ಕರೋಲಿ(ರಾಜಸ್ಥಾನ): ಜಿಲ್ಲೆಯ ನಾಡೌಟಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜೆಲಾ ಗ್ರಾಮದಲ್ಲಿ ಸೋಮವಾರ ಒಂದೇ ಕುಟುಂಬದ 4 ಜನರ ಮೃತದೇಹಗಳು ಅನುಮಾನಾಸ್ಪ ರೀತಿಯಲ್ಲಿ ಪತ್ತೆಯಾಗಿವೆ.
ಮನೆಯಿಂದ ಕೆಟ್ಟ ವಾಸನೆ ಬಂದಾಗ ಅಕ್ಕಪಕ್ಕದವರು ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ವಿಶೇಷ ತಂಡ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದು, ತಪಾಸಣೆ ನಡೆಸಿದ್ದಾರೆ.
ಒಂದೇ ಕುಟುಂಬದ ಪತಿ, ಪತ್ನಿ ಮತ್ತು ಇಬ್ಬರು ಮಕ್ಕಳ ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೂರರಿಂದ ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ.