾರು ಯುವ ಪದವೀಧರರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದೆ. ಏಕೆಂದರೆ, ಕಾಲೇಜಿನ ನಂತರ ಸ್ಪರ್ಧಾತ್ಮಕ ಮಾರುಕಟ್ಟೆಗೆ ಸೂಕ್ತವಾಗುವಂತಹ ಯಾವುದೇ ಕೌಶಲಗಳನ್ನು ಅವರಿಗೆ ಕಲಿಸಿರುವುದಿಲ್ಲ. ಆಸ್ಪೈರಿಂಗ್‌ ಮೈಂಡ್‌ ಎಂಬ ಭಾರತೀಯ ಪ್ರತಿಭಾ ಮೌಲ್ಯಮಾಪನ ಸಂಸ್ಥೆಯ ಅಧ್ಯಯನ ವರದಿಯ ಪ್ರಕಾರ, ಪ್ರಸಕ್ತ ಜ್ಞಾನ ಆರ್ಥಿಕತೆಯಲ್ಲಿ ಶೇ.89ರಷ್ಟು ಭಾರತೀಯ ಎಂಜಿನಿಯರ್‌ಗಳು ನಿರುದ್ಯೋಗಿಗಳಾಗಿದ್ದಾರೆ. ಭಾರತೀಯ ಅಸೋಸಿಯೇಟೆಡ್‌ ಚೇಂಬರ್ಸ್‌ ಆಫ್‌ ಕಾಮರ್ಸ್‌ ಆಂಡ್‌ ಇಂಡಸ್ಟ್ರಿ ಸಂಸ್ಥೆಯು ಕಳೆದ ವರ್ಷ ವರದಿ ಮಾಡಿರುವಂತೆ, ಭಾರತದ ವಾಣಿಜ್ಯ ಬೋಧನಾ ಸಂಸ್ಥೆಗಳ ಪದವೀಧರರ ಪೈಕಿ ಕೇವಲ ಶೇ.7ರಷ್ಟು ಮಂದಿ ಮಾತ್ರ ಉದ್ಯೋಗ ಪಡೆದುಕೊಂಡಿದ್ದಾರೆ. 2018ರಲ್ಲಿ ಭಾರತದ ನಿರುದ್ಯೋಗಿ ಯುವಜನತೆಯ ಅಂದಾಜು ಪ್ರಮಾಣ ಶೇ.10.42 ಆಗಿತ್ತು. ಕಳೆದೊಂದು ದಶಕದಲ್ಲಿ, ಭಾರತದ ಯುವಜನತೆಯ ನಿರುದ್ಯೋಗ ಪ್ರಮಾಣ ಶೇ.10ರ ಅಕ್ಕಪಕ್ಕದಲ್ಲಿಯೇ ಹರಿದಾಡುತ್ತಿದೆ.

ಕೊನೆಗೂ ಸರ್ಕಾರ ಕೆಲವೊಂದು ಸರಿಯಾದ ಕ್ರಮಗಳನ್ನು ಸರಿಯಾದ ದಿಕ್ಕಿನಲ್ಲಿ ಕೈಗೊಳ್ಳಲು ಮುಂದಾಗಿದೆ. ಔದ್ಯಮಶೀಲತೆ ಹೆಚ್ಚಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಸ್ಟಾರ್ಟ್‌ ಅಪ್‌ ಇಂಡಿಯಾ ಉಪಕ್ರಮ; ಸ್ಕಿಲ್‌ ಇಂಡಿಯಾ ಮಿಶನ್‌ನ ಪ್ರಾರಂಭ; ಕೌಶಲ ಅಭಿವೃದ್ಧಿ ಮತ್ತು ಔದ್ಯಮಶೀಲತೆಗಾಗಿಯೇ ಪ್ರತ್ಯೇಕ ಸಚಿವಾಲಯದ ಸ್ಥಾಪನೆ; ಕೈಗಾರಿಕಾ ನೇತೃತ್ವ ಕೌಶಲ ಪರಿಷತ್‌ಗಳ ವಲಯಗಳ ಸ್ಥಾಪನೆ, ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಪೂರ್ಣ ದುರಸ್ತಿ ಆ ಪೈಕಿ ಕೆಲವು.

ಇನ್ನು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ್ದ 2019-20ನೇ ಸಾಲಿನ ಮುಂಗಡಪತ್ರವು ಶಿಕ್ಷಣ ಕ್ಷೇತ್ರವನ್ನು ಪ್ರಧಾನವಾಗಿ ಬಿಂಬಿಸಿದೆ. ಭಾರತೀಯ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಿಸುವ ಉದ್ದೇಶದ ಹೊಸ ರಾಷ್ಟ್ರೀಯ ಉದ್ಯೋಗ ನೀತಿಯನ್ನು ಅವರು ಘೋಷಿಸಿದ್ದರು. ಯುವ ಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ, ಸೂಕ್ತ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಅವರನ್ನು ಉದ್ಯೋಗ ಪಡೆಯಲು ಸಮರ್ಥರನ್ನಾಗಿಸುವುದಕ್ಕೆ ಒತ್ತು ನೀಡಿದ್ದರು. ಕೃತಕ ಬುದ್ಧಿಮತ್ತೆ (ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್)‌, ರೊಬೊಟಿಕ್ಸ್‌, ಭಾಷಾ ತರಬೇತಿ, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌, 3ಡಿ ಪ್ರಿಂಟಿಂಗ್‌, ವರ್ಚುವಲ್‌ ರಿಯಾಲಿಟಿ, ಬಿಗ್‌ ಡೇಟಾದಂತಹ ಕ್ಷೇತ್ರಗಳಲ್ಲಿ ತರಬೇತಿ ನೀಡುವ ಯೋಜನೆಗಳನ್ನು ಜಾರಿಗೆ ತರುವ ಯೋಜನೆಗಳನ್ನು ಘೋಷಿಸಲಾಗಿತ್ತು. ಈ ಹೊಸ ಕಾಲದ ಕೌಶಲಗಳು ದೇಶ ಅಥವಾ ವಿದೇಶಗಳಲ್ಲಿ ಉದ್ಯೋಗ ಪಡೆಯಲು ಭಾರತೀಯ ಯುವಜನತೆಯನ್ನು ಸಿದ್ಧರಾಗಿಸಲಿವೆ.

ಸೂಕ್ತ ಉದ್ಯೋಗ ಅವಕಾಶಗಳನ್ನು ಪಡೆಯುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಯುವಜನತೆಗೆ ಹೆಚ್ಚು ಮಾರ್ಗದರ್ಶನ ಮತ್ತು ವೃತ್ತಿ ಸಮಾಲೋಚನೆಗಳ ಅವಶ್ಯಕತೆಯಿದೆ. ತಮ್ಮ ಕೌಶಲಗಳಿಗೆ ಸೂಕ್ತವಾಗುವಂತಹ ಉದ್ಯೋಗ ಅವಕಾಶಗಳ ಮಾಹಿತಿ ಕೊರತೆಯೇ ತಮಗೆ ಗಂಭೀರ ತಡೆಗೋಡೆಯಾಗಿದೆ ಎಂದು ಶೇ.51ರಷ್ಟು ಜನ ಪ್ರತಿಕ್ರಿಯಿಸಿದ್ದು ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ.

ಉದ್ಯೋಗ ಕ್ಷೇತ್ರದ ಈ ಸಮಸ್ಯೆಗಳ ಜೊತೆಗೆ ಯುವಜನರನ್ನು ಕಾಡುತ್ತಿರುವ ಖಿನ್ನತೆ ವಲಯದಲ್ಲಿಯೂ ಭಾರತ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. ಭಾರತದ ನಾಲ್ವರು ಯುವಕರ ಪೈಕಿ ಒಬ್ಬರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಮುಂಬೈನಲ್ಲಿ ನಡೆದ ಇಂಡಿಯಾ ಟುಡೇ-2019 ಕೂಟದ ವರದಿ ಪ್ರಕಾರ, ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ 40000 ಯುವಜನತೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರತಿ ಒಂದು ಗಂಟೆಗೆ ಒಬ್ಬ ಯುವಕ/ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇಶದ ಐವರು ಯುವಜನತೆ ಪೈಕಿ ಒಬ್ಬರು ಅತ್ಯಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಇದು 8 ಕೋಟಿ ಯುವಜನತೆಗೆ ಸಮನಾಗಿದ್ದು, ಇಡೀ ಇಂಗ್ಲೆಂಡ್‌ನ ಜನಸಂಖ್ಯೆಗಿಂತ ಹೆಚ್ಚಾಗಿದೆ. ಈ ಆರೋಗ್ಯ ಸಮಸ್ಯೆಗಳಿಗೆ ತಕ್ಷಣದ ಪರಿಹಾರಗಳು ಇವೆಯಾದರೂ, ಈ ಸಮಸ್ಯೆಗಳು ದೇಶದ ಯುವಜನತೆಯ ನಿಜ ಶಕ್ತಿಯನ್ನೇ ಕೊಲ್ಲುವಷ್ಟು ಸಮರ್ಥವೂ ಆಗಿವೆ. ಆದ್ದರಿಂದ, ಗುಣಮಟ್ಟದ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಜೊತೆಗೆ, ಯುವಕರನ್ನು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆಗಳನ್ನೂ ಪರಿಹರಿಸಲು ಸರ್ಕಾರ ಗಮನ ಹರಿಸಬೇಕಿದೆ.

