ETV Bharat / bharat

ಇರಾನ್​ನಲ್ಲಿ ಸಿಲುಕಿರುವ ಭಾರತೀಯರ ಕರೆತನ್ನಿ: ವಿದೇಶಾಂಗ ಸಚಿವರಿಗೆ ತರೂರ್​ ಪತ್ರ

ಹಡಗಿನಲ್ಲಿ 26 ಮಂದಿ ಭಾರತೀಯರಿದ್ದು, ಅವರೆಲ್ಲರೂ ಕೇರಳ ಮತ್ತು ತಮಿಳುನಾಡಿನವರಾಗಿದ್ದು, ಕೋವಿಡ್-19 ಪ್ರೇರಿತ ಪ್ರಯಾಣ ನಿರ್ಬಂಧದಿಂದಾಗಿ ಎರಡು ತಿಂಗಳಿನಿಂದ ಇರಾನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರು.

Viswam
ಶಶಿ ತರೂರ್
author img

By

Published : Jun 29, 2020, 9:54 AM IST

ತಿರುವನಂತಪುರಂ(ಕೇರಳ): ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಸಿಪಿಐ ಮುಖಂಡ ಬಿನೊಯ್ ವಿಶ್ವಂ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪ್ರತ್ಯೇಕ ಪತ್ರಗಳಲ್ಲಿ, ಇರಾನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ವಂದೇ ಭಾರತ್ ಮಿಷನ್​ ಅಡಿ ಮರಳಿ ಕರೆತರುವಂತೆ ಕೋರಿದ್ದಾರೆ.

ಹಡಗಿನಲ್ಲಿ 26 ಮಂದಿ ಭಾರತೀಯರಿದ್ದು, ಅವರೆಲ್ಲರೂ ಕೇರಳ ಮತ್ತು ತಮಿಳುನಾಡಿನವರಾಗಿದ್ದು, ಕೋವಿಡ್-19 ಪ್ರೇರಿತ ಪ್ರಯಾಣ ನಿರ್ಬಂಧದಿಂದಾಗಿ ಎರಡು ತಿಂಗಳಿನಿಂದ ಇರಾನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇಬ್ಬರೂ ನಾಯಕರು ಜೈಶಂಕರ್‌ಗೆ ಬರೆದ ಪ್ರತ್ಯೇಕ ಪತ್ರಗಳಲ್ಲಿ ಸಿಕ್ಕಿಬಿದ್ದ 26 ಜನರ ವಿವರಗಳನ್ನು ಉಲ್ಲೇಖಿಸಿದ್ದಾರೆ.

"ಎರಡು ತಿಂಗಳುಗಳಿಂದ ಕೋವಿಡ್-19 ಸಾಂಕ್ರಾಮಿಕ ಮತ್ತು ಪ್ರಯಾಣದ ನಿರ್ಬಂಧಗಳಿಂದಾಗಿ 26 ಜನರ ಈ ಗುಂಪು ಇರಾನ್‌ನಲ್ಲಿ ಸಿಲುಕಿಕೊಂಡಿದೆ. ಈ ನಾಗರಿಕರು ಕೆಲಸದ ಹುಡುಕಾಟದಲ್ಲಿ ಇರಾನ್‌ಗೆ ಪ್ರಯಾಣಿಸಿದ್ದರು. ಆದರೆ, ಲಾಕ್‌ಡೌನ್ ಪ್ರಾರಂಭವಾದಾಗ ಅವರು ಸಿಕ್ಕಿಹಾಕಿಕೊಂಡರು. ಕಳೆದ ಎರಡು ತಿಂಗಳುಗಳಿಂದ ಅಲ್ಲಿ ಬದುಕುಳಿಯಲು ಹೆಣಗಾಡಿದ್ದಾರೆ. ಆದ್ರೆ ಯಾರೋ ಅಪರಿಚಿತರ ದಯೆ ಅವರನ್ನು ಇಲ್ಲಿಯವರೆಗೆ ಸುರಕ್ಷಿತವಾಗಿರಿಸಿದೆ "ಎಂದು ವಿಶ್ವಂ ಪತ್ರದಲ್ಲಿ ಬರೆದುಕೊಂಡಿದ್ದಾರೆ.

