ಹೈದರಾಬಾದ್: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೇ 29ರವರೆಗೆ ಲಾಕ್ಡೌನ್ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ.
ರಾಜ್ಯ ರಾಜಧಾನಿ ಹೈದರಾಬಾದ್ ಮತ್ತು ಅದರ ನೆರೆಯ ರಂಗಾರೆಡ್ಡಿ ಮತ್ತು ಮಲ್ಕಾಜ್‌ಗಿರಿ ಜಿಲ್ಲೆಗಳ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ನಾವು ಯಾವುದೇ ಅವಕಾಶಗಳನ್ನು ತೆಗೆದುಕೊಳ್ಳುವ ಮಾರ್ಗವಿಲ್ಲ ಎಂದು ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೆಂಪು ವಲಯದಲ್ಲೂ ಅಂಗಡಿಗಳು ತೆರೆಯಬಹುದು ಎಂದು ಕೇಂದ್ರ ಹೇಳುತ್ತದೆ. ಆದರೆ ನಾವು ಹೈದರಾಬಾದ್, ಮಲ್ಕಾಜ್‌ಗಿರಿ, ಸೂರ್ಯಪೇಟೆ, ವಿಕರಾಬಾದ್‌ನಲ್ಲಿ ಯಾವುದೇ ಅಂಗಡಿಗಳನ್ನು ತೆರೆಯುತ್ತಿಲ್ಲ ಎಂದು ರಾವ್ ಹೇಳಿದರು.
ತೆಲಂಗಾಣದಲ್ಲಿ ಇದುವರೆಗೆ 1,096 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. 439 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 628 ಮಂದಿ ಗುಣಮುಖರಾಗಿದ್ದಾರೆ. ಕೇಂದ್ರವು ಮೂರನೇ ಹಂತದ ಲಾಕ್ಡೌನ್ಅನ್ನು ಮೇ 17ರ ತನಕ ವಿಸ್ತರಿಸಿದೆ.