ದೇಶದ ಯುವಜನತೆಯ ಪ್ರಗತಿಯನ್ನು ಲೆಕ್ಕ ಹಾಕುವಾಗ, ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ಹಾಗೂ ಇಡೀ ದೇಶದಲ್ಲಿರುವ ಯುವಕರ ಪೈಕಿ ಯುವತಿಯರ ಸಂಖ್ಯೆಯನ್ನೂ ನಾವು ಪರಿಗಣನೆಗೆ ತೆಗೆದುಕೊಳ್ಳಬೇಕು. ಯುವ ಸಬಲೀಕರಣ ವಿಷಯದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮತ್ತು ಎಲ್ಲಾ ಬಾಲಕಿಯರ ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಾರ್ಯತಂತ್ರಗಳನ್ನು ಹೊಂದಬೇಕು. ದೇಶದ ವಿವಿಧ ವರ್ಗಗಳ ಯುವಜನತೆಯನ್ನು ಬಾಧಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಯಾವುದೇ ಒಂದು ಕಾರ್ಯತಂತ್ರವು ಉಪಯುಕ್ತವಾಗದು. ಇದರ ಜೊತೆಗೆ, ಶತಮಾನದ ಯುವಜನತೆ ಹಾಗೂ ಹೊಸ ಶತಮಾನದ 2ನೇ ದಶಕದಲ್ಲಿ ವಯಸ್ಸಿಗೆ ಬರುತ್ತಿರುವ ವಿದ್ಯಾರ್ಥಿಗಳನ್ನೂ ನಾವು ಪರಿಗಣಿಸಬೇಕಿದೆ.

ಯುವ ಸಬಲೀಕರಣದಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರಸಕ್ತ ಸನ್ನಿವೇಶದಲ್ಲಿ ಇಂಟರ್‌ನೆಟ್‌ ಮತ್ತು ಮೊಬೈಲ್‌ ಸಂಪರ್ಕ ವ್ಯವಸ್ಥೆಯ ಮೇಲೆಯೇ ಜಗತ್ತು ನಡೆಯುತ್ತಿದೆ. ಎಲ್ಲಾ ಸ್ಥಳಗಳು ಮತ್ತು ಸಮಯದಲ್ಲಿ ಇಂಟರ್‌ನೆಟ್‌ ಸಂಪರ್ಕವನ್ನು ಸಾಧ್ಯವಾಗಿಸುವುದು ಪ್ರಗತಿಯ ಮಹತ್ವದ ಅಂಶ. ಹೊಸ ಶತಮಾನದ ಯುವಜನತೆಯು ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಐಪಾಡ್‌, ಸ್ಮಾರ್ಟ್‌ಫೋನ್‌ಳಂತಹ ತಂತ್ರಜ್ಞಾನ ಬಳಕೆಯಲ್ಲಿ ಉತ್ತಮರಾಗಿರುವುದರಿಂದ, ಈ ತಂತ್ರಜ್ಞಾನವನ್ನು ಶಿಕ್ಷಣ ವ್ಯವಸ್ಥೆ ಮತ್ತು ಕೌಶಲಾಭಿವೃದ್ಧಿಯೊಂದಿಗೆ ಸಮನ್ವಯಗೊಳಿಸುವುದು ಬಹಳ ಮುಖ್ಯ. ಇಂಟರ್‌ನೆಟ್‌ ಸರ್ವರ್‌ಗಳು, ದತ್ತಾಂಶ ಕೇಂದ್ರಗಳು, ಕಂಪ್ಯೂಟಿಂಗ್‌ ಸೌಲಭ್ಯಗಳು, ಆಪ್ಟಿಕಲ್‌ ಫೈಬರ್‌ ಕೇಬಲ್‌ ಜಾಲಗಳು, ಇಂಟರ್‌ನೆಟ್‌ನ ಬ್ಯಾಂಡ್‌ವಿಡ್ತ್‌ ಹೆಚ್ಚಿಸುವಿಕೆ ಮತ್ತು ಉಪಗ್ರಹ ಸಂವಹನದಂತಹ ಮಾಹಿತಿ ತಂತ್ರಜ್ಞಾನದ ಮೂಲಸೌಕರ್ಯಗಳ ಮೇಲೆ ಸರ್ಕಾರ ಹೆಚ್ಚು ಹೂಡಿಕೆ ಮಾಡಬೇಕಿದೆ. ತಮ್ಮ ತಾಂತ್ರಿಕ ಕೌಶಲ ಮತ್ತು ಉತ್ಪಾದಕತೆ ಹೆಚ್ಚಿಸಿಕೊಳ್ಳಲು ಅವನ್ನು ಬಳಸುವಂತೆ ಯುವಜನತೆಯನ್ನು ಬೆಂಬಲಿಸುವುದು ನಿಜಕ್ಕೂ ಜಾಣತನದ ಕೆಲಸ.

ದೇಶದೊಳಗಿನ ಐಐಟಿ, ಐಐಎಂಗಳು ಮತ್ತು ಎನ್‌ಐಟಿ ವಿದ್ಯಾರ್ಥಿಗಳನ್ನು ಒಳಗೊಂಡಿರುವ ರಾಷ್ಟ್ರಮಟ್ಟದ ಸಮಸ್ಯೆ ಪರಿಹಾರ ಚಾಲನಾ ಸಮಿತಿಗಳನ್ನು ರಚಿಸುವಂತೆ ಬಲವಾಗಿ ಶಿಫಾರಸು ಮಾಡಲಾಗಿದೆ. ಈ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ನಿಜಕ್ಕೂ ದೇಶದ ಕೆನೆಪದರಿದ್ದಂತೆ. ಆದ್ದರಿಂದ, ಸಮಾಜ ಮತ್ತು ದೇಶದೊಳಗಿರುವ ಕೆಲವು ಪ್ರಸಕ್ತ ಜ್ವಲಂತ ಸಮಸ್ಯೆಗಳು ಮತ್ತು ವಿಷಯಗಳಿಗೆ ಅವರ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ನಿಜಕ್ಕೂ ಉತ್ತಮ ಯೋಚನೆ. ದೇಶಾದ್ಯಂತ ಕಂಡು ಬಂದಿರುವ ಸಮಸ್ಯೆಗಳನ್ನು ಒಂದೆಡೆ ಸೇರಿಸಿ, ಅವನ್ನು ಈ ವಿದ್ಯಾರ್ಥಿಗಳ ಮುಂದೆ ಇರಿಸಿ, ಅವರು ಈ ಕುರಿತು ಯೋಚಿಸಿ, ವಿಶ್ಲೇಷಿಸಿ ಇವುಗಳನ್ನು ಪರಿಣಾಮಕಾರಿಯಾದ ವಿಧಾನದಲ್ಲಿ ಪರಿಹರಿಸುವಂತಾಗಬೇಕು. ಸಮಸ್ಯೆಗಳನ್ನು ಅತಿ ವಿಶಿಷ್ಟ ರೀತಿಯಲ್ಲಿ ಪರಿಹರಿಸುವಂತಹ ವಿದ್ಯಾರ್ಥಿಗಳ ಗುಂಪುಗಳಿಗೆ ಶೈಕ್ಷಣಿಕ ಅಂಕಗಳನ್ನು ನೀಡುವುದನ್ನೂ ಪರಿಗಣಿಸಬಹುದು. ಇದೇ ವಿಚಾರವನ್ನು ನಂತರದ ಹಂತದಲ್ಲಿ ಇಡೀ ದೇಶಾದ್ಯಂತ ಎಲ್ಲಾ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಶಾಲೆಗಳಲ್ಲಿಯೂ ಅಳವಡಿಸಬಹುದು. ಆಗ, ತಮ್ಮ ದೇಶವನ್ನು ಬಾಧಿಸುತ್ತಿರುವ ಸಮಸ್ಯೆಗಳ ತಿಳಿವಳಿಕೆ ಮತ್ತು ಅವುಗಳಿಗೆ ಬೇಕಾದ ಪರಿಹಾರಗಳ ಕುರಿತು ಯೋಚಿಸಲು ಪ್ರಾರಂಭಿಸುವುದು ಅವರಿಗೆ ಚಿಕ್ಕ ವಯಸ್ಸಿನಿಂದಲೇ ರೂಢಿಯಾಗುತ್ತದೆ. ಇದರಿಂದಾಗಿ, ದೇಶದ ನಿರ್ಮಾಣ ಮತ್ತು ಪ್ರಗತಿಯ ಪ್ರಕ್ರಿಯೆಯಲ್ಲಿ ಯುವಜನಾಂಗವು ತಂತಾನೇ ತೊಡಗಿಕೊಳ್ಳುವುದು ಸಾಧ್ಯವಾಗುತ್ತದೆ.

