ETV Bharat / bharat

ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಸೇರಿದಂತೆ 18 ಜನರ ವಿರುದ್ಧ ಎಫ್​ಐಆರ್​ - ಗಾಂಧಿ ಮೈದಾನ ಪೊಲೀಸ್ ಠಾಣೆ

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನಾಥುರಾಮ್ ಗೋಡ್ಸೆಯನ್ನು ಪೂಜಿಸುವ ಜನರ ಸಹಾಯದಿಂದ ಬಿಹಾರದ ಸಿಎಂ ಆದ ನಂತರ ಎಲ್ಲಾ ಘನತೆ ಕಳೆದುಕೊಂಡಿದ್ದಾರೆ. ಅವರು ರೈತ ವಿರೋಧಿಗಳು ಮಾತ್ರವಲ್ಲ, ಪ್ರಜಾಪ್ರಭುತ್ವ ಮೌಲ್ಯಗಳ ಕೊಲೆಗಾರರೂ ಆಗಿದ್ದಾರೆ..

Tejashwi Yadav
ಆರ್‌ಜೆಡಿ ಮುಖಂಡ ತೇಜಶ್ವಿ ಯಾದವ್
author img

By

Published : Dec 6, 2020, 7:30 AM IST

ಪಾಟ್ನಾ (ಬಿಹಾರ): ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಮತ್ತು ಇವರ 18 ನಾಯಕರು ಗಾಂಧಿ ಮೈದಾನಕ್ಕೆ ಶನಿವಾರ ಬಲವಂತವಾಗಿ ಪ್ರವೇಶಿಸಿದಕ್ಕಾಗಿ, ಪಾಟ್ನಾ ಪೊಲೀಸರು ಗಾಂಧಿ ಮೈದಾನ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅನುಮತಿಯಿಲ್ಲದೆ ನಿಷೇಧಿತ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಾಟ್ನಾ ಡಿಎಸ್ಪಿ ಸುರೇಶ್ ಕುಮಾರ್ ಖಚಿತಪಡಿಸಿದ್ದಾರೆ.

ಜಿಲ್ಲಾಡಳಿತವು ಅವಕಾಶ ನೀಡದಿದ್ದರೂ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಅಲ್ಲದೆ ಗಾಂಧಿ ಮೈದಾನಕ್ಕೆ ಪ್ರವೇಶಿಸಿ ಮಹಾತ್ಮ ಗಾಂಧಿಯವರ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದ ತೇಜಶ್ವಿ ಯಾದವ್ ಮತ್ತು ಆರ್​ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ ಮತ್ತು ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ಮದನ್ ಮೋಹನ್ ಸೇರಿದಂತೆ ಇತರ ನಾಯಕರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಸಾಮಾಜಿಕ ಅಂತರ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ 18 ನಾಯಕರ ಮೇಲೆ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಎಸ್ಪಿ ಕುಮಾರ್ ಹೇಳಿದರು. ಗಾಂಧಿ ಮೈದಾನದೊಳಗೆ ಪ್ರತಿಭಟನೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿಲ್ಲ ಎಂದು ಪಾಟ್ನಾ ಜಿಲ್ಲಾಧಿಕಾರಿ ಕುಮಾರ್ ರವಿ ತಿಳಿಸಿದ್ದಾರೆ.

ಓದಿ:ಕುಡಿದು ಅಡ್ಡಾದಿಡ್ಡಿ ಕಾರು ಚಾಲನೆ: ಪ್ರಾಣಾಪಾಯದಿಂದ ಪಾರಾದ ಯುವತಿ

ಈ ಬಗ್ಗೆ ಪ್ರತಿಕ್ರಿಯಿಸಿದ ಆರ್​​ಜೆಡಿ ರಾಜ್ಯ ವಕ್ತಾರ ಚಿತ್ರಂಜನ್ ಗಗನ್, "ಪಾಟ್ನಾ ಜಿಲ್ಲಾಡಳಿತವು ಮಹಾಘಟಬಂಧನ್‌ನ ಆರ್​​ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ 18 ನಾಯಕರ ವಿರುದ್ಧ ಪ್ರಕರಣ ದಾಖಲಿಸಿದೆ. ಇದು ಎನ್​ಡಿಎ ಸರ್ಕಾರದ ಸಣ್ಣ ಮನಸ್ಥಿತಿ ತೋರಿಸುತ್ತದೆ" ಎಂದು ಹೇಳಿದರು.

"ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನಾಥುರಾಮ್ ಗೋಡ್ಸೆಯನ್ನು ಪೂಜಿಸುವ ಜನರ ಸಹಾಯದಿಂದ ಬಿಹಾರದ ಸಿಎಂ ಆದ ನಂತರ ಎಲ್ಲಾ ಘನತೆ ಕಳೆದುಕೊಂಡಿದ್ದಾರೆ. ಅವರು ರೈತ ವಿರೋಧಿಗಳು ಮಾತ್ರವಲ್ಲ, ಪ್ರಜಾಪ್ರಭುತ್ವ ಮೌಲ್ಯಗಳ ಕೊಲೆಗಾರರೂ ಆಗಿದ್ದಾರೆ" ಎಂದು ಅವರು ಕಿಡಿಕಾರಿದರು.

"ನಿತೀಶ್ ಕುಮಾರ್ ಮಾನವ ಸಹಾನುಭೂತಿಯನ್ನು ಕಳೆದುಕೊಂಡಿದ್ದಾರೆ. ಇತ್ತೀಚಿನ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸಾಮಾಜಿಕ ಅಂತರ ಮಾನದಂಡಗಳನ್ನು ಉಲ್ಲಂಘಿಸಿದ ಹಲವಾರು ಉದಾಹರಣೆಗಳನ್ನು ನಾವು ನೋಡಿದ್ದೇವೆ. ನಿತೀಶ್ ಸರ್ಕಾರದ ಇಂತಹ ನಡೆಗಳಿಂದ ನಾವು ಭಯಭೀತರಾಗುವುದಿಲ್ಲ. ನಮ್ಮ ರೈತರು ಮತ್ತು ದೇಶದ ಸಾಮಾನ್ಯ ಜನರೊಂದಿಗೆ ನಿಲ್ಲುತ್ತೇವೆ ಎಂದು ಗಗನ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.