ನವದೆಹಲಿ: ಸತತವಾಗಿ ಕುಸಿಯುತ್ತಿರುವ ಪಾದರಸ ಮಟ್ಟ ಹಾಗೂ ಚಳಿಗೆ ರಾಜಧಾನಿ ತತ್ತರಿಸಿ ಹೋಗಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ದೆಹಲಿಯಲ್ಲಿ ಇಂದು ಬೆಳಿಗ್ಗೆ 6.10 ಕ್ಕೆ 2.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
-
India Meteorological Department (IMD): Temperature of 2.4°C recorded in Delhi at 6:10 am, today. pic.twitter.com/ijCWWArC5w
— ANI (@ANI) December 28, 2019 " class="align-text-top noRightClick twitterSection" data="
">India Meteorological Department (IMD): Temperature of 2.4°C recorded in Delhi at 6:10 am, today. pic.twitter.com/ijCWWArC5w
— ANI (@ANI) December 28, 2019India Meteorological Department (IMD): Temperature of 2.4°C recorded in Delhi at 6:10 am, today. pic.twitter.com/ijCWWArC5w
— ANI (@ANI) December 28, 2019
ಈ ಬಾರಿಯ ಚಳಿಗಾಲದಲ್ಲಿ ಉತ್ತರ ಭಾರತದಲ್ಲಿ ದಾಖಲೆಯ ಮಟ್ಟಕ್ಕೆ ಉಷ್ಣಾಂಶ ಕುಸಿತವಾಗುತ್ತಿದ್ದು, ಅದರಲ್ಲೂ ದೆಹಲಿಯ ಶೀತ ಕಳೆದ 118 ವರ್ಷಗಳ ದಾಖಲೆಯನ್ನು ಮುರಿದಿದೆ. ಕಳೆದ 118 ವರ್ಷಗಳಲ್ಲಿ, ಈ ಡಿಸೆಂಬರ್ ತಿಂಗಳನ್ನು ಅತ್ಯಂತ ಶೀತದ ಡಿಸೆಂಬರ್ ಎಂದು ಹೇಳಲಾಗಿದ್ದು, ಅದಕ್ಕೆ ಪೂರಕವಾಗಿ ದೆಹಲಿಯ ಇಂದಿನ ತಾಪಮಾನ 2.4 ಡಿಗ್ರಿ ಸೆಲ್ಸಿಯಸ್‌ಗೆ ಬಂದಿದೆ.
ಹವಾಮಾನ ಇಲಾಖೆಯ ಪ್ರಕಾರ, ದೆಹಲಿಯಲ್ಲಿ ಶುಕ್ರವಾರ ಕನಿಷ್ಠ 4.2 C ಹಾಗೂ ಗರಿಷ್ಠ 14.4 C ತಾಪಮಾನ ದಾಖಲಾಗಿತ್ತು. ಇನ್ನು ಭಾನುವಾರವೂ ಕೂಡ ಕನಿಷ್ಠ 4 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಬಹುದೆಂದು ಇಲಾಖೆ ತಿಳಿಸಿದೆ.