ಕೆಲಸದ ಸ್ಥಳಗಳಲ್ಲಿ ಯಂತ್ರಗಳ ಉಪಸ್ಥಿತಿ ಕಡ್ಡಾಯವಾಗಲಿದ್ದು, ಜಗತ್ತಿನಾದ್ಯಂತ ಈ ಪ್ರಕ್ರಿಯೆ ಅತ್ಯಂತ ವೇಗವಾಗಿ ಹರಡುತ್ತಿದೆ. ಜಗತ್ತಿನಾದ್ಯಂತ ಕೆಲಸದ ಸ್ಥಳಗಳಲ್ಲಿ, ದೊಡ್ಡವಿರಲಿ ಅಥವಾ ಸಣ್ಣವಿರಲಿ, 2015ರಲ್ಲಿ 490 ಕೋಟಿಯಷ್ಟಿದ್ದ ರೊಬೋಟ್‌ಗಳ (ಯಂತ್ರಗಳ) ಸಂಖ್ಯೆ 2020ರ ವೇಳೆಗೆ 2500 ಕೋಟಿಗೆ ಏರಲಿದೆ ಎಂದು ಗಾರ್ಟನರ್‌ ಸಂಸ್ಥೆ ಅಂದಾಜಿಸಿದೆ. ಆದ್ದರಿಂದ, ಭವಿಷ್ಯದಲ್ಲಿ ಕೆಲಸದ ಸ್ಥಳದಲ್ಲಿ ಎದುರಾಗಲಿರುವ ಈ ಸವಾಲುಗಳನ್ನು ಎದುರಿಸಲು ಯುವಜನತೆ ಸಿದ್ಧವಾಗಬೇಕಿದೆ. ಪ್ರಾಥಮಿಕ ಮತ್ತು 2ನೇ ಹಂತದ ಶಿಕ್ಷಣದಲ್ಲಿ “ಸಣ್ಣ ರೊಬೊಟಿಕ್ಸ್‌ ಕಾರ್ಯಾಗಾರ”ಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಸವಾಲಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.

ಇದರ ಜೊತೆಗೆ, “ಜೀವನ ಪರ್ಯಂತ ಕಲಿಕಾ ತಂತ್ರ” ಮಾದರಿಯನ್ನು ಸಹ ನಾವು ದೇಶದ ಯುವಜನತೆಯ ಮನಸ್ಸಿನಲ್ಲಿ ಬೆಳೆಸಬೇಕಿದೆ. ಇದರಿಂದ, ಜಾಗತೀಕರಣಗೊಂಡಿರುವ ಜಗತ್ತಿನಲ್ಲಿ ಶೀಘ್ರವಾಗಿ ಬದಲಾಗುತ್ತಿರುವ ಕೈಗಾರಿಕಾ ಸವಾಲುಗಳ ಅವಶ್ಯಕತೆಗಳನ್ನು ಸಮರ್ಥವಾಗಿ ಎದುರಿಸಲು ಬೇಕಾದ ಕೌಶಲಗಳನ್ನು ಅಳವಡಿಸಿಕೊಳ್ಳಲು ಅವರಿಗೆ ನೆರವಾದಂತಾಗುತ್ತದೆ.

ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಮಕ್ಕಳಲ್ಲಿ ಸಾಮರ್ಥ್ಯಗಳು ಮತ್ತು ಅರ್ಹತೆಗಳನ್ನು ಬೆಳೆಸುವಲ್ಲಿ ತಂದೆತಾಯಿಗಳು ಮತ್ತು ಶಿಕ್ಷಕರು ಈಗ ಅತ್ಯಂತ ಮಹತ್ವದ ಪಾತ್ರ ಹೊಂದಿದ್ದಾರೆ. ತಂದೆ-ತಾಯಿ ಮತ್ತು ಶಿಕ್ಷಕರ ಸಂಯುಕ್ತ ಪ್ರಯತ್ನದ ನೆರವಿನಿಂದ ಮಾತ್ರ ಇದು ಸಾಧ್ಯವಾಗಬಲ್ಲುದು. ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಸುವ ಪೂರ್ಣ ಪಾತ್ರವನ್ನು ನಿರ್ವಹಿಸುವ ಕೆಲಸ ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ. ಈ ಹಂತದಲ್ಲಿ ತಂದೆತಾಯಿಗಳ ಜವಾಬ್ದಾರಿಯೂ ಅಷ್ಟೇ ಪ್ರಮುಖವಾಗಿರುತ್ತದೆ. ದ್ವಿತೀಯ ಹಂತದ ಮತ್ತು ಉನ್ನತ ಹಂತದ ಶಿಕ್ಷಣದಲ್ಲಿ, ವಿದ್ಯಾರ್ಥಿಗಳನ್ನು ದೇಶ ನಿರ್ಮಾಣದಲ್ಲಿ ಉಪಯುಕ್ತರನ್ನಾಗಿಸುವ ಜವಾಬ್ದಾರಿ ಶಿಕ್ಷಕರ ಮೇಲೆ ಹೆಚ್ಚುತ್ತ ಹೋಗುತ್ತದೆ. ದೇಶಾದ್ಯಂತ ಎಲ್ಲಾ ಪ್ರಾಥಮಿಕ, ಮಧ್ಯಮ ಹಾಗೂ ಉನ್ನತ ಹಂತದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಕರ ತಂಡದ ಜೊತೆಗೆ ಮನಶಾಸ್ತ್ರಜ್ಞರು ಹಾಗೂ ವಿದ್ಯಾರ್ಥಿ ಸಮಾಲೋಚಕರನ್ನು ಸಹ ಸೇರ್ಪಡೆ ಮಾಡಬೇಕಿದೆ.

Please Publish it ASAP & provide link

ರಾಷ್ಟ್ರೀಯ ಯುವ ದಿನ – ಭಾರತೀಯ ಆರ್ಥಿಕತೆಯಲ್ಲಿ ಯುವಶಕ್ತಿ

ಅವಲೋಕನ

ಯುವ ಜನತೆ ದೇಶದ ಭವಿಷ್ಯದ ಪರಿವರ್ತನಕಾರರು, ಸೃಷ್ಟಿಕರ್ತರು, ನಿರ್ಮಾತೃಗಳು ಹಾಗೂ ನಾಯಕರು. ಆದರೆ, ಸೂಕ್ತ ಶಿಕ್ಷಣ, ಸೂಕ್ತ ಕೌಶಲ್ಯಗಳು ಮತ್ತು ಉತ್ತಮ ಆರೋಗ್ಯ ದಕ್ಕಿದಾಗ ಮಾತ್ರ ಅವರು ದೇಶದ ಭವಿಷ್ಯವನ್ನು ಬದಲಿಸಬಲ್ಲರು. ಭಾರತದ ಜನಸಂಖ್ಯೆಯ ಅರ್ಧಕ್ಕೂ ಹೆಚ್ಚು ಜನತೆ, ಅಂದರೆ ಅಂದಾಜು ೬೦ ಕೋಟಿ ಜನ ೨೫ ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಈ ೬೦ ಕೋಟಿ ಜನ ಜಗತ್ತನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.  

ಜಗತ್ತಿನಾದ್ಯಂತ ಈಗ ೧೦ರಿಂದ ೨೪ ವರ್ಷದೊಳಗಿನ ೧೮೦ ಕೋಟಿ ಯುವ ಜನತೆ ಇದ್ದಾರೆ. ಇದೇ ವಯೋಮಾನದ ೩೫.೬೦ ಕೋಟಿ ಯುವ ಜನತೆ ಭಾರತದಲ್ಲಿದ್ದು, ಇದು ಇಡೀ ಜಗತ್ತಿನಲ್ಲಿಯೇ ಅತ್ಯಧಿಕ. ೨೬.೯೦ ಕೋಟಿ ಜನಸಂಖ್ಯೆಯೊಂದಿಗೆ ಚೀನಾ ಎರಡನೇ ಸ್ಥಾನದಲ್ಲಿದ್ದು, ಇಂಡೋನೇಷ್ಯ (೬.೭ ಕೋಟಿ), ಅಮೆರಿಕ (೬.೫ ಕೋಟಿ), ಪಾಕಿಸ್ತಾನ (೫.೯ ಕೋಟಿ), ನೈಜೀರಿಯಾ (೫.೭ ಕೋಟಿ), ಬ್ರೆಜಿಲ್‌ (೫.೧ ಕೋಟಿ) ಹಾಗೂ ಬಾಂಗ್ಲಾದೇಶ (೪.೮ ಕೋಟಿ) ಕ್ರಮವಾಗಿ ಇದೇ ವಯೋಮಾನದ ಯುವ ಜನಸಂಖ್ಯೆಯನ್ನು ಹೊಂದಿವೆ ಎನ್ನುತ್ತದೆ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುನೈಟೆಡ್‌ ನೇಷನ್ಸ್‌ ಪಾಪುಲೇಶನ್‌ ಫಂಡ್‌ – ಯುಎನ್‌ಎಫ್‌ಪಿಎ) ವರದಿ.

ಈಗ ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಹೆಸರಾಗಿರುವ ಭಾರತವು ಜಗತ್ತಿನ ಶೇಕಡಾ ೧೯ರಷ್ಟು ಯುವಜನತೆಯನ್ನು ಹೊಂದಿದೆ. ಭಾರತದ ಈ ಯುವಜನತೆ ಅತ್ಯಂತ ಬೆಲೆ ಬಾಳುವ ಆಸ್ತಿಯಷ್ಟೇ ಅಲ್ಲ, ಅತ್ಯಂತ ಭರವಸೆದಾಯಕ ಭಾಗವೂ ಹೌದು. ಇದು ಭಾರತಕ್ಕೆ ವಿಶಿಷ್ಟ ಜನಸಂಖ್ಯಾ ಅನುಕೂಲತೆಯನ್ನು ಒದಗಿಸಿದೆ. ಆದರೆ, ಮಾನವ ಸಂಪನ್ಮೂಲದ ಅಭಿವೃದ್ಧಿಯಲ್ಲಿ ಸೂಕ್ತ ಹೂಡಿಕೆಯನ್ನು ಮಾಡದಿದ್ದರೆ ಈ ಅವಕಾಶ ಕಳೆದುಹೋಗುತ್ತದೆ. ಆರ್ಥಿಕ, ಜನಸಂಖ್ಯಾತ್ಮಕ, ಸಾಮಾಜಿಕ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಕ್ಷಿಪ್ರ ಬದಲಾವಣೆ ಎದುರಿಸುತ್ತಿರುವ ಭಾರತವು, ತನ್ನ ಬೆಳವಣಿಗೆಯ ಲಾಭ ಸಮಾಜದ ಎಲ್ಲಾ ವರ್ಗದ ಜನರಿಗೂ ತಲುಪುವಂತೆ ನೋಡಿಕೊಳ್ಳಬೇಕಿದೆ. ದೇಶದ ಯುವಜನತೆ ಆರ್ಥಿಕ ಬೆಳವಣಿಗೆಯ ಪ್ರಗತಿಯಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಳ್ಳುವಂತೆ ನೋಡಿಕೊಂಡಾಗ ಮಾತ್ರ ಭಾರತ ಈ ಗುರಿಯನ್ನು ಸಾಧಿಸಲು ಸಾಧ್ಯ. ಆದರೆ, ದುರದೃಷ್ಟವಶಾತ್‌, ಭಾರತದ ಕೆಲಸಗಾರರ ಪೈಕಿ ಕೇವಲ ಶೇಕಡಾ ೨.೩ರಷ್ಟು ಜನ ಮಾತ್ರ (ದಕ್ಷಿಣ ಕೊರಿಯಾದ ಶೇಕಡಾ ೯೬ ಪ್ರಮಾಣಕ್ಕೆ ಹೋಲಿಸಿದರೆ) ಕೌಶಲ್ಯಗಳನ್ನು ಅಥವಾ ಶಿಕ್ಷಣದ ನಂತರದ ಔಪಚಾರಿಕ ತರಬೇತಿಯನ್ನು ಹೊಂದಿದ್ದಾರೆ. ದೇಶದ ಶೇಕಡಾ ೨೦ರಷ್ಟು ಪದವೀಧರರು ಮಾತ್ರ ಕಂಪನಿಗಳಿಂದ ತಕ್ಷಣದ ನೇಮಕಾತಿಗೆ ಒಳಗಾಗುತ್ತಿದ್ದಾರೆ. ಬಾಕಿ ಶೇಕಡಾ ೮೦ರಷ್ಟು ಜನ ಉದ್ಯೋಗ ಕ್ಷೇತ್ರದಲ್ಲಿ ಆಯ್ಕೆಗೆ ಒಳಗಾಗುತ್ತಿಲ್ಲ.  

ದೇಶ

ಜಾಗತಿಕ ಜಿಡಿಪಿ ಶ್ರೇಯಾಂಕ ೨೦೧೯

ಯುವ ಜನರ ಸಂಖ್ಯೆ (೧೦-೨೪ ವರ್ಷ) ದಶಲಕ್ಷಗಳಲ್ಲಿ

ಜಿಡಿಪಿ ಲಕ್ಷ ಕೋಟಿಯಲ್ಲಿ

ಜಾಗತಿಕ ಯುವಜನತೆ ಶೇಕಡಾವಾರು

ಜಗತ್ತಿನ ಜಿಡಿಪಿ ಶೇಕಡಾವಾರು

ಅಮೆರಿಕ

೬೫

೨೧

೩%

೨೫ %

ಚೀನಾ

೨೬೯

೧೪

೧೫%

೧೬%

ಭಾರತ

೩೫೬

೨.೯

೧೯%

೩%

ಜಾಗತಿಕ

೧೮೦೦

೮೬.೫

೨೦೧೯ರ ಜಾಗತಿಕ ಒಟ್ಟು ಆಂತರಿಕ ಉತ್ಪಾದನೆಯ ಅಂಕಿಅಂಶಗಳ ಪ್ರಕಾರ ಜಿಡಿಪಿಎ ಯುವ ಜನಸಂಖ್ಯೆಯ ಕೊಡುಗೆ ಶೇಕಡಾ ೧೯. ಇವೇ ಅಂಕಿಅಂಶಗಳ ಪ್ರಕಾರ, ಯುವಜನತೆಯ ಜಿಡಿಪಿ ಉತ್ಪಾದನೆಯಲ್ಲಿ ಆರನೇ ಸ್ಥಾನದಲ್ಲಿರುವ ಭಾರತದ ಯುವಜನತೆ ಜಗತ್ತಿನ ಒಟ್ಟು ಆಂತರಿಕ ಉತ್ಪಾದನೆಗೆ ನೀಡುತ್ತಿರುವ ಪಾಲು ಕೇವಲ ಶೇಕಡಾ ೩ ಮಾತ್ರ. ಆದರೆ, ಕೇವಲ ಶೇಕಡಾ ೩ ಜಾಗತಿಕ ಯುವಜನತೆಯ ಪ್ರಮಾಣ ಹೊಂದಿರುವ ಅಮೆರಿಕದಲ್ಲಿ ಒಟ್ಟು ಆಂತರಿಕ ಉತ್ಪಾದನೆಯ ಶೇಕಡಾ ೨೫ರಷ್ಟು ಪಾಲನ್ನು ಅಲ್ಲಿಯ ಶೇಕಡಾ ೩ರಷ್ಟು ಯುವಜನತೆ ನೀಡುವ ಮೂಲಕ ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿದ್ದಾರೆ. ಯುವಜನತೆಯ ಪ್ರಮಾಣದ ಜಾಗತಿಕ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಚೀನಾ ದೇಶವು ಶೇಕಡಾ ೧೫ರಷ್ಟು ಯುವಜನತೆಯಿಂದ ಶೇಕಡಾ ೧೬ರಷ್ಟು ಜಾಗತಿಕ ಒಟ್ಟು ಆಂತರಿಕ ಉತ್ಪಾದನೆ ಮಾಡುತ್ತಿದೆ. ಭಾರತದ ಯುವಜನತೆಯ ಮುಂದಿರುವ ಸಾಧ್ಯತೆಗಳು ಮತ್ತು ಒಟ್ಟು ಆಂತರಿಕ ಉತ್ಪಾದನೆಯಲ್ಲಿ ಅವರ ಕೊಡುಗೆಯ ನಡುವೆ ಇರುವ ಅಂತರವನ್ನು ಈ ಅಂಕಿಅಂಶಗಳು ಸ್ಪಷ್ಟವಾಗಿ ತೋರಿಸುತ್ತವೆ.

