ಗುವಾಹಟಿ: ಅಸ್ಸೋಂನ ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿ ಬಿಡುಗಡೆ ಆಗಿದ್ದು, ಗುವಹಾಟಿ ಪಕ್ಕದ ಪಬ್ ಮಲೈಬಾರಿನಲ್ಲಿ 1,500 ನಿವಾಸಿಗಳ ಹೆಸರು ಪಟ್ಟಿಯಿಂದ ನಾಪತ್ತೆಯಾಗಿದೆ.
ಎನ್ಆರ್ಸಿ ಪಟ್ಟಿಗೆ ಹೆಸರು ನೋಂದಾಯಿಸಲು ಬೇಕಾಗುವ ಎಲ್ಲಾ ಅಗತ್ಯ ದಾಖಲೆಗಳನ್ನ ಒದಗಿಸಿದ್ದೆವು. ಆದರೂ ಕೂಡ ನಮ್ಮ ಹೆಸರನ್ನ ಪಟ್ಟಿಯಿಂದ ಕೈಬಿಡಲಾಗಿದೆ. ಎಲ್ಲರೂ ಕೂಡ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದು, ಹಿಂದೂ ಧರ್ಮದವರ ಹೆಸರನ್ನ ಪಟ್ಟಿಯಿಂದ ಕೈಬಿಡಲು ದೊಡ್ಡ ಪಿತೂರಿ ನಡೆದಿದೆ ಎಂದು ಆರೋಪಿಸಿದ್ದಾರೆ.
ಹೊಜೈ ಜಿಲ್ಲೆಯ ಡೆರಾಪರ್ ಪ್ರದೇಶದ ಶೇ.40ರಷ್ಟು ಜನರ ಹೆಸರು ಕೂಡ ಎನ್ಆರ್ಸಿ ಪಟ್ಟಿಯಲ್ಲಿಲ್ಲ. ಇವರೆಲ್ಲ ಗಾರೊ, ಕೋಚ್, ದಾಲು, ಹಜೊಂಗ್ ಮತ್ತು ಹಿಂದೂ ಬಂಗಾಳಿ ಜನರರಾಗಿದ್ದು, 1964ರ ಕೋಮು ಗಲಭೆಯ ನಂತರ ಅಸ್ಸೋಂಗೆ ಬಂದು ವಾಸ ಮಾಡುತ್ತಿರುತ್ತಾರೆ. ಗೊಲ್ಪರ ಜಿಲ್ಲೆಯ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿರುತ್ತದೆ. 1967ರ ನಂತರ ಸರ್ಕಾರದ ಆದೇಶದಂತೆ ಎಲ್ಲರಿಗೂ ಭೂಮಿ ಮತ್ತು ನಿವೇಶನ ನೀಡಲಾಗಿರುತ್ತದೆ. ಈ ಎಲ್ಲಾ ಜನರು ಅಗತ್ಯ ದಾಖಲೆ ನೀಡಿದ್ರೂ ಎನ್ಆರ್ಸಿ ಪಟ್ಟಿಯಿಂದ ಹೆಸರು ಕೈಬಿಡಲಾಗಿದೆ.