ಟೆಲಿಗ್ರಾಮ್ ಇತ್ತೀಚಿನ ದಿನಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗ ಟೆಲಿಗ್ರಾಮ್ಗೆ ಎಲ್ಲರೂ ಮೊರೆ ಹೋಗುತ್ತಿದ್ದಾರೆ. ಈ ಹಿನ್ನೆಲೆ ಟೆಲಿಗ್ರಾಮ್ನಲ್ಲಿ ನೂತನ ಸೇವೆಯನ್ನು ನೀಡಲು ಮುಂದಾಗಿದೆ.
ಈಗಾಗಲೇ ವಾಟ್ಸ್ಆ್ಯಪ್, ಮೆಸೆಂಜರ್, ಗೂಗಲ್ ಡಿಯೋ ಎಲ್ಲವೂ ಗುಂಪು ವಿಡಿಯೋ ಕರೆಯ ಬಳಕೆಯನ್ನು ಗ್ರಾಹಕರಿಗೆ ನೀಡಿವೆ, ಆದರೆ, ಟೆಲಿಗ್ರಾಮ್ನಲ್ಲಿ ಈ ಸೌಲಭ್ಯ ಇರಲಿಲ್ಲ. ಈಗ ಗ್ರೂಫ್ ವಿಡಿಯೋ ಸೇವೆಯನ್ನು ಈ ವರ್ಷದ ಅಂತ್ಯದಲ್ಲಿ ನೀಡಲು ಮುಂದಾಗಿದೆ. 2013 ರಲ್ಲಿನ ಮೆಸೇಜಿಂಗ್‌ನಂತೆಯೇ ಈ ವೀಡಿಯೊ ಕರೆಗಳನ್ನು ಮಾಡಲು ಈ ಆಪ್ನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಆದಾಗ್ಯೂ, ಟೆಲಿಗ್ರಾಮ್ ತನ್ನ ಮುಂಬರುವ ಸೇವೆಯ ವೈಶಿಷ್ಟ್ಯದ ಬಗ್ಗೆ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಿಲ್ಲ.
ಟೆಲಿಗ್ರಾಮ್ ಈಗ ವಿಶ್ವದಾದ್ಯಂತ 400 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ಅಲ್ಲದೆ, 400,000,000 (40ಕೋಟಿ) ಮಾಸಿಕ ಬಳಕೆದಾರರನ್ನು ತಲುಪಿದೆ. ಇದು ಒಂದು ವರ್ಷದ ಹಿಂದೆ 300 ಮಿಲಿಯನ್ ಆಗಿತ್ತು ಎಂದು ಕಂಪನಿ ಮಾಹಿತಿ ನೀಡಿದೆ.
ಪ್ರತಿದಿನ ಕನಿಷ್ಠ 1.5 ಮಿಲಿಯನ್ ಹೊಸ ಬಳಕೆದಾರರು ಟೆಲಿಗ್ರಾಮ್‌ಗಾಗಿ ಸೈನ್ ಅಪ್ ಮಾಡುತ್ತಿದ್ದಾರಂತೆ. ಇದರಲ್ಲಿರುವ ವಿಶೇಷತೆಗಳಾದ ಫೋಲ್ಡರ್, ಕ್ಲೌಡ್ ಸ್ಟೋರೇಜ್ ಮತ್ತು ಡೆಸ್ಕ್‌ಟಾಪ್ ಬೆಂಬಲದಂತಹ ವೈಶಿಷ್ಟ್ಯಗಳು ಈ ಸಮಯದಲ್ಲಿ ಹೆಚ್ಚು ಸೂಕ್ತವಾಗಿವೆ. ಕಳೆದ ತಿಂಗಳು ಟೆಲಿಗ್ರಾಮ್ ಚರ್ಚಾ ಬಟನ್ ಪರಿಚಯಿಸಿತ್ತು.