ಪ್ರಸಕ್ತ ಪರಿಸ್ಥಿತಿ

ಭಾರತವು ಕೌಶಲ್ಯದ ಅತಿ ಹೆಚ್ಚು ಕೊರತೆ ಎದುರಿಸುತ್ತಿದ್ದು, ಜಗತ್ತಿನ ಇತರ ದೇಶಗಳ ತುಲನೆಯಲ್ಲಿ ಶೇಕಡಾ ೬೪ ಕೊರತೆ ಮೂಲಕ ಶ್ರೇಯಾಂಕ ಪಟ್ಟಿಯಲ್ಲಿ ಮೇಲಿನಿಂದ ಎರಡನೇ ಸ್ಥಾನದಲ್ಲಿದೆ. ಶೇಕಡಾ ೨೪ ಕೊರತೆ ಮೂಲಕ ಚೀನಾ ಕೆಳಗಿನ ಸ್ಥಾನಕ್ಕೆ ಹತ್ತಿರದಲ್ಲಿದೆ ಎನ್ನುತ್ತದೆ ಒಇಸಿಡಿಯ ೨೦೧೪ನೇ ಸಾಲಿನ ವರದಿ.

೨೦೨೦ರಲ್ಲಿ ಭಾರತದಲ್ಲಿ ಉದ್ಭವಿಸಬಹುದಾದ ಉದ್ಯೋಗಗಳ ಕುರಿತು ವರದಿ ನೀಡಿರುವ ವೃತ್ತಿಪರರ ತಾಣ ಲಿಂಕ್ಡ್‌ ಇನ್‌, ಪ್ರಸಕ್ತ ಮಾರುಕಟ್ಟೆಯಲ್ಲಿ ಉದ್ಭವವಾಗಿರುವ ಹೊಸ ಉದ್ಯೋಗಗಳ ಕುರಿತ ಮಹತ್ವದ ಅಂಶಗಳನ್ನು ಪಟ್ಟಿ ಮಾಡಿದೆ. ಬ್ಲಾಕ್‌ ಚೈನ್‌ ಡೆವಲಪರ್ಸ್‌, ಕೃತಕ ಬುದ್ಧಿಮತ್ತೆ ತಜ್ಞರು, ಜಾವಾ ಸ್ಕ್ರಿಪ್ಟ್‌ ಡೆವಲಪರ್‌, ರೊಬೊಟಿಕ್‌ ಪ್ರೊಸೆಸ್‌ ಆಟೊಮೇಶನ್‌ ಕನ್ಸಲ್ಟಂಟ್‌, ಬ್ಯಾಕ್‌ ಎಂಡ್‌ ಡೆವಲಪರ್‌, ಗ್ರೌಥ್‌ ಮ್ಯಾನೇಜರ್‌, ಸೈಟ್‌ ರಿಲೈಯೆಬಿಲಿಟಿ ಎಂಜಿನಿಯರ್‌, ಕಸ್ಟಮರ್‌ ಸಕ್ಸೆಸ್‌ ಸ್ಪೆಷಲಿಸ್ಟ್‌, ರೊಬೊಟಿಕ್ಸ್‌ ಎಂಜಿನಿಯರ್‌, ಸೈಬರ್‌ ಸೆಕ್ಯುರಿಟಿ ಸ್ಪೆಶಲಿಸ್ಟ್‌, ಪೈಥಾನ್‌ ಡೆವಲಪರ್‌, ಡಿಜಿಟಲ್‌ ಮಾರ್ಕೆಟಿಂಗ್‌ ಸ್ಪೆಷಲಿಸ್ಟ್‌, ಫ್ರಂಟ್‌—ಎಂಡ್‌ ಎಂಜಿನಿಯರ್ಸ್‌ ಮುಂತಾದ ಕ್ಷೇತ್ರಗಳು ಕ್ಷಿಪ್ರವಾಗಿ ವಿಕಾಸವಾಗುತ್ತಿವೆ ಎಂದಿದೆ.

ಇನ್ನು ಹೈಪರ್‌ ಲೆಡ್ಜರ್‌, ಸಾಲಿಡಿಟಿ, ನೋಟ್.ಜೆಸ್.‌, ಸ್ಮಾರ್ಟ್‌ ಕಾಂಟ್ಯಾಕ್ಟ್‌, ಮಷೀನ್‌ ಲರ್ನಿಂಗ್‌, ಡೀಪ್‌ ಲರ್ನಿಂಗ್‌, ಟೆನ್ಸರ್‌ಫ್ಲೊ, ಪೈಥಾನ್‌ ಪ್ರೋಗ್ರಾಮಿಂಗ್‌ ಲಾಂಗ್ಜೇಜ್‌, ನ್ಯಾಚುರಲ್‌ ಲಾಂಗ್ವೇಜ್‌ ಪ್ರೊಸೆಸಿಂಗ್‌ (ಎನ್‌ಎಲ್‌ಪಿ) ಮುಂತಾದವು ಬಹುರಾಷ್ಟ್ರೀಯ ಕಂಪನಿಗಳು ಪ್ರಸ್ತುತ ಎದುರು ನೋಡುತ್ತಿರುವ ಹೊಸ ಕೌಶಲ್ಯಗಳು. ಇನ್ಫೋಸಿಸ್‌ ಕಂಪನಿ ೨೦೧೯ರಲ್ಲಿ ಹೊರತಂದಿರುವ "ಪ್ರತಿಭಾ ರೇಡಾರ್‌ ವರದಿ"ಯು (ಟ್ಯಾಲೆಂಟ್‌ ರೇಡಾರ್‌ ರಿಪೋರ್ಟ್‌) ಅತಿ ಹೆಚ್ಚು ಬೇಡಿಕೆಯಲ್ಲಿರುವ ಐದು ತಾಂತ್ರಿಕ ಕೌಶಲ್ಯಗಳನ್ನು ಪಟ್ಟಿ ಮಾಡಿದೆ. ಅವು ಯಾವವೆಂದರೆ, ಬಳಕೆದಾರರ ಅನುಭವ (ಶೇಕಡಾ ೬೭ರಷ್ಟು ಡಿಜಿಟಲ್‌ ತೊಡಗುವಿಕೆ), ವಿಶ್ಲೇಷಣೆ (ಅನಲೈಟಿಕ್ಸ್‌ ಶೇಕಡಾ ೬೭), ಆಟೊಮೇಶನ್‌ (ಶೇಕಡಾ ೬೧), ಐಟಿ ಆರ್ಕಿಟೆಕ್ಚರ್‌ (ಕ್ಲೌಡ್‌ ಸಹಿತ) (ಶೇಕಡಾ ೫೯) ಹಾಗೂ ಕೃತಕ ಬುದ್ಧಿಮತ್ತೆ (ಶೇಕಡಾ ೫೮).

ನೇರವಾಗಿ ಹೇಳುವುದಾದರೆ, ಈ ಹೊಸ ಕೌಶಲ್ಯಗಳನ್ನು ದೇಶದ ಯಾವ ವಿಶ್ವವಿದ್ಯಾಲಯ ಅಥವಾ ತಾಂತ್ರಿಕ ಎಂಜಿನಿಯರಿಂಗ್‌ ಸಂಸ್ಥೆಗಳಲ್ಲಿಯೂ ಕಲಿಸುತ್ತಿಲ್ಲ. ಈ ಸಂಸ್ಥೆಗಳಲ್ಲಿರುವ ತಾಂತ್ರಿಕ ಸಿಬ್ಬಂದಿ ಇವುಗಳ ಹೆಸರುಗಳನ್ನೂ ಸಹ ಕೇಳಿಲ್ಲ. ಜಗತ್ತಿನಾದ್ಯಂತ ಸದ್ಯ ಇರುವ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯ ತಾಂತ್ರಿಕ ಉದ್ಯೋಗಗಳಿಗೆ ಯುವಜನತೆಯನ್ನು ಸಮರ್ಥರನ್ನಾಗಿಸುವಲ್ಲಿ ಇರುವ ಪ್ರಮುಖ ಸಮಸ್ಯೆ ಇದು. ತರಗತಿಯ ತಿಳಿವಳಿಕೆ, ಯುವಜನತೆಯಲ್ಲಿರುವ ಕೌಶಲ್ಯಗಳು ಹಾಗೂ ಜಾಗತೀಕರಣಗೊಂಡಿರುವ ಪ್ರಸಕ್ತ ಕೈಗಾರಿಕೆಯ ಅವಶ್ಯಕತೆಗಳ ನಡುವಿನ ಈ ಅಂತರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸೂಕ್ತ ಬೋಧಕ ಹಾಗೂ ಸೌಲಭ್ಯಗಳ ಮೂಲಕ ಈ ಹೊಸ ತಾಂತ್ರಿಕ ಕೌಶಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲಿಯೇ ತರಬೇತಿ ನೀಡುವಂತಾದಾಗ ಮಾತ್ರ ಈ ಅಂತರವನ್ನು ತುಂಬಲು ಸಾಧ್ಯವಾಗಬಹುದು.

