ಹೈದರಾಬಾದ್ (ತೆಲಂಗಾಣ): ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ರಕ್ತದಾನ ಮಾಡುವ ಮೂಲಕ ತಲಸ್ಸೆಮಿಯಾ ರೋಗಿಗಳ ಜೀವ ಉಳಿಸುವಲ್ಲಿ ತೆಲಂಗಾಣದ ಯೋಧರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
"ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತಿ ತಿಂಗಳು ನಮ್ಮ ಸಂಸ್ಥೆಗೆ ಸುಮಾರು 800 ಯುನಿಟ್ ರಕ್ತದ ಅಗತ್ಯವಿರುತ್ತದೆ. ಈ ಸಾಂಕ್ರಾಮಿಕ ಸಮಯದಲ್ಲಿ ರಕ್ತ ಘಟಕಗಳನ್ನು ವ್ಯವಸ್ಥೆ ಮಾಡಲು ತೆಲಂಗಾಣ ರಾಜ್ಯಪಾಲರು ನಮಗೆ ಸಹಾಯ ಮಾಡಿದ್ದಾರೆ. ಮಿಲಿಟರಿ ಸಿಬ್ಬಂದಿ 10 ರಕ್ತದಾನ ಶಿಬಿರಗಳನ್ನು ನಡೆಸಿ ನಮಗೆ 1200 ಘಟಕ ರಕ್ತ ನೀಡಿದ್ದಾರೆ. ಅದೇ ರೀತಿ ಮಹೇಂದರ್ ರೆಡ್ಡಿ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಹಲವಾರು ರಕ್ತದಾನ ಶಿಬಿರಗಳನ್ನು ನಡೆಸಿ ರಕ್ತ ಒದಗಿಸಿದೆ" ಎಂದು ಡಾ. ಮಹೇಂದರ್ ರೆಡ್ಡಿ ಹೇಳಿದರು.
ಇನ್ನೂ ಈ ಬಗ್ಗೆ ತಲಸ್ಸೆಮಿಯಾ ರೋಗಿಯ ತಂದೆಯೊಬ್ಬರು ಮಾತನಾಡಿ, ಕೊರೊನಾ ವೈರಸ್ ಹರಡುವ ಸಮಯದಲ್ಲೂ ಸಂಸ್ಥೆ ತನ್ನ ಮಗಳಿಗೆ ಅಗತ್ಯವಾದ ರಕ್ತವನ್ನು ಒದಗಿಸಿ ಕಾಪಾಡಿದೆ. ಕೋವಿಡ್-19 ಹರಡುವಿಕೆಯಿಂದಾಗಿ ಜನರು ರಕ್ತ ನೀಡಲು ಹಿಂಜರಿಯುತ್ತಾರೆ. ಆದರೆ, ಪೊಲೀಸರು ತೆಗೆದುಕೊಂಡ ಉಪಕ್ರಮದಿಂದ ಎಲ್ಲವೂ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.