"ಈ ಅವಧಿಯಲ್ಲಿ ಅವರು ಎದುರಿಸಿದ ಅಪಾರ ತೊಂದರೆಗಳ ನಡುವೆಯೂ, ಹಡಗಿನ ಮ್ಯಾನಿಫೆಸ್ಟ್‌ನಲ್ಲಿ ಅವರನ್ನು ಸೇರಿಸಲಾಗಿಲ್ಲ. ಹಡಗಿನಲ್ಲಿ ಹೆಚ್ಚುವರಿ ಸ್ಥಳವಿಲ್ಲ ಎಂದು ನನಗೆ ಮಾಹಿತಿ ನೀಡಲಾಗಿದ್ದರೂ, ನಾನು ಈ ಜನರನ್ನು ಇನ್ನೂ ಸೇರಿಸಲು ಏನಾದರೂ ಅವಕಾಶವಿದೆಯೇ ಎಂದು ನೀವು ಮತ್ತೊಮ್ಮೆ ಪರಿಶೀಲಿಸಬಹುದು "ಎಂದು ತರೂರ್ ಪತ್ರದಲ್ಲಿ ತಿಳಿಸಿದ್ದಾರೆ.

"ಈ ಗುಂಪಿನ ಎಲ್ಲ ಸದಸ್ಯರಿಗೆ ಆಶ್ರಯ, ಆಹಾರ ಪೂರೈಕೆ ಮತ್ತು ಇತರ ಮೂಲ ಅವಶ್ಯಕತೆಗಳನ್ನು ಒಳಗೊಂಡಂತೆ ತಕ್ಷಣದ ಪರಿಹಾರವನ್ನು ಒದಗಿಸಲು ನಮ್ಮ ರಾಯಭಾರ ಕಚೇರಿಯು ಗಮನಹರಿಸುವುದು ಕಡ್ಡಾಯವಾಗಿದೆ. ಅವರಲ್ಲಿ ಹೆಚ್ಚಿನವರು ತಮ್ಮ ಪ್ರಾಯೋಜಕರನ್ನು ತೊರೆದಿದ್ದಾರೆ ಮತ್ತು ಅವರ ವೀಸಾಗಳ ಅವಧಿ ಸಹ ಮುಗಿದಿದೆ" ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

"ನಿಮ್ಮ ಕಚೇರಿಯ ಶಕ್ತಿಯನ್ನು ಬಳಸಿಕೊಂಡು ಇರಾನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರ ಸುರಕ್ಷಿತ ಮರಳುವಿಕೆ ಖಚಿತಪಡಿಸಿಕೊಳ್ಳಲು ಮತ್ತು ನಮ್ಮ ನಾಗರಿಕರನ್ನು ಸ್ಥಳಾಂತರಿಸುವವರೆಗೆ ಅವರ ಸುರಕ್ಷತೆಯನ್ನು ಕಾಪಾಡಲು ಸರ್ಕಾರಕ್ಕೆ ನಾನು ಒತ್ತಾಯಿಸುತ್ತೇನೆ ಎಂದು ವಿಶ್ವಂ ತಮ್ಮ ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ಮೇ 7 ರಿಂದ ಪ್ರಾರಂಭವಾದ ಈ ಮಿಷನ್ ಸದ್ಯ ಮೂರನೇ ಹಂತದಲ್ಲಿದೆ. ಇತ್ತೀಚಿನ ಹಂತವು ಜೂನ್ 11 ರಿಂದ ಪ್ರಾರಂಭವಾಯಿತು. 3, 64, 209 ಜನರು ಈ ಮಿಷನ್ ಅಡಿ ಸ್ವದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ. ಇನ್ನೂ ವಿದೇಶದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಹೆಚ್ಚುವರಿ ವಿಮಾನ ಸೇವೆಗಳಿಗೆ ಭಾರತ ಸರ್ಕಾರ ಅನುಮೋದನೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.