ವ್ಯಾಪಾರದ ಡಿಜಿಟಲೀಕರಣವು ಹೊಸ ತಾಂತ್ರಿಕ ಕೌಶಲ್ಯಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತಿದ್ದು, ಇದನ್ನು ತುಂಬಿಕೊಳ್ಳಲು ಕೈಗಾರಿಕಾ ಕ್ಷೇತ್ರದಾದ್ಯಂತ ಕಂಪನಿಗಳು ಕಷ್ಟಪಡುತ್ತಿವೆ. ಆಟೊಮೇಶನ್‌ ಮತ್ತು ಕೃತಕ ಬುದ್ಧಿಮತ್ತೆಯಿಂದಾಗಿ ೨೦೨೫ರ ಹೊತ್ತಿಗೆ ೭೫೦ ಲಕ್ಷ ಉದ್ಯೋಗಗಳು ಇಲ್ಲವಾಗುತ್ತವೆ ಎಂದು “ವಿಶ್ವ ಆರ್ಥಿಕ ವೇದಿಕೆ” (ವರ್ಲ್ಡ್‌ ಎಕನಾಮಿಕ್‌ ಫೋರಮ್)‌ ಮುನ್ಸೂಚನೆ ನೀಡಿದೆಯಾದರೂ, ಹೊಸದಾಗಿ ೧೩೩೦ ಲಕ್ಷ ಉದ್ಯೋಗಗಳು ಇವುಗಳಿಂದ ಸೃಷ್ಟಿಯಾಗಲಿವೆ. ಆದ್ದರಿಂದ, ಈ ಹೊಸ ತಾಂತ್ರಿಕ ಕೌಶಲ್ಯಗಳನ್ನು ಕಲಿಯಲು ಯುವಜನತೆಯನ್ನು ಸಿದ್ಧಗೊಳಿಸುವ ಮೂಲಕ ಹೊಸ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ದೇಶದ ಯಶಸ್ಸು ಅಡಗಿದೆ.

ತಂತ್ರ ಕುಶಲತೆಯ ಚೌಕಟ್ಟು – ಕ್ರಿಯಾ ಯೋಜನೆ

ಭಾರತೀಯ ಶೈಕ್ಷಣಿಕ ವ್ಯವಸ್ಥೆಯು ಹಲವಾರು ಯುವ ಪದವೀಧರರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದೆ. ಏಕೆಂದರೆ, ಕಾಲೇಜಿನ ನಂತರ ಸ್ಪರ್ಧಾತ್ಮಕ ಮಾರುಕಟ್ಟೆಗೆ ಸೂಕ್ತವಾಗುವಂತಹ ಯಾವುದೇ ಕೌಶಲ್ಯಗಳನ್ನು ಅವರಿಗೆ ಕಲಿಸಿರುವುದಿಲ್ಲ. ಆಸ್ಪೈರಿಂಗ್‌ ಮೈಂಡ್‌ ಎಂಬ ಭಾರತೀಯ ಪ್ರತಿಭಾ ಮೌಲ್ಯಮಾಪನ ಸಂಸ್ಥೆಯ ಅಧ್ಯಯನ ವರದಿಯ ಪ್ರಕಾರ, ಪ್ರಸಕ್ತ ಜ್ಞಾನ ಆರ್ಥಿಕತೆಯಲ್ಲಿ ಶೇಕಡಾ ೮೯ರಷ್ಟು ಭಾರತೀಯ ಎಂಜಿನಿಯರ್‌ಗಳು ನಿರುದ್ಯೋಗಿಗಳಾಗಿದ್ದಾರೆ. ಭಾರತೀಯ ಅಸೋಸಿಯೇಟೆಡ್‌ ಚೇಂಬರ್ಸ್‌ ಆಫ್‌ ಕಾಮರ್ಸ್‌ ಆಂಡ್‌ ಇಂಡಸ್ಟ್ರಿ ಸಂಸ್ಥೆಯು ಕಳೆದ ವರ್ಷ ವರದಿ ಮಾಡಿರುವಂತೆ, ಭಾರತದ ವಾಣಿಜ್ಯ ಬೋಧನಾ ಸಂಸ್ಥೆಗಳ ಪದವೀಧರರ ಪೈಕಿ ಕೇವಲ ಶೇಕಡಾ ೭ರಷ್ಟು ಜನ ಮಾತ್ರ ಉದ್ಯೋಗ ಪಡೆದುಕೊಂಡಿದ್ದಾರೆ. ೨೦೧೮ರಲ್ಲಿ ಭಾರತದ ನಿರುದ್ಯೋಗಿ ಯುವಜನತೆಯ ಅಂದಾಜು ಪ್ರಮಾಣವು ಶೇಕಡಾ ೧೦.೪೨ ಆಗಿತ್ತು. ಕಳೆದೊಂದು ದಶಕದಲ್ಲಿ, ಭಾರತದ ಯುವಜನತೆಯ ನಿರುದ್ಯೋಗ ಪ್ರಮಾಣವು ಶೇಕಡಾ ೧೦ರ ಅಕ್ಕಪಕ್ಕದಲ್ಲಿಯೇ ಹರಿದಾಡುತ್ತಿದೆ.

ಕೊನೆಗೂ ಸರಕಾರ ಕೆಲವೊಂದು ಸರಿಯಾದ ಕ್ರಮಗಳನ್ನು ಸರಿಯಾದ ದಿಕ್ಕಿನಲ್ಲಿ ಕೈಗೊಳ್ಳಲು ಮುಂದಾಗಿದೆ.  ಔದ್ಯಮಶೀಲತೆಯನ್ನು ಹೆಚ್ಚಿಸಲು ಭಾರತ ಸರಕಾರ ಕೈಗೊಂಡಿರುವ ಸ್ಟಾರ್ಟ್‌ ಅಪ್‌ ಇಂಡಿಯಾ ಉಪಕ್ರಮ; ಸ್ಕಿಲ್‌ ಇಂಡಿಯಾ ಮಿಶನ್‌ನ ಪ್ರಾರಂಭ; ಕೌಶಲ್ಯ ಅಭಿವೃದ್ಧಿ ಮತ್ತು ಔದ್ಯಮಶೀಲತೆಗಾಗಿಯೇ ಪ್ರತ್ಯೇಕ ಸಚಿವಾಲಯದ ಸ್ಥಾಪನೆ; ಕೈಗಾರಿಕಾ ನೇತೃತ್ವ ಕೌಶಲ್ಯ ಪರಿಷತ್‌ಗಳ ವಲಯಗಳ ಸ್ಥಾಪನೆ, ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಪೂರ್ಣ ದುರಸ್ತಿ ಆ ಪೈಕಿ ಕೆಲವು.

ಇನ್ನು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ್ದ ೨೦೧೯-೨೦ನೇ ಸಾಲಿನ ಮುಂಗಡಪತ್ರವು ಶಿಕ್ಷಣ ಕ್ಷೇತ್ರವನ್ನು ಪ್ರಧಾನವಾಗಿ ಬಿಂಬಿಸಿದೆ. ಭಾರತೀಯ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಿಸುವ ಉದ್ದೇಶದ ಹೊಸ ರಾಷ್ಟ್ರೀಯ ಉದ್ಯೋಗ ನೀತಿಯನ್ನು ಅವರು ಘೋಷಿಸಿದ್ದರು. ಯುವ ಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ, ಸೂಕ್ತ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಅವರನ್ನು ಉದ್ಯೋಗ ಪಡೆಯಲು ಸಮರ್ಥರನ್ನಾಗಿಸುವುದಕ್ಕೆ ಒತ್ತು ನೀಡಿದ್ದರು. ಕೃತಕ ಬುದ್ಧಿಮತ್ತೆ (ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್)‌, ರೊಬೊಟಿಕ್ಸ್‌, ಭಾಷಾ ತರಬೇತಿ, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌, ೩ಡಿ ಪ್ರಿಂಟಿಂಗ್‌, ವರ್ಚುವಲ್‌ ರಿಯಾಲಿಟಿ, ಬಿಗ್‌ ಡೇಟಾದಂತಹ ಕ್ಷೇತ್ರಗಳಲ್ಲಿ ತರಬೇತಿ ನೀಡುವ ಯೋಜನೆಗಳನ್ನು ಜಾರಿಗೆ ತರುವ ಯೋಜನೆಗಳನ್ನು ಘೋಷಿಸಲಾಗಿತ್ತು. ಈ ಹೊಸ ಕಾಲದ ಕೌಶಲ್ಯಗಳು ದೇಶ ಅಥವಾ ವಿದೇಶಗಳಲ್ಲಿ ಉದ್ಯೋಗ ಪಡೆಯಲು ಭಾರತೀಯ ಯುವಜನತೆಯನ್ನು ಸಿದ್ಧರಾಗಿಸಲಿವೆ.

ಸೂಕ್ತ ಉದ್ಯೋಗ ಅವಕಾಶಗಳನ್ನು ಪಡೆಯುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಯುವಜನತೆಗೆ ಹೆಚ್ಚು ಮಾರ್ಗದರ್ಶನ ಮತ್ತು ವೃತ್ತಿ ಸಮಾಲೋಚನೆಗಳ ಅವಶ್ಯಕತೆಯಿದೆ. ತಮ್ಮ ಕೌಶಲ್ಯಗಳಿಗೆ ಸೂಕ್ತವಾಗುವಂತಹ ಉದ್ಯೋಗ ಅವಕಾಶಗಳ ಮಾಹಿತಿ ಕೊರತೆಯೇ ತಮಗೆ ಗಂಭೀರ ತಡೆಗೋಡೆಯಾಗಿದೆ ಎಂದು ಶೇಕಡಾ ೫೧ರಷ್ಟು ಜನ ಪ್ರತಿಕ್ರಿಯಿಸಿದ್ದು ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ.

ಉದ್ಯೋಗ ಕ್ಷೇತ್ರದ ಈ ಸಮಸ್ಯೆಗಳ ಜೊತೆಗೆ ಯುವಜನರನ್ನು ಕಾಡುತ್ತಿರುವ ಖಿನ್ನತೆ ವಲಯದಲ್ಲಿಯೂ ಭಾರತ ಇಡೀ ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿದೆ. ಭಾರತದ ನಾಲ್ವರು ಯುವಜನರ ಪೈಕಿ ಒಬ್ಬರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಮುಂಬೈನಲ್ಲಿ ನಡೆದ ಇಂಡಿಯಾ ಟುಡೇ ೨೦೧೯ ಕೂಟದ ವರದಿಯ ಪ್ರಕಾರ,  ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ ೪೦,೦೦೦ ಯುವಜನತೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರತಿ ಒಂದು ಗಂಟೆಗೆ ಒಬ್ಬ ಯುವಕ/ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇಶದ ಐವರು ಯುವಜನತೆಯ ಪೈಕಿ ಒಬ್ಬರು ಅತ್ಯಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಇದು ೮ ಕೋಟಿ ಯುವಜನತೆಗೆ ಸಮನಾಗಿದ್ದು, ಇಡೀ ಇಂಗ್ಲಂಡ್‌ನ ಜನಸಂಖ್ಯೆಗಿಂತ ಹೆಚ್ಚಾಗಿದೆ. ಈ ಆರೋಗ್ಯ ಸಮಸ್ಯೆಗಳಿಗೆ ತಕ್ಷಣದ ಪರಿಹಾರಗಳು ಇವೆಯಾದರೂ, ಈ ಸಮಸ್ಯೆಗಳು ದೇಶದ ಯುವಜನತೆಯ ನಿಜ ಶಕ್ತಿಯನ್ನೇ ಕೊಲ್ಲುವಷ್ಟು ಸಮರ್ಥವೂ ಆಗಿವೆ. ಆದ್ದರಿಂದ, ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಜೊತೆಗೆ, ಯುವಜನತೆಯನ್ನು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆಗಳನ್ನೂ ಪರಿಹರಿಸಲು ಸರಕಾರ ಗಮನ ಹರಿಸಬೇಕಿದೆ. ಏಕೆಂದರೆ, ಯಾವುದೇ ದೇಶದ ನಿಜವಾದ ಶಕ್ತಿ ಇರುವುದು ಅದರ ಆರೋಗ್ಯವಂತ ಯುವಜನತೆಯಲ್ಲಿ.

ದೇಶದ ಯುವಜನತೆಯ ಪ್ರಗತಿಯನ್ನು ಲೆಕ್ಕ ಹಾಕುವಾಗ, ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ಹಾಗೂ ಇಡೀ ದೇಶದಲ್ಲಿರುವ ಯುವಜನತೆಯ ಪೈಕಿ ಯುವತಿಯರ ಸಂಖ್ಯೆಯನ್ನೂ ನಾವು ಪರಿಗಣನೆಗೆ ತೆಗೆದುಕೊಳ್ಳಬೇಕು. ಯುವ ಸಬಲೀಕರಣ ವಿಷಯದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮತ್ತು ಎಲ್ಲಾ ಬಾಲಕಿಯರ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಾರ್ಯತಂತ್ರಗಳನ್ನು ಹೊಂದಬೇಕು. ದೇಶದ ವಿವಿಧ ವರ್ಗಗಳ ಯುವಜನತೆಯನ್ನು ಬಾಧಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಯಾವುದೇ ಒಂದು ಕಾರ್ಯತಂತ್ರವು ಉಪಯುಕ್ತವಾಗದು. ಇದರ ಜೊತೆಗೆ, ಶತಮಾನದ ಯುವಜನತೆ ಹಾಗೂ ಹೊಸ ಶತಮಾನದ ಎರಡನೇ ದಶಕದಲ್ಲಿ ವಯಸ್ಸಿಗೆ ಬರುತ್ತಿರುವ ವಿದ್ಯಾರ್ಥಿಗಳನ್ನೂ ನಾವು ಪರಿಗಣಿಸಬೇಕಿದೆ.

ಯುವ ಸಬಲೀಕರಣದಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರಸಕ್ತ ಸನ್ನಿವೇಶದಲ್ಲಿ ಇಂಟರ್‌ನೆಟ್‌ ಮತ್ತು ಮೊಬೈಲ್‌ ಸಂಪರ್ಕ ವ್ಯವಸ್ಥೆಯ ಮೇಲೆಯೇ ಜಗತ್ತು ನಡೆಯುತ್ತಿದೆ. ಎಲ್ಲಾ ಸ್ಥಳಗಳು ಮತ್ತು ಸಮಯದಲ್ಲಿ ಇಂಟರ್‌ನೆಟ್‌ ಸಂಪರ್ಕವನ್ನು ಸಾಧ್ಯವಾಗಿಸುವುದು ಪ್ರಗತಿಯ ಮಹತ್ವದ ಅಂಶ. ಹೊಸ ಶತಮಾನದ ಯುವಜನತೆಯು ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಐಪಾಡ್‌, ಸ್ಮಾರ್ಟ್‌ಫೋನ್‌ಳಂತಹ ತಂತ್ರಜ್ಞಾನ ಬಳಕೆಯಲ್ಲಿ ಉತ್ತಮರಾಗಿರುವುದರಿಂದ, ಈ ತಂತ್ರಜ್ಞಾನವನ್ನು ಶಿಕ್ಷಣ ವ್ಯವಸ್ಥೆ ಮತ್ತು ಕೌಶಲ್ಯ ಅಭಿವೃದ್ಧಿಯೊಂದಿಗೆ ಸಮನ್ವಯಗೊಳಿಸುವುದು ಬಹಳ ಮುಖ್ಯ. ಇಂಟರ್‌ನೆಟ್‌ ಸರ್ವರ್‌ಗಳು, ದತ್ತಾಂಶ ಕೇಂದ್ರಗಳು, ಕಂಪ್ಯೂಟಿಂಗ್‌ ಸೌಲಭ್ಯಗಳು, ಆಪ್ಟಿಕಲ್‌ ಫೈಬರ್‌ ಕೇಬಲ್‌ ಜಾಲಗಳು, ಇಂಟರ್‌ನೆಟ್‌ನ ಬ್ಯಾಂಡ್‌ವಿಡ್ತ್‌ ಹೆಚ್ಚಿಸುವಿಕೆ ಮತ್ತು ಉಪಗ್ರಹ ಸಂವಹನದಂತಹ ಮಾಹಿತಿ ತಂತ್ರಜ್ಞಾನದ ಮೂಲಸೌಕರ್ಯಗಳ ಮೇಲೆ ಸರಕಾರ ಹೆಚ್ಚು ಹೂಡಿಕೆ ಮಾಡಬೇಕಿದೆ. ತಮ್ಮ ತಾಂತ್ರಿಕ ಕೌಶಲ್ಯಗಳು ಮತ್ತು ಉತ್ಪಾದಕತೆ ಹೆಚ್ಚಿಸಿಕೊಳ್ಳಲು ಅವನ್ನು ಬಳಸುವಂತೆ ಯುವಜನತೆಯನ್ನು ಬೆಂಬಲಿಸುವುದು ನಿಜಕ್ಕೂ ಜಾಣತನದ ಕೆಲಸ.

ದೇಶದೊಳಗಿನ ಐಐಟಿಗಳು, ಐಐಎಂಗಳು ಮತ್ತು ಎನ್‌ಐಟಿಗಳ ವಿದ್ಯಾರ್ಥಿಗಳನ್ನು ಒಳಗೊಂಡಿರುವ ರಾಷ್ಟ್ರಮಟ್ಟದ ಸಮಸ್ಯೆ ಪರಿಹಾರ ಚಾಲನಾ ಸಮಿತಿಗಳನ್ನು ರಚಿಸುವಂತೆ ಬಲವಾಗಿ ಶಿಫಾರಸು ಮಾಡಲಾಗಿದೆ. ಈ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ನಿಜಕ್ಕೂ ದೇಶದ ಕೆನೆಪದರಿದ್ದಂತೆ. ಆದ್ದರಿಂದ, ಸಮಾಜದೊಳಗೆ ಮತ್ತು ದೇಶದೊಳಗೆ ಇರುವ ಕೆಲವು ಪ್ರಸಕ್ತ ಜ್ವಲಂತ ಸಮಸ್ಯೆಗಳು ಮತ್ತು ವಿಷಯಗಳಿಗೆ ಅವರ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ನಿಜಕ್ಕೂ ಉತ್ತಮ ಯೋಚನೆ. ದೇಶಾದ್ಯಂತ ಕಂಡು ಬಂದಿರುವ ಸಮಸ್ಯೆಗಳನ್ನು ಒಂದೆಡೆ ಸೇರಿಸಿ, ಅವನ್ನು ಈ ವಿದ್ಯಾರ್ಥಿಗಳ ಮುಂದೆ ಇರಿಸಿ, ಅವರು ಈ ಕುರಿತು ಯೋಚಿಸಿ, ವಿಶ್ಲೇಷಿಸಿ ಇವುಗಳನ್ನು ಪರಿಣಾಮಕಾರಿಯಾದ ವಿಧಾನದಲ್ಲಿ ಪರಿಹರಿಸುವಂತಾಗಬೇಕು. ಸಮಸ್ಯೆಗಳನ್ನು ಅತಿ ವಿಶಿಷ್ಟ ರೀತಿಯಲ್ಲಿ ಪರಿಹರಿಸುವಂತಹ ವಿದ್ಯಾರ್ಥಿಗಳ ಗುಂಪುಗಳಿಗೆ ಅಥವಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಂಕಗಳನ್ನು ನೀಡುವುದನ್ನೂ ಪರಿಗಣಿಸಬಹುದು. ಇದೇ ವಿಚಾರವನ್ನು ನಂತರದ ಹಂತದಲ್ಲಿ ಇಡೀ ದೇಶಾದ್ಯಂತ ಎಲ್ಲಾ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಶಾಲೆಗಳಲ್ಲಿಯೂ ಅಳವಡಿಸಬಹುದು. ಆಗ, ತಮ್ಮ ದೇಶವನ್ನು ಬಾಧಿಸುತ್ತಿರುವ ಸಮಸ್ಯೆಗಳ ತಿಳಿವಳಿಕೆ ಮತ್ತು ಅವುಗಳಿಗೆ ಬೇಕಾದ ಪರಿಹಾರಗಳ ಕುರಿತು ಯೋಚಿಸಲು ಪ್ರಾರಂಭಿಸುವುದು ಅವರಿಗೆ ಚಿಕ್ಕ ವಯಸ್ಸಿನಿಂದಲೇ ರೂಢಿಯಾಗುತ್ತದೆ. ಇದರಿಂದಾಗಿ, ದೇಶದ ನಿರ್ಮಾಣ ಮತ್ತು ಪ್ರಗತಿಯ ಪ್ರಕ್ರಿಯೆಯಲ್ಲಿ ಯುವಜನಾಂಗವು ತಂತಾನೇ ತೊಡಗಿಕೊಳ್ಳುವುದು ಸಾಧ್ಯವಾಗುತ್ತದೆ.

ಕೆಲಸದ ಸ್ಥಳಗಳಲ್ಲಿ ಯಂತ್ರಗಳ ಉಪಸ್ಥಿತಿ ಕಡ್ಡಾಯವಾಗಲಿದ್ದು, ಜಗತ್ತಿನಾದ್ಯಂತ ಈ ಪ್ರಕ್ರಿಯೆ ಅತ್ಯಂತ ವೇಗವಾಗಿ ಹರಡುತ್ತಿದೆ. ಜಗತ್ತಿನಾದ್ಯಂತ ಕೆಲಸದ ಸ್ಥಳಗಳಲ್ಲಿ, ದೊಡ್ಡವಿರಲಿ ಅಥವಾ ಸಣ್ಣವಿರಲಿ, ೨೦೧೫ರಲ್ಲಿ ೪೯೦ ಕೋಟಿಯಷ್ಟಿದ್ದ ರೊಬೋಟ್‌ಗಳ (ಯಂತ್ರಗಳ) ಸಂಖ್ಯೆ ೨೦೨೦ರ ವೇಳೆಗೆ ೨೫೦೦ ಕೋಟಿಗೆ ಏರಲಿದೆ ಎಂದು ಗಾರ್ಟನರ್‌ ಸಂಸ್ಥೆ ಅಂದಾಜಿಸಿದೆ. ಆದ್ದರಿಂದ, ಭವಿಷ್ಯದಲ್ಲಿ ಕೆಲಸದ ಸ್ಥಳದಲ್ಲಿ ಎದುರಾಗಲಿರುವ ಈ ಸವಾಲುಗಳನ್ನು ಎದುರಿಸಲು ಯುವಜನತೆ ಸಿದ್ಧವಾಗಬೇಕಿದೆ. ಪ್ರಾಥಮಿಕ ಮತ್ತು ಎರಡನೇ ಹಂತದ ಶಿಕ್ಷಣದಲ್ಲಿ “ಸಣ್ಣ ರೊಬೊಟಿಕ್ಸ್‌ ಕಾರ್ಯಾಗಾರ”ಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಸವಾಲಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.

ಇದರ ಜೊತೆಗೆ, “ಜೀವನ ಪರ್ಯಂತ ಕಲಿಕಾ ತಂತ್ರ” ಮಾದರಿಯನ್ನು ಸಹ ನಾವು ದೇಶದ ಯುವಜನತೆಯ ಮನಸ್ಸಿನಲ್ಲಿ ಬೆಳೆಸಬೇಕಿದೆ. ಇದರಿಂದ, ಜಾಗತೀಕರಣಗೊಂಡಿರುವ ಜಗತ್ತಿನಲ್ಲಿ ಶೀಘ್ರವಾಗಿ ಬದಲಾಗುತ್ತಿರುವ ಕೈಗಾರಿಕಾ ಸವಾಲುಗಳ ಅವಶ್ಯಕತೆಗಳನ್ನು ಸಮರ್ಥವಾಗಿ ಎದುರಿಸಲು ಬೇಕಾದ ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ಅವರಿಗೆ ನೆರವಾದಂತಾಗುತ್ತದೆ.

ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಮಕ್ಕಳಲ್ಲಿ ಸಾಮರ್ಥ್ಯಗಳು ಮತ್ತು ಅರ್ಹತೆಗಳನ್ನು ಬೆಳೆಸುವಲ್ಲಿ ತಂದೆತಾಯಿಗಳು ಮತ್ತು ಶಿಕ್ಷಕರು ಈಗ ಅತ್ಯಂತ ಮಹತ್ವದ ಪಾತ್ರ ಹೊಂದಿದ್ದಾರೆ. ತಂದೆತಾಯಿಗಳು ಮತ್ತು ಶಿಕ್ಷಕರ ಸಂಯುಕ್ತ ಪ್ರಯತ್ನದ ನೆರವಿನಿಂದ ಮಾತ್ರ ಇದು ಸಾಧ್ಯವಾಗಬಲ್ಲುದು. ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಸುವ ಪೂರ್ಣ ಪಾತ್ರವನ್ನು ನಿರ್ವಹಿಸುವ ಕೆಲಸ ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ. ಈ ಹಂತದಲ್ಲಿ ತಂದೆತಾಯಿಗಳ ಜವಾಬ್ದಾರಿಯೂ ಅಷ್ಟೇ ಪ್ರಮುಖವಾಗಿರುತ್ತದೆ. ದ್ವಿತೀಯ ಹಂತದ ಮತ್ತು ಉನ್ನತ ಹಂತದ ಶಿಕ್ಷಣದಲ್ಲಿ, ವಿದ್ಯಾರ್ಥಿಗಳನ್ನು ದೇಶ ನಿರ್ಮಾಣದಲ್ಲಿ ಉಪಯುಕ್ತರನ್ನಾಗಿಸುವ ಜವಾಬ್ದಾರಿ ಶಿಕ್ಷಕರ ಮೇಲೆ ಹೆಚ್ಚುತ್ತ ಹೋಗುತ್ತದೆ. ದೇಶಾದ್ಯಂತ ಎಲ್ಲಾ ಪ್ರಾಥಮಿಕ, ಮಧ್ಯಮ ಹಾಗೂ ಉನ್ನತ ಹಂತದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಕರ ತಂಡದ ಜೊತೆಗೆ ಮನಶಾಸ್ತ್ರಜ್ಞರು ಹಾಗೂ ವಿದ್ಯಾರ್ಥಿ ಸಮಾಲೋಚಕರನ್ನು ಸಹ ಸೇರ್ಪಡೆ ಮಾಡಬೇಕಿದೆ.

---------------

ETV Bharat Logo

Copyright © 2025 Ushodaya Enterprises Pvt. Ltd., All Rights Reserved.